Gaalipata 2: ದಾಖಲೆ ಮೊತ್ತಕ್ಕೆ ಭಟ್ರು-ಗಣಿ ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕು ಮಾರಾಟ

By Suvarna News  |  First Published Feb 2, 2022, 11:05 AM IST

ಸೂರಜ್‌ ಪ್ರೊಡ​ಕ್ಷ​ನ್‌​ನಲ್ಲಿ ರಮೇಶ್‌ ರೆಡ್ಡಿ ನಂಗ್ಲಿ ನಿರ್ಮಾಣ ಮಾಡು​ತ್ತಿ​ರುವ 'ಗಾಳಿ​ಪಟ 2'  ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದ್ದು, ರಿಲೀಸ್‌ಗೆ ಸಿದ್ಧಗೊಳ್ಳುತ್ತಿದೆ. ಈ ಮಧ್ಯೆ ಬಿಡುಗಡೆಗೂ ಮುನ್ನವೇ ಒಂದು ದಾಖಲೆ 'ಗಾಳಿಪಟ 2' ಚಿತ್ರಕ್ಕೆ ಸೇರಿಕೊಂಡಿದೆ. 


'ಮುಂಗಾರು ಮಳೆ', 'ಗಾಳಿಪಟ', 'ಮುಗುಳು ನಗೆ' ಸಿನಿಮಾ ಬಳಿಕ ನಿರ್ದೇಶಕ ವಿಕಟಕವಿ ಯೋಗರಾಜ್ ಭಟ್ (Yogaraj Bhat) ಹಾಗೂ ಗಣೇಶ್ (Ganesh) ಕಾಂಬಿನೇಷನ್‌ನಲ್ಲಿ 'ಗಾಳಿಪಟ 2' (Galipata 2) ಸಿನಿಮಾ ಬರುತ್ತಿದ್ದು, ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಪೋಸ್ಟರ್‌ನಿಂದಲೇ ಈ ಚಿತ್ರ ಸಖತ್ ಸದ್ದು ಮಾಡುತ್ತಿದೆ.  ಸೂರಜ್‌ ಪ್ರೊಡ​ಕ್ಷ​ನ್‌​ನಲ್ಲಿ ರಮೇಶ್‌ ರೆಡ್ಡಿ ನಂಗ್ಲಿ ನಿರ್ಮಾಣ ಮಾಡು​ತ್ತಿ​ರುವ 'ಗಾಳಿ​ಪಟ 2'  ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದ್ದು, ರಿಲೀಸ್‌ಗೆ ಸಿದ್ಧಗೊಳ್ಳುತ್ತಿದೆ. ಈ ಮಧ್ಯೆ ಬಿಡುಗಡೆಗೂ ಮುನ್ನವೇ ಒಂದು ದಾಖಲೆ 'ಗಾಳಿಪಟ 2' ಚಿತ್ರಕ್ಕೆ ಸೇರಿಕೊಂಡಿದೆ. 

ಹೌದು! 'ಗಾಳಿಪಟ 2' ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕನ್ನು ಜೀ ಕನ್ನಡ (Zee Kannada) ಮತ್ತು ಜೀ5 (Zee5) ಭಾರೀ ಮೊತ್ತಕ್ಕೆ ಖರೀದಿಸಿವೆ. ಮಾತ್ರವಲ್ಲದೇ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋ ಸಂಸ್ಥೆ (Anand Audio) ಪಡೆದುಕೊಂಡಿದೆ. ಈ ವಿಷಯವನ್ನು 'ಗಾಳಿಪಟ 2' ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ ಅವರೇ ಖಚಿತಪಡಿಸಿದ್ದಾರೆ. ಇದೆಲ್ಲದಿರಿಂದ ಬರೋಬ್ಬರಿ 8 ಕೋಟಿ ರೂಪಾಯಿಗೂ ಹೆಚ್ಚು ಹಣ ನಿರ್ಮಾಪಕರ ಖಾತೆ ಸೇರಿದ್ದು, ಸಖತ್ ಖುಷಿಯಾಗಿದ್ದಾರೆ. ಈ ಬಗ್ಗೆ ಚಿತ್ರದ  ನಿರ್ದೇಶಕ ತಮ್ಮ ಫೇಸ್‌ಬುಕ್ ಖಾತೆಯಲ್ಲಿ (Facebook) 'ಇದು ಈ ಹೊತ್ತಿನ ಖುಷಿ ಸುದ್ದಿ, 'ಗಾಳಿಪಟ' ಚಿತ್ರದೆಡೆಗಿನ ನಿಮ್ಮ ಕುತೂಹಲ ಮತ್ತು ಪ್ರೀತಿಯ ಫಲಿತಾಂಶ. ಸದಾ ಹರಸಿ, ಜೈ ಗಾಳಿಪಟ 2, ಜೈ ನಿರ್ಮಾಪಕರು, ಜೈ ಹೀರೋ,  ಜೈ ತಂಡ, ಜೈ ಜೀ ಕನ್ನಡ, ಜೈ ಕರ್ನಾಟಕ' ಎಂದು ಬರೆದುಕೊಂಡು, ಚಿತ್ರದ ಪೋಸ್ಟರನ್ನು ಹಂಚಿಕೊಂಡಿದ್ದಾರೆ.

Tap to resize

Latest Videos

undefined

Yogaraj Bhat: 'ಗಾಳಿಪಟ 2' ಚಿತ್ರದ ಡಬ್ಬಿಂಗ್ ಮನೆಯಲ್ಲಿ ಹಿರಿಯ ನಟ ಅನಂತ್‌ನಾಗ್

ಇತ್ತೀಚೆಗೆ 'ಗಾಳಿಪಟ 2' ಚಿತ್ರದ ಹಾಡುಗಳ ರೆಕಾರ್ಡಿಂಗ್‌ ನಡೆದಿದ್ದು, ಒಟ್ಟು ಆರು ಹಾಡುಗಳು ಚಿತ್ರದಲ್ಲಿವೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್‌ ಜನ್ಯಾ (Arjun Janya) ಸಂಗೀತ ಸಂಯೋಜಿಸಿದ್ದು, ವಿಜಯ್‌ ಪ್ರಕಾಶ್‌ ಅವರ ಧ್ವನಿಯಲ್ಲಿ ಹಾಡುಗಳು ಮೂಡಿಬಂದಿವೆ. ಈ ಸಿನಿಮಾದಲ್ಲಿ ಹಿರಿಯ ನಟ ಅನಂತ್ ನಾಗ್ (Anant Nag) ಅವರು ಕನ್ನಡ ಮೇಷ್ಟ್ರು ಪಾತ್ರದಲ್ಲಿ ನಟಿಸಿದ್ದಾರೆ. ಕುದುರೆಮುಖದಲ್ಲಿ ಈ ಸಿನಿಮಾದ ಪ್ರಮುಖ ಸೀನ್‌ಗಳ ಚಿತ್ರೀಕರಣ ಮಾಡಲಾಗಿದೆ. ಮೂರು ಜನ ನಾಯಕರ ಇಂಟ್ರಡಕ್ಷನ್‌ ಹಾಡಿನ ಚಿತ್ರೀಕರಣ, ವಿದೇಶಕ್ಕೆ ಹೊರಡುವ ದೃಶ್ಯಗಳು, ಅನಂತ್‌ನಾಗ್‌ ಅವರ ಕಾಂಬಿನೇಷನ್‌ ಸೀನ್‌ಗಳನ್ನು ಅಲ್ಲಿಯೇ ಶೂಟಿಂಗ್‌ ಮಾಡಲಾಗಿದೆ.



'ಗಾಳಿಪಟ 2' ಚಿತ್ರದಲ್ಲಿ ಗೋಲ್ಡನ್‌ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್ (Diganth) ಹಾಗೂ ನಿರ್ದೇಶಕ ಪವನ್ ಕುಮಾರ್ (Pavan Kumar) ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು 'ಗಾಳಿಪಟ' ಚಿತ್ರದಲ್ಲಿ ನಟಿಸಿದ್ದ ರಾಜೇಶ್ ಕೃಷ್ಣನ್ ಬದಲು 'ಲೂಸಿಯ' ನಿರ್ದೇಶಕ ಪವನ್ ಕುಮಾರ್ ಅಭಿನಯಿಸುತ್ತಿದ್ದಾರೆ. ನಿರ್ದೇಶಕ ಪವನ್ ಕುಮಾರ್ ಈ ಹಿಂದೆ ಯೋಗರಾಜ್ ಭಟ್ಟರ 'ಮನಸಾರೆ' ಮತ್ತು 'ಪಂಚರಂಗಿ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿತ್ರದ ನಾಯಕಿಯರಾಗಿ ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ ಕಾಣಿಸಿಕೊಂಡಿದ್ದಾರೆ. ಇನ್ನು 'ಗಾಳಿಪಟ 2' ಚಿತ್ರದಲ್ಲಿ ಗಣೇಶ್‌ ಅವರ ಪುತ್ರ ವಿಹಾನ್‌ (Vihaan) ಸಹ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ.

'ಗಾಳಿಪಟ 2' ಶೂಟಿಂಗ್ ಮುಕ್ತಾಯ: ಯೋಗರಾಜ್ ಭಟ್

ವಿಹಾನ್‌ರ ಸೀನ್‌ಗಳನ್ನು ಬೆಂಗಳೂರಿನಲ್ಲಿ ಹಾಗೂ ಕಝಕಿಸ್ಥಾನದಲ್ಲಿಯೂ ಶೂಟಿಂಗ್‌ ಮಾಡಲಾಗಿದೆ. ಸಂತೋಷ್‌ ರೈ ಪಾತಾಜೆ ಸಿನಿಮಾಟೋಗ್ರಫಿಯಿರುವ ಈ ಚಿತ್ರದಲ್ಲಿ ಪದ್ಮಜಾ ರಾವ್‌, ಸುಧಾ​ ಬೆ​ಳ​ವಾಡಿ, ರಂಗಾ​ಯಣ ರಘು ಸೇರಿದಂತೆ ಮುಂತಾದವರು ನಟಿಸುತ್ತಿದ್ದಾರೆ. ವಿಶೇಷವಾಗಿ 'ಕುದುರೆಮುಖದಲ್ಲಿನ ಪ್ರಕೃತಿ ಸೌಂದರ್ಯದ ಮಧ್ಯೆ ಹಲವು ದೃಶ್ಯಗಳನ್ನು ಶೂಟ್ ಮಾಡಿದ್ದೇವೆ. ಸಿನಿ ಪ್ರೇಕ್ಷಕರ ಕಣ್ಣಿಗೆ ಇದು ಹಬ್ಬದ ರೀತಿ ಫೀಲ್‌ ಆಗುತ್ತದೆ. ಅನಂತನಾಗ್‌ ಮತ್ತು ಮೂರು ಜನ ನಾಯಕರ ನಡುವಿನ ದೃಶ್ಯಗಳು ಸಿನಿಮಾದಲ್ಲಿ ಬಹಳ ಮುಖ್ಯವಾಗುತ್ತವೆ' ಎಂದು ನಿರ್ದೇಶಕ ಯೋಗರಾಜ್ ಭಟ್ ತಿಳಿಸಿದ್ದಾರೆ. ಶೀಘ್ರದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಆಗಲಿದೆ.
 

click me!