2020ರ ಆರಂಭದಲ್ಲಿ ರಿಲೀಸ್ ಆದ 'ಲವ್ ಮಾಕ್ಟೇಲ್' ಚಿತ್ರದ ಯಶಸ್ಸಿನ ನಂತರ ಡಾರ್ಲಿಂಗ್ ಕೃಷ್ಣ ಮತ್ತೊಂದು ಭಾಗದೊಂದಿಗೆ 'ಲವ್ ಮಾಕ್ಟೇಲ್ 2' ಚಿತ್ರ ಬರುತ್ತಿದೆ. ಇದೀಗ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಸಾಕಷ್ಟು ಕುತೂಹಲ ಹುಟ್ಟಿಸಿದೆ.
2020ರ ಆರಂಭದಲ್ಲಿ ರಿಲೀಸ್ ಆದ 'ಲವ್ ಮಾಕ್ಟೇಲ್' (Love Mocktail) ಚಿತ್ರದ ಯಶಸ್ಸಿನ ನಂತರ ಡಾರ್ಲಿಂಗ್ ಕೃಷ್ಣ (Darling Krishna) ಮತ್ತೊಂದು ಭಾಗದೊಂದಿಗೆ 'ಲವ್ ಮಾಕ್ಟೇಲ್ 2'(Love Mocktail 2) ಚಿತ್ರ ಬರುತ್ತಿದೆ. ಇದೀಗ ಚಿತ್ರದ ಟ್ರೈಲರ್ (Trailer) ರಿಲೀಸ್ ಆಗಿದ್ದು, ಸಾಕಷ್ಟು ಕುತೂಹಲ ಹುಟ್ಟಿಸಿದೆ. 'ಲವ್ ಮಾಕ್ಟೇಲ್' ಮೊದಲ ಭಾಗದಲ್ಲಿ ನಿಧಿಮಾ ಪಾತ್ರ ಸಾಕಷ್ಟು ಸದ್ದು ಮಾಡಿತ್ತು. ನಿಧಿ ಕ್ಯಾನ್ಸರ್ನಿಂದ ಸಾಯುತ್ತಾಳೆ. ಆ ಬಳಿಕ ಆದಿ ಒಂಟಿ ಆಗುತ್ತಾನೆ. 'ಲವ್ ಮಾಕ್ಟೇಲ್ 2'ನಲ್ಲಿ ಈ ಪಾತ್ರ ಇರುವುದಿಲ್ಲ ಅಂತಾ ಚಿತ್ರತಂಡ ಹೇಳಿತ್ತು.
ಆದರೂ 'ಲವ್ ಮಾಕ್ಟೇಲ್ 2' ಟ್ರೈಲರ್ನಲ್ಲಿ ನಿಧಿಮಾ ನೆನಪಲ್ಲಿ ಆದಿ ಪಾತ್ರ ಕಾಲ ಕಳೆಯುತ್ತೆ. ಮೊದಲ ಭಾಗದಲ್ಲಿ ಜೋ ಆಗಿ ಕಾಣಿಸಿಕೊಂಡಿದ್ದ ಅಮೃತಾ ಅಯ್ಯಂಗಾರ್ (Amrutha Iyengar) ಎರಡನೇ ಭಾಗದಲ್ಲಿ ಕಾಣಿಸಿಕೊಂಡಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಮಾತ್ರವಲ್ಲದೇ ಆದಿ ಲೈಫ್ಗೆ ಜೋ ಮತ್ತೆ ಬರುತ್ತಾಳಾ ಎನ್ನುವ ಕುತೂಹಲವೂ ಮೂಡಿದೆ. 'ನೀವಂದುಕೊಂಡಷ್ಟು ಸುಲಭವಿಲ್ಲ ಈ ಕೇಸ್' ಎಂದು ಆದಿ ಗೆಳೆಯ ಹೇಳೋದು, ನಂತರ ಮತ್ತೊಂದು ಮದುವೆ ಆಗುವುದಕ್ಕೆ ಆದಿ ತೀರ್ಮಾನ ಮಾಡುವುದು ಕಥೆಯ ಜೀವಾಂಶ ಎಂಬುದು ಟ್ರೈಲರ್ನಲ್ಲಿ ಹೈಲೈಟ್ ಆಗಿದೆ.
Love Mocktail 2: ಚಿತ್ರದ ರಿಲೀಸ್ ದಿನಾಂಕದ ಬಗ್ಗೆ ಮಾಹಿತಿ ಹಂಚಿಕೊಂಡ ನಟ ಡಾರ್ಲಿಂಗ್ ಕೃಷ್ಣ
'ಲವ್ ಮಾಕ್ಟೇಲ್ 2' ಟ್ರೈಲರ್ ನೋಡಿ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ಡಾರ್ಲಿಂಗ್ ಕೃಷ್ಣ ಹಾಗೂ ರಾಚೆಲ್ ಡೇವಿಡ್ ನಟನೆಯ ಈ ಸಿನಿಮಾದ ಟ್ರೈಲರ್ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಸಕಲೇಶಪುರ, ಮಡಿಕೇರಿ, ಲಡಾಖ್, ಚಿಕ್ಕಮಗಳೂರು ಭಾಗದಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. 'ಲವ್ ಮಾಕ್ಟೇಲ್' ಸಿನಿಮಾ ಬಿಡುಗಡೆಯಾದ ಬಳಿಕ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಖ್ಯಾತಿ ಹೆಚ್ಚಿತು. ಈ ಸಿನಿಮಾ ಸಕ್ಸಸ್ ಬಳಿಕ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೇ ಫೆಬ್ರವರಿ ತಿಂಗಳಿನಲ್ಲಿ ಅವರು ಮದುವೆಯಾಗಿ ಒಂದು ವರ್ಷ ಆಗಲಿದೆ. ಇದೇ ಸಂತಸದಲ್ಲಿ'ಲವ್ ಮಾಕ್ಟೇಲ್ 2' ಸಿನಿಮಾ ಪ್ರೇಮಿಗಳ ದಿನಕ್ಕೆ ಮೂರು ದಿನ ಮುಂಚಿತವಾಗಿ ಬಿಡುಗಡೆ ಮಾಡುವ ಪ್ಲ್ಯಾನ್ನಲ್ಲಿ ಚಿತ್ರತಂಡ ಇದೆ.
'ಲವ್ ಮಾಕ್ಟೇಲ್ 2' ಸೆನ್ಸಾರ್ (Censor) ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ಸೆನ್ಸಾರ್ ಮಂಡಳಿಯವರು ಚಿತ್ರಕ್ಕೆ 'ಯು' (U Certificate) ಪ್ರಮಾಣ ಪತ್ರ ನೀಡಿದ್ದಾರೆ. ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಅವರೇ ಆಕ್ಷನ್ ಕಟ್ ಹೇಳಿದ್ದು, ನಾಯಕಿಯರಾಗಿ ಮಿಲನಾ ನಾಗರಾಜ್ (Milana Nagaraj) ಮತ್ತು ರಾಚೆಲ್ (Rachel) ನಟಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ 'ಲವ್ ಮಾಕ್ಟೇಲ್ 2' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮೊದಲ ಭಾಗಕ್ಕೆ ರಘು ದೀಕ್ಷಿತ್ ಸಂಗೀತ ನೀಡಿದ್ದರು. ಆದರೆ ಎರಡನೇ ಭಾಗಕ್ಕೆ ರಘು ದೀಕ್ಷಿತ್ ಬದಲಿಗೆ ನಕುಲ್ ಅಭಯಂಕರ್ (Nakul Abhyankar) ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಹಿಟ್ ಆಗಿವೆ.
Love Mocktail 2: ಡಾರ್ಲಿಂಗ್ ಕೃಷ್ಣ ಮೆಚ್ಚಿನ 'ದೂರ ಹೋದರೂ ನನ್ನೊಳವೇ' ಹಾಡು ರಿಲೀಸ್
ಇನ್ನು ದುರಂತ ಅಂತ್ಯದ 'ಲವ್ ಮಾಕ್ಟೇಲ್' ಚಿತ್ರವನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿ ನೋಡದೇ ಇದ್ದರೂ, ಒಟಿಟಿಯಲ್ಲಿ ನೋಡಿ ಮೆಚ್ಚಿದ್ದರು. ಅದರಲ್ಲಿಯೂ ಕೊರೋನಾ ವೈರಸ್ (Corona Virus) ಹಾವಳಿಯಿಂದಾಗಿ ಲಾಕ್‌ಡೌನ್ ಆದ ಬಳಿಕವೂ ಈ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹಾಗೂ 'ಲವ್ ಮಾಕ್ಟೇಲ್' ಮೊದಲ ಭಾಗದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ನಿಧಿಮಾ ಪಾತ್ರ ಅಂತ್ಯವಾಗಿತ್ತು. ಆದರೆ 'ಹೆಂಗೆ ನಾವು' ಎಂದು ಹೇಳುತ್ತಿದ್ದ ರಚನಾ ಪಾತ್ರ ಹಾಗೂ ಫಸ್ಟ್ ಲವ್ ಬ್ರೇಕಪ್ ಮಾಡಿಕೊಂಡ ಜೋ ಎರಡನೇ ಭಾಗದಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ.