ನಟಿ ರಚಿತಾ ರಾಮ್ ಅವರ ಅಕ್ಕ ನಿತ್ಯಾ ರಾಮ್‌ಗೆ ಯಶ್ ಹೇಳಿದ್ದ ಮಾತೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಯಶ್ ಮತ್ತು ನಿತ್ಯಾ ಒಂದೇ ಧಾರಾವಾಹಿಯಲ್ಲಿ ನಟಿಸುತ್ತಿದ್ದಾಗ ಯಶ್, ನಿತ್ಯಾ ಅವರಿಗೆ ಕನಸು ಕಾಣುವುದನ್ನು ಬಿಡಬೇಡ ಎಂದು ಹೇಳಿದ್ದರು. ಆದರೆ ಆ ಕನಸನ್ನು ನನಸಾಗಿಸಿದ್ದು ನಿತ್ಯಾ ಅವರ ತಂಗಿ ರಚಿತಾ.
ನೋಡೋದಕ್ಕೆ ಹೆಚ್ಚು ಕಮ್ಮಿ ರಚಿತಾ ರಾಮ್ ಥರನೇ ಇರೋ ನಟಿ ನಿತ್ಯಾ ರಾಮ್. ಅದೇ ಕಣ್ಣು, ಅದೇ ಲುಕ್, ಅದೇ ಮುದ್ದುತನ, ಬಹುಶಃ ಆ ಡಿಂಪಲ್ ಒಂದು ಮಿಸ್ ಅನಿಸುತ್ತೆ. ಉಳಿದಂತೆ ರಚಿತಾ ನಿತ್ಯಾ ಅಕ್ಕ ಪಕ್ಕ ನಿಂತರೆ ಥೇಟ್ ಟ್ವಿನ್ಸ್ ಅನ್ಬೇಕು ಆ ಥರ ಇದ್ದಾರೆ. ಇಂಥಾ ನಿತ್ಯಾ ರಾಮ್ ಕಿರುತೆರೆಯಲ್ಲಿ ಬಹಳ ಫೇಮಸ್ ನಟಿ. ಕನ್ನಡ ಮಾತ್ರ ಅಲ್ಲ, ತಮಿಳು, ತೆಲುಗು ಸೀರಿಯಲ್‌ಗಳಲ್ಲೆಲ್ಲ ನಟಿಸಿ ಶಭಾಷ್ ಅನಿಸಿಕೊಂಡ ಜಾಣೆ. ತಂಗಿ ರಚಿತಾ ರಾಮ್ ಕೂಡ ಚಿಕ್ಕ ವಯಸ್ಸಿಗೆ ಸೀರಿಯಲ್‌ಗೆ ಬಂದವರು. ಸೀರಿಯಲ್‌ನಲ್ಲಿ ವಿಲನ್ ಪಾತ್ರ ಮಾಡಿದ್ದೇ ಮಾಡಿದ್ದು, ಇವರೊಬ್ಬ ಹೀರೋಯಿನ್ ಮೆಟೀರಿಯಲ್ ಅಂತ ಸ್ಯಾಂಡಲ್‌ವುಡ್‌ನ ಫೇಮಸ್ ನಿರ್ದೇಶಕರಿಗೆ ಅನಿಸಿಬಿಟ್ಟಿದೆ. 'ಸಿನಿಮಾ ಮಾಡ್ತೀಯಮ್ಮಾ' ಅಂತ ಕೇಳಿದ ತಕ್ಷಣ ಏನು ಹೇಳಲೂ ತೋಚದೆ ಇದ್ದರಂತೆ ರಚಿತಾ. 'ನಿಂಗೆ ಹೀರೋಯಿನ್ ರೋಲ್ ಕೊಡ್ತೀನಿ, ದರ್ಶನ್ ಹೀರೋ' ಎಂದು ಬಿಟ್ಟಿದ್ದಾರೆ.
ದರ್ಶನ್ ಅಷ್ಟೊತ್ತಿಗಾಗಲೇ 'ಮೆಜೆಸ್ಟಿಕ್'ನಂಥಾ ಮಾಸ್ ಸಿನಿಮಾ ಮಾಡಿ ಸೈ ಅನಿಸಿಕೊಂಡವರು. ಸೋ ಅವರ ಜೊತೆ ಹೀರೋಯಿನ್ ಆಗಿ ಬಿಗ್ ಸ್ಕ್ರೀನ್ ಎಂಟ್ರಿ ಕೊಡ್ತೀನಿ ಅಂತ ಗೊತ್ತಾದಾಗ ರಚಿತಾ ಕೊಂಚ ಕನ್‌ಫ್ಯೂಶನ್‌ನಲ್ಲಿ, ಜಾಸ್ತಿ ಖುಷಿಯಲ್ಲಿ ಇದ್ದು ಬಿಟ್ಟರು.
ಆಂಟಿ ಅಂಕಲ್ ಕಥೆ ಅಂತ ಜನ ಬೈಯ್ಯುತ್ತಿದ್ದ ಅಮೃತಧಾರೆ ನಂಬರ್ 1 ಆಗಿದ್ದು ಹೇಗೆ? ಇದು ಅಮ್ಮಮ್ಮನ ಕೊಡುಗೆಯಾ?
ಬುಲ್ ಬುಲ್ ಸಿನಿಮಾದಲ್ಲಿ ದರ್ಶನ್‌ಗೆ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದೆ ಈ ಡಿಂಪಲ್ ಹುಡುಗಿಯ ನಟನೆ ಕನ್ನಡಿಗರಿಗೆ ಇಷ್ಟವಾಗಿ ಬಿಟ್ಟಿತು. ಆಮೇಲೆ ನೋಡಿ, ಸಾಲು ಸಾಲು ಸಿನಿಮಾಗಳು ರಚಿತಾ ರಾಮ್ ಅನ್ನೋ ಗುಳಿಕೆನ್ನೆ ಹುಡುಗಿಗಾಗಿ ಕಾದು ನಿಂತವು. ದರ್ಶನ್ ಒತೆಗೆ ಅಂಬರೀಶ, ಜಗ್ಗುದಾದದಂಥಾ ಸಿನಿಮಾಗಳಲ್ಲಿ ನಟಿಸಿದ ರಚಿತಾ ಸುದೀಪ್ ಜೊತೆಗೆ ರನ್ನದಲ್ಲೂ ಮಿಂಚಿದರು. ಪುನೀತ್ ರಾಜ್‌ಕುಮಾರ್ ಜೊತೆಗೂ ಬಣ್ಣ ಹಚ್ಚಿದರು. ಇಂಡಸ್ಟ್ರಿಗೆ ಬಂದು ಹನ್ನೆರಡು ವರ್ಷಗಳಾದರೂ ರಚಿತಾ ರಾಮ್ ಅವರಿಗೆ ಬೇಡಿಕೆ ಇದ್ದೇ ಇದೆ. ದರ್ಶನ್, ಸುದೀಪ್, ಧನಂಜಯ ಅವರಂಥಾ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡ ನಟಿ ಇತ್ತೀಚಿನ 'ಕಲ್ಟ್' ಸಿನಿಮಾದಲ್ಲಿ ಜಮೀರ್ ಅಹ್ಮದ್ ಖಾನ್ ಮಗ ಝೈದ್ ಜೊತೆ ನಟಿಸುತ್ತಿದ್ದಾರೆ. ರಾಚಯ್ಯ ಸಿನಿಮಾದಲ್ಲಿ ದುನಿಯಾ ವಿಜಯ್ ಜೊತೆಗೂ ಆಕ್ಟ್ ಮಾಡುತ್ತಿದ್ದಾರೆ.
ಆದರೆ ಇದೀಗ ರಚಿತಾ ಅಕ್ಕ ನಿತ್ಯಾ ರಾಮ್‌ಗೆ ರಾಕಿ ಭಾಯ್ ಯಶ್ ಹೇಳಿರುವ ಮಾತೊಂದು ಸೋಷಲ್ ಮೀಡಿಯಾದಲ್ಲಿ ಯದ್ವಾ ತದ್ವಾ ಶೇರ್ ಆಗ್ತಿದೆ. ಇದ್ರಲ್ಲಿ ಯಶ್, 'ಕನಸು ಕಾಣ್ಬೇಕು ಹುಡುಗಿ. ಮನುಷ್ಯ ಕನಸು ಕಂಡ್ರೇನೆ ಮುಂದೆ ಬರೋದು. ಇನ್ನೊಂದು ಸೀಕ್ರೆಟ್ ಹೇಳಲಾ, ನಾವು ಕನಸು ಕಂಡೆನೇ ಇಲ್ಲೀವರೆಗೆ ಬಂದಿರೋದು. ಯಾರ ಭವಿಷ್ಯ ಯಾರು ಕಂಡಿದ್ದಾರೆ. ಮುಂದೆ ಈ ಹುಡುಗಿ ಏನಾಗ್ತಾಳೆ ಅಂತ ಯಾರಿಗೆ ಗೊತ್ತು? ಯಾವುದೇ ಕಾರಣಕ್ಕೂ ಕನಸು ಕಾಣೋದು ನಿಲ್ಲಿಸಬೇಡ, ಹಾಗೇನೆ ಆ ಕನಸು ನನಸು ಆಗೋವರೆಗೂ ಬಿಡಬೇಡ' ಅನ್ನೋ ಮಾತನ್ನು ಹೇಳ್ತಾರೆ.
ರಾಮ್ ಚರಣ್‌ಗೆ ಶಾಕ್ ಕೊಟ್ಟ ಅರುಣ್ ವಿಜಯ್: ಬಾಕ್ಸಾಫೀಸ್‌ನಲ್ಲಿ ಗೇಮ್ ಚೇಂಜರ್ ಹಿಂದಿಕ್ಕಿ 'ವನಂಗಾನ್' ಅಬ್ಬರ!
ಆದರೆ ಇದು ಸ್ಟೇಜ್ ಮೇಲೋ, ಕಾರ್ಯಕ್ರಮದಲ್ಲೋ ಹೇಳಿದ ಮಾತಲ್ಲ. ಒಂದೇ ಸೀರಿಯಲ್‌ನಲ್ಲಿ ಯಶ್ ಮತ್ತು ರಚಿತಾ ಅಕ್ಕ ನಿತ್ಯಾ ನಟಿಸುತ್ತಿದ್ದಾಗ ಆಕೆಯಲ್ಲಿ ಭರವಸೆ ಮೂಡಿಸುವಂತೆ ಹೇಳಿದ ಮಾತು. ಯಶ್ ಹೇಳಿದ ಆ ಮಾತನ್ನು ರಿಯಲ್‌ನಲ್ಲಿ ಸಾಧಿಸಿ ತೋರಿಸಿದ್ದು ಮಾತ್ರ ನಿತ್ಯಾ ತಂಗಿ ರಚಿತಾ.
ಇನ್ನೊಂದು ಬೇಜಾರಿನ ವಿಷ್ಯ ಅಂದರೆ ಅಂಥಾ ಸ್ಟಾರ್ ನಟರ ಜೊತೆ ನಟಿಸಿದ್ದ ರಚಿತಾ ಒಂದೇ ಸಿನಿಮಾದಲ್ಲೂ ಯಶ್ ಜೊತೆ ಸ್ಕ್ರೀನ್ ಶೇರ್ ಮಾಡಿಲ್ಲ. ಯಶ್ ಮತ್ತು ರಚಿತಾ ಅವರನ್ನು ಬಿಗ್‌ಸ್ಕ್ರೀನ್‌ನಲ್ಲಿ ಜೊತೆಯಾಗಿ ನೋಡಬೇಕು ಅಂತ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.