
ಕನ್ನಡದ ಮಿನುಗುತಾರೆ ಕಲ್ಪನಾ (Monugutare kalpana) ಅವರು ನಮ್ಮನ್ನಗಲಿ ಬಹಳ ವರ್ಷಗಳೇ ಆಗಿಹೋಗಿವೆ. ಆದರೆ ಆ ಅದ್ಭುತ ನಟಿಯ ನೆನಪು ಮಾತ್ರ ಕನ್ನಡ ಸಿನಿರಸಿಕರನ್ನು ಇವತ್ತಿಗೂ ಕಾಡುತ್ತಿದೆ, ಕಾರಣ, ಬದುಕಿದ್ದಾಗ ನಮ್ಮನ್ನು ತಮ್ಮ ನಟನೆಯ ಮೂಲಕ ಬಹಳಷ್ಟು ರಂಜಿಸಿದ್ದ ನಟಿ ಕಲ್ಪನಾ, ದುರಂತ ಸಾವು ಕಂಡು ನಮ್ಮಿಂದ ದೂರವಾದರು. ಕೇವಲ 35 ವರ್ಷ ಬದುಕಿದ್ದ ನಟಿ ಕಲ್ಪನಾ ಅಷ್ಟರಲ್ಲಾಗಲೇ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿ 'ಮಿನುಗುತಾರೆ' ಪಟ್ಟವನ್ನು ಪಡೆದುಕೊಂಡಿದ್ದರು.
ಸ್ವಾತಂತ್ರ್ಯ ಪೂರ್ವದಲ್ಲೇ ಹುಟ್ಟಿದ್ದ (1943) ಹುಟ್ಟಿದ್ದ ನಟಿ ಕಲ್ಪನಾ ಅವರು ಕಪ್ಪು-ಬಿಳುಪು ಚಿತ್ರಗಳಲ್ಲಿ ಸಹ ನಟಿಸಿ ಬಹಳಷ್ಟು ಹೆಸರು ಮಾಡಿದ್ದರು. ಮೇರುನಟರಾದ ಡಾ ರಾಜ್‌ಕುಮಾರ್, ವಿಷ್ಣುವರ್ಧನ್ ಜೋಡಿಯಾಗಿ ಕೂಡ ಕಲ್ಪನಾ ನಟಿಸಿದ್ದರು. ಸಂದರ್ಭ (1978), ಗಂಧದ ಗುಡಿ (1973) ಹಾಗೂ ವಂಶಜ್ಯೋತಿ (1978) ಚಿತ್ರಗಳಲ್ಲಿ ನಟಿ ಕಲ್ಪನಾ ಅವರು ನಟ ವಿಷ್ಣುವರ್ಧನ್ ಜೊತೆ ತೆರೆ ಹಂಚಿಕೊಂಡಿದ್ದರು. ಡಾ ರಾಜ್‌ಕುಮಾರ್ ಜೊತೆಯಲ್ಲಿ ಹಣ್ಣೆಲೆ ಚಿಗುರಿದಾಗ, ಇಮ್ಮಡಿ ಪುಲಿಕೇಶಿ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದರು ಕಲ್ಪನಾ.
ಗೂನು ಬೆನ್ನಿನ ನಟಿಯೆಂದು ಅಣಕ ಮಾಡಿದ್ದವರ ಎದುರೇ ಸ್ಟಾರ್ ಆಗಿ ಬೆಳೆದಿದ್ದು ಹೇಗೆ ಕಲ್ಪನಾ?
ಇಂಥ ಮಹಾನ್ ನಟಿ ಕಲ್ಪನಾ ದುರಂತ ಸಾವು ಕಾಣುವುದಕ್ಕೂ ಮೊದಲು ಚರ್ಮವ್ಯಾಧಿಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ನಟಿಯ ತೋಳು ಹಾಗೂ ಕೈ ಮೇಲೆಲ್ಲಾ ಚರ್ಮ ವಿಚಿತ್ರ ವ್ಯಾಧಿಯಿಂದ ವಿಕಾರವಾಗಿ ಕಾಣುತ್ತಿತ್ತಂತೆ. ಯಾವುದೇ ಔಷಧೋಪಚಾರದಿಂದಲೂ ಗುಣವಾಗದ ಈ ಕಾಯಿಲೆಯಿಂದ ನಟಿ ಕಲ್ಪನಾ ಅವರು ಬಹಳಷ್ಟು ನೊಂದು ಬೆಂದಿದ್ದರು ಎನ್ನಲಾಗಿದೆ.
ಈ ಕಾರಣಕ್ಕೆ ಅವರು ತಮ್ಮ ತೋಳು ಹಾಗೂ ಮುಂಗೈಗಳು ಕಾಣದಂತೆ ಉದ್ದ ತೋಳಿನ ರವಿಕೆ ಧರಿಸುತ್ತಿದ್ದರು. ಆ ಮೂಲಕ ಅವರು ತಮ್ಮ ಕಾಯಿಲೆಯನ್ನು ಕ್ಯಾಮೆರಾ ಕಣ್ಣಿಂದ ಮರೆಮಾಚುತ್ತಿದ್ದರು. ತಮಗೆ ಅಂಟಿರುವ ಆ ಚರ್ಮವ್ಯಾಧಿಯಿಂದ ನಟಿ ಕಲ್ಪನಾ ಅದೆಷ್ಟು ಬೇಸತ್ತಿದ್ದರು ಎಂದರೆ ಆ ಕಾರಣಕ್ಕೆ ಅವರು ಸ್ವಲ್ಪ ಡಿಪ್ರೆಶನ್‌ಗೂ ಜಾರಿದ್ದರು ಎನ್ನಲಾಗಿದೆ. ಆದರೆ ಸ್ವಲ್ಪ ಕಾಲದಲ್ಲಿ ಅವರ ದುರಾದೃಷ್ಟವೋ ಎಂಬಂತೆ ಅವರು ದುರಂತ ಸಾವು ಕಂಡರು.
ಉಪೇಂದ್ರ ಬಗ್ಗೆ ಕಿಚ್ಚ ಸುದೀಪ್ ಆಡಿರುವ ಈ ಮಾತು ಈಗ ಗಲ್ಲಿಗಲ್ಲಿಯಲ್ಲೂ ಗುಲ್ಲು!
ಕೊನೆಗೂ ಸಾಯುವ ಮೊದಲು ಅವರು ಆ ಚರ್ಮವ್ಯಾಧಿಯಿಂದ ಗುಣಮುಖರಾಗಿ ಸಂತೋಷಪಡಲು ಆಗಲೇ ಇಲ್ಲ. ಈ ಬಗ್ಗೆ ಅವರ ಆತ್ಮೀಯರು ಈಗಲೂ ಬೇಸರ ವ್ಯಕ್ತಪಡಿಸುತ್ತಾರೆ. ಆದರೆ ಮಾಡುವುದೇನು? ಕಲ್ಪನಾ ಇಹಲೋಕ ತ್ಯಜಿಸಿ ಬರೋಬ್ಬರಿ 45 ವರ್ಷಗಳೇ ಕಳೆದುಹೋಗಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.