ಉಪೇಂದ್ರ ಬಗ್ಗೆ ಕಿಚ್ಚ ಸುದೀಪ್ ಆಡಿರುವ ಈ ಮಾತು ಈಗ ಗಲ್ಲಿಗಲ್ಲಿಯಲ್ಲೂ ಗುಲ್ಲು!

Published : Jan 12, 2025, 08:02 PM IST
ಉಪೇಂದ್ರ ಬಗ್ಗೆ ಕಿಚ್ಚ ಸುದೀಪ್ ಆಡಿರುವ ಈ ಮಾತು ಈಗ ಗಲ್ಲಿಗಲ್ಲಿಯಲ್ಲೂ ಗುಲ್ಲು!

ಸಾರಾಂಶ

ಕಿಚ್ಚ ಸುದೀಪ್, ಉಪೇಂದ್ರ ಹಾಗೂ ರವಿಚಂದ್ರನ್ ಅವರ ಕೊಡುಗೆಯನ್ನು ಶ್ಲಾಘಿಸಿದ್ದಾರೆ. 'ಯುಐ' ಚಿತ್ರ ವೀಕ್ಷಿಸಿ, ಹಿರಿಯರ ಸಿನಿಮಾ ನೋಡುವುದು ಸಂತಸ ತಂದಿದೆ ಎಂದರು. 'ಮ್ಯಾಕ್ಸ್' ಮತ್ತು 'ಯುಐ' ಎರಡೂ ೨೦೨೪ರ ಆರಂಭಿಕ ಹಿಟ್ ಚಿತ್ರಗಳಾಗಿವೆ. ಸುದೀಪ್, ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆಯಲ್ಲೂ ತೊಡಗಿಸಿಕೊಂಡಿದ್ದಾರೆ.

ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಅವರು ನಟ, ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರ ಬಗ್ಗೆ ಮಾತನ್ನಾಡಿದ್ದಾರೆ. 'ಉಪೇಂದ್ರ ಅವರು ಬಹಳ ದೊಡ್ಡವರು. ರವಿಚಂದ್ರನ್ ಸರ್ ಆಗಲಿ ಅಥವಾ ಉಪೇಂದ್ರ ಸರ್ ಆಗಲಿ, ಇವರನ್ನೆಲ್ಲಾ ನಾವು ಮರೆಯುವ ಹಾಗಿಲ್ಲ. ಅವರೆಲ್ಲರೂ ಕನ್ನಡ ಚಿತ್ರರಂಗಕ್ಕೆ ಬಹಳಷ್ಟು ಕೊಡುಗೆ ಕೊಟ್ಟಿದ್ದಾರೆ. ನಮ್ಮ ಕನ್ನಡ ಚಿತ್ರರಂಗ ಬೆಳೆಯುವುದಕ್ಕೆ ಅವರ ಕೊಡುಗೆ ತುಂಬಾನೇ ಇದೆ. ತಂತ್ರಜ್ಞರಾಗಿ ಇವರೆಲ್ಲರೂ ಕನ್ನಡ ಚಿತ್ರರಂಗಕ್ಕೆ ಬಹಳ ದೊಡ್ಡ ಶಕ್ತಿ. ಅವರು ನನ್ನ ಕರೆದು ಸಿನಿಮಾ ತೋರಿಸುತ್ತಾರೆ ಅಂದರೆ, ಯಾವತ್ತೂ ಖುಷಿಖುಷಿಯಾಗಿ ಹೋಗುತ್ತೇನೆ' ಎಂದು ಸಂದರ್ಶನದಲ್ಲಿ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. 

ನಾವು ಅವರ ಸಿನಿಮಾನೋಡಿಕೊಂಡು ಬೆಳೆದವರು. ಅವರ ಸಿನಿಮಾಗಳನ್ನು ನೋಡಿ ಚಪ್ಪಾಳೆ ತಟ್ಟಿದ್ದೇವೆ, ಶಿಳ್ಳೆ ಹಾಕಿದ್ದೇವೆ. ಟಿಕೆಟ್ ಕೊಟ್ಟು ಸಿನಿಮಾ ನೋಡಿದ್ದೇವೆ. ಅಂದ್ಮೇಲೆ ನಾವು ಅವರು ಪ್ರೀತಿಯಿಂದ ಕರೆದಾಗ ಹೋಗಲೇಬೇಕು, ಸಿನಿಮಾ ನೋಡಬೇಕು' ಎಂದಿದ್ದಾರೆ ನಟ ಕಿಚ್ಚ ಸುದೀಪ್. ಈ ಮಾತನ್ನು ಅವರು ಉಪೇಂದ್ರ ನಟನೆಯ 'ಯುಐ' ಸಿನಿಮಾ ಪ್ರೀಮಿಯರ್ ಶೋ ಮುಗಿಸಿ ಬಂದಾಗ ಹೇಳಿದ್ದಾರೆ. ಆದರೆ, ಈ ಮಾತು ಈಗ ಸೋಷಿಯಲ್ ಮೀಡಿಯಾಗಳಲ್ಲಿ ತುಂಬಾನೇ ವೈರಲ್ ಆಗುತ್ತಿದೆ. 

ಅಣ್ಣಾವ್ರ ಬಗ್ಗೆ ಸುದೀಪ್ ಅಂದು ಹೇಳಿದ್ದ ಮಾತು ಇಂದು ವೈರಲ್, ಕಾಮೆಂಟ್ಸ್ ಸುರಿಮಳೆ!

ಅಂದಹಾಗೆ, ನಟ ಸುದೀಪ್ ಅವರ 'ಮ್ಯಾಕ್ಸ್' ಸಿನಿಮಾ ದೊಡ್ಡ ಗೆಲುವನ್ನು ಸಾಧಿಸಿದೆ. ಉಪೇಂದ್ರರ ಯುಐ ಸಿನಿಮಾ ಕೂಡ ತನ್ನ ವಿಭಿನ್ನ ನಿರೂಪಣೆ ಮೂಲಕ ಗೆಲುವು ಸಾಧಿಸಿದ್ದು, ವರ್ಷಾಂತ್ಯದ ವೇಳೆಯಲ್ಲಿ ತೆರೆಗೆ ಬಂದಿದ್ದ ಈ ಎರಡು ಸಿನಿಮಾಗಳು 2024ರ ಹಿಟ್ ಲಿಸ್ಟ್ ಸೇರಿವೆ. ಸುದೀಪ್ 'ಮ್ಯಾಕ್ಸ್' ಸಿನಿಮಾ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಿದ್ದರೆ ಉಪ್ಪಿಯ ಯುಐ ಸಿನಿಮಾ ಇನ್ನೂ ಎರಡು ಬಾ‍ಎಗಳಲ್ಲಿ ಹೆಚ್ಚು ಅಂದರೆ, ಮಲಯಾಳಂ ಹಾಗೂ ಹಿಂದಿಯಲ್ಲಿ ಕೂಡ ಬಿಡುಗಡೆ ಆಗಿದೆ. 

ಉಪ್ಪಿ ನಟನೆ ಹಾಗೂ ನಿರ್ದೇಶನದ ಯುಐ ವಿಶಿಷ್ಠ ಶೈಲಿಯ ನಿರೂಪಣೆಯಿಂದ ಜನರ ಮೆಚ್ಚುಗೆ ಗಳಿಸಿದ್ದರೆ ಮ್ಯಾಕ್ಸ್ ರೋಚಕ ಕಥೆ ಹಾಗೂ ಸಿಂಪಲ್ ನಿರೂಪಣೆ ಮೂಲಕ ಕನ್ನಡ ಸಿನಿಪ್ರೇಕ್ಷಕರ ಮನಸ್ಸು ಮುಟ್ಟಿದೆ. ಈ ಎರಡೂ ಸಿನಿಮಾಗಳು ಈಗಲೂ ಯಶಸ್ವಿಯಾಗಿ ತೆರೆಯಲ್ಲಿ ಮಿಂಚುತ್ತಿವೆ. ನಟ ಸುದೀಪ್ ಅವರು ಸದ್ಯ ಬಿಗ್ ಬಾಸ್ ಕನ್ನಡ ಟಿವಿ ಶೋದ ಹೋಸ್ಟ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಬಿಗ್ ಬಾಸ್ ಶೋ ಈಗ ಕೊನೆಯ ಹಂತಕ್ಕೆ ಬಂದಿದ್ದು, ಇದೇ ತಿಂಗಳು (ಜನವರಿ 26-27) ಗ್ರಾಂಡ್ ಫಿನಾಲೆ ನಡೆಯಲಿದೆ. 

ಸೀರೆ ಉಡುಸ್ತೀನಿ ಅಂದೋರು ಕೈ ಕೊಟ್ರು ಹೋದ್ರು, ಆಮೇಲೆ ಹೀಗೆಲ್ಲಾ ಆಯ್ತು; ತನಿಷಾ ಕುಪ್ಪಂಡ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?