ಕಾಲಿಟ್ಟಲ್ಲೆಲ್ಲಾ ಧೂಳು.. ಕಟ್ಟಿದ್ದು ಹೇಗೆ ಕೋಟಿಗಳ ಕೋಟೆ..? ಇದು ರಿಯಲ್ ರಾಕಿ ಭಾಯ್ ರೋಚಕ ಕಥೆ!

Published : Mar 31, 2026, 06:06 PM IST
yash

ಸಾರಾಂಶ

ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಈಗ ಜಗತ್ತೇ ಮೆಚ್ಚಿದ ರಾಕಿ ಭಾಯ್. ಯಶ್ ಸಿನಿಮಾ ಅಥವಾ ಜೀವನವನ್ನು ನೋಡುವುದಾದರೆ 'ಕೆಜಿಎಫ್‌'ಗೂ ಮೊದಲು ಮತ್ತು ಕೆಜಿಎಫ್ ನಂತರ ಅಂತ ಡಿವೈಡ್ ಮಾಡಬೇಕು.

ಮನೆ ಮಗ ರಾಕಿಂಗ್ ಸ್ಟಾರ್​ ಯಶ್​ ಈಗ ಭಾರತೀಯ ಚಿತ್ರರಂಗವನ್ನೇ ಆಳುತ್ತಿದ್ದಾರೆ. ಬರೀ ಕನ್ನಡ ನಾಡಿನಲ್ಲಿ ಸುತ್ತುತ್ತಿದ್ದ ಯಶ್​​ರನ್ನ ಈಗ ಇಡೀ ಜಗತ್ತೇ ಮೆಚ್ಚುತ್ತಿದೆ. ಟಾಕ್ಸಿಕ್​​ ಸಿನಿಮಾದಿಂದ ಗ್ಲೋಬಲ್ ಮಾರ್ಕೆಟ್​​ಗೆ ಎಂಟ್ರಿ ಕೊಟ್ಟಿರೋ ರಾಕಿಂಗ್ ಸ್ಟಾರ್​​​ ಇಷ್ಟು ಎತ್ತರಕ್ಕೆ ಬೆಳೆದುಬಂದಿದ್ದೇ ಒಂದು ರೋಚಕ ಕತೆ. ಹಾಗಾದ್ರೆ ಯಶ್​ ಇಷ್ಟು ದೊಡ್ಡ ಶ್ರೀಮಂತ ಆಗಿದ್ದು ಹೇಗೆ..? ರಾಕಿ ಗೆದ್ದು ಬಂದ ಕಳ್ಳು ಮುಳ್ಳು ಹೂವಿನ ಹಾದಿ ಹೇಗಿತ್ತು.

ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಈಗ ಜಗತ್ತೇ ಮೆಚ್ಚಿದ ರಾಕಿ ಭಾಯ್. ಯಶ್ ಸಿನಿಮಾ ಅಥವಾ ಜೀವನವನ್ನು ನೋಡುವುದಾದರೆ 'ಕೆಜಿಎಫ್‌'ಗೂ ಮೊದಲು ಮತ್ತು ಕೆಜಿಎಫ್ ನಂತರ ಅಂತ ಡಿವೈಡ್ ಮಾಡಬೇಕು. ಯಾಕಂದ್ರೆ ಕೆಜಿಎಫ್ ಬರೋ ಮೊದಲು ಯಶ್​ ಇದ್ದ ರೀತಿ ಬೇರೆ.. ಆ ಸಿನಿಮಾ ಬಂದ ಮೇಲೆ ಯಶ್ ಬೆಳೆದ ರೀತಿ ಬೇರೆ.

ಹೌದು, ಯಶ್​ ಒಬ್ಬ ಸಾಮಾನ್ಯ ಬಸ್​ ಡ್ರೈವರ್​ ಮಗ ಅನ್ನೋದು ನಿಮಗೆಲ್ಲಾ ಗೊತ್ತಿರೋ ಸಂಗತಿ.. ಸಿನಿಮಾ ಗೀಳು ಹಿಡಿಸಿಕೊಂಡ ಈ ಹಾಸನ ಹೈದ ಮೆಜೆಸ್ಟಿಕ್​​ ಬಸ್​ ನಿಲ್ದಾಣದಲ್ಲಿ ಮಲಗಿದ್ದು, ಗಾಂಧಿನಗರದಲ್ಲಿ ಕೆಲಸಕ್ಕಾಗಿ ಅಲೆದದ್ದು, ಥಿಯೇಟರ್​ ಎದುರು ನನ್ನದೂ ಒಂದು ಕಟೌಟ್​ ನಿಲ್ಲಬೇಕು ಅಂತ ಪಣ ತೊಟ್ಟಿದ್ದು ಎಲ್ಲವೂ ಯಶ್​ ಸಿನಿ ಜೀವನದ ಒಂದು ಅಂಗವೇ.. ಆದ್ರೆ ಕೆಜಿಎಫ್​​​​ ಬಂದ ಮೇಲೆ ಯಶ್​ ಹೇಗೆ ಬೆಳೆದು ನಿಂತ್ರು..? ಎಷ್ಟು ಕೋಟಿ ಆಸ್ತಿಯ ಒಡೆಯ ಆದ್ರು ಅನ್ನೋದೇ ರೋಚಕ.

ಕೆಜಿಎಫ್​​ ಯಶ್​ ಜೀವನದ ಮತ್ತೊಂದು ಅಧ್ಯಾಯ. ಈ ಸಿನಿಮಾದಲ್ಲಿ ಅಮ್ಮನ ಆಸೆ ಈಡೇರಿಸೋದಕ್ಕೆ ಮಗ ಹೇಗೆ ಚಿನ್ನವನ್ನ ಭೇಟೆ ಆಡುತ್ತಾನೆ. ದೊಡ್ಡ ಸಾಮ್ರಾಜ್ಯ ಕಟ್ಟುತ್ತಾನೆ ಅನ್ನೋ ಕತೆ ಇದೆ. ಇದೇ ಕಥೆ ಯಶ್​ರ ನಿಜ ಜೀವನ ಅಂದ್ರೆ ತಪ್ಪಾಗಲ್ಲ. ಈ ಸಿನಿಮಾದಲ್ಲಿ ಬೆರೋ ಕೆಲವೊಂದು ಡೈಲಾಗ್​ಗಳು ಯಶ್​​​ರ ಸಾಧನೆಗೆ ಕನೆಕ್ಟ್ ಆಗುತ್ತೆ. ಹಾಸಿಗೆ ಇದ್ದಷ್ಟು ಕಾಲು ಚಾಚಿ ಅನ್ನೋ ಡೈಲಾಗ್​ ನಿಂದ ಹಿಡಿದು ಆ ಹಾಸಿಗೆಯನ್ನೇ ದೊಡ್ಡದು ಮಾಡೋಣ ಅನ್ನೋ ಡೈಲಾಗ್​​​​ ವರೆಗೂ ಯಶ್ ರೀಯಲ್ ಜೀವನ ಸೂಟ್ ಆಗುತ್ತೆ. ಯಾಕಂದ್ರೆ ಯಶ್​ ಹಾಸಿಗೆ ಇದ್ದಷ್ಟು ಕಾಲ್​ ಚಾಚಲಿಲ್ಲ. ಹಾಸಿಗೆಯನ್ನೇ ದೊಡ್ಡದು ಮಾಡಿಕೊಂಡು ಬೆಳೆದು ನಿಂತ್ರು.

ಹೌದು, ಕೆಜಿಎಫ್ ಸಿನಿಮಾದ ಈ ಡೈಲಾಗನ್ನ ನಿಜ ಜೀವನದಲ್ಲಿ ಅಳವಡಿಸಿಕೊಂಡಿರೋ ರಾಕಿ ಭಾಯ್, ತಮ್ಮ ಸುತ್ತ ದೊಡ್ಡ ಕೋಟೆಯನ್ನೇ ಕಟ್ಟಿಕೊಂಡಿದ್ದಾರೆ. ಆ ಕೋಟೆಗೆ ಅವ್ರೇ ಭಾಯ್.. ಯಶ್​​ ಬೆಳಿಲೇಬೇಕು ಚಿತ್ರರಂಗವನ್ನೂ ಬೆಳೆಸಬೇಕು ಅಂತ ತೊಡೆ ತಟ್ಟಿ ನಿಂತ ಕಿಚ್ಚು. ಈಗ ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಸುಲ್ತಾನ್ ಆಗಿದ್ದಾರೆ. ಕನ್ನಡದಲ್ಲಿ ಅತಿ ದೊಡ್ಡ ಶ್ರೀಮಂತ ನಟ ಯಾರು ಅಂದ್ರೆ ಅದು ಯಶ್​ ಅಂತ ಇಡೀ ಜಗತ್ತೇ ಸಾರುತ್ತೆ. ಯಾಕಂದ್ರೆ ಯಶ್​ ಈಗ ಬರೋಬ್ಬರಿ 600 ಕೋಟಿಗೂ ಹೆಚ್ಚು ನೆಟ್​ವರ್ಥ್​​ ಇರೋ ಸೂಪರ್ ಸ್ಟಾರ್​​..

ಯಶ್​, ಕೆಜಿಎಫ್​ ಹಾಗು ಕೆಜಿಎಫ್ ಚಾಪ್ಟರ್ 2 ಸಿನಿಮಾ ಮಾಡೋದಕ್ಕೆ ಬರೋಬ್ಬರಿ 8 ವರ್ಷ ಸಮಯ ಹಾಕಿದ್ದಾರೆ. ಆದ್ರೆ ಇದರಿಂದ ಬೆಳೆದ ಬೆಳೆ ಎಷ್ಟು ಗೊತ್ತಾ.. ಬರೋಬ್ಬರಿ 600 ಕೋಟಿಗೂ ಹೆಚ್ಚು. ಅಷ್ಟೆ ಅಲ್ಲ ಬರೋಬ್ಬರಿ 30 ಕೋಟಿಗೂ ಅಧಿಕ ಬೆಲೆಬಾಳೋ ಕಾರುಗಳು ಐಶಾರಾಮಿ ಬಂಗಲೆಗಳು. ಹಾಸನ ಹೈದ ಯಶ್​​ ಬಳಿ ಈಗ ಎರಡು ವೆಲ್​ಫೇರ್​ ಕಾರು, ಎರಡು ಬೆನ್ಜ್​​​​​ ಕಾರು, ರೇಂಜ್ ರೋವರ್​, ಹಾಗೆ ರಣ್ವೀರ್​ ಸಿಂಗ್ ಬಳಿ ಇದೆಯಲ್ಲಾ 3 ಕೋಟಿ ಬೆಲೆಯ ಲೆಕ್ಸ್​ಎಸ್​​​​​​ ಕಾರು. ಅದೇ ತರದ 3 ಕೋಟಿಯ ಲೆಕ್ಸೆಸ್​ ಕೂಡ ಯಶ್ ಬಳಿ ಇದೆ. ಈ ಎಲ್ಲಾ ಕಾರುಗಳ ಒಟ್ಟು ಬೆಲೆ ಹೆಚ್ಚು ಕಮ್ಮಿ 30 ಕೋಟಿ ಆಗುತ್ತೆ.

ಯಶ್​​, ಕೆಜಿಎಫ್​ ಸಿನಿಮಾ ಮಾಡೋ ಮೊದಲು ಅಂದ್ರೆ ರಾಮಾಚಾರಿ ಸಿನಿಮಾದವರೆಗೂ 3 ರಿಂದ 5 ಕೋಟಿ ರೂಪಾಯಿಯಷ್ಟು ಸಂಭಾವನೆ ಪಡೆಯುತ್ತಿದ್ರು. ಆದ್ರೆ ಒಂದು ಕೆಜಿಎಫ್​ ರಾಕಿಂಗ್ ಸ್ಟಾರ್​​ರ ಜೀವನವನ್ನೇ ಬದಲಿಸಿದೆ. ಯಶ್​ ಭಾರತೀಯ ಚಿತ್ರರಂಗವನ್ನೇ ಆಳುತ್ತಿದ್ದಾರೆ. ಇವತ್ತು ಯಶ್​ ಸಿನಿಮಾ ಹೊರತಾಗಿ ಬರೀ ಜಾಹಿರಾತಿನಿಂದಲೇ ನೂರಾರು ಕೋಟಿ ಸಂಪಾದಿಸುತ್ತಾರೆ. 600 ರಿಂದ 700 ಕೋಟಿ ವರೆಗು ಖರ್ಚು ಮಾಡಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಬಾಕ್ಸಾಫೀಸ್​ ಸಿಇಓ

ಯಶ್​​ ಬೆಂಗಳೂರಿನಲ್ಲಿ ಆಸ್ತಿ ಮಾಡಿದ್ದಾರೆ. ಹಾಸನದಲ್ಲಿ ಜಾಗ ಖರೀದಿಸಿದ್ದಾರೆ. ಮೈಸೂರಿನಲ್ಲಿ ಪ್ರಾಪರ್ಟಿ ಮಾಡಿಟ್ಟಿದ್ದಾರೆ. ಮುಂಬೈ ನಲ್ಲಿ ಘರ್​ ಇದೆ. ಭಾರತದ ಬಾಕ್ಸಾಫೀಸ್​ ಸಿಇಓ ಅಂದ್ರೆ ಅದು ಯಶ್​.. ಟಾಕ್ಸಿಕ್​​ನಿಂದ ಒಂದುವರೆ ಸಾವಿರ ಕೋಟಿ ಕಲೆಕ್ಷನ್ ಮಾಡೋ ಗುರಿ ಇಟ್ಟಿರೋ ಯಶ್​​ ಅದನ್ನ ಸಾಧಿಸುತ್ತಾರೆ ಅನ್ನೋ ನಂಬಿಕೆ ಇದೆ. ಒಟ್ನಲ್ಲಿ ಒಬ್ಬ ಸಾಮಾನ್ಯ ಕನ್ನಡದ ಹುಡುಗ ಯಶ್ ಇವತ್ತು ಇಡೀ ಕನ್ನಡಿಗರು ಹೆಮ್ಮೆ ಪಡುವಂತೆ ಬೆಳೆದು ನಿಂತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಾಂತಾರದಲ್ಲಿ ʼಬಾವʼನಿಗೆ ಪಾತ್ರ ಸಿಕ್ಕಿದ್ದರ ಹಿಂದಿದೆ ಆ ದೇವಸ್ಥಾನದ ಕೃಪೆ!
2ನೇ ಮಗುವಿನ ನಿರೀಕ್ಷೆಯಲ್ಲಿ ನಟಿ ಹರ್ಷಿಕಾ: ಭಾವಿ ಪತಿಯ ಅಂಕಲ್​ ಎಂದು ಕರೆದು ಪೇಚಿಗೆ ಸಿಲುಕಿದ್ದ ಸ್ಟೋರಿ ಇಲ್ಲಿದೆ