New Year 2022: ಹೊಸ ವರ್ಷದಲ್ಲಿ ಒಂದೊಳ್ಳೆ ಕೆಲಸ: ಜನಪ್ರಿಯ ನಟಿಯರ ಕನಸು

By Kannadaprabha NewsFirst Published Jan 7, 2022, 11:16 AM IST
Highlights

ಹೊಸ ವರ್ಷ ಶುರುವಲ್ಲಿ ಹೊಸ ಕನಸು ಶುರು ಮಾಡುವುದು ಸಹಜ. ಇನ್ನೊಬ್ಬರ ಕನಸು ನಮ್ಮದೂ ಆಗಿರಬಹುದು. ನಮ್ಮ ಕನಸು ಇನ್ನೊಬ್ಬರದೂ ಆಗಿರಬಹುದು. ಜನಪ್ರೀತಿ ಗಳಿಸಿರುವ ಮೂವರು ನಟಿಯರ ಕನಸುಗಳು ಇಲ್ಲಿವೆ.

ಪ್ರಿಯಾ ಕೆರ್ವಾಶೆ

ಹೊಸ ವರ್ಷ ಶುರುವಲ್ಲಿ ಹೊಸ ಕನಸು ಶುರು ಮಾಡುವುದು ಸಹಜ. ಇನ್ನೊಬ್ಬರ ಕನಸು ನಮ್ಮದೂ ಆಗಿರಬಹುದು. ನಮ್ಮ ಕನಸು ಇನ್ನೊಬ್ಬರದೂ ಆಗಿರಬಹುದು. ಜನಪ್ರೀತಿ ಗಳಿಸಿರುವ ಮೂವರು ನಟಿಯರ ಕನಸುಗಳು ಇಲ್ಲಿವೆ.

ಒಳ್ಳೊಳ್ಳೆ ಸಿನಿಮಾ ಮಾಡ್ಬೇಕು, ಕಲಿಕೆ ನಿರಂತರವಾಗಿರಬೇಕು: ಈ ವರ್ಷ ಒಳ್ಳೊಳ್ಳೆ ಸಿನಿಮಾ ಒಪ್ಪಿಕೊಳ್ಳಬೇಕು. ಜನರಿಗೆ ಉತ್ತಮ ಮನರಂಜನೆ ನೀಡಬೇಕು ಅನ್ನೋದು ನಾನು ಮಾಡಬೇಕು ಅಂದುಕೊಂಡಿರುವ ಒಂದೊಳ್ಳೆ ಕೆಲಸ. ಅದಕ್ಕೆ ಪೂರಕವಾಗಿ ಸಾಕಷ್ಟು ಸ್ಕ್ರಿಪ್ಟ್‌ಗಳು ಬರ್ತಿವೆ. ಕನ್ನಡ ಮಾತ್ರವಲ್ಲ, ತೆಲುಗಿನಿಂದಲೂ ಸಿನಿಮಾ ಆಫರ್‌ಗಳು ಬರುತ್ತಿವೆ. ಇನ್ನೂ ಯಾವುದಕ್ಕೂ ಓಕೆ ಅಂದಿಲ್ಲ. ಕೊರೋನಾ (CoronaVirus) ಕಂಟ್ರೋಲಿಗೆ ಬಂದರೆ ಈ ವರ್ಷ ಸ್ವಿಮ್ಮಿಂಗ್‌ ಕಲಿಯಬೇಕು. ಪರ್ಸನಲ್‌ ಆಗಿ ಬೆಳೀತಾ ಹೋಗಬೇಕು. ನನಗೆ ನನ್ನದೇ ಆದ ಕೆಲವು ಅಜೆಂಡಾಗಳಿವೆ. ಅವೆಲ್ಲ ನನ್ನ ವೈಯುಕ್ತಿಕ ಬೆಳವಣಿಗೆಗೆ ಪೂರಕವಾಗಿರುವಂಥದ್ದು. ಅವನ್ನೆಲ್ಲ ಈ ವರ್ಷ ಸಾಧ್ಯವಾಗಿಸಬೇಕು. ಕಳೆದ ಸಲ ಲಾಕ್‌ಡೌನ್‌ನಲ್ಲಿ (Lockdown) ಆನ್‌ಲೈನ್‌ ಡ್ಯಾನ್ಸ್‌ ಕ್ಲಾಸ್‌ ಅಟೆಂಡ್‌ ಮಾಡಿದ್ದೆ. ಒಂದು ವೇಳೆ ಮತ್ತೆ ಲಾಕ್‌ಡೌನ್‌ ಆದರೆ ಈ ವರ್ಷವೂ ಆನ್‌ಲೈನ್‌ನಲ್ಲಿ ಹೊಸ ಬಗೆಯ ಡ್ಯಾನ್ಸ್‌, ವರ್ಕೌಟ್‌ ಕಲಿಕೆ ಅನಿವಾರ್ಯ. 
-ಸಂಜನಾ ಆನಂದ್‌

Sandalwood Movies: ಅನಿಶ್ಚಿತತೆಯಲ್ಲಿ ಚಿತ್ರರಂಗ, ಸದ್ಯಕ್ಕಿಲ್ಲ ಸಿನಿಮಾ ಬಿಡುಗಡೆ

ಹೊಸ ಮನೆ ಕಟ್ಟುವ ಕನಸು: ದಕ್ಷಿಣ ಭಾರತೀಯ ಭಾಷೆಗಳ ಸಿನಿಮಾದಲ್ಲಿ ನಟಿಸಬೇಕು ಅನ್ನೋದು ನನ್ನ ಬಹು ದಿನಗಳ ಕನಸು. ಈ ಕನಸು ಈ ವರ್ಷವಾದರೂ ನನಸಾಗಲಿ ಅಂತ ಆಶಿಸುವೆ. ಹೊಸ ಸಿನಿಮಾ ಕುರಿತು ಕೆಲವು ಸಿನಿಮಾ ತಂಡಗಳ ಜೊತೆಗೆ ಮಾತುಕತೆಗಳಾಗಿವೆ. ‘ಶುಗರ್‌ಲೆಸ್‌’ (Sugarless), ‘ಮೇಡ್‌ ಇನ್‌ ಚೈನಾ’ (Made In China) ಬಿಡುಗಡೆಗೆ ಸಿದ್ಧವಿದೆ. ‘ಶುಗರ್‌ಲೆಸ್‌’ ತಂಡದ ಜೊತೆಗೇ ಇನ್ನೊಂದು ಸಿನಿಮಾ ಬಗ್ಗೆ ಮಾತುಕತೆ ನಡೆಯುತ್ತಿದೆ. ವೈಯುಕ್ತಿಕವಾಗಿ ನಾನೀಗ ದೊಡ್ಡೋಳಾಗ್ತಿದ್ದೀನಿ, ಹೀಗಾಗಿ ಮನೆ ಕಟ್ಟಬೇಕು ಅನ್ನುವ ಹೊಸ ಕನಸು ಈ ವರ್ಷದ ಜೊತೆ ಸೇರಿದೆ. ಅದಿನ್ನೂ ಪ್ಲಾನಿಂಗ್‌ ಹಂತದಲ್ಲಿದೆ. ಆದರೆ ನನಗೆ ಈ ವರ್ಷದಲ್ಲಿ ಅದನ್ನು ಕಾರ್ಯರೂಪಕ್ಕೆ ತರಬೇಕು, ನನ್ನ ಸ್ವಂತ ಮನೆಯಲ್ಲಿ ನಾನು ಓಡಾಡಬೇಕು ಅನ್ನೋ ಕನಸು. 
-ಪ್ರಿಯಾಂಕಾ ತಿಮ್ಮೇಶ್‌

'ಲಕ್ಕಿ ಮ್ಯಾನ್' ಚಿತ್ರೀಕರಣ ಕಂಪ್ಲೀಟ್: ವಿಶೇಷ ಪಾತ್ರದಲ್ಲಿ Puneeth Rajkumar

ಮಹಿಳಾ ಪ್ರಧಾನ ಚಿತ್ರ ಮಾಡಬೇಕು: ಈ ವರ್ಷ ಒಂದು ಮಹಿಳಾ ಪ್ರಧಾನ ಚಿತ್ರ ಮಾಡಬೇಕು, ಆ ಮೂಲಕ ಬೇರೆ ಚಿತ್ರರಂಗಗಳಲ್ಲಿ ಇರುವಂತೆ ಕನ್ನಡದಲ್ಲೂ ಮಹಿಳಾ ಪ್ರಧಾನ ಚಿತ್ರ ಯಶಸ್ವಿ ಆಗುವ ಹಾಗೆ ಮಾಡಬೇಕು. ಇದರ ಜೊತೆಗೆ ನನ್ನ ಪ್ರೀತಿಯ ಡ್ಯಾನ್ಸ್‌ ಕಲಿಕೆಯನ್ನು ಇನ್ನಷ್ಟುಹೆಚ್ಚಿಸಬೇಕು. ಕಳೆದ ವರ್ಷ ಲಾಕ್‌ಡೌನ್‌ ಕಾರಣಕ್ಕೆ ಅಂದುಕೊಂಡಂತೆ ಡ್ಯಾನ್ಸ್‌ ಪ್ರಾಕ್ಟೀಸ್‌ ಮಾಡೋದು ಸಾಧ್ಯ ಆಗಿರಲಿಲ್ಲ. ಈ ಬಾರಿ ಅದು ಸಾಧ್ಯವಾಗಬೇಕು. ಅದೇ ಥರ ಒಂದೊಳ್ಳೆ ನೃತ್ಯ ಪ್ರದರ್ಶನ ನೀಡಬೇಕು. ಬೇಸರದ ಸಂಗತಿ ಅಂದರೆ ನನ್ನ ನೃತ್ಯ ಶಾಲೆಯ ಎಲ್ಲಾ ಮಕ್ಕಳೂ ಬಹಳ ಉತ್ಸಾಹದಿಂದ ಈಗಷ್ಟೇ ಕ್ಲಾಸ್‌ಗೆ ಬರಲು ಶುರು ಮಾಡಿದ್ದರು. ಅಷ್ಟೊತ್ತಿಗೆ ಮತ್ತೆ ಒಮಿಕ್ರೋನ್‌ (Omicron), ಕೋವಿಡ್‌ ಭೀತಿ. ಇದೆಲ್ಲ ಬೇಗ ಮುಗಿದು ಮಕ್ಕಳೆಲ್ಲ ಮೊದಲಿನಂತೆ ಕುಣಿಯುತ್ತಾ ಬರಲಿ ಅಂತ ಆಶಿಸುತ್ತೇನೆ.
-ಮಾತಂಗಿ ಪ್ರಸನ್ನ

click me!