Shivarajkumar: ಶಿವಣ್ಣ ಶೂಟಿಂಗ್‌ ಡೈರಿ: ಯಾವ ಚಿತ್ರ ಯಾವ ಹಂತದಲ್ಲಿದೆ

Kannadaprabha News   | Asianet News
Published : Jan 07, 2022, 08:54 AM ISTUpdated : Jan 07, 2022, 10:49 AM IST
Shivarajkumar: ಶಿವಣ್ಣ ಶೂಟಿಂಗ್‌ ಡೈರಿ: ಯಾವ ಚಿತ್ರ ಯಾವ ಹಂತದಲ್ಲಿದೆ

ಸಾರಾಂಶ

ಯಶ್‌ ಅಭಿನಯದ ಕೆಜಿಎಫ್‌ 2 ಬಿಡುಗಡೆಗಾಗಿ ಕಾದಿದೆ. ಅವರ ಮುಂದಿನ ಚಿತ್ರದ ನಿರ್ದೇಶಕ ನರ್ತನ್‌ ಅನ್ನುವುದನ್ನು ಬಿಟ್ಟರೆ ಹೆಚ್ಚಿನ ಮಾಹಿತಿ ಇಲ್ಲ. ಅದರ ಚಿತ್ರೀಕರಣವೂ ಆರಂಭವಾದಂತಿಲ್ಲ. ಸುದೀಪ್‌ ವಿಕ್ರಾಂತ್‌ ರೋಣ ಬಿಡುಗಡೆಗೆ ಕಾದಿದ್ದಾರೆ. ಅವರ ಮುಂದಿನ ಸಿನಿಮಾದ ಚಿತ್ರೀಕರಣ ಆರಂಭವಾಗಿಲ್ಲ. ಗಣೇಶ್‌ ಗಾಳಿಪಟ 2 ಶೂಟಿಂಗ್‌ ಮುಗಿಸಿ ಗೋಲ್ಡನ್‌ ಗ್ಯಾಂಗ್‌ ಸೇರಿಕೊಂಡಿದ್ದಾರೆ. 

ಯಶ್‌ (Yash) ಅಭಿನಯದ ಕೆಜಿಎಫ್‌ 2 (KGF 2) ಬಿಡುಗಡೆಗಾಗಿ ಕಾದಿದೆ. ಅವರ ಮುಂದಿನ ಚಿತ್ರದ ನಿರ್ದೇಶಕ ನರ್ತನ್‌ (Narthan) ಅನ್ನುವುದನ್ನು ಬಿಟ್ಟರೆ ಹೆಚ್ಚಿನ ಮಾಹಿತಿ ಇಲ್ಲ. ಅದರ ಚಿತ್ರೀಕರಣವೂ ಆರಂಭವಾದಂತಿಲ್ಲ. ಸುದೀಪ್‌ (Sudeep) ವಿಕ್ರಾಂತ್‌ ರೋಣ (Vikrant Rona) ಬಿಡುಗಡೆಗೆ ಕಾದಿದ್ದಾರೆ. ಅವರ ಮುಂದಿನ ಸಿನಿಮಾದ ಚಿತ್ರೀಕರಣ ಆರಂಭವಾಗಿಲ್ಲ. ಗಣೇಶ್‌ (Ganesh) ಗಾಳಿಪಟ 2 (Galipata 2) ಶೂಟಿಂಗ್‌ ಮುಗಿಸಿ ಗೋಲ್ಡನ್‌ ಗ್ಯಾಂಗ್‌ (Golden Gang) ಸೇರಿಕೊಂಡಿದ್ದಾರೆ. 

ಶರಣ್‌ (Sharan) ‘ಗುರುಶಿಷ್ಯರು’ ಚಿತ್ರದ ಶೂಟಿಂಗ್‌ ಮುಗಿಯುತ್ತಾ ಬಂದಿದೆ. ಹೀಗೆ ಕನ್ನಡದ ತಾರೆಯರೆಲ್ಲ ಆಫ್‌ ದಿ ಶೂಟ್‌ ಮೂಡ್‌ನಲ್ಲಿದ್ದಾರೆ. ಈ ಮಧ್ಯೆ ಏಕಕಾಲದಲ್ಲಿ ಮೂರು ದೊಡ್ಡ ಚಿತ್ರಗಳಲ್ಲಿ ನಟಿಸುತ್ತಿರುವ ಸ್ಟಾರ್‌ ಎಂದರೆ ಶಿವರಾಜ್‌ಕುಮಾರ್‌ (Shivarajkumar) ಮಾತ್ರ. ‘ಬೈರಾಗಿ’ (Bairagi), ‘ವೇದ’ (Veda), ‘ನೀ ಸಿಗೋವರೆಗೂ’ (Nee Sigovaregu) ಚಿತ್ರಗಳಲ್ಲಿ ನಟಿಸುತ್ತಿರುವ ಅವರ ನಟನೆಯ ಚಿತ್ರಗಳು ಈಗ ಯಾವ ಹಂತದಲ್ಲಿವೆ ಎನ್ನುವ ಮಾಹಿತಿ ಇಲ್ಲಿದೆ.

ವೇದ: ಎ ಹರ್ಷ (A.Harsha) ನಿರ್ದೇಶನದ ಚಿತ್ರವಿದು. ಗೀತಾ ಶಿವರಾಜ್‌ಕುಮಾರ್‌ (Geetha SHivarjkumar) ನಿರ್ಮಿಸುತ್ತಿದ್ದಾರೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಶೂಟಿಂಗ್‌ ನಡೆಯತ್ತಿದೆ. ಈಗಷ್ಟೆಮೊದಲ ಹಂತದ ಚಿತ್ರೀಕರಣ ಮುಗಿಸಿರುವ ವೇದ, ಎರಡನೇ ಹಂತದ ಶೂಟಿಂಗ್‌ಗೆ ತಯಾರಿ ಮಾಡಿಕೊಳ್ಳುತ್ತಿದೆ. ಚಿತ್ರದ ಬಹುತೇಕ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ಸೆಟ್‌ನಲ್ಲಿ ನಡೆಯುತ್ತಿದೆ.

Shivarajkumar's Veda Movie:ವಯಸ್ಸಾದವರ ಲುಕ್‌ನಲ್ಲಿ ಶಿವಣ್ಣ, ಪಾವನಾ ಜೋಡಿ!

‘ಮತ್ತೊಮ್ಮೆ ಶಿವಣ್ಣ ಅವರಿಗೆ ಸಿನಿಮಾ ಮಾಡುತ್ತಿರುವುದು ಖುಷಿ ವಿಚಾರ. ಈ ಚಿತ್ರದಲ್ಲೂ ಹೊಸ ರೀತಿಯ ಕತೆಯೊಂದಿಗೆ ನಿಮ್ಮ ಮುಂದೆ ಬರಲಿದ್ದೇವೆ. ‘ವೇದ’ ಎನ್ನುವ ಹೆಸರು ಈಗಾಗಲೇ ಟ್ರೆಂಡ್‌ ಆಗಿದೆ. ಕತೆ ಕೂಡ ಇದೇ ರೀತಿ ಕ್ರೇಜ್‌ ಹುಟ್ಟು ಹಾಕುತ್ತದೆ. ಇನ್ನೇನು ಚಿತ್ರೀಕರಣಕ್ಕೆ ಹೊರಡಲಿದ್ದೇವೆ. ಮತ್ತೊಂದು ಕಡೆ ಭಜರಂಗಿ 2 ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನಮ್ಮಿಬ್ಬರ ಕಾಂಬಿನೇಶನ್‌ ಪ್ರೇಕ್ಷಕರಿಗೂ ಸಂಭ್ರಮ ಕೊಡುತ್ತದೆಂಬ ನಂಬಿಕೆ ಇದೆ,’ ಎನ್ನುತ್ತಾರೆ ನಿರ್ದೇಶಕ ಎ ಹರ್ಷ.

ಬೈರಾಗಿ: ವಿಜಯ್‌ ಮಿಲ್ಟನ್‌ (Vijay Milton) ನಿರ್ದೇಶನದ ‘ಬೈರಾಗಿ’ ಚಿತ್ರಕ್ಕೆ ಕೇವಲ ಮೂರು ದಿನ ಮಾತ್ರ ಶೂಟಿಂಗ್‌ ಬಾಕಿ ಇದೆ. ಇಲ್ಲಿವರೆಗೂ 80 ದಿನಗಳ ಕಾಲ ಶೂಟಿಂಗ್‌ ಮಾಡಿದ್ದಾರೆ. ಮೂರು ದಿನಗಳ ಕಾಲ ಬೆಂಗಳೂರಿನ ಸ್ಟುಡಿಯೋ ಸೆಟ್‌ನಲ್ಲಿ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಇದೇ ವರ್ಷದ ಮಧ್ಯ ಅಥವಾ ಕೊನೆಯಲ್ಲಿ ಸಿನಿಮಾ ತೆರೆಗೆ ಬರಲಿದೆ. ಕೃಷ್ಣ ಸಾರ್ಥಕ್‌ (Krishna Sarthak) ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಶಿವಣ್ಣ ಜತೆಗಿನ ಸಿನಿಮಾ ನನಗೆ ಸಿಕ್ಕ ಗಾಡ್‌ ಗಿಫ್ಟ್‌: ಎ ಹರ್ಷ

ಭಾಷೆಗಾಗಿ ನಾನು ಪ್ರಾಣ ಕೊಡೋದಕ್ಕೂ ಸಿದ್ಧ. ಭಾಷೆಯನ್ನು ಅಗೌರವಿಸುವಂತಹ ಕೆಲಸ ಮಾಡಬೇಡಿ ಎಂದು ಚಿತ್ರನಟ ಶಿವರಾಜ್‌ ಕುಮಾರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ನಡೆದ ‘ಬಡವ ರಾಸ್ಕಲ್‌’(Badava Rascal) ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮ ಅನೇಕ ತಾರೆಯರ ಭಾಷಾಭಿಮಾನಕ್ಕೆ ಸಾಕ್ಷಿಯಾಯಿತು. ಈ ವೇಳೆ ಮಾತನಾಡಿದ ಶಿವಣ್ಣ, ‘ನಮ್ಮ ಬಾವುಟ ಸುಟ್ಟರೆ ತಾಯಿಯನ್ನೇ ಸುಟ್ಟಹಾಗೆ. ಇಂತಹ ಕೆಲಸ ಮಾಡುವುದು ಅಕ್ಷಮ್ಯ. ಕನ್ನಡಿಗರಿಗೆ ಏನೂ ಪವರ್‌ ಇಲ್ಲ ಅಂತೆಲ್ಲ ತಿಳಿದುಕೊಳ್ಳಬೇಡಿ’ ಎಂದು ಶಿವಣ್ಣ ಕನ್ನಡ ಬಾವುಟ(Kannada Flag) ಸುಟ್ಟವರ ವಿರುದ್ಧ ಕಿಡಿಕಾರಿದ್ದರು.

‘ಯಾವ ರಾಜ್ಯದಲ್ಲಿ ಯಾವ ಭಾಷೆ ಇದೆಯೋ ಅದಕ್ಕೆ ಮರಾರ‍ಯದೆ ಕೊಡೋದು ಧರ್ಮ. ಭಾಷೆ ಎಲ್ಲರಿಗೂ ಮುಖ್ಯ. ನೆಲದ ಭಾಷೆಗೆ ಅಗೌರವ ತೋರುವಂತಹ ಕೆಲಸ ಮಾಡಬೇಡಿ. ಕನ್ನಡ ಬಾವುಟ ಸುಡುವುದು ಎಷ್ಟುಸರಿ? ಅಂಥಾ ಕೆಲಸ ಯಾವತ್ತಿಗೂ ಮಾಡಬೇಡಿ. ಸರ್ಕಾರ ಈ ಬಗ್ಗೆ ಗಮನ ಕೊಡಬೇಕು. ಬರೀ ವೋಟಿಗಾಗಿ ಕಾಯೋದರಲ್ಲಿ ಅರ್ಥ ಇಲ್ಲ ಎಂದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?