
ಸುದೀಪ್ ಫೈನಲೀ ಬಿಗ್‌ಬಾಸ್‌ಗೆ ಮರಳಿದ್ದಾರೆ. ಅಲ್ಲಿಗೆ ಕಳೆದೊಂದು ವರ್ಷದಿಂದ ಸುದೀಪ್ ಫ್ಯಾನ್ಸ್ ಅನ್ನು ಕಂಗೆಡಿಸಿದ್ದ ಸುದ್ದಿ ಸುಳ್ಳಾಗಿದೆ. 'ಮುಂದಿನ ಬಿಗ್‌ಬಾಸ್‌ನಲ್ಲಿ ನಾನಿರಲ್ಲ' ಅಂದಿದ್ದ ಸುದೀಪ್ ಮತ್ತೆ ಬಿಗ್‌ಬಾಸ್‌ಗೆ ಯಾಕೆ ಬಂದರು, ಬಂದದ್ದಷ್ಟೇ ಅಲ್ಲ, ಯಾಕೆ ನಾಲ್ಕು ವರ್ಷದ ಅಗ್ರಿಮೆಂಟಿಗೂ ಸೈನ್ ಮಾಡಿದರು ಅನ್ನೋ ಪ್ರಶ್ನೆಗೆ ಸುದೀಪ್ ಪ್ರೆಸ್‌ಮೀಟ್‌ನಲ್ಲಿ ಉತ್ತರ ಕೊಟ್ಟರೂ ಜನರ ಕನ್‌ಫ್ಯೂಜನ್ ಕ್ಲಿಯರ್ ಆಗಿಲ್ಲ. ಅಷ್ಟಕ್ಕೂ ಸುದೀಪ್ ಹೇಳಿದ್ದು ಏನಂದ್ರೆ, 'ಬಿಗ್‌ಬಾಸ್ ಶುರುವಾಗುತ್ತೆ ಅಂದ್ರೆ ಅಷ್ಟೊಂದು ಜನ ನೋಡ್ತಾರೆ ಅಂದ್ರೆ ಅದಕ್ಕೆ ಅಷ್ಟು ಇಂಪಾರ್ಟೆನ್ಸ್ ಇದೆ. ಹಾಗೇ ನೋಡಿದ್ರೆ ಜನರು ನನ್ನ ಮೇಲೆ ಇಟ್ಟಿರೋ ಪ್ರೀತಿ, ಗೌರವ ಕಾಣಿಸಿದೆ. ನಾನು ವಾಪಸ್ ಬರೋದಕ್ಕೆ ಮುಖ್ಯ ಕಾರಣ ಪ್ರತಿಯೊಬ್ಬರು ನನಗೆ ಕರೆದ ರೀತಿ ಇರಬಹುದು. ಅವರು ನನ್ನ ಮೇಲೆ ಇಟ್ಟಿರೋ ಪ್ರೀತಿ ಇರಬಹುದು. ಜನ ಅಭಿಪ್ರಾಯ, ನನ್ನ ಸ್ನೇಹಿತರು ಈ ಬಗ್ಗೆ ಹೇಳಿದ್ದು, ಬಿಗ್‌ಬಾಸ್ ಟೀಮ್ ಪದೇ ಪದೇ ಬಂತು ಮನವೊಲಿಸಿದ್ದಕ್ಕೆ ನಾನು ಇದ್ದೇನೆ' ಅಂತ ಸುದೀಪ್ ಹೇಳಿದ್ದಾರೆ.
ಇದ್ಯಾಕೋ ಅಡ್ಡಗೋಡೆ ಮಧ್ಯ ದೀಪ ಇಟ್ಟಂಗಿದ್ಯಲ್ಲಾ ಅನ್ನುವಾಗಲೇ, ಸುದೀಪ್ ಅವರ ದೊಡ್ಡ ಬಜೆಟ್ ಸಿನಿಮಾದ ಕಥೆ ಲೀಕ್ ಆಗಿದ್ಯಂತೆ ಅನ್ನೋ ಸುದ್ದಿ ಹಬ್ಬಿದೆ. ಅಷ್ಟಕ್ಕೂ ಆ ಸಿನಿಮಾ ಯಾವದು ಅಂದರೆ ಸದ್ಯ ಸುದೀಪ್ ಶೂಟ್ ಮಾಡುತ್ತಿರುವ 'ಬಿಲ್ಲರಂಗಭಾಷ' ಅನ್ನೋದು ಒಂದಿಷ್ಟು ಜನರ ಸ್ಪಷ್ಟ ಮಾತು. ಅರೆ, ಅಷ್ಟೊಂದು ಜನರಿಗೆ ವಿಷಯ ಗೊತ್ತಾ ಅಂತ ನೀವು ಕೇಳಬಹುದು. ಇಲ್ಲೇ ಇರೋದು ಮಜಾ. ನಿಮಗೆಲ್ಲ ತಿಳಿದಿರೋ ಹಾಗೆ ಈಗಾಗಲೇ 'ಬಿಲ್ಲ ರಂಗ ಬಾಷ' ಚಿತ್ರದ ಒಂದು ಶೆಡ್ಯೂಲ್ ಚಿತ್ರೀಕರಣ ಮುಗಿದಿದೆ. ಕಂಠೀರವ ಸ್ಟುಡಿಯೋದಲ್ಲಿ ಸೆಟ್ ಹಾಕಿ ಒಂದಷ್ಟು ಚಿತ್ರೀಕರಣ ಮಾಡಲಾಗಿದೆ. ಶೀಘ್ರದಲ್ಲೇ ಚಿತ್ರತಂಡ ಯೂರೋಪ್‌ಗೆ ಹೊರಟು ನಿಂತಿದೆ. ಅದಕ್ಕಾಗಿ ತಯಾರಿಯೂ ನಡೀತಿದೆ.
ಮತ್ತೆ ಕಥೆ ಲೀಕ್ ಆಗಿದೆ ಅಂದಿರಿ ಅನ್ನೋದೀಗ ನಿಮ್ಮ ತಲೆಗೆ ಬಂದಿರಬಹುದು, ವಿಷಯ ಅಂದರೆ ಲೀಕ್ ಮಾಡಿರೋದು ಮತ್ಯಾರೂ ಅಲ್ಲ, ಸ್ವತಃ ಡೈರೆಕ್ಟರ್ ಅನೂಪ್ ಭಂಡಾರಿ! ಇದನ್ನು ನೀವ್ಯಾರೂ ನಂಬಲ್ಲ ಅಂತ ಗೊತ್ತು, ಯಾಕಂದರೆ ನಿರ್ದೇಶಕರೇ ತನ್ನ ಕಥೆಯನ್ನು ಹೇಗೆ ಲೀಕ್ ಮಾಡ್ತಾರೆ ಹೇಳಿ. ಅಲ್ಲೇ ಇರೋದು ಟ್ವಿಸ್ಟು. ಈ ಅನೂಪ್ ಭಂಡಾರಿ ಈ ಹಿಂದೆ ಸುದೀಪ್ ಜೊತೆಗೆ 'ವಿಕ್ರಾಂತ್ ರೋಣ' ಸಿನಿಮಾ ಮಾಡಿದ್ದರು. ಅದು ಗೆಲುವಿನ ನಗೆಯನ್ನೇನೂ ಬೀರಲಿಲ್ಲ. ಒಂದಿಷ್ಟು ಜನ ಅದಕ್ಕೆ ಕೊಡೋ ಕಾರಣ ಅಂದರೆ ಸುದೀಪ್ ಅಭಿಮಾನಿಗಳಿಗೆ ಬೇಕಾದ ಮಾಸ್ ಎಲಿಮೆಂಟ್ ಆ ಸಿನಿಮಾದಲ್ಲಿಲ್ಲ ಅನ್ನೋದು. ಸದ್ಯ 'ಬಿಲ್ಲರಂಗಭಾಷ' ಕಂಪ್ಲೀಟ್ ಮಾಸ್ ಸಿನಿಮಾ ಅಂತ ಅನೂಪ್ ಹೇಳಿದ್ದಾರೆ.
ಹನಿಮೂನ್‌ನಿಂದ ಬಂದಾಕ್ಷಣ ಗುಡ್‌ನ್ಯೂಸ್ ಕೊಟ್ಟ ವೈಷ್ಣವಿ, ಏನಮ್ಮ ಇಷ್ಟು ಫಾಸ್ಟಾ ಅಂತಿದ್ದಾರೆ ನೆಟ್ಟಿಗರು!
ಅಷ್ಟೇ ಅಲ್ಲ, ಅವರು ಈ ಸಿನಿಮಾ ಚೆನ್ನಾಗಿ ಬರಬೇಕು ಅಂದರೆ 35ಕ್ಕೂ ಹೆಚ್ಚು ಸಲ ಸ್ಕ್ರಿಪ್ಟ್ ರೀರೈಟ್ ಮಾಡಿದ್ದಾರೆ. ಸಿನಿಮಾರಂಗದವರಿಗೆ, ಸೆಲೆಬ್ರಿಟಿಗಳಿಗೆ ಮಾತ್ರ ಅಲ್ಲ ಜನರನ್ನೂ ಕರೆದು ಸಿನಿಮಾ ಕತೆ ಹೇಳಿದ್ದಾರೆ. ಇದಕ್ಕೆ ರೀಸನ್ನು ಸಿನಿಮಾದಲ್ಲಿ ಇಂಪ್ರೂವ್‌ಮೆಂಟ್‌ನ ಅವಶ್ಯಕತೆ ಇದ್ದರೆ ಅದು ಈಗಲೇ ಗೊತ್ತಾಗಬೇಕು ಅನ್ನೋದು. ಈ ಕಾರಣಕ್ಕೆ ಅನೂಪ್ ಒಂದಿಷ್ಟು ಜನರಿಗೆ 'ಬಿಲ್ಲರಂಗಭಾಷ' ಸಿನಿಮಾದ ಕಥೆ ಹೇಳಿದ್ದಾರೆ. ಅದರರ್ಥ ಸಿನಿಮಾ ಕಥೆ ಲೀಕ್ ಆಗಿದೆ ಅಂತಲ್ಲ. ಮತ್ತೆ ಈ ಕಾರಣಕ್ಕೆ ಸುದೀಪ್ ಬಿಗ್‌ಬಾಸ್‌ಗೆ ಮರಳಿದ್ದೂ ಅಲ್ಲ. ಈಗ ಕನ್‌ಫ್ಯೂಶನ್ ಎಲ್ಲ ಕ್ಲಿಯರ್ ಆಗಿರಬಹುದೇನೋ.
ಬಿಗ್ ಬಾಸ್ ಶಾಪಗ್ರಸ್ತ ಮನೆಯೇ? ಸ್ಪರ್ಧಿಗಳ ಸಾಲು ಸಾಲು ಸಾವಿನ ಕೂಪ, ಕನ್ನಡತಿಯನ್ನೂ ಬಿಡಲಿಲ್ಲ ಸಾವು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.