Cauvery River Water Dispute: ಕಾವೇರಿ ನೀರು ಹಂಚಿಕೆ ವಿವಾದ: 'ಫಿಲಂ ಚೇಂಬರ್‌'ನಲ್ಲಿ ಸಭೆ- ಯಾರೆಲ್ಲಾ ಮಾತನಾಡಿದ್ದಾರೆ? ತೆಗೆದುಕೊಂಡ ನಿರ್ಣಯವೇನು?

Published : Jul 30, 2026, 05:29 PM IST
Film Chamber

ಸಾರಾಂಶ

'ತಮಿಳುನಾಡು ಸಿಎಂ ವಿಜಯ್ ಅವರಿಗೆ ಕರ್ನಾಟಕದ ಬಗ್ಗೆ ಪ್ರೀತಿ ಇದೆ. ಅವರು ಕೂಡ ನಮ್ಮ ಪರವಾಗಿ ಇರಲಿ ಅಂತ ದೇವರಲ್ಲಿ ಕೇಳುತ್ತೇನೆ. ಸಿಎಂ ವಿಜಯ್ ಸಿನಿಮಾರಂಗದವರು. ಅವರು ಕರ್ನಾಟಕಕ್ಕೆ ಬಂದು ಹೋದ ಮೇಲೆ ನಾವು ಹೋಗಿ ಭೇಟಿ ಮಾಡೋ ಪ್ರಯತ್ನ ಮಾಡುತ್ತೇವೆ' ಎಂದಿದ್ದಾರೆ

ಸದ್ಯ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಮಧ್ಯೆ ಕಾವೇರಿ ನದಿ ನೀರಿನ ಹಂಚಿಕೆ (Cauvery Water Dispute) ವಿಷಯವಾಗಿ 'ಕಾವೇರಿ'ದ ವಾತಾವರಣ ನಿರ್ಮಾಣವಾಗಿರೋದು ಗೊತ್ತೇ ಇದೆ. ಇದು ಕರ್ನಾಟಕದಲ್ಲಿ ಮಂಡ್ಯ, ಮೈಸೂರು ಸೇರಿದಂತೆ ಕಾವೇರಿ ನದಿ ನೀರು ಹಂಚಿಕೆ ವಿಷಯಕ್ಕೆ ಸಂಬಂಧಿಸಿ ಹಲವು ಕಡೆ ಪ್ರತಿಭಟನೆ ರೂಪ ತಳೆದಿದೆ. ಸದ್ಯ ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ಮಧ್ಯೆ ಈ ಬಗ್ಗೆ ಮಾತುಕತೆ ನಡೆಯುವ ನಿರ್ಧಾರ ಕೂಡ ಆಗಿದೆ. ಆದರೆ, ಕಾವೇರಿ ನೀರನ್ನೇ ಅವಲಂಬಿಸಿದ ರೈತರ ಪ್ರತಿಭಟನೆ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿದ್ದು ಈ ಕಾವು ಚಲನಚಿತ್ರ ರಂಗ ಸೇರಿದಂತೆ ಇಡೀ ಕರ್ನಾಟಕಕ್ಕೆ ವ್ಯಾಪಿಸಿದೆ.

KFCC meeting on Cauvery water row: ಇಂದು, 30 ಜುಲೈ 2026ರಂದು ಕಾವೇರಿ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಅವರು ಇದೀಗ ತುರ್ತಾಗಿ ಸುದ್ದಿಗೋಷ್ಟಿ ಕರೆದಿದ್ದಾರೆ. ಅದರಲ್ಲಿ, ಕಾವೇರಿ ನೀರು ಹಂಚಿಕೆ ಬಗ್ಗೆ ಸಭೆ ಮಾಡಿರೋ ಕನ್ನಡ ಚಲನಚಿತ್ರ ರಂಗದ ವಿವಿಧ ಸಂಘಗಳು, ಅಂದರೆ ಕಲಾವಿದರ ಸಂಘ, ನಿರ್ಮಾಪಕರ ಸಂಘ, ಪ್ರದರ್ಶಕರ ಸಂಘ ಹೀಗೆ ಸಿನಿಮಾರಂಗದ ಎಲ್ಲಾ ಸಂಘಸಂಸ್ಥೆಗಳು ಬೆಂಗಳೂರಿನ ಫಿಲಂ ಚೆಂಬರ್‌ನಲ್ಲಿ ಸಭೆ ನಡೆಸುತ್ತಿದ್ದಾರೆ. ಈ ಸಭೆಯಲ್ಲಿ ಭಾಗಿಯಾದವರಲ್ಲಿ ಯಾರ್ಯಾರು ಏನೇನು ಹೇಳಿದ್ದಾರೆ? ಇಲ್ಲಿದೆ ನೋಡಿ..

ಕಾವೇರಿ ನೀರು ಹಂಚಿಕೆ ವಿವಾದ: ನಟ ಶೋಭರಾಜ್ ಹೇಳಿಕೆ

;ನಾವೆಲ್ಲಾ ಕಾವೇರಿ ನೀರು ಕುಡಿದು ಬೆಳೆದವರು. ಮಳೆ‌‌ ಜಾಸ್ತಿ ಇದ್ರೆ‌ ನಾವೇನು ಗೋಡೆ ಕಟ್ಟಿ ನೀರನ್ನು ಅಡ್ಡ ಹಾಕಲ್ಲ. ಈ ಭಾರಿ ಮಳೆ ಇಲ್ಲ ನಮ್ಮ ರೈತರು ಕಷ್ಟದಲ್ಲಿದ್ದಾರೆ ನೀರು ಕೇಳಬೇಡಿ. ನಮ್ಮ ರೈತರು ಕಷ್ಡದಲ್ಲಿದ್ದಾರೆ ನಮಗೆ ರೈತರು ನಮಗೆ ಮುಖ್ಯ. ಫಿಲ್ಮ್ ಚೇಂಬರ್ ಏನು ನಿರ್ಧಾರ ಮಾಡುತ್ತಾರೆ ಅದಕ್ಕೆ ನಾವು ಬದ್ಧರಾಗಿರುತ್ತೇವೆ' ಎಂದಿದ್ದಾರೆ.

ಕಾವೇರಿ ನೀರು ಹಂಚಿಕೆ ವಿಚಾರ: ನಟ ಪ್ರಥಮ್ ಹೇಳಿಕೆ

'ಕಾವೇರಿ ವಿಚಾರದಲ್ಲಿ ನಾವೆಲ್ಲಾ ಕನ್ನಡಿಗರು ಒಂದೇ.. ಪ್ರಧಾನಿ ಆಗಿರಲಿ ಯಾರೇ ಆಗಿರಲಿ, ಅವರು ಕೂಡ ರೈತರು ಬೆಳೆದ ಅನ್ನ‌ ತಿನ್ನೋದು.. ಕಾವೇರಿ ವಿಚಾರವಾಗಿ ತಮಿಳುನಾಡು ಸಿಎಂ ವಿಜಯ್ ಕರ್ನಾಟಕಕ್ಕೆ ಬರುತ್ತಿದ್ದಾರೆ. ವಿಜಯ್ ನಮ್ಮ ಕರ್ನಾಟಕದ ರೈತರ ಕಷ್ಟ ಅರ್ಥ ಮಾಡಿಕೊಳ್ಳಬೇಕು. ಸಿಎಂ ಆಗಿದ್ದೀರಾ ಸಂತೋಷ.. ಬಲವಂತವಾಗಿ ನೀರು ಪಡೆಯೋ ಸಾಹಸಕ್ಕೆ ಹೋಗಬೇಡಿ..' ಎಂದಿದ್ದಾರೆ ನಟ ಪ್ರಥಮ್

ಕರ್ನಾಟಕದಲ್ಲಿ ಕಾವೇರಿ ವಿವಾದ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯ ಮುಖ್ಯಾಂಶಗಳು:-

ಕಾವೇರಿ ನೀರು ಹಂಚಿಕೆ ಬಗ್ಗೆ ಸಭೆ ಮಾಡಿರೋ ಕನ್ನಡ ಚಲನಚಿತ್ರ ರಂಗದ ವಿವಿಧ ಸಂಘಗಳು- ಫಿಲಂ ಚೇಂಬರ್, ಕಲಾವಿದರ ಸಂಘ, ನಿರ್ಮಾಪಕರ ಸಂಘ, ಪ್ರದರ್ಶಕರ ಸಂಘ ಎಲ್ಲವೂ ಈಗ ಫಿಲ್ಮ್ ಚೇಂಬರ್ ನೇತೃತ್ವದಲ್ಲಿ ಸುದ್ದಿ ಘೋಷ್ಟಿಯಲ್ಲಿ ಭಾಗಿಯಾಗಿವೆ. ಅಲ್ಲಿ ತೆಗೆದುಕೊಂಡ ನಿರ್ಧಾರದ ಮುಖ್ಯಾಂಶಗಳಿ ಇಲ್ಲಿವೆ-

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ

'ಕನ್ನಡ ಚಿತ್ರರಂಗದ ನಾವೆಲ್ಲರೂ ಸಂಪೂರ್ಣವಾಗಿ ನಮ್ಮ ರೈತ ಬಾಂಧವರ ಪರವಾಗಿ ಇದ್ದೇವೆ. ಮಹದಾಯಿ, ಕಳಸಾ-ಬಂಡೂರಿ ಹೋರಾಟದಲ್ಲೂ ಚಿತ್ರರಂಗ ಇತ್ತು. ಭಾಷೆ ಬದುಕಿದ್ರೆ, ನೆಲ ಜಲ ಮನುಷ್ಯ ಇದ್ರೆ, ನಾವೆಲ್ಲಾ ಇರುತ್ತೇವೆ. ಹೀಗಾಗಿ ರೈತರ ಪರ ಯಾವತ್ತೂ ನಾವಿದ್ದೇವೆ. ಈ ವಿಷಯದಲ್ಲಿ ಚಿತ್ರರಂಗದ ಒಗ್ಗಟ್ಟು ಅದ್ಭುತವಾಗಿದೆ. ಭಾಷೆ ನೆಲ‌ ಜನ ಅಂತ ಬಂದಾಗ ಯಾರೂ ಯಾರೂ ತಡೆಯೋಕೆ ಆಗಲ್ಲ, ನಾವೆಲ್ಲಾ ಒಂದಾಗಿದ್ದೇವೆ' ಎಂದಿದ್ದಾರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ.

ಸಾರಾ ಗೋವಿಂದು:-

'ಕಾವೇರಿ ನೀರು ನಿಯಂತ್ರಣಾ ಮಂಡಳಿ ಅವೈಜ್ನಾನಿಕ ತೀರ್ಪನ್ನು ಕೊಟ್ಟಿದೆ. ಅದಕ್ಕೂ ಮೊದಲು ಕರ್ನಾಟಕ್ಕೆ ಬಂದು ಪರಿಸ್ಥಿತಿ ನೋಡಬೇಕು, ಇಲ್ಲಿ ಸಂಬಂಧಪಟ್ಟವರ ಮಾತನ್ನು ಆಲಿಸಬೇಕು. ಮಳೆ ಇಲ್ಲ, ಜನರಿಗೆ ಕುಡಿಯೋ ನೀರಿಗೆ ಹಾಹಾಕಾರ ಆಗಿದೆ. ನೀರು ಬಿಡೋದಕ್ಕೆ‌ ಆಗಲ್ಲ ಅಂತ ಜನ ಹೇಳುತ್ತಿದ್ದಾರೆ. ಆದ್ರೆ‌ ಎಲ್ಲದಕ್ಕೂ ಚಿತ್ರರಂಗ ಸ್ಪಂದಿಸಿಲ್ಲ ಅಂತಾರೆ. ಆದರೆ ರಾಜ್‌ಕುಮಾರ್ ಕಾಲದಿಂದಲೂ ನಾವು ರೈತರ, ಕರ್ನಾಟಕದ ಕಾವೇರಿ ಸಮಸ್ಯೆ ಜೊತೆ ಒಗ್ಗಟ್ಟಾಗಿ ನಿಂತಿದ್ದೇವೆ.

ಕಾವೇರಿ ನೀರು ಹಂಚಿಕೆ ಬಗ್ಗೆ ಪರಿಶೀಲನೆ ಮಾಡಿ ತೀರ್ಪು ಕೊಡದಿದ್ರೆ ನಾವು ಹೋರಾಟಕ್ಕೆ ಇಳಿಬೇಕಾಗುತ್ತೆ. ನೆಲ, ಜನ, ಭಾಷೆ ಅಂತ ಬಂದಾಗ ನಮ್ಮ ಇಡೀ ಚಿತ್ರರಂಗ ಕರ್ನಾಟಕದ ಜೊತೆಗೆ ಇರುತ್ತೆ. ಇದರಲ್ಲಿ ಕನ್ನಡ ಚಿತ್ರರಂಗದ ಯಾರದ್ದೂ ಅಪಸ್ವರ ಇಲ್ಲ. 1991 ರಲ್ಲಿ ಇದೇ ಪರೀಸ್ಥಿತಿ ನಿರ್ಮಾಣ ಆಗಿತ್ತು. ಬಂಗಾರಪ್ಪ ಅವರು ಸುಗ್ರೀವಾಜ್ಞೆ ಹೊರಡಿಸಿದ್ರು. ಎಲ್ಲರಿಗೂ ಅನುಕೂಲ ಆಯ್ತು. ಮೇಕೆದಾಟು ಯೋಜನೆ ಸಮಸ್ಯೆ ಬಗೆ ಹರಿದಿದೆ. ಅದರ ಯೋಜನೆ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನಿಸುತ್ತಾರೆ' ಎಂದಿದ್ದಾರೆ.

ರಾಕ್ ಲೈನ್ ಹೇಳಿಕೆ:-

'ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ ಅಂತ ಯಾರು ಹೇಳಿದ್ದು? ನಮ್ಮಲ್ಲಿ ಒಗ್ಗಟ್ಟಿದೆ.. ಕಾವೇರಿ ಹೋರಾಟಕ್ಕೆ ಎಲ್ಲರು ಬರುತ್ತಾರೆ, ಬರಲೇಬೇಕು..

ಕಲಾವಿದರಾಗಿದ್ದ ಅಂಬರೀಶ್ ಅವರು ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿಯೇ ರಾಜೀನಾಮೆ ನೀಡಿದ್ದು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಯಾವುದೇ ತೀರ್ಮಾನ ತೆಗೆದುಕೊಂಡ್ರೆ ನಾವೆಲ್ಲಾ ಅದನ್ನ ಪಾಲಿಸುತ್ತೇವೆ.

ಆದ್ರೆ ಕಲಾವಿದರು ಬಂದ್ರೆ ತೀರ್ಮಾನ ಆಗುತ್ತೆ ಅಂತ ತಿಳಿದುಕೊಳ್ಳಬೇಡಿ.. ಚಿತ್ರರಂಗದ ಎಲ್ಲರೂ ಇರುತ್ತೇವೆ.. ಕನ್ನಡ ಚಿತ್ರರಂಗ ಸಂಪೂರ್ಣವಾಗಿ ನಾವು ರೈತ ಬಾಂಧವರ ಪರವಾಗಿ ಇದ್ದೇವೆ' ಎಂದಿದ್ದಾರೆ ನಿರ್ಮಾಪಕರಾದ ರಾಕ್‌ಲೈನ್ ವೆಂಕಟೇಶ್.

ಇನ್ನು ಮೊತ್ತೊಮ್ಮೆ ಮಾತನಾಡಿ ಹೇಳಿಕೆ ನೀಡಿರೋ ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲಾ 'ತಮಿಳುನಾಡು ಸಿಎಂ ವಿಜಯ್ ಅವರಿಗೆ ಕರ್ನಾಟಕದ ಬಗ್ಗೆ ಪ್ರೀತಿ ಇದೆ. ಅವರು ಕೂಡ ನಮ್ಮ ಪರವಾಗಿ ಇರಲಿ ಅಂತ ದೇವರಲ್ಲಿ ಕೇಳುತ್ತೇನೆ. ಸಿಎಂ ವಿಜಯ್ ಸಿನಿಮಾರಂಗದವರು.

ಅವರು ಕರ್ನಾಟಕಕ್ಕೆ ಬಂದು ಹೋದ ಮೇಲೆ ನಾವು ಹೋಗಿ ಭೇಟಿ ಮಾಡೋ ಪ್ರಯತ್ನ ಮಾಡುತ್ತೇವೆ' ಎಂದಿದ್ದಾರೆ.

ಒಟ್ಟಿನಲ್ಲಿ, ಕರ್ನಾಟಕದಲ್ಲಿ ನಡೆಯುತ್ತಿರುವ ಕಾವೇರಿ ನದಿ ನೀರಿನ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ, ಇಂದು ನಡೆದ ಫಿಲಂ ಚೇಂಬರ್ ಸಭೆಯಲ್ಲಿ ಸಿನಿರಂಗದ ಎಲ್ಲಾ ಸಂಘಗಳು ಭಾಗಿಯಾಗಿ ರೈತರ ಪರ ಹೋರಾಟಕ್ಕೆ ನಿಲ್ಲುವ ಒಮ್ಮತದ ನಿರ್ಧಾರಕ್ಕೆ ಬದ್ಧರಾಗಿರುವ ತೀರ್ಮಾನ ತೆಗೆದುಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾಲಿ ಧನಂಜಯ ಅಭಿಮಾನಿಗಳಿಗೆ ಡಬಲ್ ಖುಷಿ: 'ಅಣ್ಣ ಫ್ರಂ ಮೆಕ್ಸಿಕೋ' ರಿಲೀಸ್ ಡೇಟ್ ಫಿಕ್ಸ್
ಕನ್ನಡ ಸಿನಿಮಾ ಗೆಲ್ಲಬೇಕಾದರೆ ಮೊದಲು ಇದು ಬದಲಾಗಬೇಕು: ನಿರ್ದೇಶಕ ಎಂ.ಡಿ.ಶ್ರೀಧರ್‌