ಡಾಲಿ ಧನಂಜಯ ಅಭಿಮಾನಿಗಳಿಗೆ ಡಬಲ್ ಖುಷಿ: 'ಅಣ್ಣ ಫ್ರಂ ಮೆಕ್ಸಿಕೋ' ರಿಲೀಸ್ ಡೇಟ್ ಫಿಕ್ಸ್

Published : Jul 30, 2026, 04:34 PM IST
Daali Dhananjay

ಸಾರಾಂಶ

‘ಅಣ್ಣ ಫ್ರಂ ಮೆಕ್ಸಿಕೋ ಭಾವನೆಗಳನ್ನು ಸಂಭ್ರಮಿಸುವ, ಸ್ನೇಹವನ್ನು ಸಂಭ್ರಮಿಸುವ ಸಿನಿಮಾ. ಕೌಟುಂಬಿಕ ಪ್ರೇಕ್ಷಕರನ್ನು ಸಿಂಗಲ್‌ ಸ್ಕ್ರೀನ್‌ಗೆ ಕರೆತರಬಲ್ಲ ಶಕ್ತಿ ಇರುವ ಸಿನಿಮಾ’ ಹೀಗೆ ಹೇಳಿದ್ದು ಡಾಲಿ ಧನಂಜಯ.

‘ಅಣ್ಣ ಫ್ರಂ ಮೆಕ್ಸಿಕೋ ಭಾವನೆಗಳನ್ನು ಸಂಭ್ರಮಿಸುವ, ಸ್ನೇಹವನ್ನು ಸಂಭ್ರಮಿಸುವ ಸಿನಿಮಾ. ಕೌಟುಂಬಿಕ ಪ್ರೇಕ್ಷಕರನ್ನು ಸಿಂಗಲ್‌ ಸ್ಕ್ರೀನ್‌ಗೆ ಕರೆತರಬಲ್ಲ ಶಕ್ತಿ ಇರುವ ಸಿನಿಮಾ’.- ಹೀಗೆ ಹೇಳಿದ್ದು ಡಾಲಿ ಧನಂಜಯ. ಅವರು ನಾಯಕನಾಗಿ ನಟಿಸಿರುವ, ‘ಬಡವ ರಾಸ್ಕಲ್‌’ ಖ್ಯಾತಿಯ ಶಂಕರ್‌ ಗುರು ನಿರ್ದೇಶನದ ‘ಅಣ್ಣ ಫ್ರಂ ಮೆಕ್ಸಿಕೋ’ ಚಿತ್ರವನ್ನು ಡಿ.24ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.

ಈ ಕುರಿತು ಮಾತನಾಡಿದ ಅವರು, ಶಂಕರ್ ಗುರು ಅವರು ಕೌಟುಂಬಿಕ ಪ್ರೇಕ್ಷಕರ ನಾಡಿಮಿಡಿತ ಬಲ್ಲವರು. ಅವರಿಗೆ ಇಷ್ಟವಾಗುವ ಕತೆ ಹೇಳಿದ್ದಾರೆ. ಚಿತ್ರದಲ್ಲಿ ಸೊಗಸಾದ ಹಾಡುಗಳು, ಅತ್ಯುತ್ತಮ ತಾರಾಗಣವಿದೆ. ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ. ಇದೊಂದು ಪಕ್ಕಾ ಮಾಸ್ ಕಮರ್ಷಿಯಲ್ ಎಂಟರ್‌ಟೇನರ್‌. ಸಿಂಗಲ್‌ ಸ್ಕ್ರೀನ್‌ಗಳು ಸಂಭ್ರಮಿಸಲಿವೆ ಎಂದು ಹೇಳಿದರು.

ನಿರ್ದೇಶಕ ಶಂಕರ್‌ ಗುರು, ನಮ್ಮ ಬಡವ ರಾಸ್ಕಲ್‌ ಸಿನಿಮಾ ಕೂಡ ಡಿ.24ರಂದು ಬಿಡುಗಡೆಯಾಗಿತ್ತು. ಈಗ ಅಣ್ಣ ಫ್ರಂ ಮೆಕ್ಸಿಕೋ ಕೂಡ ಅದೇ ದಿನಾಂಕದಂದು ಬಿಡುಗಡೆಯಾಗುತ್ತಿದೆ ಎಂದರು. ಸತ್ಯ ರಾಯಲ ನಿರ್ಮಿಸಿರುವ ಈ ಚಿತ್ರದಲ್ಲಿ ರೀಷ್ಮಾ ನಾಣಯ್ಯ, ಪೂರ್ಣಚಂದ್ರ, ನಾಗಭೂಷಣ, ಸಾಧು ಕೋಕಿಲ, ರಂಗಾಯಣ ರಘು ನಟಿಸಿದ್ದಾರೆ.

'666 ಆಪರೇಷನ್ ಡ್ರೀಮ್ ಥಿಯೇಟರ್'

'ಅಣ್ಣ ಫ್ರಮ್ ಮೆಕ್ಸಿಕೋ' ಡಿಸೆಂಬರ್ 24ರ ಬಿಡುಗಡೆ ದಿನಾಂಕವನ್ನು ಘೋಷಿಸಿದ ಬೆನ್ನಲ್ಲೇ, ಧನಂಜಯ್ ಅಭಿನಯದ ಮತ್ತೊಂದು ಬಹುನಿರೀಕ್ಷಿತ ಸಿನಿಮಾ '666 ಆಪರೇಷನ್ ಡ್ರೀಮ್ ಥಿಯೇಟರ್' ಕುರಿತು ಕುತೂಹಲ ಹೆಚ್ಚಾಗಿದೆ. ಹೇಮಂತ್ ಎಂ. ರಾವ್ ನಿರ್ದೇಶನದ ಈ ಥ್ರಿಲ್ಲರ್ ಚಿತ್ರದಲ್ಲಿ ಶಿವರಾಜ್‌ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಈ ವರ್ಷವೇ ಬಿಡುಗಡೆಯಾಗುತ್ತದೆಯೇ ಅಥವಾ 2027ಕ್ಕೆ ಮುಂದೂಡಲಾಗುತ್ತದೆಯೇ ಎಂಬ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕನ್ನಡ ಸಿನಿಮಾ ಗೆಲ್ಲಬೇಕಾದರೆ ಮೊದಲು ಇದು ಬದಲಾಗಬೇಕು: ನಿರ್ದೇಶಕ ಎಂ.ಡಿ.ಶ್ರೀಧರ್‌
Ramayana Trailer: 'ರಾಮಾಯಣ' ಟ್ರೇಲರ್ ರಿಲೀಸ್ ಬಳಿಕ ಜಗತ್ತಿನ ರೆಸ್ಪಾನ್ಸ್ ಹೇಗಿದೆ? ನೆಟ್ಟಿಗರು ಹೇಳ್ತಿರೋದೇನು? ಇಲ್ಲಿ ನೋಡಿ..