
ಕೊರೋನಾ ಮೂರನೇ ಅಲೆ (Corona 3rd Wave) ಕಾರಣಕ್ಕಾಗಿ ವೀಕೆಂಡ್ ಕರ್ಫ್ಯೂ (Weekend Curfew) ಸೇರಿದಂತೆ ಕೋವಿಡ್-19 (Covid19) ನಿಯಮಗಳಿಂದ ಸಿನಿಮಾ ಬಿಡುಗಡೆಯಲ್ಲಿ ಮಂಕಾಗಿದ್ದ ಕನ್ನಡ ಚಿತ್ರರಂಗಕ್ಕೆ ಮತ್ತೆ ಹೊಸ ಚೈತನ್ಯ ಮೂಡಿದೆ. ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ರದ್ದು ಮಾಡಿರುವುದರಿಂದ ಕನ್ನಡ ಚಿತ್ರರಂಗದಲ್ಲಿ (Sandalwood) ಮತ್ತೆ ಸಿನಿಮಾಗಳ ಬಿಡುಗಡೆ ಸಂಭ್ರಮ ಆರಂಭವಾಗಿದೆ.
ಕಳೆದ ಎರಡು ವಾರಗಳಿಂದ ಬಾಗಿಲು ಮುಚ್ಚಿದ್ದ ಚಿತ್ರಮಂದಿರಗಳು ಮತ್ತೆ ಬಾಗಿಲು ತೆರೆದು ಪ್ರೇಕ್ಷಕರನ್ನು ಬರಮಾಡಿಕೊಳ್ಳುವುದಕ್ಕೆ ಸಜ್ಜಾಗಿವೆ. ಸದ್ಯಕ್ಕೆ ಶೇ.50ರಷ್ಟು ಸೀಟು ಭರ್ತಿಗೆ ಅವಕಾಶ ಕೊಟ್ಟಿದ್ದು, ಸದ್ಯದಲ್ಲೇ ಶೇ.100ರಷ್ಟು ಸೀಟು ಭರ್ತಿಗೆ ಚಿತ್ರಮಂದಿರಗಳಲ್ಲಿ ಅವಕಾಶ ಸಿಗಲಿದೆ. ಈ ಹಿನ್ನೆಲೆಯಲ್ಲಿ ಇದೇ ಜ.28ರಿಂದ ಸಿನಿಮಾಗಳು ತಮ್ಮ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಿಕೊಳ್ಳುವ ಸಂಭ್ರಮಕ್ಕೆ ಮುಂದಾಗಿವೆ.
100 ಚಿತ್ರಮಂದಿರಗಳಲ್ಲಿ ಡಿಎನ್‌ಎ: ಕೊರೋನಾ ಮೂರನೇ ಅಲೆಯ ಕೋವಿಡ್ ನಿಯಮಗಳು ಸಡಿಲವಾಗುತ್ತಿರುವಂತೆಯೇ ಪ್ರಕಾಶ್ರಾಜ್ ಮೇಹು (PrakashRaj Mehu) ನಿರ್ದೇಶನದ, ಮೈಲಾರಿ (Mylari) ನಿರ್ಮಾಣದ ‘ಡಿಎನ್‌ಎ’ (DNA) ಸಿನಿಮಾ ತೆರೆ ಕಾಣುತ್ತಿದೆ. ಹೆಸರಿನಿಂದಲೇ ಗಮನ ಸೆಳೆದಿರುವ ಚಿತ್ರವಿದು. ಹಾಗೆ ನೋಡಿದರೆ ಮೂರು ವಾರಗಳ ಹಿಂದೆಯೇ ಈ ಸಿನಿಮಾ ತೆರೆಗೆ ಬರಬೇಕಿತ್ತು. ಬಿಡುಗಡೆಯ ದಿನಾಂಕ ಘೋಷಣೆ ಮಾಡಿಕೊಂಡ ನಂತರ ಕೊರೋನಾ ಪ್ರಕರಣಗಳು (Corona Cases) ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಬಾಗಿಲು ಹಾಕಿದವು.
Loose Mada Yogi: ಜನವರಿ 28ರಂದು ದಯಾಳ್ ಪದ್ಮನಾಭನ್ ನಿರ್ದೇಶನದ 'ಒಂಬತ್ತನೇ ದಿಕ್ಕು' ರಿಲೀಸ್
ಹೀಗಾಗಿ ಬಿಡುಗಡೆಯ ದಿನವನ್ನು ಮುಂದೂಡಿಕೊಂಡಿದ್ದ ಈ ಚಿತ್ರಕ್ಕೆ ಈಗ ಬಿಡುಗಡೆಯ ಭಾಗ್ಯ ಸಿಗುತ್ತಿದೆ. ಅಚ್ಯುತ್ ಕುಮಾರ್, ರೋಜರ್ ನಾರಾಯಣ, ಎಸ್ತರ್ ನೊರೋನ್ಹಾ, ಅನಿತಾ ಭಟ್ ಮುಂತಾದವರು ನಟಿಸಿದ್ದಾರೆ. ‘ಕನ್ನಡದ ಮಟ್ಟಿಗೆ ವಿಭಿನ್ನ ಕತೆಯನ್ನು ಈ ಸಿನಿಮಾ ಹೇಳಲು ಹೊರಟಿದೆ. ಧ್ರುವ, ನಕ್ಷತ್ರ ಹಾಗೂ ಅಕಾಶ್ ಈ ಮೂವರ ಸುತ್ತ ಸಾಗುವ ಕತೆ ಇದಾಗಿದೆ. ಟೈಟಲ್‌ಗೂ ಚಿತ್ರದ ಕತೆಗೂ ಇರುವ ನಂಟು ಏನೆಂಬುದನ್ನು ಸಿನಿಮಾ ನೋಡಿ ತಿಳಿಯಬೇಕು. ಪ್ರೀತಿ ಹಾಗೂ ಮನುಷ್ಯ ಸಂಬಂಧಗಳನ್ನು ಆಧರಿಸಿದ ಸಿನಿಮಾ ಇದು’ ಎಂಬುದು ನಿರ್ದೇಶಕರು ಕೊಡುವ ಮಾಹಿತಿ.
ಯೋಗಿ ದರ್ಶನ: ಲೂಸ್ ಮಾದ ಯೋಗೀಶ್ (Loose Mada Yogesh) ಅಭಿನಯದ ‘ಒಂಭತ್ತನೇ ದಿಕ್ಕು’ (Ombatthane Dikku) ಸಿನಿಮಾ ಕೂಡ ಇದೇ ಜ.28ರ ಶುಕ್ರವಾರ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. ದಯಾಳ್ ಪದ್ಮನಾಭನ್ (Dayal Padmanabhan) ಅವರು ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರದಲ್ಲಿ ಅದಿತಿ ಪ್ರಭುದೇವ (Aditi Prabhudeva) ನಾಯಕಿಯಾಗಿ ನಟಿಸಿದ್ದಾರೆ.
ವೀಕೆಂಡ್ ಕರ್ಫ್ಯೂ ರದ್ದಾಗುತ್ತಿರುವಂತೆಯೇ ಸದ್ಯಕ್ಕೆ ಎರಡು ಚಿತ್ರಗಳು ಬಿಡುಗಡೆ ದಿನಾಂಕ ಘೋಷಣೆ ಮಾಡಿಕೊಂಡಿವೆ. ಈ ಚಿತ್ರಗಳಿಗೆ ಪ್ರೇಕ್ಷಕರು ಯಾವ ರೀತಿ ಸ್ಪಂದಿಸುತ್ತಾರೆ ಎನ್ನುವುದರ ಮೇಲೆ ಮತ್ತಷ್ಟು ಚಿತ್ರಗಳು ಥಿಯೇಟರ್‌ಗಳಿಗೆ ಬರಲು ಸಜ್ಜಾಗುತ್ತಿವೆ. ಒಟ್ಟಿನಲ್ಲಿ ಎರಡು ವಾರಗಳ ನಂತರ ಸ್ಯಾಂಡಲ್‌ವುಡ್‌ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಮತ್ತೆ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಬಿಡುಗಡೆಯ ಸಂಭ್ರಮದ ದಿನಗಳು ಮರುಕಳಿಸುತ್ತಿವೆ.
DNA Kannada Movie: ವಿಭಿನ್ನ ಶೀರ್ಷಿಕೆಯ ಚಿತ್ರದ ಆಡಿಯೋ ಬಿಡುಗಡೆ
ಜ.28ಕ್ಕೆ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಸುಮಾರು 100 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣುತ್ತಿದೆ. ನಮ್ಮದು ಕ್ಲಾಸ್ ಸಿನಿಮಾ ಆಗಿರುವ ಕಾರಣ ಹೆಚ್ಚಾಗಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಪ್ರೇಕ್ಷಕರ ಪ್ರತಿಕ್ರಿಯೆ ನೋಡಿಕೊಂಡು ಮುಂದೆ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತೇವೆ. ನಮ್ಮ ಚಿತ್ರದ ಕತೆ ಚೆನ್ನಾಗಿದೆ. ಅದೇ ಭರವಸೆ ಮೇಲೆ ಪ್ರೇಕ್ಷಕರ ಮುಂದೆ ಬರುತ್ತಿದ್ದೇವೆ.
-ಪ್ರಕಾಶರಾಜ್ ಮೇಹು, ನಿರ್ದೇಶಕ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.