
ಸ್ಯಾಂಡಲ್‌ವುಡ್‌ನ ಶ್ರೀನಿ (Srini) ನಿರ್ದೇಶಿಸಿ, ನಾಯಕನಾಗಿ ನಟಿಸುತ್ತಿರುವ 'ಓಲ್ಡ್ ಮಾಂಕ್' (Old Monk) ಚಿತ್ರ ಸೆಟ್ಟೇರಿದಾಗಿನಿಂದಲೂ ತನ್ನ ಟೈಟಲ್ (Title) ಹಾಗೂ ಕಂಟೆಂಟ್ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದು, ಈಗಾಗಲೇ ಬಿಡುಗಡೆಯಾಗಿರುವ 'ಓಲ್ಡ್ ಮಾಂಕ್' ಚಿತ್ರದ ಟ್ರೇಲರ್ (Trailer), ಹಾಡು (Song) ಎರಡಕ್ಕೂ ಸೋಶಿಯಲ್ ಮೀಡಿಯಾಗಳಲ್ಲಿ (Social Media) ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದು, ಚಿತ್ರಕ್ಕೂ ಬೇಡಿಕೆ ಹೆಚ್ಚಾಗಿದೆ. ಫೆಬ್ರವರಿ 11ರಂದು ರಾಜ್ಯಾದ್ಯಂತ ಚಿತ್ರ ತೆರೆಕಾಣಬೇಕಿತ್ತು. ಆದರೆ ಇದೀಗ 'ಓಲ್ಡ್ ಮಾಂಕ್' ಚಿತ್ರ ಅಂದು ತೆರೆಕಾಣುತ್ತದೋ? ಇಲ್ಲವೋ ಎಂಬ ಪ್ರಶ್ನೆ ಎದುರಾಗಿದೆ.
ಹೌದು! 'ಓಲ್ಡ್ ಮಾಂಕ್' ಚಿತ್ರದ ಬಿಡುಗಡೆ ಬಗ್ಗೆ ಚಿತ್ರದ ನಿರ್ದೇಶಕ ಕಮ್ ನಾಯಕ ಶ್ರೀನಿ ಸಾಮಾಜಿಕ ಜಾಲತಾಣದಲ್ಲಿ ಹೊಸ ಪೋಸ್ಟರ್‌ವೊಂದನ್ನು (Poster) ಹಂಚಿಕೊಂಡಿದ್ದಾರೆ. ಈ ಪೋಸ್ಟರ್‌ನಲ್ಲಿ ಚಿತ್ರದ ತಾರಾಬಳಗವಿದ್ದು, 'ಕೊರೋನಾ ಕಡಿಮೆ ಆದ್ರೆ ಫೆಬ್ರವರಿ 11, ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಪೋಸ್ಟ್ಪೋನ್ ಆದ್ರೆ ಫೆಬ್ರವರಿ 24, ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್' ಚಿತ್ರ ಪೋಸ್ಟ್ಪೋನ್ ಆದ್ರೆ ಏಪ್ರಿಲ್ 24 ಹಾಗೂ None of the ABOVE ಮೇ ಎಂದು ಇನ್‌ಸ್ಟಾಗ್ರಾಮ್ (Instagram) ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ 'ಓಲ್ಡ್ ಮಾಂಕ್' ಚಿತ್ರ ಯಾವಾಗ ತೆರೆ ಕಾಣುತ್ತದೆ ಎಂಬ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ಅವರೇ ಸ್ಪಷ್ಟನೆ ನೀಡಬೇಕು.
Old Monk Movie: ಫೆಬ್ರವರಿಗೆ ಶ್ರೀನಿ-ಅದಿತಿ ಪ್ರಭುದೇವ ಜೋಡಿಯ ಸಿನಿಮಾ ರಿಲೀಸ್
ಈ ಪೋಸ್ಟ್‌ಗೆ ನೆಟ್ಟಿಗರು, 'ನೆಕ್ಸ್ಟ್ ಲೆವೆಲ್ ಪ್ರಮೋಷನ್', 'ನಿಮ್ಮ ಕ್ರಿಯೇಟಿವಿಟಿಗೆ ಧನ್ಯವಾದಗಳು', ಹಾಗೂ ವಿಶ್ವೇಶ್ವರಯ್ಯ ಬಿಟ್ರೆ ನಿಮ್ಮ ತಲೆನೇ ನೆಕ್ಸ್ಟು' ಅಂತೆಲ್ಲಾ ತರೇಹವಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. 'ಓಲ್ಡ್‌ಮಾಂಕ್' ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸಲು ವಿಭಿನ್ನ, ವಿನೂತನ ಯೋಜನೆಯನ್ನು ಚಿತ್ರತಂಡ ಈಗಾಗಲೇ ಮಾಡಿದ್ದಾರೆ. ರಾಜ್ಯದ 70 ಕಡೆಗಳಲ್ಲಿ ಅನಾಗ್ಲಿಫ್ ಎಂದು ಕರೆಯಲ್ಪಡುವ 3ಡಿ ಸ್ಟಾಂಡಿಯನ್ನು ಇಟ್ಟಿದ್ದಾರೆ. ಕೆಂಪು ಮತ್ತು ನೀಲಿ ಬಣ್ಣದ 3ಡಿ ಗ್ಲಾಸಿನ ಮೂಲಕ ಈ ಪೋಸ್ಟರ್ ನೋಡಿದ ಎಲ್ಲಾ ಪ್ರೇಕ್ಷಕರು ಈ ಹೊಸ ತಂತ್ರಕ್ಕೆ ಮರುಳಾಗಿದ್ದಾರೆ. ಇದೊಂದು 3ಡಿ ಪೋಸ್ಟರ್ ಆಗಿದ್ದು, ಒಂದು ಕಡೆಯಿಂದ ನೋಡಿದರೆ ನಾರದ ಪಾತ್ರ, ಇನ್ನೊಂದು ಕಡೆಯಿಂದ ನೋಡಿದರೆ ನಾಯಕನ ಪಾತ್ರ ಕಾಣಿಸುತ್ತದೆ.
ಈ ಎರಡು ಪಾತ್ರಗಳು ಚಿತ್ರದ ಪ್ರಮುಖ ಪಾತ್ರಗಳಾಗಿದ್ದು, ಈ ಪಾತ್ರಗಳನ್ನು ತೋರಿಸುವ ಮೂಲಕ 'ಓಲ್ಡ್‌ಮಾಂಕ್' ಅನ್ನು ಜನರಿಗೆ ಹತ್ತಿರವಾಗಿಸುವ ಪ್ರಯತ್ನ ಚಿತ್ರತಂಡದ್ದು. ವಿಶೇಷ ಎಂದರೆ ಸಿನಿಮಾವೊಂದರ ಪ್ರಚಾರಕ್ಕೆ ಈ ಅನಾಗ್ಲಿಫ್ 3ಡಿ ಪೋಸ್ಟರ್ ಅನ್ನು ಬಳಸುತ್ತಿರುವುದು ಇದೇ ಮೊದಲ ಬಾರಿಗೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರೇಕ್ಷಕರು ಮತ್ತು ಚಿತ್ರರಂಗ ಶ್ರೀನಿಯವರ ಈ ವಿಶಿಷ್ಟ ಪ್ರಯತ್ನವನ್ನು ಮೆಚ್ಚುಗೆಯಿಂದ ನೋಡುತ್ತಿದೆ. ಈ ಕುರಿತು ಶ್ರೀನಿ, ವಿಭಿನ್ನವಾಗಿ ನಮ್ಮ ಸಿನಿಮಾವನ್ನು ಜನರಿಗೆ ತಲುಪಿಸುವ ಉದ್ದೇಶ ಇತ್ತು. ನಮ್ಮ ಚಿತ್ರದಲ್ಲಿ ಎರಡು ಪ್ರಮುಖ ಪಾತ್ರಗಳಿವೆ. ಅದನ್ನೇ ಬೇರೆ ರೀತಿಯಲ್ಲಿ ಜನರಿಗೆ ತೋರಿಸಬೇಕು ಅನ್ನಿಸಿ ಈ ಪ್ರಯತ್ನ ಮಾಡಿದ್ದೇವೆ. ಜನ ಮೆಚ್ಚಿಕೊಂಡು 3ಡಿ ಗ್ಲಾಸಲ್ಲಿ ಈ ಪೋಸ್ಟರ್ ನೋಡಿ ಖುಷಿ ಪಡುತ್ತಿದ್ದಾರೆ. ಅದನ್ನು ನೋಡಿ ನಮ್ಮ ವಿಶ್ವಾಸ ಹೆಚ್ಚಾಗಿದೆ ಎನ್ನುತ್ತಾರೆ.
ಓಲ್ಡ್ ಮಾಂಕ್‌ನಲ್ಲಿ ಶ್ರೀನಿ ಲೈಫ್ ಗಿಚ್ಚ ಗಿಲಿಗಿಲಿ
ಇನ್ನು ಈ ಚಿತ್ರಕ್ಕೆ ಅದಿತಿ ಪ್ರಭುದೇವ (Aditi Prabhudeva) ನಾಯಕಿಯಾಗಿದ್ದಾರೆ. 'ರಂಗನಾಯಕಿ' (Ranganayaki) ಚಿತ್ರದ ನಂತರ ಮತ್ತೊಮ್ಮೆ ಶ್ರೀನಿ ಜೊತೆ ತೆರೆ ಮೇಲೆ ಜತೆಯಾಗುತ್ತಿದ್ದಾರೆ. ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ ಹಲವು ವರ್ಷಗಳ ನಂತರ ಹಿರಿಯ ನಟ ರಾಜೇಶ್ ಬಣ್ಣ ಹಚ್ಚಿದ್ದಾರೆ. ಮಾತ್ರವಲ್ಲದೇ ಬಾಲಿವುಡ್‌ನ ಪ್ರಮುಖ ಸಿನಿಮಾಗಳನ್ನು ವಿತರಣೆ ಮಾಡಿದ ಖ್ಯಾತಿ ಹೊಂದಿರುವ ಅಭಿಜಿತ್ ಎಂಟರ್‌ಪ್ರೈಸಸ್ ಸಂಸ್ಥೆ 'ಓಲ್ಡ್‌ಮಾಂಕ್' ಸಿನಿಮಾ ವಿತರಣೆ ಮಾಡುತ್ತಿದೆ. ಈ ಮೂಲಕ ಅಭಿಜಿತ್ ಎಂಟರ್‌ಪ್ರೈಸಸ್ ವಿತರಣೆ ಮಾಡುತ್ತಿರುವ ಮೊದಲ ಕನ್ನಡ ಸಿನಿಮಾ ಎಂಬ ಕೀರ್ತಿಗೆ ‘ಓಲ್ಡ್‌ಮಾಂಕ್’ ಪಾತ್ರವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.