ಡಾನ್ ಬದಲಾಗುವ ರೂಪಾಂತರ ಚಿತ್ರದಲ್ಲಿ ಹೇಗಿರಲಿದೆ Raj B Shetty ಪಾತ್ರ?

By Suvarna NewsFirst Published Jan 23, 2022, 4:50 PM IST
Highlights

ಮಿಥಿಲೇಶ್ ಎಡವಲತ್ ನಿರ್ದೇಶನ ಮಾಡುತ್ತಿರುವ ರೂಪಾಂತರ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ. ಪಾತ್ರ ಆಯ್ಕೆಗಳ ಬಗ್ಗೆ ನಟನ ಮಾತು...

2017ರಲ್ಲಿ ಕನ್ನಡ ಚಿತ್ರರಂಗದಲ್ಲಿ (Sandalwood) ಹಿಸ್ಟರಿ ಕ್ರಿಯೇಟ್ ಮಾಡಿದ ಸಿನಿಮಾ 'ಒಂದು ಮೊಟ್ಟೆಯ ಕಥೆ' (Ondu Mottea kathe). ಈ ಚಿತ್ರದ ಮೂಲಕ ಜನಾರ್ದನ್ ಆಗಿ ಪರಿಚಯವಾದ ನಟ ರಾಜ್‌ ಬಿ ಶೆಟ್ಟಿ (Raj B Shetty) ಅತಿ ಹೆಚ್ಚು ಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ರೂಪಾಂತರ (Roopantara) ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ತಮ್ಮ ಯಶಸ್ಸು, ಪಾತ್ರದ ಆಯ್ಕೆ ಬಗ್ಗೆ ಮಾತನಾಡಿದ್ದಾರೆ. 

ರಾಜ್ ಬಿ ಶೆಟ್ಟಿ ಮಾತು:
'ಸಿನಿಮಾಗಳ ಬ್ಯೂಟಿ ಏನೆಂದರೆ ನೀವು ನೀವಾಗಿರಬಹುದು. ಅಷ್ಟು ಸ್ವಾತಂತ್ರ್ಯ (Freedom) ಇರುತ್ತದೆ. ನನ್ನ ಸ್ವಂತ ಯಶಸ್ಸಿಗೆ ನಾನೇ ಖೈದಿಯಾದರೆ ಅದು ಯಶಸಲ್ಲ. ನನ್ನ ಪ್ರಕಾರ ಯಶಸ್ಸು ಅಂದ್ರೆ ಕ್ರಿಯೇಟಿವ್ (Creative) ಮತ್ತು ಆರ್ಥಿಕವಾಗಿ ಸ್ವಾತಂತ್ರ (Financial Freedom) ಹೊಂದಿರುವುದು. ಹಾಗೆಯೇ ಯಾವುದೇ ರಿಸ್ಟ್ರಿಕ್ಷನ್‌ ಇಲ್ಲದೆ ತೆರೆ ಮೇಲೆ ಪಾತ್ರ ಮಾಡುವುದು. ಶಿವನ ಪಾತ್ರದಷ್ಟು ಮಾಸ್ ಆಗಿ ನಾನು ಯಾವ ಪಾತ್ರವನ್ನೂ ಮಾಡುವುದಕ್ಕೆ ಆಗೋಲ್ಲ. ಅ ಪಾತ್ರವೇ ಇಡಿ ಕಥೆ ಹೇಳಿ ಬಿಡುತ್ತದೆ,' ಎಂದು ರಾಜ್‌ ಅವರು ಇ-ಟೈಮ್ಸ್‌ಗೆ ಸಂದರ್ಶನದಲ್ಲಿ ಹೇಳಿದ್ದಾರೆ. 

'ಇಂಡಸ್ಟ್ರಿಯಲ್ಲಿ ಎಲ್ಲರೂ ಮಾತನಾಡುತ್ತಾರೆ. ಚಿತ್ರವನ್ನು ದೊಡ್ಡದಾಗಿ ಮಾಡಬೇಕು ಎಂದು. ಹಾಗಾದ್ರೆ ದೊಡ್ಡದು ಅಂದ್ರೆ ಎನು? ಅದೆಲ್ಲಾ ನಮ್ಮ  perception ಆಗಿರುತ್ತದೆ. ಹಾಗಾದ್ರೆ ನಾನು ಏನು ಅನ್ನೋದು ನಿಮ್ಮ ಪರ್ಸೆಪ್ಷನ್‌ ಹೇಳುತ್ತಾ? ಈ ರೀತಿ ನೋಡಿದರೆ ವಿಮರ್ಶೆ (Reviewers) ನೀಡುವವರ ಪ್ರಕಾರ ನಾನೊಬ್ಬ ಅದ್ಭುತ ಫಿಲ್ಮಂ ಮೇಕರ್ (Film Makers). ಈ ವಿಚಾರಗಳು ಯಾವ ಕಾರಣಕ್ಕೂ ನನ್ನ ಮೇಲೆ ಪರಿಣಾಮ ಬೀರುವುದಿಲ್ಲ. ನಾಳೆ ಅವರೇ ಹೇಳಬಹುದು, ಇಲ್ಲ ನೀನು ತೆಗೆದ ಚಿತ್ರಗಳು ಚೆನ್ನಾಗಿರೋಲ್ಲ ಅಂತ. ಆಗ ಅದು ಕೂಡ ಪರ್ಸೆಪ್ಶನ್‌. ನನ್ನ ವ್ಯಕ್ತಿತ್ವ ಹೇಗೆ ಅಂದ್ರೆ ಈ ರೀತಿ ವಿಚಾರಗಳನ್ನು ಬಗ್ಗೆ ನಾನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಏನು ಮುಖ್ಯ? ನಾನು ನಾನಾಗಿರುವುದು. ಅ ಕ್ರಿಯೇಟಿವ್ ಫ್ರೀ ಆತ್ಮ (Creative Free Soul)' ಎಂದು ರಾಜ್‌ ಮಾತನಾಡಿದ್ದಾರೆ. 

Garuda Gamana Vrishabha Vahana: ಓಟಿಟಿಯಲ್ಲಿ ಧೂಳೆಬ್ಬಿಸಿದ ರಾಜ್‌ ಬಿ. ಶೆಟ್ಟಿ ಚಿತ್ರ

'ಚಿತ್ರದ ಸ್ಕೇಲ್‌ ಹೇಗೆ ಮುಖ್ಯವಾಗುತ್ತದೆ? ಇದೆಲ್ಲಾ ನನಗೆ immaterial ಅನಿಸುತ್ತದೆ. ರೂಪಾಂತರ ಸಿನಿಮಾ ಹೊಸ ವಿಧಾನವನ್ನು ಜನರಿಗೆ ತಿಳಿಸುತ್ತದೆ. ಈ ಅಂಶವನ್ನು ನಾನು ಬೆಂಬಲಿಸಲು ಬಯಸುತ್ತೇನೆ. ಬೆಂಗಳೂರಿನಲ್ಲಿರುವ (Bengaluru) ಲೋಕಲ್ ಡಾನ್ ದೊಡ್ಡ ಬದಲಾವಣೆಗೆ ಒಳಗಾಗುತ್ತಾರೆ. ಅದೇ ನನ್ನ ಪಾತ್ರ. ಯಾವುದೇ ಡೈಲಾಗ್ ಅಥವಾ ಪ್ರದರ್ಶನ ಇಲ್ಲ. ಬದಲಾವಣೆ  ತೋರಿಸಲಾಗುತ್ತದೆ. ಹೀಗೆ ತೋರಿಸುವುದು ಒಂದು ಚಾಲೆಂಜ್‌ ಹೀಗಾಗಿ ನಾನು ಈ ಪ್ರಾಜೆಕ್ಟ್‌ ಒಪ್ಪಿಕೊಂಡಿರುವೆ. ಇದು ಕಲಾವಿದನಿಗಿರುವ ನಿಜವಾದ ಸ್ವಾತಂತ್ರ್ಯ. ಯಾವುದರ ಒಗ್ಗೆಯೂ ಚಿಂತೆ ಇಲ್ಲ. ಅದು ಬಿಗ್ ಬಜೆಟ್ ಆಗಿರಲಿ ಅಥವಾ ಸಣ್ಣದಾಗಿರಲಿ. ರೂಪಾಂತಾರ ಸಿನಿಮಾ ಇಷ್ಟೇ ಸೂಪರ್ ಆಗಿರಲಿದೆ,' ಎಂದು ರಾಜ್ ಹೇಳಿದ್ದಾರೆ.

click me!