ನನ್ನದಲ್ಲದ ತಪ್ಪಿಗೆ ನಾನು ಬೆಲೆ ತೆರಬೇಕಾಗಿದೆ: ವಿನೋದ್ ಪ್ರಭಾಕರ್

By Kannadaprabha NewsFirst Published Feb 13, 2021, 9:34 AM IST
Highlights

‘ಕಷ್ಟದಿಂದ ನನ್ನ ಸಾಮ್ರಾಜ್ಯ ಕಟ್ಟಿದ್ದೇನೆ. ಒಂದೊಂದು ಕೈಕಾಲು ಮುರಿಸಿಕೊಂಡು, ಅನ್ನ ನೀರು ಬಿಟ್ಟು ಕೆಲಸ ಮಾಡಿ ಇಲ್ಲಿಯವರೆಗೆ ಬಂದಿದ್ದೇನೆ. ರಾಂಗ್ ಟೈಮಲ್ಲಿ ಸಿನಿಮಾ ರಿಲೀಸ್ ಮಾಡಿ ವಿನೋದ್ ಪ್ರಭಾಕರ್ ಸಿನಿಮಾ ಓಡಲ್ಲ ಅಂತ ಹೇಳಿದರೆ ಅದನ್ನು ಸಹಿಸಿಕೊಳ್ಳುವುದು ಹೇಗೆ... ತನ್ನದಲ್ಲದ ತಪ್ಪನ್ನು ನಾನು ಯಾಕೆ ಹೊತ್ತುಕೊಳ್ಳಲಿ...’

- ಅವತ್ತು ವಿನೋದ್ ಪ್ರಭಾಕರ್ ಕೋಪದಲ್ಲಿದ್ದರು. ಅವರ ಮಾತಲ್ಲಿ ವಿಷಾದ ಇತ್ತು. ಹತಾಶೆ ಇತ್ತು. ಬೇಸರವಿತ್ತು. ಅದಕ್ಕೆ ಕಾರಣ ಶ್ಯಾಡೊ ಸಿನಿಮಾ.

ಚಿತ್ರ ವಿಮರ್ಶೆ: ಶ್ಯಾಡೊ 

ನಿರ್ಮಾಪಕರು ರಾಂಗ್ ಟೈಮಲ್ಲಿ ಶ್ಯಾಡೊ ಸಿನಿಮಾ ರಿಲೀಸ್ ಮಾಡಿದರು ಅನ್ನುವುದೇ ಅವರ ಎಲ್ಲಾ ನೋವಿಗೆ ಕಾರಣ. ಸರಿಯಾದ ಪ್ರಮೋಷನ್ ಇಲ್ಲದೆ ಜನರಿಗೆ ತಲುಪಲಿಲ್ಲ ಅನ್ನುವುದು ಅವರ ಆತಂಕ. ಆ ಬೇಸರವನ್ನು ಎದೆಯೊಳಗಿಟ್ಟುಕೊಂಡು ಅವರು ಮಾತನಾಡಿದರು.

‘ಈ ಹಂತಕ್ಕೆ ಬರುವುದಕ್ಕೆ ನನಗೆ 18 ವರ್ಷ ಬೇಕಾಯಿತು. ತಪ್ಪು ಸಮಯದಲ್ಲಿ ಸಿನಿಮಾ ರಿಲೀಸ್ ಮಾಡಿ, ಸಿನಿಮಾ ಓಡದಿದ್ದರೆ ಆ ಸೋಲನ್ನು ನನ್ನ ತಲೆಗೆ ಕಟ್ಟುತ್ತಾರೆ. ಇಗೋ ಬಿಟ್ಟು ಕೆಲಸ ಮಾಡಬೇಕು. ಸಿನಿಮಾ ಗೆಲ್ಲಿಸಬೇಕು. ಶ್ಯಾಡೊ ಸಿನಿಮಾ ರಿಲೀಸ್ ಅನ್ನುವುದು ನನಗೆ ಗೊತ್ತಾಗಿದ್ದೇ ಪೇಪರ್ ಮೂಲಕ. ಆಮೇಲೂ ನಿರ್ಮಾಪಕರಿಗೆ ಫೋನ್ ಮಾಡಿ ಈಗ ರಿಲೀಸ್ ಮಾಡಬೇಡಿ ಎಂದು ಹೇಳಿದೆ. ನನಗೆ ಎಲ್ಲಾ ಗೊತ್ತು ಅಂತ ರಿಲೀಸ್ ಮಾಡಿದರು. ಸರಿಯಾದ ಪ್ರಮೋಷನ್ ಇಲ್ಲದೆಯೇ ಸಿನಿಮಾ ರಿಲೀಸ್ ಆಗಿದೆ. ನನ್ನ ಅಭಿಮಾನಿಗಳಿಂದಾಗಿ ಒಳ್ಳೆಯ ಓಪನಿಂಗ್ ಸಿಕ್ಕಿದೆ. ಆದರೆ ಜಾಸ್ತಿ ಜನಕ್ಕೆ ಸಿನಿಮಾ ರಿಲೀಸ್ ಆಗಿದ್ದೇ ಗೊತ್ತಿಲ್ಲ. ಈ ಸಿನಿಮಾದಿಂದ ಒಳ್ಳೆಯ ಬಿಸಿನೆಸ್ ಅಂತೂ ಆಗಿದೆ. ಆದರೆ ಥಿಯೇಟರ್‌ನಲ್ಲಿ ಜಾಸ್ತಿ ದಿನ ಇದ್ದರೆ ಸಿನಿಮಾ ಗೆಲ್ಲುತ್ತದೆ’ ಎಂದು ವಿನೋದ್ ಹೇಳಿದರು.

#LockDown ವಿನೋದ್‌ ಪ್ರಭಾಕರ್‌ ಸಕತ್ ಕಸರತ್ತು ವಿಡಿಯೋ ವೈರಲ್!

ಮಾತು ಮುಗಿದಾಗ ಕರಿ ಮೋಡ ಆವರಿದಂತೆ ಭಾವ, ಟ್ರೈನ್ ಮುಂದೆ ಹೋಗಿದೆ. ಇನ್ನು ಟಿಕೆಟ್ ತೆಗೆದುಕೊಂಡರೂ ಪ್ರಯೋಜನವಿಲ್ಲ. ಮುಂದಿನ ಸಿನಿಮಾಗಳಲ್ಲಿ ಇನ್ನಷ್ಟು ಹುಷಾರಾಗಿರುತ್ತೇವೆ ಎಂದರು ವಿನೋದ್. ನಿರ್ದೇಶಕ ರವಿ ಗೌಡ ಎಲ್ಲರಿಗೂ ಥ್ಯಾಂಕ್ಸ್ ಹೇಳಿ ಎದ್ದು ನಿಂತರು.

click me!