ಲೂಸ್‌ ಮಾದ ಯೋಗಿ ಪುತ್ರಿ ವಿಡಿಯೋ ವೈರಲ್; ಟ್ವಿಂಕಲ್ ಹಾಡು ಕೇಳಿದ್ದೀರಾ?

By Suvarna News  |  First Published Feb 12, 2021, 1:15 PM IST

ನಟ ಲೂಸ್ ಮಾದ ಯೋಗಿ ಪುತ್ರಿ ಪೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿವೆ. ಹೇಗಿದ್ದಾಳೆ ಮುದ್ದು ಕಂದಮ್ಮ..
 


ದುನಿಯಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಲೂಸ್ ಎಂದು ಪರಿಚಯವಾದ ನಟ ಯೋಗೇಶ್ ಮುದ್ದು ಮಗಳು ಶ್ರೀನಿಕಾ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಬಬ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾಳೆ. ತಾಯಿ ಸಾಹಿತ್ಯ ಹ್ಯಾಂಡಲ್ ಮಾಡುತ್ತಿರುವ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಲೂಸ್ ಮಾದ ಯೋಗಿಯ ಲಿಟಲ್ ಪ್ರಿನ್ಸಸ್ 'ಶ್ರೀನಿಕಾ' ಪೋಟೋಸ್!

Tap to resize

Latest Videos

2017ರಲ್ಲಿ ಸಾಹಿತ್ಯ ಹಾಗೂ ಯೋಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಶ್ರೀನಿಕಾ ಎಂಬ ಮುದ್ದು ಮಗಳಿದ್ದಾರೆ. ಶ್ರೀನಿಕಾ ಈಗಷ್ಟೇ ಮಾತನಾಡಲು ಕಲಿಯುತ್ತಿದ್ದು, ತೊದಲು ಮಾತಿನ ವಿಡಿಯೋ ವೈರಲ್ ಆಗುತ್ತಿದೆ. 'ಊಟದ ಸಮಯದಲ್ಲಿ ಹಾಡಿದ್ದು' ಎಂದು ಬರೆದು ಶ್ರೀನಿಕಾ ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ರೈಮ್ ಹೇಳುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. 

ಸ್ಟಾರ್ ಕಿಡ್ ಶ್ರೀನಿಕಾ ಇನ್‌ಸ್ಟಾಗ್ರಾಂ ಫಾಲೋವರ್ಸ್‌ಗಾಗಿ ಹ್ಯಾಪಿ ಬರ್ತಡೇ ಹಾಡನ್ನು ಅಭ್ಯಾಸ ಮಾಡಿ ಹಾಡಿದ್ದರು. 'ಚಿತ್ರರಂಗದಲ್ಲಿ ಶ್ರೀನಿಕಾಗೆ ಭವಿಷ್ಯವಿದೆ', 'ಮುದ್ದು ಕಂದಮ್ಮ ಐರಾ ಜೊತೆ ಫ್ರೆಂಡಾ?' ಎಂದು ನೆಟ್ಟಿಗರು ಪ್ರಶ್ನೆ ಕೇಳಿದ್ದಾರೆ. 200 ಕ್ಕೂ ಹೆಚ್ಚು ಫೋಟೋ ಹಾಗೂ ವಿಡಿಯೋ ಶೇರ್ ಮಾಡಿರುವ ಖಾತೆಯಲ್ಲಿ ಶ್ರೀನಿಕಾ 9000 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ.

 

click me!