ಹೊಸ ವರ್ಷ ಶುರುವಾಗಿದ್ದೇ ಆಗಿದ್ದು, ಸಾಲು ಸಾಲು ಸಿನಿಮಾಗಳು ರಿಲೀಸ್ ಅಗುತ್ತಿವೆ. ಅದರಲ್ಲೂ ಸ್ಟಾರ್ ಸಿನಿಮಾ ಹವಾ ಕ್ರಿಯೇಟ್ ಮಾಡಲು ಒಬ್ಬರಾದ ಮೇಲೋಬ್ಬರು ಡೇಟ್ ಅನೌನ್ಸ್ ಮಾಡುತ್ತಿದ್ದಾರೆ. ಲೇಟ್ ಆದ್ರೂ ಲೇಟೇಸ್ಟ್ ಆಗಿ ಎಂಟ್ರಿ ಕೊಡುತ್ತಿರುವ ಸಿನಿಮಾಗಳ ಬಗ್ಗೆ ಅಭಿಮಾನಿಗಳ ತಂಡವೊಂದು ಹಾಡು ಕ್ರಿಯೇಟ್ ಮಾಡಿದ್ದಾರೆ. ದರ್ಶನ್ ಹುಟ್ಟುಹಬ್ಬಕ್ಕೆ ರಿಲೀಸ್ ಮಾಡುವುದಾಗಿ ಎಲ್ಲೆಡೆ ಪೋಸ್ಟರ್ ಹಂಚಿಕೊಳ್ಳುತ್ತಿದ್ದಾರೆ.
ಸುಧೀರ್ ಶಾಸ್ತ್ರಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಹಾಡಿಗೆ ಚಂದನ್ ಧ್ವನಿ ನೀಡಿದ್ದಾರೆ. ಸಿ ವೇದ ಮೂರ್ತಿ ಬಂಡವಾಳ ಹಾಕಿರುವ ಈ ಹಾಡನ್ನು ಮೀಡಿಯಾ ಹಂಟರ್ ಯುಟ್ಯೂಬ್ ಚಾನೆಲ್‌ನಲ್ಲಿ ಕೇಳಬಹುದು. ದರ್ಶನ್ ರಾಬರ್ಟ್, ಸುದೀಪ್ ಕೋಟಿಗೊಬ್ಬ 3, ಧ್ರುವ ದರ್ಜಾ ಪೊಗರು, ಯಶ್ ಕೆಜಿಎಫ್-2, ಪುನೀತ್ ಯುವರತ್ನ ಚಿತ್ರದ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳನ್ನು ನೀವು ಕೇಳಬಹುದು ಎನ್ನಲಾಗಿದೆ.
ರಾಬರ್ಟ್ ತೆಲುಗು ಡಬ್ಬಿಂಗ್ ರೈಟ್ಸ್ ಎಷ್ಟು ಮೊತ್ತಕ್ಕೆ ಮಾರಾಟವಾಗಿದೆ ಗೊತ್ತಾ?
ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನಕ್ಕೆ ಅನುಮತಿ ನೀಡಿರುವ ಸಂತಸದಲ್ಲಿರುವ ಅಭಿಮಾನಿಗಳಿಗೆ ಈ ಹಾಡು ಖಂಡಿತವಾಗಿಯೂ ಇಷ್ಟ ಆಗಲಿದೆ. ಫೆ.16ರಂದು ರಿಲೀಸ್ ಆಗುತ್ತಿರುವ ವಿಡಿಯೋಗೆ ಪ್ರತಿಕ್ರಿಯೆ ಹೇಗಿರಲಿದೆ, ಕನ್ನಡ ಚಿತ್ರರಂಗದಿಂದ ಯಾರೆಲ್ಲಾ ಸ್ಟಾರ್ ನಟರು ಈ ಹಾಡನ್ನು ಮೆಚ್ಚಿಕೊಳ್ಳಲ್ಲಿದ್ದಾರೆ ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.