Vikrant Rona: ಕಿಚ್ಚ ಸುದೀಪ್‌ ಚಿತ್ರಕ್ಕೆ ಭರ್ಜರಿ ಆಫರ್‌ ನೀಡಿದ ಓಟಿಟಿ

Kannadaprabha News   | Asianet News
Published : Jan 07, 2022, 11:43 AM IST
Vikrant Rona: ಕಿಚ್ಚ ಸುದೀಪ್‌ ಚಿತ್ರಕ್ಕೆ ಭರ್ಜರಿ ಆಫರ್‌ ನೀಡಿದ ಓಟಿಟಿ

ಸಾರಾಂಶ

ಕೊರೋನಾ ಮೂರನೇ ಅಲೆಯಿಂದ ಅನಿಶ್ಚಿತತೆ ಉಂಟಾಗಿರುವ ಈ ಸಂದರ್ಭದಲ್ಲಿ ಓಟಿಟಿಗಳು ಬಹುನಿರೀಕ್ಷಿತ ಸಿನಿಮಾಗಳ ಹಿಂದೆ ಬಿದ್ದಿವೆ. ಈಗ ಓಟಿಟಿ ಜಗತ್ತಿನಲ್ಲಿ ಭಾರಿ ಬೇಡಿಕೆಯಲ್ಲಿರುವ ಸಿನಿಮಾ ಕಿಚ್ಚ ಸುದೀಪ್‌ ನಟನೆಯ ವಿಕ್ರಾಂತ್‌ ರೋಣ.

ಕೊರೋನಾ (CoronaVirus) ಮೂರನೇ ಅಲೆಯಿಂದ ಅನಿಶ್ಚಿತತೆ ಉಂಟಾಗಿರುವ ಈ ಸಂದರ್ಭದಲ್ಲಿ ಓಟಿಟಿಗಳು (OTT) ಬಹುನಿರೀಕ್ಷಿತ ಸಿನಿಮಾಗಳ ಹಿಂದೆ ಬಿದ್ದಿವೆ. ಈಗ ಓಟಿಟಿ ಜಗತ್ತಿನಲ್ಲಿ ಭಾರಿ ಬೇಡಿಕೆಯಲ್ಲಿರುವ ಸಿನಿಮಾ ಕಿಚ್ಚ ಸುದೀಪ್‌ (Kichcha Sudeep) ನಟನೆಯ ವಿಕ್ರಾಂತ್‌ ರೋಣ (Vikrant Rona). 3ಡಿ ತಂತ್ರಜ್ಞಾನದಲ್ಲಿ ಅದ್ದೂರಿ ವೆಚ್ಚದಲ್ಲಿ ತಯಾರಾಗಿರುವ ಪ್ಯಾನ್‌ ಇಂಡಿಯಾ ಚಿತ್ರ ‘ವಿಕ್ರಾಂತ್‌ ರೋಣ’ದ ನೇರ ಪ್ರಸಾರ ಹಕ್ಕುಗಳಿಗಾಗಿ ಎರಡು ಓಟಿಟಿ ಸಂಸ್ಥೆಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ ಎನ್ನಲಾಗಿದೆ. 

ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿ ಇಂಗ್ಲಿಷ್‌ ಭಾಷೆಯಲ್ಲೂ ನೇರವಾಗಿ ಓಟಿಟಿಯಲ್ಲಿ ಪ್ರಸಾರ ಮಾಡಲು ಓಟಿಟಿ ಆಫರ್‌ನೀಡಿದೆ. ಇದಕ್ಕಾಗಿ ನಿರೀಕ್ಷೆಗೂ ಮೀರಿ ಹಣ ಆಫರ್‌ ನೀಡಿದೆ ಎಂದು ಮೂಲಗಳು ತಿಳಿಸಿವೆ. ಎರಡು ಓಟಿಟಿಗಳಲ್ಲಿ ಸ್ಪರ್ಧೆ ನಡೆಯುತ್ತಿದ್ದು, ಚಿತ್ರತಂಡ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಗಾಂಧೀನಗರದಲ್ಲಿ ಚಾಲ್ತಿಯಲ್ಲಿರುವ ವದಂತಿಯ ಪ್ರಕಾರ ಒಂದು ಓಟಿಟಿ ವಿಕ್ರಾಂತ್‌ ರೋಣ ಚಿತ್ರಕ್ಕೆ ಬರೋಬ್ಬರಿ ನೂರು ಕೋಟಿ ರುಪಾಯಿ ನೀಡಲು ಮುಂದೆ ಬಂದಿದೆ. 

Omicron: ಸ್ಯಾಂಡಲ್‌ವುಡ್‌ ನೆತ್ತಿ ಮೇಲೆ ಓಮಿಕ್ರಾನ್‌ ತೂಗುಗತ್ತಿ

ಈ ಮೊತ್ತವನ್ನು ನಿರ್ಮಾಪಕರು ಖಚಿತಪಡಿಸಿಲ್ಲ. ಆದರೆ ಹಬ್ಬಿರುವ ಸುದ್ದಿಯ ಪ್ರಕಾರ ಓಟಿಟಿ ಪ್ರಸಾರ ಹಕ್ಕುಗಳಿಗೆ ದಕ್ಷಿಣ ಭಾರತೀಯ ಚಿತ್ರವೊಂದಕ್ಕೆ ಬಂದಿರುವ ಅತೀ ಹೆಚ್ಚಿನ ಆಫರ್‌ ಇದಾಗಿದೆ. ಈ ಕುರಿತು ಚಿತ್ರದ ನಿರ್ಮಾಪಕ ಜಾಕ್‌ ಮಂಜು, ‘ಓಟಿಟಿಯಲ್ಲಿ ನೇರ ಬಿಡುಗಡೆ ಮಾಡುವುದಕ್ಕೆ ಎರಡು ಓಟಿಟಿ ಸಂಸ್ಥೆಗಳು ಆಸಕ್ತಿ ತೋರಿ ಮಾತುಕತೆ ಕೂಡ ಮಾಡಿದ್ದಾರೆ. ಆ ಪೈಕಿ ಒಬ್ಬರು ಈಗಾಗಲೇ ಇಂತಿಷ್ಟುಹಣ ಕೊಡುವುದಾಗಿಯೂ ಕೂಡ ಹೇಳಿದ್ದಾರೆ. ದೊಡ್ಡ ಮೊತ್ತವನ್ನೇ ಅಫರ್‌ ಮಾಡಿದ್ದಾರೆ. 

‘ವಿಕ್ರಾಂತ್‌ ರೋಣ’ ಚಿತ್ರವನ್ನು ಚಿತ್ರಮಂದಿರದಲ್ಲೇ ಬಿಡುಗಡೆ ಮಾಡುವ ಉದ್ದೇಶ ನಮಗೆ ಇದೆ. ಆ ಕಾರಣಕ್ಕೆ ಅದ್ದೂರಿಯಾಗಿ 3ಡಿ ತಂತ್ರಜ್ಞಾನದಲ್ಲಿ ಚಿತ್ರವನ್ನು ನಿರ್ಮಿಸಿದ್ದೇವೆ. ನಟ ಸುದೀಪ್‌ ಅವರಿಗೆ ಇರುವ ಪ್ಯಾನ್‌ ಇಂಡಿಯಾ ಫ್ಯಾನ್‌ ಬೇಸ್‌ ಬಗ್ಗೆ ಗೊತ್ತಿದೆ. ಮತ್ತೊಂದು ಕಡೆ ಕೊರೋನಾ ಮೂರನೇ ಅಲೆ ನಿರೀಕ್ಷೆಗಿಂತ ವೇಗವಾಗಿ ಹರಡುತ್ತಿದೆ. ವೀಕೆಂಡ್‌ ಕರ್ಫ್ಯೂ ಮತ್ತು ಶೇ.50 ಸೀಟು ಭರ್ತಿ ಆದೇಶ ಜಾರಿಯಾಗಿದ್ದು, ಇದು ಮತ್ತಷ್ಟುದಿನ ಮುಂದುವರಿದವರೆ ಹೇಗೆ ಎನ್ನುವ ಯೋಚನೆ ಕೂಡ ಇದೆ. 

ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಚಿತ್ರದ ನಾಯಕ ಸುದೀಪ್‌ ಅವರ ಜತೆ ಕೂತು ಮಾತನಾಡಿ ಎರಡ್ಮೂರು ವಾರಗಳ ನಂತರ ಸೂಕ್ತ ನಿರ್ಧಾರಕ್ಕೆ ಬರುತ್ತೇವೆ. ಸದ್ಯಕ್ಕಂತೂ ಓಟಿಟಿಯಿಂದ ಬೇಡಿಕೆ ಬಂದಿರುವುದು ನಿಜ’ ಎನ್ನುತ್ತಾರೆ. ಜಾಕ್‌ ಮಂಜು (Jack Manju) ನಿರ್ಮಿಸಿರುವ, ಅನೂಪ್‌ ಭಂಡಾರಿ (Anup Bhandari) ನಿರ್ದೇಶನದ ಈ ಚಿತ್ರವು ಫೆಬ್ರವರಿ 24ರಂದು ತೆರೆಗೆ ಬರುವ ತಯಾರಿಯಲ್ಲಿತ್ತು. ಆದರೆ ಈಗ ಕೊರೋನಾ ಕಾರಣ ಎಲ್ಲವೂ ಅನಿಶ್ಚಿತವಾಗಿದೆ.

Vikrant Rona Release: ಫೆಬ್ರವರಿ 24ರಂದು ಕಿಚ್ಚ ಸುದೀಪ್ ಚಿತ್ರ ರಿಲೀಸ್!

ಎರಡು ಓಟಿಟಿಗಳಿಂದ ದೊಡ್ಡ ಮೊತ್ತದ ಆಫರ್‌ ಬಂದಿರುವುದು ನಿಜ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಮ್ಮ ಚಿತ್ರದ ನಾಯಕ ಸುದೀಪ್‌ ಅವರ ಜತೆ ಕೂತು ಮಾತನಾಡಿ ಎರಡ್ಮೂರು ವಾರಗಳ ನಂತರ ಸೂಕ್ತ ನಿರ್ಧಾರಕ್ಕೆ ಬರುತ್ತೇವೆ.
-ಜಾಕ್‌ ಮಂಜು, ನಿರ್ಮಾಪಕ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?