ಡಾಲಿ ಧನಂಜಯ್ ನಟನೆಯ 'ಬಡವ ರಾಸ್ಕಲ್' ಚಿತ್ರದ ಸುದ್ದಿಗೋಷ್ಠಿಯಲ್ಲಿ ನಟಿ ತಾರಾ ಹಾಗೂ ರಂಗಾಯಣ ರಘು ಮರಾಠಿಗರು ಕನ್ನಡ ಬಾವುಟ ಸುಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಕನ್ನಡ ಚಿತ್ರರಂಗದ ಡಾಲಿ ಧನಂಜಯ್ (Dolly Dhananjay) ನಟನೆಯ 'ಬಡವ ರಾಸ್ಕಲ್' (Badava Rascal) ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರತಂಡ ಪ್ರಚಾರ ಕಾರ್ಯಗಳನ್ನು ಭರ್ಜರಿಯಾಗಿ ನಡೆಸುತ್ತಿದೆ. ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಟ್ರೇಲರ್ (Trailer) ಹಾಗೂ ಹಾಡುಗಳಿಗೆ (Songs) ಸಿನಿ ಪ್ರೇಮಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇಂದು (ಡಿಸೆಂಬರ್ 19) 'ಬಡವ ರಾಸ್ಕಲ್' ಸಿನಿಮಾದ ಸುದ್ದಿಗೋಷ್ಠಿ ನಡೆದಿದೆ. ಈ ಸಂದರ್ಭದಲ್ಲಿ ಮರಾಠಿಗರು ಕನ್ನಡ ಬಾವುಟ (Kannada Flag) ಸುಟ್ಟ ವಿಚಾರ ಪ್ರಸ್ತಾಪವಾಗಿದ್ದು, ನಟಿ ತಾರಾ (Tara) ಹಾಗೂ ರಂಗಾಯಣ ರಘು (Rangayana Raghu) ಈ ವಿಷಯಕ್ಕೆ ಸಂಬಂಧಿಸಿದಂತೆ ಹೇಳಿಕೆಯನ್ನು ಕೊಟ್ಟಿದ್ದಾರೆ.
ನಮ್ಮ ಮಧ್ಯೆ ಕನ್ನಡ ಬಾವುಟ ಸುಡೋ ಮನಸ್ಸುಗಳಿವೆ ಅಂದರೆ ಆಶ್ಚರ್ಯ ಆಗುತ್ತೆ. ಆ ಕೆಟ್ಟ ಮನಸ್ಸುಗಳಿಗೆ ನನ್ನ ದೊಡ್ಡ ಧಿಕ್ಕಾರ ಇರಲಿ ಎಂದು ತಾರಾ ಅನುರಾಧ ಹೇಳಿದ್ದಾರೆ. ಹಾಗೂ ಕನ್ನಡ ಬಾವುಟ ಸುಡುತ್ತಾರೆ ಅಂದರೆ ಏನು ಅರ್ಥ, ನಾವು ಕನ್ನಡಿಗರು. ನಮ್ಮ ನಾಡಗೀತೆನೇ ನಾವು ಏನು ಅಂತ ಹೇಳುತ್ತೆ, ಮರಾಠಿಗರ ವಿಷಯಕ್ಕೆ ಬಂದರೆ ಏರಿಯಾ ಏರಿಯಾವನ್ನೇ ಕೊಟ್ಟಿದ್ದೇವೆ, ಶಿವಾಜಿ ಪ್ರತಿಮೆಗಳನ್ನ ಹಾಕಿದ್ದೇವೆ. ಮಹಾರಾಷ್ಟ್ರದಲ್ಲಿ ಕನ್ನಡಿಗರ ಯಾರ ಪ್ರತಿಮೆಗಳಿವೆ, ನಾವು ಕನ್ನಡಿಗರು ಶಾಂತ ಸ್ವಭಾವದವರು, ನಾವು ಸುಮ್ಮನಿದ್ರೆ ಸುಮ್ಮನಿರುತ್ತೇವೆ. ನಾವು ಎದ್ದು ನಿಂತರೆ ಯಾರು ಅಂತ ತೋರಿಸಿಯೇ ಬಿಡುತ್ತೇವೆ ಎಂದು ರಂಗಾಯಣ ರಘು ಆಕ್ರೋಶವನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ್ 'ಭಾಷೆಗಾಗಿ ನಾನು ಪ್ರಾಣ ಕೊಡೋಕು ಸಿದ್ಧ, ಭಾಷೆ ಎಲ್ಲರಿಗೂ ಮುಖ್ಯ. ಆ ಭಾಷೆಗೆ ಅಗೌರವ ಕೋಡಬೇಡಿ, ಯಾವ ರಾಜ್ಯದಲ್ಲಿ ಯಾವ ಭಾಷೆ ಇದೆಯೋ ಅದಕ್ಕೆ ಮರ್ಯಾದೆ ಕೊಡೋದು ಧರ್ಮ ಎಂದು ಎಚ್ಚರಿಕೆ ನೀಡಿದರು. ಕನ್ನಡದ ಬಾವುಟ ಸುಡೋದು ಎಷ್ಟು ಸರಿ, ಅಂತಹ ಕೆಲಸ ಮಾಡಬಾರದು. ಕರ್ನಾಟಕವನ್ನ ಪ್ರೀತಿಸಬೇಕು. ನಮಗೆ ಏನು ಪವರ್ ಅಲ್ಲ ಅಂತ ಅಂದುಕೊಳ್ಳಬೇಡಿ. ಮನುಷ್ಯನಿಗೆ ಕೋಪ ಬಂದ್ರೆ ತಡೆದುಕೊಳ್ಲೋದಕ್ಕೆ ಆಗಲ್ಲ. ಸರ್ಕಾರ ಇದರ ಬಗ್ಗೆ ಗಮನ ಕೊಡಬೇಕು. ಬರೀ ಓಟಿಗೆ ಮಾತ್ರ ಕಾಯೋದು ಬೇಡ. ನಾನು ತುಂಬಾ ಪ್ರಾಕ್ಟಿಕಲ್ ಆಗಿ ಮಾತಾಡುತ್ತೇನೆ. ನಮ್ಮ ಬಾವುಟ ಸುಟ್ಟು ಹಾಕಿದ್ರೆ ನಮ್ಮ ತಾಯಿಯನ್ನೇ ಸುಟ್ಟ ಹಾಗೆ ಅಲ್ವಾ. ಅದನ್ನೆಲ್ಲಾ ಮಾಡಬೇಡಿ. ಎಲ್ಲದಕ್ಕೂ ಮರ್ಯಾದೆ ಕೊಡಬೇಕು. ಬೇರೆಯವರಿಗೆ ನಾವು ಮರ್ಯಾದೆ ಕೊಡ್ತೇವೆ. ನಮಗು ಮರ್ಯಾದೆ ಕೊಡಿ. ನಾವು ಎಲ್ಲರಿಗೂ ಜಾಗ ಕೊಡ್ತೀವಿ. ಎಲ್ಲ ಸಿನಿಮಾನೂ ನೋಡಿ. ಬಟ್ ಜಾಸ್ತಿ ಕನ್ನಡ ಸಿನಿಮಾ ನೋಡಿ. ದಯವಿಟ್ಟು ಎಲ್ಲರೂ ಸಪೋರ್ಟ್ ಮಾಡಿ ಎಂದು ಶಿವಣ್ಣ ಮನವಿ ಮಾಡಿದರು.
undefined
Sandalwood Celebrities: ಕನ್ನಡ ಧ್ವಜ ಸುಟ್ಟವರ ವಿರುದ್ಧ ಕಿಡಿಕಾರಿದ ಚಂದನವನದ ತಾರೆಯರು!
ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಸ್ಯಾಂಡಲ್‌ವುಡ್‌ನ ಸೆಲೆಬ್ರಿಟಿಗಳು (Sandalwood Celebrities) ಸಾಮಾಜಿಕ ಜಾಲತಾಣದಲ್ಲಿ (Social Media) ತಮ್ಮ ಆಕ್ರೋಶವನ್ನು ಹೊರ ಹಾಕಿದ್ದು, 'ನಮ್ಮ ಕರುನಾಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು' ಎಂದು ಆಗ್ರಹಿಸಿದ್ದಾರೆ. ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ್, ದುನಿಯಾ ವಿಜಯ್, ಗೋಲ್ಡನ್ ಸ್ಟಾರ್ ಗಣೇಶ್, ಪ್ರಜ್ವಲ್ ದೇವರಾಜ್, ಮರಿ ಟೈಗರ್ ವಿನೋದ್ ಪ್ರಭಾಕರ್, ನವರಸ ನಾಯಕ ಜಗ್ಗೇಶ್ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸೇರಿದಂತೆ ಹಲವಾರು ತಾರೆಯರು ಕಿಡಿಕಾರಿದ್ದು, ಕನ್ನಡಕ್ಕಾಗಿ ಸ್ಯಾಂಡಲ್ವುಡ್ ತಾರೆಯರು ಮತ್ತೊಮ್ಮೆ ಒಂದಾಗಿದ್ದಾರೆ.
'ಡಾಲಿ ಪಿಕ್ಚರ್' (Dolly Picture) ಬ್ಯಾನರ್‌ನಲ್ಲಿ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಿಸುತ್ತಿರುವ 'ಬಡವ ರಾಸ್ಕಲ್' ಚಿತ್ರಕ್ಕೆ ಶಂಕರ್ ಗುರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಈ ಚಿತ್ರದಲ್ಲಿ 'ಮಠ' ಗುರುಪ್ರಸಾದ್ (Guruprasad) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಕತೆಗೆ ತಿರುವು ಕೊಡುವ ಪಾತ್ರ ಇದಾಗಿದ್ದು, ಚಿತ್ರದಲ್ಲಿನ ಅವರ ಗೆಟಪ್ ಈ ಹಿಂದೆ ರಿವೀಲ್ ಆಗಿತ್ತು. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ವಾಸುಕಿ ವೈಭವ್ (Vasuki Vaibhav) ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಪ್ರೀತ ಜಯರಾಮನ್ ಛಾಯಾಗ್ರಹಣ, ನಿರಂಜನ್ ದೇವರಮನೆ ಸಂಕಲನ ಹಾಗೂ ವಿನೋದ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
Badava Rascal: ಶಂಕರ್ ಅಲಿಯಾಸ್ ಡಾಲಿ ಧನಂಜಯ್ ಚಿತ್ರದ ಟ್ರೇಲರ್ ರಿಲೀಸ್
ಇನ್ನು 'ಬಡವ ರಾಸ್ಕಲ್' ಮಿಡಲ್ ಕ್ಲಾಸ್ ಮಾಸ್ ಎಂಟರ್‌ಟೈನರ್. ಮಿಡಲ್ ಕ್ಲಾಸ್ ಮಕ್ಕಳಿಗೆ ತಂದೆ ತಾಯಿನೇ ಹೀರೋ ಹೀರೋಯಿನ್. ಇಂಥಾ ಪ್ರತೀ ಹುಡುಗನ ಲೈಫಲ್ಲೂ ಎಜುಕೇಶನ್ ಮುಗಿಸಿದ, ಕೆಲಸ ಇನ್ನೂ ಸಿಗದ ಪೇಸ್ ಬಹಳ ಚಾಲೆಂಜಿಂಗ್. ಆ ಸೂಕ್ಷ್ಮ ಎಳೆಯಿಟ್ಟುಕೊಂಡು ಮಾಡಿದ ಚಿತ್ರವಿದು. ನಗಿಸುವ, ಕಣ್ಣಂಚು ಒದ್ದೆ ಮಾಡೋ ಈ ಸಿನಿಮಾವನ್ನು ಗೆಳೆಯರನ್ನು ಬೆಳೆಸಿ ನಾನೂ ಬೆಳೆಯಬೇಕು ಅಂತ ಮಾಡಿದ್ದು. ಬಡವ ರಾಸ್ಕಲ್ ನಮ್ಮನ್ನೆಲ್ಲ ಬೆಳೆಸುವ ಚಿತ್ರವಾಗಲಿ' ಎಂದು ಧನಂಜಯ್ ಇತ್ತೀಚೆಗೆ ನಡೆದ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ತಿಳಿಸಿದರು.