Old Monk Movie: ಫೆಬ್ರವರಿಗೆ ಶ್ರೀನಿ-ಅದಿತಿ ಪ್ರಭುದೇವ ಜೋಡಿಯ ಸಿನಿಮಾ ರಿಲೀಸ್

By Suvarna NewsFirst Published Dec 19, 2021, 7:38 PM IST
Highlights

ಶ್ರೀನಿ ನಿರ್ದೇಶಿಸಿ, ನಾಯಕನಾಗಿ ನಟಿಸುತ್ತಿರುವ 'ಓಲ್ಡ್ ಮಾಂಕ್' ಚಿತ್ರ ಸೆಟ್ಟೇರಿದಾಗಿನಿಂದಲೂ ತನ್ನ ಟೈಟಲ್ ಹಾಗೂ ಕಂಟೆಂಟ್ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದ ಈ ಚಿತ್ರ ಇದೀಗ ತೆರೆಗೆ ಬರಲು ಸಜ್ಜಾಗಿದೆ. 

ಶ್ರೀನಿ (Srini) ನಿರ್ದೇಶಿಸಿ, ನಾಯಕನಾಗಿ ನಟಿಸುತ್ತಿರುವ 'ಓಲ್ಡ್ ಮಾಂಕ್' (Old Monk) ಚಿತ್ರ ಸೆಟ್ಟೇರಿದಾಗಿನಿಂದಲೂ ತನ್ನ ಟೈಟಲ್ ಹಾಗೂ ಕಂಟೆಂಟ್ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದ ಈ ಚಿತ್ರ ಇದೀಗ ತೆರೆಗೆ ಬರಲು ಸಜ್ಜಾಗಿದೆ. ಈಗಾಗಲೇ ಬಿಡುಗಡೆಯಾಗಿರುವ 'ಓಲ್ಡ್‌ ಮಾಂಕ್‌' ಚಿತ್ರದ ಟ್ರೇಲರ್‌, ಹಾಡು ಎರಡಕ್ಕೂ ಸೋಶಿಯಲ್‌ ಮೀಡಿಯಾಗಳಲ್ಲಿ ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿದ್ದು, ಚಿತ್ರಕ್ಕೂ ಬೇಡಿಕೆ ಹೆಚ್ಚಾಗಿದೆ. ಚಿತ್ರಕ್ಕೆ ಅದಿತಿ ಪ್ರಭುದೇವ (Aditi Prabhudeva) ನಾಯಕಿಯಾಗಿದ್ದಾರೆ. 'ರಂಗನಾಯಕಿ' (Ranganayaki) ಚಿತ್ರದ ನಂತರ ಮತ್ತೊಮ್ಮೆ ಶ್ರೀನಿ ಜೊತೆ ತೆರೆ ಮೇಲೆ ಜತೆಯಾಗುತ್ತಿದ್ದು, ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಚಿತ್ರದಲ್ಲಿ ಓಲ್ಡ್‌ ಮಾಂಕ್‌ ಅಂದರೆ ನಾರದ. ಪ್ರೀತಿಸಿ ಮದುವೆಯಾಗುವ ಶಾಪಕ್ಕೆ ತುತ್ತಾಗಿ ಭೂಲೋಕಕ್ಕೆ ಬರುವ ನಾರದ ಏನೆಲ್ಲಾ ರಂಪಾಟ ಮಾಡಿದ ಅನ್ನುವುದು ಚಿತ್ರದ ಕತೆಯ ಒನ್‌ಲೈನ್‌. ಸದ್ಯ ಕರ್ನಾಟಕದಲ್ಲಿ ಸುಮಾರು ಮೂರೂವರೆ ದಶಕಗಳ ‌ವಿತರಣೆಯ ಅನುಭವವಿರುವ ಅಭಿಜಿತ್‌ ಎಂಟರ್‌ಪ್ರೈಸಸ್‌ ಸಂಸ್ಥೆ 'ಓಲ್ಡ್‌ ಮಾಂಕ್‌' ಚಿತ್ರದ ಟ್ರೇಲರ್‌ ನೋಡಿ ಸಿನಿಮಾದ ಕರ್ನಾಟಕ ಔಟ್‌ ರೇಟ್‌ ರೈಟ್ಸ್‌ ಪಡೆದುಕೊಂಡಿದೆ. ದೊಡ್ಡ ಮೊತ್ತಕ್ಕೆ ಸಿನಿಮಾದ ರೈಟ್ಸ್‌ ಸೇಲ್‌ ಆಗಿರುವುದರಿಂದ ನಿರ್ಮಾಪಕರು ಖುಷಿಯಾಗಿದ್ದಾರೆ. ಇತ್ತೀಚೆಗೆ ಚಿತ್ರದ  'ಗಿಚ್ಚ ಗಿಲಿಗಿಲಿ' (Giccha Gili Gili) ಹೆಸರಿನ ಹಾಡು ಬಿಡುಗಡೆಯಾಗಿದೆ.

Latest Videos

ಓಲ್ಡ್ ಮಾಂಕ್‌ನಲ್ಲಿ ಶ್ರೀನಿ ಲೈಫ್ ಗಿಚ್ಚ ಗಿಲಿಗಿಲಿ

ಶ್ರೀನಿ ಹಾಗೂ ಚಿತ್ರದ ನಾಯಕಿ ಅದಿತಿ ಪ್ರಭುದೇವ (Aditi Prabhudeva) ಈ ಹಾಡಿಗೆ ಬೊಂಬಾಟ್ ಸ್ಟೆಪ್ಸ್ ಹಾಕಿದ್ದಾರೆ. ಸೌರಭ್ ಮತ್ತು ವೈಭವ್ ಸಂಗೀತವಿರುವ ಈ ಚಿತ್ರದ ಹಾಡಿಗೆ ಮುದಕಣ್ಣ ಮೊರಬ (Mudakanna Moraba) ಸಾಹಿತ್ಯದ ಜೊತೆ ಹಾಡನ್ನು ಹಾಡಿದ್ದಾರೆ. ಎ.ಹರ್ಷ ನೃತ್ಯ ಸಂಯೋಜನೆ ಈ ಹಾಡಿಗಿದೆ. ಈ ಹಿಂದೆ ಬಿಡುಗಡೆಯಾದ 'ಓಲ್ಡ್‌ ಮಾಂಕ್‌' ಚಿತ್ರದ ಟ್ರೇಲರನ್ನು ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಬಿಡುಗಡೆ ಮಾಡಿ, 'ಡಿಫರೆಂಟ್‌ ಆಗಿರುವ ಟ್ರೇಲರ್‌ನಂತೆ ಸಿನಿಮಾವೂ ಒಳ್ಳೆಯ ಮನರಂಜನೆ ನೀಡಲಿ' ಎಂದು ಪುನೀತ್‌ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು.



ಫ್ರೆಶ್​ ಎನಿಸುವ ಕಾನ್ಸೆಪ್ಟ್​, ಕಚಗುಳಿ ಇರುವ ಡೈಲಾಗ್​ಗಳು, ಹಿರಿಯ-ಕಿರಿಯ ಕಲಾವಿದರ ಸಂಗಮ, ಚುರುಕಾದ ನಿರೂಪಣೆ ಮೂಲಕ 'ಓಲ್ಡ್​ ಮಾಂಕ್' ಟ್ರೇಲರ್​ ಎಲ್ಲರಿಗೂ ಇಷ್ಟವಾಗಿ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿತ್ತು. ಹಿರಿಯ ನಟ ರಾಜೇಶ್‌, ಡಿಂಗ್ರಿ ನಾಗರಾಜ್‌, ಎಸ್‌ ನಾರಾಯಣ್‌. ಸಿಹಿಕಹಿ ಚಂದ್ರು, ಅರುಣಾ ಬಾಲರಾಜ್‌, ಸುನೀಲ್‌ ರಾವ್‌, ಸುಜಯ್‌ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.  ಪ್ರದೀಪ್‌ ಶರ್ಮಾ ಚಿತ್ರದ ನಿರ್ಮಾಪಕರು. ಭರತ್​ ಪರಶುರಾಮ್​ ಛಾಯಾಗ್ರಹಣ, ಸೌರಭ್​-ವೈಭವ್​ ಸಂಗೀತ ನಿರ್ದೇಶನ, ದೀಪು ಎಸ್​. ಕುಮಾರ್ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ. ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ ಹಲವು ವರ್ಷಗಳ ನಂತರ ಹಿರಿಯ ನಟ ರಾಜೇಶ್ ಬಣ್ಣ ಹಚ್ಚಿದ್ದಾರೆ. 

'ಓಲ್ಡ್‌ ಮಾಂಕ್‌' ಟ್ರೇಲರ್‌ ಬಿಡುಗಡೆ ಮಾಡಿದ ಪುನೀತ್‌ ರಾಜ್‌ಕುಮಾರ್!

ಚಿತ್ರದಲ್ಲಿರುವ ಒಂದು ವಿಶೇಷ ಪಾತ್ರದ ಮೂಲಕ ರಾಜೇಶ್ ಮತ್ತೆ ಬಣ್ಣ ಹಚ್ಚಿದರೆ ಹೇಗಿರುತ್ತದೆ ಎನ್ನುವ ಆಲೋಚನೆ ಬಂತು. ಅವರನ್ನು ಭೇಟಿ ಮಾಡಿ ಕಥೆ ಹೇಳಿದೆ  ಖುಷಿಯಿಂದ ಒಪ್ಪಿ ಕೊಂಡಿದ್ದಾರೆ.ನಮ್ಮ ಚಿತ್ರದಲ್ಲಿ ಹಿರಿಯ ನಟರೊಬ್ಬರು ಇದ್ದಾರೆ ಎಂದರೆ ನಮಗೆ ಹೆಮ್ಮೆ' ಎಂದು ಶ್ರೀನಿ ಈ ಹಿಂದೆ ಹೇಳಿದ್ದರು. ಇನ್ನು ತೆಲುಗಿನ (Telugu) ಕ್ಲಾಪ್‌ ಬೋರ್ಡ್‌ ಪ್ರೊಡಕ್ಷನ್‌ನ ರಾಮಕೃಷ್ಣ ನಲ್ಲಂ (Ramakrishna Nallam) ಹಾಗೂ ಸ್ಟಾರ್‌ವುಡ್‌ ಪ್ರೊಡಕ್ಷನ್‌ನ ರವಿ ಕಶ್ಯಪ್‌ (Ravi Kashyap) ಚಿತ್ರದ ರೀಮೇಕ್‌ ರೈಟ್ಸ್‌ ಖರೀದಿ ಮಾಡಿದ್ದು, ಈ ಸಿನಿಮಾ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕ ಕಾಲಕ್ಕೆ ಬಿಡುಗಡೆ ಆಗುತ್ತಿದೆ. 
 

click me!