Ek Love Ya: ಮೀಟ್ ಮಾಡೋಣ ಹಾಡಿನ ಬಗ್ಗೆ ಮಾಹಿತಿ ಹಂಚಿಕೊಂಡ ಜೋಗಿ ಪ್ರೇಮ್

By Suvarna NewsFirst Published Dec 19, 2021, 9:03 PM IST
Highlights

ರಾಣಾ ಹಾಗೂ ರಚಿತಾ ರಾಮ್ ಅಭಿನಯದ ಬಹು ನಿರೀಕ್ಷಿತ 'ಏಕ್ ಲವ್ ಯಾ' ಚಿತ್ರದ 5ನೇ ಹಾಡನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕ ಜೋಗಿ ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
 

ಜೋಗಿ ಪ್ರೇಮ್ (Jogi Prem) ನಿರ್ದೇಶನದ ರಾಣಾ (Raanna) ಅಭಿನಯದ ಬಹು ನಿರೀಕ್ಷಿತ 'ಏಕ್ ಲವ್ ಯಾ' (Ek Love Ya) ಚಿತ್ರದ ಸಂಪೂರ್ಣ ಚಿತ್ರೀಕರಣ ಮುಗಿದಿದ್ದು, ಚಿತ್ರತಂಡ ಚಿತ್ರವನ್ನು 2022ರ ಜನವರಿ 21ನೇ ತಾರೀಖಿನಂದು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈಗಾಗಲೇ ಚಿತ್ರದ ಹಾಡುಗಳನ್ನು ಚಿತ್ರತಂಡ ಒಂದೊಂದಾಗಿ ರಿಲೀಸ್ ಮಾಡುತ್ತಿದ್ದು, ಇದೀಗ ಮತ್ತೊಂದು ಹಾಡನ್ನು ಬಿಡುಗಡೆ ಮಾಡುವುದಾಗಿ 'ಏಕ್ ಲವ್ ಯಾ' ಚಿತ್ರದ ನಿರ್ದೇಶಕ ಜೋಗಿ ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಜೋಗಿ ಪ್ರೇಮ್ ತಮ್ಮ ಇನ್‌ಸ್ಟಾಗ್ರಾಮ್‌ (Instagram) ಖಾತೆಯಲ್ಲಿ ಈಗಾಗಲೇ  'ಏಕ್ ಲವ್ ಯಾ' ಚಿತ್ರದ ನಾಲ್ಕು ಹಾಡುಗಳು ರಿಲೀಸ್ ಆಗಿ ಬ್ಲಾಕ್‌ಬಸ್ಟರ್ ಹಿಟ್‌ ಆಗಿವೆ. ಇದೀಗ ಚಿತ್ರದ 5ನೇ ಹಾಡು 'ಮೀಟ್ ಮಾಡೋಣ' (Meet Madona) ಸಾಂಗ್ ಬಿಡುಗಡೆಗೆ ಸಜ್ಜಾಗಿದ್ದು, ಡಿಸೆಂಬರ್ 24ರಂದು ಸಂಜೆ 6 ಗಂಟೆಗೆ ಎ2 ಮ್ಯೂಸಿಕ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ. ಹಾಗೂ ಡಿಸೆಂಬರ್ 26ಕ್ಕೆ ಶಿವಮೊಗ್ಗದಲ್ಲಿ ಮೀಟ್ ಮಾಡೋಣ. ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಸದಾ ಹೀಗೆ ಇರಲಿ ಎಂದು ಬರೆದುಕೊಂಡು ಹಾಡಿನ ಝಲಕ್ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. 

Ek Love Ya: ಪ್ರೇಮಿಗಳ ಹೃದಯವನ್ನು ಕದಿಯುವ ಅನಿತಾ ಅನಿತಾ ಸಾಂಗ್ ರಿಲೀಸ್

ಇತ್ತೀಚೆಗೆ 'ಏಕ್ ಲವ್ ಯಾ' (Ek LOve Ya) ಚಿತ್ರದ 'ಒಂದು ಊರಲ್ಲಿ' (Ondu Oorali) ಎಂಬ ಸಾಂಗ್ ಬಿಡುಗಡೆಯಾಗಿ ಸಿನಿಮಂದಿಯಿಂದ ಮೆಚ್ಚುಗೆಯನ್ನು ಪಡೆದಿತ್ತು. ಈ ಹಾಡಿಗೆ ಚಿತ್ರದ ನಾಯಕ ರಾಣಾ ತನ್ನ ಪ್ರೇಯಸಿಯ ನೆನಪಿನ ಗುಂಗಿನಲ್ಲಿ ಸ್ಟೆಪ್ಸ್ ಹಾಕಿದ್ದರು. ಜೊತೆಗೆ ಚಿತ್ರದ ನಾಯಕಿಯರಾದ ರಚಿತಾ ರಾಮ್ ಹಾಗೂ ಗ್ರೀಷ್ಮಾ ನಾಣಯ್ಯ ಹಾಡಿನ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಈ ಹಾಡಿನಲ್ಲಿ ಅನಿತಾ ಯಾರು ಎಂಬ ಪ್ರಶ್ನೆಯನ್ನು ನಿರ್ದೇಶಕ ಜೋಗಿ ಪ್ರೇಮ್ ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ. ಶರಣಕುಮಾರ್ ಗಜೇಂದ್ರಗಡ (Sharanakumar Gajendragada) ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ಜನಪ್ರಿಯ ಗಾಯಕ ಶಂಕರ್ ಮಹಾದೇವನ್ (shankar mahadevan) ಈ ಹಾಡಿಗೆ ದನಿಯಾಗಿದ್ದರು.



ಚಿತ್ರದ ನಿರ್ಮಾಪಕಿ ರಕ್ಷಿತಾ (Rakshita) ತಮ್ಮ ಚಿತ್ರದಡಿ ಕೆಲಸ ಮಾಡಿದ ಪ್ರತಿಯೊಬ್ಬ ಸದಸ್ಯನ ಜೊತೆಯೂ ಫೋಟೋ ಕ್ಲಿಕ್ಕಿಸಿಕೊಂಡು 'ನನ್ನ ತಂಡದಲ್ಲಿದ್ದ ಪ್ರತಿಯೊಬ್ಬ ತಂತ್ರಜ್ಞರು, ಕಲಾವಿದರು ಹಾಗೂ ಈ ಪ್ರಾಜೆಕ್ಟ್ ಹಿಂದೆ ಕೆಲಸ ಮಾಡಿದ ಎಲ್ಲರಿಗೂ ಧನ್ಯವಾದಗಳು. ಈ ಬ್ಯೂಟಿಫುಲ್ ಜರ್ನಿ ನೀವಿಲ್ಲದೆ ಸುಲಭವಾಗಿ ಸಾಗುತ್ತಿರಲಿಲ್ಲ. ಅದರಲ್ಲೂ ಈ ತಂಡದಲ್ಲಿ ಎಲ್ಲರೂ ಹಾರ್ಡ್‌ ವರ್ಕಿಂಗ್ ಬಾಯ್ಸ್ ಇದ್ದಾರೆ,' ಎಂದು ಸೋಷಿಯಲ್ ಮೀಡಿಯಾ ಮೂಲಕ ಧನ್ಯವಾದಗಳನ್ನು ತಿಳಿಸಿದ್ದರು. 'ಇದೊಂದು ಅದ್ಭುತ ಚಿತ್ರವಾಗಿ ಬರಲಿದೆ. ನೀವು ಖಂಡಿತ ಎಂಜಾಯ್ ಮಾಡುತ್ತೀರಾ ಎಂದು ಭಾವಿಸುವೆ. ಐ ಲವ್ ಯು 'ಏಕ್ ಲವ್ ಯಾ' ಟೀಂ. ಹೀಗೆ ಮುಂದಕ್ಕೂ ಒಟ್ಟಿಗೆ ಕೆಲಸ ಮಾಡೋಣ,' ಎಂದು ಚಿತ್ರತಂಡದ ಬಗ್ಗೆ ರಕ್ಷಿತಾ ಪ್ರೇಮ್ ಈ ಹಿಂದೆ ಹಾಡಿ ಹೊಗಳಿದ್ದರು. 

Ek Love Ya: ಎಣ್ಣೆ, ಹೆಣ್ಣು, ಲವ್ ಸೆಕ್ಸಲ್ಲೇ ಮುಗಿದೋಯ್ತಲ್ಲಾ ಹಾಡು ರಿಲೀಸ್

ಇನ್ನು 'ಏಕ್ ಲವ್ ಯಾ' ಚಿತ್ರದಲ್ಲಿ ರಕ್ಷಿತಾ ಸಹೋದರ ರಾಣಾ 'ಅಭಿರಾಣಾ' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಹಾಗೂ ಇನ್ನೊಂದು ಮುಖ್ಯ ಪಾತ್ರದಲ್ಲಿ ಹೊಸ ನಟಿ ಗ್ರೀಷ್ಮಾ ನಾಣಯ್ಯ (Grishma Nanayya) ಅಭಿನಯಿಸಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್, ಲಿರಿಕಲ್ ವಿಡಿಯೋ ಹಾಗೂ ಹೀರೋ, ಹೀರೋಯಿನ್ ಲುಕ್ ರಿವೀಲ್ ಮಾಡಲಾಗಿದ್ದು, ರಚಿತಾ ರಾಮ್ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಸಿಗರೇಟು ಸೇದಿ, ಲಿಪ್‌ ಲಾಕ್‌ ಕೂಡ ಮಾಡಿದ್ದಾರೆ. 
 

 
 
 
 
 
 
 
 
 
 
 
 
 
 
 

A post shared by Prem❣️s (@directorprems)

click me!