777 ಚಾರ್ಲಿ ವೀಕ್ಷಿಸಿದ ರಜಿನಿಕಾಂತ್; ರಕ್ಷಿತ್‌ಗೆ ಕರೆ ಮಾಡಿ ಸೂಪರ್ ಸ್ಟಾರ್ ಹೇಳಿದ್ದೇನು?

By Shruiti G Krishna  |  First Published Jun 22, 2022, 2:39 PM IST

ಸೂಪರ್ ಸ್ಟಾರ್ ರಜನಿಕಾಂತ್ 777 ಚಾರ್ಲಿ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 777 ಚಾರ್ಲಿ ವೀಕ್ಷಿಸಿದ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ರಕ್ಷಿತ್ ಶೆಟ್ಟಿಗೆ ಕರೆ ಮಾಡಿದ್ದಾರೆ. ಸಿನಿಮಾದ ಬಗ್ಗೆ ಹಾಡಿಹೊಗಳಿದ್ದಾರೆ. 
 


ಸ್ಯಾಂಡಲ್‌ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ( Rakshith shetty) ಸದ್ಯ 777 ಚಾರ್ಲಿ (777 Charlie) ಸಿನಿಮಾದ ಸಕ್ಸಸ್‌ನ ಖುಷಿಯಲ್ಲಿದ್ದಾರೆ. ಚಾರ್ಲಿ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.  ಸಿನಿ ಗಣ್ಯರು ಸಹ ರಕ್ಷಿತ್ ಸಿನಿಮಾಗೆ ಫಿದಾ ಆಗಿದ್ದಾರೆ. ಸ್ಯಾಂಡಲ್‌ವುಡ್ ಮಾತ್ರವಲ್ಲದೇ ಪರಭಾಷೆಯ ಗಣ್ಯರು ಚಾರ್ಲಿಯನ್ನು ಮೆಚ್ಚಿಕೊಂಡಿದ್ದಾರೆ. ಧರ್ಮ ಮತ್ತು ಚಾರ್ಲಿಯ ಭಾವನಾತ್ಮಕ ಕಥೆಗೆ ಮನಸೋತು ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇನ್ನು ರಾಜಕೀಯ ಗಣ್ಯರು ಸಿನಿಮಾ ಚಾರ್ಲಿಗೆ ನಮನಸೋತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಅನೇಕರು ಸಿನಿಮಾ ನೋಡಿ ಹಾಡಿಹೊಗಳಿದ್ದಾರೆ. ಸಿ ಎಂ ಬೊಮ್ಮಾಯಿ ರಕ್ಷಿತ್ ಸಿನಿಮಾ ನೋಡಿ ಕಣ್ಣೀರಿಟ್ಟಿದ್ದರು.

ಬಾಕ್ಸ್ ಆಫೀಸ್‌ನಲ್ಲಿ ಚಾರ್ಲಿ ಭರ್ಜರಿ ಕಮಾಯಿ ಮಾಡಿದೆ. ಈ ಸಿನಿಮಾಗೆ ಎಲ್ಲಾ ಕಡೆಯಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವಾಗಲೆ ಸೂಪರ್ ಸ್ಟಾರ್ ರಜನಿಕಾಂತ್ (Superstar Rajinikanth) ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 777 ಚಾರ್ಲಿ ವೀಕ್ಷಿಸಿದ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ರಕ್ಷಿತ್ ಶೆಟ್ಟಿಗೆ ಕರೆ ಮಾಡಿದ್ದಾರೆ. ಸಿನಿಮಾದ ಬಗ್ಗೆ ಹಾಡಿಹೊಗಳಿದ್ದಾರೆ. 

Tap to resize

Latest Videos

'ಇವತ್ತಿನ ದಿನದ ಆರಂಭ ಅದ್ಭತವಾಗಿತ್ತು. ರಜಿನಿಕಾಂತ್ ಅವರಿಂದ ಫೋನ್ ಬಂದಿತ್ತು. ನಿನ್ನೆ ರಾತ್ರಿ ರಜನಿಕಾಂತ್ 777 ಚಾರ್ಲಿ ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾದ ಅದ್ಭುತ ಮೆಕಿಂಗ್ ಗುಣಮಟ್ಟದ ಬಗ್ಗೆ, ಸಿನಿಮಾದ ಆಳವಾದ ವೀನ್ಯಾಸದ ಬಗ್ಗೆ ಹೆಚ್ಚು ಮಾತನಾಡಿದರು. ಮತ್ತು ಕ್ಲೈಮ್ಯಾಕ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೊನೆಯಲ್ಲಿ ಆಧ್ಯಾತ್ಮಿಕ ಮಾತಿನ ಮೂಲಕ ಮುಗಿಸಿದರು. ಅಂತಹ ಮಾತುಗಳನ್ನು ಸೂಪರ್ ಸ್ಟಾರ್ ಅವರಿಂದನೇ ಕೇಳುವುದು ಅದ್ಭುತವಾಗಿತ್ತು. ಧನ್ಯವಾದಗಳು ರಜನಿ ಸರ್' ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. 

ನಾನು ನಿಮ್ಮ ಜೊತೆ ನಟಿಸಬೇಕು; ರಕ್ಷಿತ್‌ಗೆ ಸ್ಟಾರ್ ನಟಿಯ ಬೇಡಿಕೆ

ರಕ್ಷಿತ್ ಶೆಟ್ಟಿ ಅವರ ಈ ಟ್ವೀಟ್‌ಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಮೆಚ್ಚುಗೆ ಹರಿದುಬರುತ್ತಿದೆ. ಅಂದಹಾಗೆ ಈ ಮೊದಲು ರಿಲೀಸ್ ಆಗಿದ್ದ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಸಿನಿಮಾವನ್ನು ವೀಕ್ಷಿಸಿ ಹಾಡಿಹೊಗಳಿದ್ದರು. ಸಿನಿಮಾ ವೀಕ್ಷಿಸಿ  ರಜನಿಕಾಂತ್ ನಿರ್ಮಾಪಕ ವಿಜಯ್ ಕಿರಗಂದೂರ್ ಅವರಿಗೆ ಕರೆ ಮಾಡಿದ್ದರು. ಇದೀಗ 777 ಚಾರ್ಲಿ ವೀಕ್ಷಿಸಿದ್ದಾರೆ. ಕನ್ನಡ ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ಕನ್ನಡಿಗರಿಗೆ ಖುಷಿತಂದಿದೆ.

What an amazing start to the day!☺

Received a call from Rajinikanth sir. He watched last night and has been in awe of the film. He spoke highly of the making quality, the deeper designs of the film, and especially expressed his admiration for the climax and….

— Rakshit Shetty (@rakshitshetty)

ಚಾರ್ಲಿ ಮನುಷ್ಯ ಮತ್ತು ನಾಯಿ ನಡುವಿನ ಭಾವನಾತ್ಮಕ ಕಥೆಯಾಗಿದೆ. ಈ ಸಿನಿಮಾದಲ್ಲಿ ಶ್ವಾನ ಚಾರ್ಲಿ ಅದ್ಭುತವಾಗಿ ನಟಿಸಿದೆ. ಚಾರ್ಲಿ ನಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ರಕ್ಷಿತ್ ಶೆಟ್ಟಿ ನಟನೆ ಕೂಡ ಪ್ರೇಕ್ಷಕರ ಹೃದಯ ಗೆದ್ದಿದೆ. ಎಲ್ಲಾ ಕಡೆಯಿಂದನೂ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವಾಗಲೇ ಕರ್ನಾಕಟದಲ್ಲಿ ಟ್ಯಾಕ್ಸ್ ಫ್ರಿ ಸಿಕ್ಕಿದೆ. 

ಚಾರ್ಲಿಯನ್ನು ಮೆಚ್ಚಿದ ಪರಭಾಷಾ ಸ್ಟಾರ್ಸ್; ಬೋನಿ ಕಪೂರ್, ರಿಕಿ, ಮಧುರ್ ಭಂಡಾರ್ಕರ್ ಪ್ರತಿಕ್ರಿಯೆ

777 ಚಾರ್ಲಿಗೆ ತೆರಿಗೆ ವಿನಾಯಿತಿ

ಸಿನಿಮಾ ವೀಕ್ಷಿಸಿದ ಬಸವರಾಜ್ ಬೊಮ್ಮಾಯಿ ಸಿನಿಮಾಗೆ ತೆರಿಗೆ ವಿನಾಯಿತಿ ಘೋಷಿಸಿದರು. ರಾಜ್ಯದ ಜಿಎಸ್‌ಟಿ ಪಾಲಿನಿಂದ ವಿನಾಯಿತಿ ನೀಡಿದರು.  ಶ್ವಾನ ಪ್ರೀಯ ಬೊಮ್ಮಾಯಿ ಖುದ್ದು ಈ ಚಿತ್ರವನ್ನು ವೀಕ್ಷಿಸಿದ್ದರು. ಬಳಿಕ ಮಾತನಾಡಿ ಸಿಎಂ ಬೊಮ್ಮಾಯಿ ತಮ್ಮ ಮುದ್ದಿನ ಶ್ವಾನವನ್ನು ನೆನೆದು ಭಾವುಕರಾಗಿದ್ದರು. ಚಿತ್ರ ವೀಕ್ಷಿಸಿದ ಬಳಿಕ ಎಲ್ಲರೂ ಈ ಚಿತ್ರ ವೀಕ್ಷಿಸಲು ಮನವಿ ಮಾಡಿದ್ದರು.  

click me!