ಆಪರೇಷನ್ ಸಕ್ಸಸ್ ನಟ ದಿಗಂತ್ 'ಔಟ್ ಆಫ್ ಡೇಂಜರ್', ವಾರ್ಡ್​ಗೆ ಶಿಫ್ಟ್!

Published : Jun 22, 2022, 10:20 AM IST
ಆಪರೇಷನ್ ಸಕ್ಸಸ್ ನಟ ದಿಗಂತ್ 'ಔಟ್ ಆಫ್ ಡೇಂಜರ್', ವಾರ್ಡ್​ಗೆ ಶಿಫ್ಟ್!

ಸಾರಾಂಶ

* ನಟ ದಿಗಂತ್ 'ಔಟ್ ಆಫ್ ಡೇಂಜರ್', ವಾರ್ಡ್​ಗೆ ಶಿಫ್ಟ್ * ಇಂದು ಅಥವಾ ನಾಳೆ ದಿಗಂತ್ ಡಿಸ್ಚಾರ್ಜ್‌  * ದೈಹಿಕ ಕಸರತ್ತು ಮಾಡುವಾಗ ಆಯತಪ್ಪಿ ಬಿದ್ದು ಕತ್ತಿನ ಭಾಗಕ್ಕೆ ದೊಡ್ಡ ಪ್ರಮಾಣ ಪೆಟ್ಟು ಮಾಡಿಕೊಂಡಿದ್ದ ನಟ

ಬೆಂಗಳೂರು(ಜೂ.22): ಗೋವಾ ಪ್ರವಾಸದಲ್ಲಿದ್ದ ಸ್ಯಾಂಡಲ್​ವುಡ್​ ನಟ ದೂದ್​ಪೇಡ ದಿಗಂತ್‌ ದೈಹಿಕ ಕಸರತ್ತು ಮಾಡುವಾಗ ಆಯತಪ್ಪಿ ಬಿದ್ದು ಕತ್ತಿನ ಭಾಗಕ್ಕೆ ದೊಡ್ಡ ಪ್ರಮಾಣ ಪೆಟ್ಟು ಮಾಡಿಕೊಂಡಿದ್ದರು. ಗೋವಾ ಬೀಚ್‌ನಲ್ಲಿ ಪಲ್ಟಿ ಹೊಡೆಯುವಾಗ ದಿಗಂತ್ ಬೆನ್ನು ಮೂಳೆಗೆ ಬಲವಾದ ಪೆಟ್ಟು ಬಿದ್ದಿತ್ತು. ಮಂಗಳವಾರ ಸಂಜೆ ಏರ್‌ಲಿಫ್ಟ್‌ ಮೂಲಕ ಅವರನ್ನು ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದರು. ಸದ್ಯ ನಟ ದಿಗಂತ್‌ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ನಿನ್ನೆ ರಾತ್ರಿ ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ದಿಗಂತ್​​ರನ್ನು ಆಸ್ಪತ್ರೆಯ ವಾರ್ಡ್​​ಗೆ ಶಿಫ್ಟ್​ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

‘ನಟಿಯೂ ಆದ ಪತ್ನಿ ಐಂದ್ರಿತಾ ರೇ ಜತೆ ಗೋವಾ ಪ್ರವಾಸದಲ್ಲಿದ್ದ ದಿಗಂತ್‌ ಭಾನುವಾರ ಸಮುದ್ರ ದಡದಲ್ಲಿ ಗಾಳಿಯಲ್ಲಿ ಹಿಮ್ಮುಖವಾಗಿ ಪಲ್ಟಿಹೊಡೆಯುವಾಗ ಆಯತಪ್ಪಿ ಬಿದ್ದಿದ್ದರು. ಆಗ ಅವರ ಕುತ್ತಿಗೆ ಹಾಗೂ ಬೆನ್ನಿಗೆ ಪೆಟ್ಟು ಬಿದಿದ್ದೆ. ಸಣ್ಣ ಪ್ರಮಾಣದಲ್ಲಿ ಮೂಳೆ ಹಾಗೂ ಕುತ್ತಿಗೆ ಭಾಗದಲ್ಲಿ ತೀವ್ರ ನೋವು ಕಾಣಿಸಿಕೊಂಡ ಕೂಡಲೇ ಅವರನ್ನು ಗೋವಾದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಮಂಗಳವಾರ ಮಧ್ಯಾಹ್ನ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಏರ್‌ಲಿಫ್ಟ್‌ ಮಾಡಲಾಗಿದೆ’ ಎಂದು ಕುಟುಂಬ ಮೂಲಗಳು ತಿಳಿಸಿದ್ದವು.

ನಟಿ ವೇದಿಕಾಗೆ ಕೊರೋನಾ ಪಾಸಿಟಿವ್; ಹೈ ಫೀವರ್ ಮೈ ಕೈ ನೋವು ಎಂದ ಚೆಲುವೆ

ಇಂದು ಡಿಸ್ಚಾರ್ಜ್‌?

ಇನ್ನು ದಿಗಂತ್ ಆರೋಗ್ಯ ಸ್ಥಿತಿ ಬಗ್ಗೆ ಹೆಲ್ತ್‌ ಬುಲೆಟಿನ್ ಬಿಡುಗಡೆ ಮಾಡಲಾಗಿದ್ದು, ದಿಗಂತ್ ಅವರನ್ನು ಬೆಂಗಳೂರಿನ ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ನಿನ್ನೆ ಅವರ ಕತ್ತಿನಿಂದ ಬೆನ್ನುಮೂಳೆಯ ಗಾಯದ ಹೆಚ್ಚಿನ ಪರಿಣಿತ ನಿರ್ವಹಣೆಗಾಗಿ ಎಚ್‌ಒಡಿ ಮತ್ತು ಕನ್ಸಲ್ಟೆಂಟ್ ಬೆನ್ನುಮೂಳೆಯ ಶಸ್ತ್ರಚಿಕಿತ್ಸಕ ಡಾ ಎಸ್ ವಿದ್ಯಾಧರ ಶಸ್ತ್ರಚಿಕಿತ್ಸೆ ಬಡೆಸಿದ್ದರು. ದಿಗಂತ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಬಹುತೇಕ ಇಂದು  ಡಿಸ್ಚಾರ್ಜ್ ಆಗಲಿದ್ದಾರೆ ಎಂದು ತಿಳಿಸಿದ್ದಾರೆ.

‘ಮಣಿಪಾಲ್‌ ಆಸ್ಪತ್ರೆಯ ವೈದ್ಯ ಡಾ| ವಿದ್ಯಾಧರ್‌ ನೇತೃತ್ವದ ವೈದ್ಯರ ತಂಡ ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆರೋಗ್ಯ ಸ್ಥಿರವಾಗಿದೆ’ ಎಂದು ವೈದ್ಯರು ತಿಳಿಸಿದ್ದಾರೆ. ದಿಗಂತ್‌ ಅವರು ಆಸ್ಪತ್ರೆಗೆ ದಾಖಲಾದ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಆಪ್ತರು ಹಾಗೂ ಅಭಿಮಾನಿಗಳು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. 

ಹಳ್ಳಿ ಹುಡುಗನಾಗಿ ಬೇರೆ ಭಾಷೆಯಲ್ಲಿ ಸಿನಿಮಾ ಸಿಗುತ್ತಿರುವುದೇ ಖುಷಿ: ಪೃಥ್ವಿ

ಘಟನೆ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ನಟ ದಿಗಂತ್‌ ತಾಯಿ ಮಲ್ಲಿಕಾ, ‘ಎರಡು ದಿನಗಳ ಹಿಂದೆಯೇ ಜಂಪ್‌ ಮಾಡುವಾಗ ಕುತ್ತಿಗೆ ಹಾಗೂ ಬೆನ್ನಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ನಾವು ಅದಕ್ಕೆ ಆಗ ಅಷ್ಟಾಗಿ ಗಮನ ಕೊಡಲಿಲ್ಲ. ಈಗ ಗೋವಾಗೆ ಪ್ರವಾಸ ಬಂದಾಗ ಕುತ್ತಿಗೆ ಹುರಿ ಹಾಗೂ ಬೆನ್ನು ನೋವು ಹೆಚ್ಚಾಯಿತು. ಕೂಡಲೇ ಗೋವಾದಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆತರಲಾಯಿತು. ಇಲ್ಲಿ ವೈದ್ಯರ ಸಲಹೆ ಮೇರೆಗೆ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದೆ’ ಎಂದು ಹೇಳಿದ್ದರು 

ಈ ಅವಘಡ ಭಾನುವಾರ ನಡೆದಿದೆ. ಗೋವಾದಲ್ಲೇ ದಿಗಂತ್‌ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾನೆ. ಈಗ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆತಂದಿದ್ದೇವೆ. ಇದೊಂದು ಸಣ್ಣ ಪ್ರಮಾಣದ ಉಳುಕು. ಯಾರೂ ಗಾಬರಿ ಆಘಬೇಕಾದ ಅಗತ್ಯ ಇಲ್ಲ.

- ಕೃಷ್ಣಮೂರ್ತಿ, ದಿಗಂತ್‌ ತಂದೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪ್ರಿಯಾಂಕಾ ಉಪೇಂದ್ರ ದಾಂಪತ್ಯ ಜೀವನಕ್ಕೆ 25 ವರ್ಷ: ಸ್ಟಾರ್ ಜೋಡಿಗಳ Love Story ಸೂಪರ್
ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?