ನನ್ನ ಗೆಳೆಯ ಫೈನ್; ಜಾಕ್ ಮಂಜು ಆರೋಗ್ಯದ ಅಪ್‌ಡೇಟ್ ನೀಡಿದ ಸುದೀಪ್

Published : Jun 14, 2022, 05:05 PM IST
 ನನ್ನ ಗೆಳೆಯ ಫೈನ್; ಜಾಕ್ ಮಂಜು ಆರೋಗ್ಯದ ಅಪ್‌ಡೇಟ್ ನೀಡಿದ ಸುದೀಪ್

ಸಾರಾಂಶ

ಕಿಚ್ಚ ಸುದೀಪ್ ಗೆಳೆಯ ಜಾಕ್ ಮಂಜು ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜಾಕ್ ಮಂಜು ಆರೋಗ್ಯದ ಅಪ್ ಡೇಟ್ ನೀಡಿರುವ ಸುದೀಪ್,  'ನನ್ನ ಆತ್ಮೀಯ ಗೆಳೆಯ ಮತ್ತು ಸಹೋದರ ಜಾಕ್ ಮಂಜು ಆರೋಗ್ಯವಾಗಿದ್ದಾರೆ. ಇಂದು ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗುತ್ತಿದ್ದಾರೆ.  ಮುನ್ನೆಚ್ಚರಿಕೆ ಆಧಾರದ ಮೇಲೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಸಮಸ್ಯೆ ಏನು ಇಲ್ಲ. ಜಾಕ್ ಮಂಜು ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಕೆಲವು ಫೋಟೋಗಳು ಗಂಭೀರ ಆಗಿದೆ ಎನ್ನುವ ಹಾಗಿದೆ. ನಿಮ್ಮೆಲ್ಲರ ಪ್ರಾರ್ಥನೆಗೆ ಧನ್ಯವಾದಗಳು' ಎಂದು ಹೇಳಿದ್ದಾರೆ.  ಕಿಚ್ಚನ ಮಾತು ಕೇಳಿ ಅಭಿಮಾನಿಗಳು ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.   

ಸ್ಯಾಂಡಲ್ ವುಡ್‌ನ ಖ್ಯಾತ ನಿರ್ಮಾಪಕ, ಕಿಚ್ಚ ಸುದೀಪ್(Sudeep) ಆಪ್ತ ಜಾಕ್ ಮಂಜು(Jack Manju) ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರ್ಯಕ್ರಮವೊಂದಕ್ಕೆ ಹೋಗಿದ್ದ ನಿರ್ಮಾಪಕ ಜಾಕ್ ಮಂಜು ಎಡವಿ ಬಿದ್ದು ಕಾಲು ಮುರಿದುಕೊಂಡ ಹಿನ್ನಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಬನ್ನೇರುಘಟ್ಟ ಬಳಿ ಇರೋ ಅಪೋಲೋ ಆಸ್ಪತ್ರೆಯಲ್ಲಿ ಜಾಕ್ ಮಂಜು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಂದಹಾಗೆ ಕಳೆದ ಎರಡು ದಿನಗಳ ಹಿಂದೆಯೇ ಜಾಕ್ ಮಂಜು ಆಸ್ಪತ್ರೆಗೆ ದಾಖಲಾಗಿದ್ದಾರೆ.   

ಇದೀಗ ಕಿಚ್ಚ ಸುದೀಪ್ ಗೆಳೆಯ ಜಾಕ್ ಮಂಜು ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜಾಕ್ ಮಂಜು ಆರೋಗ್ಯದ ಅಪ್ ಡೇಟ್ ನೀಡಿರುವ ಸುದೀಪ್,  'ನನ್ನ ಆತ್ಮೀಯ ಗೆಳೆಯ ಮತ್ತು ಸಹೋದರ ಜಾಕ್ ಮಂಜು ಆರೋಗ್ಯವಾಗಿದ್ದಾರೆ. ಇಂದು ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗುತ್ತಿದ್ದಾರೆ.  ಮುನ್ನೆಚ್ಚರಿಕೆ ಆಧಾರದ ಮೇಲೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಸಮಸ್ಯೆ ಏನು ಇಲ್ಲ. ಜಾಕ್ ಮಂಜು ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಕೆಲವು ಫೋಟೋಗಳು ಗಂಭೀರ ಆಗಿದೆ ಎನ್ನುವ ಹಾಗಿದೆ. ನಿಮ್ಮೆಲ್ಲರ ಪ್ರಾರ್ಥನೆಗೆ ಧನ್ಯವಾದಗಳು' ಎಂದು ಹೇಳಿದ್ದಾರೆ.  ಕಿಚ್ಚನ ಮಾತು ಕೇಳಿ ಅಭಿಮಾನಿಗಳು ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.   

ಜಾಕ್ ಮಂಜು ಕಳೆದ 20 ದಿನಗಳ ಹಿಂದೆಯೇ ಎಡವಿ ಬಿದ್ದು ಕಾಲು ಮುರಿದುಕೊಂಡಿದ್ದರು ಎನ್ನಲಾಗಿದೆ. ಆಗ‌ ಕಾಲಿಗೆ ಚಿಕಿತ್ಸೆಯನ್ನು ಪಡೆದಿದ್ದರು, ಆದರೆ 20 ದಿನಗಳ ಬಳಿಕ ಕಾಲಿನಲ್ಲಿ ರಕ್ತ ಹೆಪ್ಪುಗಟ್ಟಿ ಊತ ಬಂದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡು ದಿನಗಳಿಂದ  ಆಸ್ಪತ್ರೆಯಲ್ಲಿರುವ ಜಾಕ್ ಮಂಜು ಕಾಲಿಗೆ ಸರ್ಜರಿ ಮಾಡಲಾಗಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿತ್ತು.

ಜಾಕ್ ಮಂಜು ಕಳೆದ ಕೆಲವು ದಿನಗಳಿಂದ ಬಹುನಿರೀಕ್ಷೆಯ ವಿಕ್ರಾಂತ್ ರೋಣ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದರು. ದೇಶದಾದ್ಯಂತ ಸಂಚರಿಸುತ್ತಿದ್ದರು. ಆದರೀಗ ದಿಢೀರ್ ಆಸ್ಪತ್ರೆ ದಾಖಲಾದ ವಿಚಾರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಆದರೀಗ ಸುದೀಪ್ ಸ್ಪಷ್ಟನೆ ನೀಡುವ ಮೂಲಕ ಅಭಿಮಾನಿಗಳಿದ್ದ ಆತಂಕ ದೂರ ಮಾಡಿದ್ದಾರೆ. 

ವಿಕ್ರಾಂತ್ ರೋಣ ನಿರ್ಮಾಪಕ, ಸುದೀಪ್ ಆಪ್ತ ಜಾಕ್ ಮಂಜು ಆಸ್ಪತ್ರೆಗೆ ದಾಖಲು

ಜಾಕ್ ಮಂಜು ಬೇಗ ಗುಣಮುಖರಾಗಿ ವಾಪಾಸ್ ಆಗಲಿ ಎಂದ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ನಿರ್ಮಾಪಕ ಜಾಕ್ ಮಂಜು ಮತ್ತು ಸುದೀಪ್ ಇಬ್ಬರು ಉತ್ತಮ ಸ್ನೇಹಿತರು. ಇಬ್ಬರ ನಡುವೆ ಉತ್ತಮ ಬಾಂಧವ್ಯವಿದೆ. ಸುದೀಪ್ ನಟನೆಯ ಅನೇಕ ಸಿನಿಮಾಗಳಿಗೆ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. ಇದೀಗ ಪ್ಯಾನ್ ಇಂಡಿಯಾ ವಿಕ್ರಾಂತ್ ರೋಣ ಸಿನಿಮಾದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. 

ವಿಕ್ರಾಂತ್ ರೋಣನನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ವಿಕ್ರಾಂತ್ ರೋಣ ಸಿನಿಮಾದ ಹಾಡು ಈಗಾಗಲೇ ವೈರಲ್ ಆಗಿದೆ. ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕಾಣಿಸಿಕೊಂಡಿರುವ ಹಾಡು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಟೀಸರ್ ಮತ್ತು ಪೋಸ್ಟರ್‌ಗಳ ಮೂಲಕ ಸದ್ದು ಮಾಡುತ್ತಿರುವ ವಿಕ್ರಾಂತ್ ರೋಣನನ್ನು ನೋಡಲು ಅಭಿಮಾನಿಗಳು ತುದಿಗಲಿನಲ್ಲಿ ನಿಂತಿದ್ದಾರೆ. ಈ ನಡುವೆ ನಿರ್ಮಾಪಕ ಜಾಕ್ ಮಂಜು ಆಸ್ಪತ್ರೆ ದಾಖಲಾಗಿರುವುದು ಆಭಿಮಾನಿಗಳ  ಆತಂಕಕ್ಕೆ ಕಾರಣವಾಗಿದೆ. 

ಗಲ್ಲಿ ಗಲ್ಲಿಯಲ್ಲಿ ರಾ ರಾ ರಕ್ಕಮ್ಮ, ಮಕ್ಕಳಲ್ಲಿಯೂ ಹೆಚ್ಚಾಗಿದೆ ಕ್ರೇಜ್...!

ವಿಕ್ರಾಂತ್ ರೋಣ ಸಿನಿಮಾ ಜುಲೈ 28ಕ್ಕೆ ರಿಲೀಸ್ ಆಗುತ್ತಿದೆ. ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ ಹೇಗಿರಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಆದಷ್ಟು ಬೇಗ ಜಾಕ್ ಮಂಜು ಗುಣಮುಖರಾಗಿ ಪಾವಾಸ್ ಆಗಿ ಮತ್ತೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಧಂ' ಬೇಕಲೇ ಎಂದಿದ್ದ ದರ್ಶನ್‌ಗೆ ಟಾಂಗ್ ಕೊಟ್ರಾ ಸುದೀಪ್? ಏನಿದು ಮಾರ್ಕ್ ಡೈಲಾಗ್ ಮರ್ಮ?
ಸಿನಿಮಾ ರಿಲೀಸ್‌ಗೂ ಮುನ್ನವೇ ಜೈಲಲ್ಲಿ ಡೆವಿಲ್ ರೂಪ ತಾಳಿದ ದರ್ಶನ್; ಸಹ ಕೈದಿಗಳಿಗೆ ಕಾಲಿನಿಂದ ಒದ್ದು ದುರಹಂಕಾರ!