777 ಚಾರ್ಲಿ ‌ಸಿನಿಮಾ ನೋಡಿ ತಮ್ಮ ನಾಯಿಯನ್ನು ನೆನಪಿಸಿಕೊಂಡ ಬೊಮ್ಮಾಯಿ

By Suvarna NewsFirst Published Jun 13, 2022, 10:42 PM IST
Highlights

* ಬೆಂಗಳೂರಿನ ಒರಾಯನ್ ಮಾಲ್​ನ ಪಿವಿಆರ್​​ನಲ್ಲಿ '777 ಚಾರ್ಲಿ ವೀಕ್ಷಿಸಿದ ಸಿಎಂ
* ಚಾರ್ಲಿ ‌ಸಿನಿಮಾ ನೋಡಿ ತಮ್ಮ ನಾಯಿಯನ್ನು ನೆನಪಿಸಿಕೊಂಡ ಸಿಎಂ ಬೊಮ್ಮಾಯಿ
* ಸುವರ್ಣ ನ್ಯೂಸ್ ನವರು ಕೊಟ್ಟ ಹೆಣ್ಣು ನಾಯಿಯನ್ನ ನಾನು ಸಾಕುತ್ತಿದ್ದೇನೆ
* ಚಾರ್ಲಿ ವೀಕ್ಷಿಸಿದ ಬಳಿಕ ಚಿತ್ರದ ಬಗ್ಗೆ ಪ್ರತಿತಿಕ್ರಿಯಿಸಿರುವ ಸಿಎಂ
 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು(ಸೋಮವಾರ) ಬೆಂಗಳೂರಿನ ಒರಾಯನ್ ಮಾಲ್​ನ ಪಿವಿಆರ್​​ನಲ್ಲಿ '777 ಚಾರ್ಲಿ' ಚಿತ್ರ ವೀಕ್ಷಿಸಿದರು. ಬಳಿಕ ತಮ್ಮ ನಾಯಿಯನ್ನು ನೆನಪಿಸಿಕೊಂಡಿದ್ದಾರೆ.

ಹೌದು...ಚಾರ್ಲಿ ವೀಕ್ಷಿಸಿದ ಬಳಿಕ ಚಿತ್ರದ ಬಗ್ಗೆ ಪ್ರತಿತಿಕ್ರಿಯಿಸಿರುವ ಸಿಎಂ, ತಮ್ಮ ನಾಯಿಯನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೇ ಸುವರ್ಣ ನ್ಯೂಸ್ ಕೊಟ್ಟ ನಾಯಿ ಬಗ್ಗೆ ಮಾತನಾಡಿದರು.

ನಾನು ಶ್ವಾನಪ್ರಿಯ. ಈ ಸಿನಿಮಾ ನೋಡಿದಾಗ ಸತ್ತ ನನ್ನ ನಾಯಿ ನೆನಪಾಯಿತು. ಈಗ ಸುವರ್ಣ ನ್ಯೂಸ್ ನವರು ಕೊಟ್ಟ ಹೆಣ್ಣು ನಾಯಿಯನ್ನ ನಾನು ಸಾಕುತ್ತಿದ್ದೇನೆ. ನಾನು ಮನೆಗೆ ಬಂದಾಗ ಚಾರ್ಲಿ ರೀತಿಯೇ ದಿಯಾ ನನ್ನನ್ನು ತಬ್ಬಿಕೊಳ್ಳುತ್ತದೆ ಎಂದರು. 

ಸನ್ನಿ ಸಾವಿಗೆ ಕಣ್ಣೀರಿಟ್ಟ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕುಟುಂಬ

 777 ಚಾರ್ಲಿ' ಸಿನಿಮಾ ಮನುಷ್ಯ ಹಾಗೂ ಶ್ವಾನದ ನಡುವಿನ ಕಥೆಯನ್ನು ಒಳಗೊಂಡಿದೆ. ಚಿಕ್ಕ ಮಕ್ಕಳಿಂದ ಹಿಡಿದು, ವಯಸ್ಸಾದವರಿಗೂ ಈ ಸಿನಿಮಾ ಕಣ್ಣೀರು ತರಿಸುತ್ತದೆ. ಸಿಎಂ ಕೂಡ ಇದಕ್ಕೆ ಹೊರತಾಗಿಲ್ಲ. '777 ಚಾರ್ಲಿ ಸಿನಿಮಾ ನೋಡಿದ ನಂತರ ಅವರು ಭಾವುಕರಾಗಿದ್ದಾರೆ.

ಚಾರ್ಲಿ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಸಿನಿಮಾದಲ್ಲಿ ನಾಯಿ ಪಾತ್ರ ಮೆಚ್ಚುವಂಥದ್ದು. ನಟ ರಕ್ಷಿತ್ ಶೆಟ್ಟಿ ಕೂಡ ತುಂಬ ಚೆನ್ನಾಗಿ ನಟಿಸಿದ್ದಾರೆ. ಈ ಸಿನಿಮಾದ ಟ್ರೈಲರ್ ನೋಡಿದ್ದೆ. ರಕ್ಷಿತ್ ಆಹ್ವಾನವೂ ಇತ್ತು. ಅದಕ್ಕಾಗಿ ಈ ಸಿನಿಮಾ ನೋಡಿದೆ ಎಂದರು.

777 ಚಾರ್ಲಿ ಸಿನಿಮಾ ವೀಕ್ಷಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ರಕ್ಷಿತ್ ಶೆಟ್ಟಿ ಸೇರಿ ಹಲವರ ಸಾಥ್!

ನಾನು ಶ್ವಾನ ಪ್ರೀಯ. ಸಿನಿಮಾದ ಟ್ರೈಲರ್ ನೋಡಿ ನನಗೆ ಸಿನಿಮಾ ನೋಡಬೇಕು ಅನ್ನಿಸಿತ್ತು. ನಾಯಿ ಮನುಷ್ಯನನ್ನ ಹೆಚ್ಚು ಪ್ರೀತಿ ಮಾಡೋ ನಾಯಿ. ನಾಯಿ ಮತ್ತು ಮನುಷ್ಯನ ಸಂಬಂಧವನ್ನ ಅತ್ಯಂತ ಸೂಕ್ಷವಾಗಿ ಈ‌ ಸಿನಿಮಾದಲ್ಲಿ ತೋರಿಸಿದ್ದಾರೆ. ರಕ್ಷಿತ್ ನಿರ್ದೇಶಕ ಕಿರಣ್ ಅಧ್ಬುತ ಸಿನಿಮಾ ತೆಗೆದಿದ್ದಾರೆ. ಮಾರ್ಮಿಕವಾಗಿ ಸೂಕ್ಷ್ಮವಾಗಿ ಭಾವನಾತ್ಮಕವಾಗಿ ಚಿತ್ರೀಕರಣ ಮಾಡಿದ್ದಾರೆ. ಈ‌ ಸಿನಿಮಾದಿಂದ ಒಂದು ಮೆಸೇಜ್‌ ಇದೆ.  ಪ್ರಾಣಿಗಳನ್ನ ದೂಷಿಸಬಾರಸು, ಅವುಗಳನ್ನ ಅಡಾಪ್ಟ್ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

.ನಾಯಿ ಜೊತೆ ಪಾತ್ರ ಮಾಡೋದು ಸುಲಭದ ಮಾತಲ್ಲ. ರಕ್ಷಿತ್ ಶೆಟ್ಟಿ ಚನ್ನಾಗಿ ನಟಿಸಿದ್ದಾರೆ. ಈ ಸಿನಿಮಾ ನೋಡಿ ಪ್ರಾಣಿಗಳ ಪ್ರೇಮಿಗಳಾಗಿ ಅಂತ ಕರೆ ಕೊಡ್ತೇನೆ. ಬೀದಿ ನಾಯಿಗಳನ್ನ ಸರಿಯಾದ ರೀತಿ ನೋಡಿಕೊಳ್ಳೊಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಸನ್ನಿ ಸಾವಿಗೆ ಕಣ್ಣೀರಿಟ್ಟಿದ್ದ ಬೊಮ್ಮಾಯಿ
ಯೆಸ್.. ವಯೋಸಹಹವಾಗಿ  ನಾಯಿ ಸನ್ನಿ ಸಾವನ್ನಪ್ಪಿತ್ತು.ತಮ್ಮ  ಕುಟುಂಬದ ಸದಸ್ಯನಂತಿದ್ದ ಮುದ್ದಿನ ನಾಯಿ ಮೃತಪಟ್ಟಿದ್ದಕ್ಕೆ ಬಸವರಾಜ ಬೊಮ್ಮಾಯಿ ಅವರು ಕಣ್ನೀರಿಟ್ಟಿದ್ದರು. ಬಸವರಾಜ ಬೊಮ್ಮಾಯಿ  ಕುಟುಂಬದ ಸದಸ್ಯರು ಸಂಪ್ರದಾಯಬದ್ಧವಾಗಿ ನಾಯಿ ಸನ್ನಿಗೆ ಅಂತಿಮ ವಿದಾಯ ಹೇಳಿದ್ದರು.

click me!