ಕಾಂತಾರ 'ಫಾರೆಸ್ಟ್ ಗಾರ್ಡ್ ರವಿ'ಗೆ ವೆಲ್‌ಕಮ್ ಹೇಳ್ತೀರಾ? ಒಟಿಪಿ ಜೊತೆ ಕನ್ನಡಕ್ಕೆ ಬಂದ್ರು ಮತ್ತೊಬ್ಬರು ಶೆಟ್ರು!

Published : Oct 21, 2024, 10:40 PM IST
ಕಾಂತಾರ 'ಫಾರೆಸ್ಟ್ ಗಾರ್ಡ್ ರವಿ'ಗೆ ವೆಲ್‌ಕಮ್ ಹೇಳ್ತೀರಾ? ಒಟಿಪಿ ಜೊತೆ ಕನ್ನಡಕ್ಕೆ ಬಂದ್ರು ಮತ್ತೊಬ್ಬರು ಶೆಟ್ರು!

ಸಾರಾಂಶ

ಆರು ವರ್ಷಗಳ ಕಾಲ ಸೂಚನ್ ಶೆಟ್ಟಿ ರವಿ ಬಸ್ರೂರು ಗರಡಿಯಲ್ಲಿ ನಿರ್ದೇಶನ ವಿಭಾಗದಲ್ಲಿ ಪಳಗಿಕೊಂಡಿದ್ದಾರೆ. `ಕಡಲ್' ಎಂಬ ಚಿತ್ರದಲ್ಲಿ ಒಂದು ನೆಗೆಟಿವ್ ರೋಲ್ ಮಾಡಿದ್ದರು. ಅದು ಸೂಚನ್ ಪಾಲಿಗೆ ನಟನಾಗಿ ಮೊದಲ ಚಿತ್ರ. ಆ ಪಾತ್ರಕ್ಕೆ ಪ್ರೇಕ್ಷಕರ ಕಡೆಯಿಂದ ಮೆಚ್ಚುಗೆ..

ಸಿನಿಮಾ ರಂಗದಲ್ಲಿ ಸಾಧಿಸಬೇಕೆಂಬ ಕನಸು ಹೊತ್ತ ಜೀವಗಳ ನೋವು, ನಿರಾಸೆಗಳ ಕಥನ ನೋಡುಗರಿಗೆಲ್ಲ ನಾಟಿಕೊಂಡಿದೆ. ಒಂದು ವೀಶಿಷ್ಟ ಕಥೆಯ ಸುಳಿವಿನೊಂದಿಗೆ ಗಮನ ಸೆಳೆದಿರುವ ಈ ಚಿತ್ರದ ಪ್ರಧಾನ ಪಾತ್ರದಲ್ಲಿ ಯುವ ನಟ ಸೂಚನ್ ಶೆಟ್ಟಿ (Suchan Shetty) ನಟಿಸಿದ್ದಾರೆ. ಸ್ಕ್ರೀನ್ ಪ್ಲೇನಲ್ಲಿಯೇ ವೈಶಿಷ್ಟ್ಯ ಹೊಂದಿರೋ ಸದರಿ ಸಿನಿಮಾದ ಆತ್ಮದಂತಿರೋ ಪಾತ್ರಕ್ಕೆ ಸೂಚನ್ ಶೆಟ್ಟಿ ಜೀವ ತುಂಬಿದ್ದಾರೆ. ಅದರ ಒಂದಷ್ಟು ಚಹರೆಗಳು ಈ ಟ್ರೈಲರಿನಲ್ಲಿ ಕಾಣಿಸಿಕೊಂಡಿವೆ. 'ಒಂದು ತಾತ್ಕಾಲಿಕ ಪಯಣ' (ಒಟಿಪಿ) ಚಿತ್ರದ ಟ್ರೈಲರ್ ಈಗ ಒಂದಷ್ಟು ಚರ್ಚೆಗೆ ಗ್ರಾಸವಾಗಿದೆ. 

ಮೂಲತಃ ಕುಂದಾಪುರದವರಾದ ಸೂಚನ್ ಶೆಟ್ಟಿ ಸರಿಸುಮಾರು ಹನ್ನೆರಡು ವರ್ಷಗಳಿಂದ ಚಿತ್ರರಂಗದ ಭಾಗವಾಗಿದ್ದಾರೆ. ಕನಸಿನ ಹಾದಿಯಲ್ಲಿ ಅವುಡುಗಚ್ಚಿ ಮುಂದುವರೆದು ಬಂದಿದ್ದಾರೆ. ಇಂಥಾ ಸುದೀರ್ಘ ಯಾನವೊಂದು `ಒಂದು ತಾತ್ಕಾಲಿಕ ಪಯಣ'ದ ಮೂಲಕ ಸಾರ್ಥಕ್ಯ ಕಾಣುತ್ತದೆಂಬ ತುಂಬು ನಂಬಿಕೆ ಅವರಲ್ಲಿದೆ. ಇದೊಂದು ಆಂಥಾಲಜಿ ಬಗೆಯ ಸಿನಿಮಾ. ಸೂಚನ್ ಶೆಟ್ಟಿ ಅವರ ಸ್ನೇಹಿತರೂ ಆಗಿರುವ ಕಾರ್ತಿಕ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. 

ಕಿಚ್ಚ ಸುದೀಪ್ ಭಾವುಕ ಪತ್ರಕ್ಕೆ ಬಂತು ಬಾಲಿವುಡ್ ನಟ ರಣಬೀರ್ ಕಪೂರ್ ಉತ್ತರ!

ಈ ಚಿತ್ರದ ಲೀಡ್ ಪಾತ್ರಗಳಲ್ಲೊಂದನ್ನು ಆವಾಹಿಸಿಕೊಳ್ಳುವ ಅವಕಾಶವನ್ನು ಸೂಚನ್ ಸವಾಲಾಗಿ ಸ್ವೀಕರಿಸಿ ನಟಿಸಿದ್ದಾರಂತೆ. ಈ ಮೂಲಕ ಒಂದೊಳ್ಳೆ ಅನುಭವ ಪಡೆದುಕೊಂಡಿರುವ ಸೂಚನ್ ಪಾಲಿಗೆ ಒಟಿಪಿ ಮೂಲಕ ಓರ್ವ ನಟನಾಗಿ ಬ್ರೇಕ್ ಸಿಗುವ ನಿರೀಕ್ಷೆಗಳಿವೆ.
ಕುಂದಾಪುರವನ್ನೇ ಕರ್ಮಭೂಮಿಯಾಗಿಸಿಕೊಂಡಿರುವ ರವಿ ಬಸ್ರೂರು ನಿರ್ಮಾಣ ಮಾಡಿರುವ ಚೊಚ್ಚಲ ಚಿತ್ರವಿದು. 

ಆರು ವರ್ಷಗಳ ಕಾಲ ಸೂಚನ್ ಶೆಟ್ಟಿ ರವಿ ಬಸ್ರೂರು ಗರಡಿಯಲ್ಲಿ ನಿರ್ದೇಶನ ವಿಭಾಗದಲ್ಲಿ ಪಳಗಿಕೊಂಡಿದ್ದರು. ಅವರು ನಿರ್ದೇಶನ ಮಾಡಿದ್ದ `ಕಡಲ್' ಎಂಬ ಚಿತ್ರದಲ್ಲಿ ಒಂದು ನೆಗೆಟಿವ್ ರೋಲ್ ಮಾಡಿದ್ದರು. ಅದು ಸೂಚನ್ ಪಾಲಿಗೆ ನಟನಾಗಿ ಮೊದಲ ಚಿತ್ರ. ಆ ಪಾತ್ರಕ್ಕೆ ಪ್ರೇಕ್ಷಕರ ಕಡೆಯಿಂದ ಮೆಚ್ಚುಗೆ ಮೂಡಿಕೊಂಡಿತ್ತು. ಅದಾದ ಬಳಿಕ ನಟನೆ ಮತ್ತು ನಿರ್ದೇಶನವನ್ನು ಸರಿದೂಗಿಸಿಕೊಂಡು ಹೋಗುವ ತೀರ್ಮಾನಕ್ಕೆ ಸೂಚನ್ ಬಂದಿದ್ದರು.

ಹೊಸಬರ ಜೊತೆ ನಿವೇದಿತಾ ಗೌಡ ರೊಮ್ಯಾನ್ಸ್, ರಸಿಕರ ರಾಣಿಯಾಗಲು ಹೊರಟ 'ರೀಲ್ಸ್ ರಾಣಿ'!

ಈ ನಡುವೆ ರಿಷಭ್ ಶೆಟ್ಟಿ ನಿರ್ದೇಶನದ 'ಕಾಂತಾರ' ಚಿತ್ರದಲ್ಲೊಂದು ಪಾತ್ರವೂ ಸೂಚನ್ ಪಾಲಿಗೆ ಒಲಿದು ಬಂದಿತ್ತು. ಫಾರೆಸ್ಟ್ ಗಾರ್ಡ್ ರವಿ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಬದುಕಿಗಾಗಿ ಬೇರೆ ಕೆಲಸ ನೋಡಿಕೊಳ್ಳುವ ಸಂದರ್ಭ ಬಂದಾಗಲೂ ಸಿನಿಮಾ ಸಂಬಂಧಿತ ರಹದಾರಿಗಳನ್ನು ಹುಡುಕಿಕೊಂಡಿದ್ದವರು ಸೂಚನ್. 

ಒಂದು ಸೀರಿಯಲ್ಲಿನಲ್ಲಿಯೂ ನಟಿಸಿದ್ದ ಅವರು, `ಒಂದು ತಾತ್ಕಾಲಿಕ ಪಯಣ'ದಲ್ಲಿ ಮಹತ್ವದ ಪಾತ್ರ ಸಿಕ್ಕ ಖುಷಿಯಲ್ಲಿದ್ದಾರೆ. ಎಲ್ಲರನ್ನೂ ಕಾಡಬಲ್ಲ ಆ ಪಾತ್ರಕ್ಕೆ ಒಂದಷ್ಟು ತಯಾರಿ ನಡೆಸಿಯೇ ಅವರು ಜೀವ ತುಂಬಿದ್ದಾರೆ. ತಮ್ಮ ಇಷ್ಟೂ ವರ್ಷಗಳ ಪಯಣ ಒಟಿಪಿ ಮೂಲಕ ಸಾರ್ಥಕ್ಯ ಕಾಣುತ್ತದೆಂಬ ನಂಬಿಕೆ ಸೂಚನ್ ಅವರಲ್ಲಿದೆ. ಒಟ್ಟಿನಲ್ಲಿ, ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದು, ಭಾರೀ ಹವಾ ಕ್ರಿಯೇಟ್ ಮಾಡಿರುವ ಶೆಟ್ಟರ ಬಳಗಕ್ಕೆ ಇನ್ನೊಬ್ಬರು ಶೆಟ್ರು ಎಂಟ್ರಿ ಕೊಟ್ಟಿದ್ದಾರೆ. ವೆಲ್‌ಕಮ್‌ ಹೇಳ್ತೀರಾ..? 

ಅಕುಲ್ 'ಬಿಗ್ ಬಾಸ್' ನಡೆಸಿಕೊಡ್ಲಿ ಅಂದ್ರು ನೆಟ್ಟಿಗರು; ಪ್ಯಾಟೆ ಮಂದಿ ಕಾಡಿಗ್ ಬಂದ್ರು ವಿಡಿಯೋ ಎಫೆಕ್ಟ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?
Karna Serial: ಸಂಜಯ್‌ ಕುತಂತ್ರಕ್ಕೆ ಬಲಿಯಾದ ನಿತ್ಯಾ: ಈಗ ಕರ್ಣನ ಜೊತೆ ಅಸಲಿ ಮದುವೆ ಆಗ್ಲೇಬೇಕು! ನಿಧಿ ಕಥೆ ಏನು?