
ಪಡ್ಡೆಗಳ ಗುಂಪಿನಲ್ಲಿ 'ರಸಿಕರ ರಾಣಿ' ಎಂಬ ಹೆಸರಿನಿಂದಲೇ ಕರೆಸಿಕೊಳ್ಳುತ್ತಿರುವ ನಿವೇದಿತಾ ಗೌಡ ಅವರು ಸದ್ಯದಲ್ಲೇ 'ವಾಲು ಕಳ್ಳತಾ (ತೆಲುಗು), ಹಾಗೂ 'ಮನಸಾರೆ ನಿನ್ನ (ಕನ್ನಡ)' ಸಿನಿಮಾ ಹಾಡಿನ ಮೂಲಕ ಮಿಂಚಲಿದ್ದಾರೆ. ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ ನಿವೇದಿತಾ ಗೌಡ. ಗೌರಿ ನಾಯ್ದು ಹಾಗು ನಿವೇದಿತಾ ಗೌಡ ಜೋಡಿಯ ಈ ಹಾಡು, ಸದ್ಯದಲ್ಲೇ ಬಿಡುಗಡೆ ಆಗಲಿದ್ದು, ಕಾಯುತ್ತಿರುವ ಕಣ್ಣುಗಳಿಗೆ ಭಾರೀ ಹಬ್ಬದೂಟ ನೀಡಲಿದೆ. ನಿವೀದಿತಾ ಗೌಡ ಅವರನ್ನು ಬಿಗ್ ಬಾಸ್ ಹಾಗೂ ರೀಲ್ಸ್‌ನಲ್ಲಿ ಮಾತ್ರ ಕಣ್ತುಂಬಿಕೊಂಡಿದ್ದ ಸಿನಿಪ್ರೇಕ್ಷಕರು ಇದೀಗ ಸದ್ಯದಲ್ಲೇ ರೊಮ್ಯಾಂಟಿಕ್, ಲವ್ ಹಾಗೂ ಮ್ಯಾಜಿಕ್ ಲುಕ್‌ನಲ್ಲಿ ನೋಡಲಿದ್ದಾರೆ!
ನಿವೇದಿತಾ ಗೌಡ ಅವರು ತಾವು ಕಟ್ಟಿಕೊಂಡಿದ್ದ ಸಂಸಾರ ತ್ಯಜಿಸಿ ಸಿನಿಮಾರಂಗಕ್ಕೆ ಕಾಲಿಟ್ಟಿದ್ದು ಗೊತ್ತೇ ಇದೆ. ಈಗಾಗಲೇ ನಿವೇದಿತಾ ನಟನೆಯ ಹಲವಾರು ಸಿನಿಮಾಗಳು ಶೂಟಿಂಗ್ ಹಂತದಲ್ಲಿವೆ. ಇದೀಗ, ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಹಾಡು ಭರ್ಜರಿ ಸೌಂಡ್‌ನೊಂದಿಗೆ ಬಿಡುಗಡೆ ಆಗಲಿದೆ. ನಟಿ ನಿವೇದಿತಾ ಗೌಡ ಹಾಗೂ ನಟ-ಗಾಯಕ ಚಂದನ್ ಶೆಟ್ಟಿ ನಟನೆಯ 'ಮುದ್ದು ರಾಕ್ಷಸಿ' ಚಿತ್ರ ಕೂಡ ಸಿದ್ಧವಾಗುತ್ತಿದ್ದು, ಸದ್ಯದಲ್ಲೇ ತೆರೆಗೆ ಬರಲಿದೆ ಎನ್ನಲಾಗಿದೆ.
ಡಾ ರಾಜ್‌ಕುಮಾರ್ ಜಗತ್ತಿನಲ್ಲೇ ಶ್ರೇಷ್ಠ ನಟ ಯಾಕೆ, ಅಂಥದ್ದೇನಿದೆ 'ಅಣ್ಣಾವ್ರ' ಸಾಧನೆ?
ನಿವೇದಿತಾ ಗೌಡ ಅವರು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ತಾವು ಪೋಸ್ಟ್ ಮಾಡುವ ರೀಲ್ಸ್ ಮೂಲಕ ಸಖತ್ ಪಪ್ಯುಲಾರಿಟಿ ಗಳಿಸಿದ್ದಾರೆ. ಅವರ ರೀಲ್ಸ್ ನೋಡಲು, ಮನಸ್ಸಿಗೆ ಬಂದಂತೆ ಕಾಮೆಂಟ್ ಮಾಡಲು ಕಾದು ಕುಳಿತುಕೊಂಡಿರುವ ನೆಟ್ಟಿಗರ ವರ್ಗವೊಂದಿದೆ ಎನ್ನಬಹುದು. ಹೀಗಾಗಿ ಅವರಿಗೆ 'ರೀಲ್ಸ್ ರಾಣಿ' ಎಂಬ ಹೆಸರೂ ಕೂಡ ಇದೆ.
ಅದೇನೇ ಇರಲಿ, ಸದ್ಯ ತೆಲುಗು ನಟನ ಜೊತೆ ರೊಮ್ಯಾಂಟಿಕ್ ಹಾಡಿನಲ್ಲಿ ನಟಿಸಿ ಅಭಿಮಾನಿಗಳಿಗೆ ಕಚಗುಳಿ ಕೊಡಲು ಬರಲಿದ್ದಾರೆ ಕನ್ನಡತಿ ನಿವೇದಿತಾ ಗೌಡ! ಒಟ್ಟಿನಲ್ಲಿ, ನಟನೆಯ ಪ್ರೀತಿಗಾಗಿ, ನಟಿಯಾಗಲಿಕ್ಕಾಗಿ ಅನವರತ ಧ್ಯಾನಿಸಿ ಕೆಲಸ ಮಾಡುತ್ತಿರುವ ನಿವೇದಿತಾ ಗೌಡ ಅವರು ಸಣ್ಣದೊಂದು ಹೆಜ್ಜೆಯ ಮೂಲಕ ಸದ್ಯದಲ್ಲೇ ಮಿಂಚು ಹರಿಸಲಿದ್ದಾರೆ.
ಏಷ್ಯಾನೆಟ್ ಸುವರ್ಣಗೆ ರಂಜಿತ್ ಎಕ್ಸ್‌ಕ್ಲೂಸಿವ್ ಮಾತು: ನನಗಾದ ನಷ್ಟ ಯಾರು ಕೊಡ್ತಾರೆ?
ಬಳಿಕ, ಮುದ್ದು ರಾಕ್ಷಸಿ ಹಾಗೂ ತೆಲುಗು-ಕನ್ನಡ ಸಿನಿಮಾ ಮೂಲಕ ತೆರೆಯ ಮೂಲಕ ಭಾರೀ ಮಿಂಚು ಹರಿಸಲು ಸಜ್ಜಾಗುತ್ತಿದ್ದಾರೆ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ. ಮ್ಯಾಟರ್ ಏನೇ ಇರಲಿ, ಯಾರೇನೇ ಬೈಯಲಿ ಹೊಗಳಲಿ, ಯಾವುದಕ್ಕೂ ಜಗ್ಗದೇ ಬಗ್ಗದೇ 'ನನ್ನ ದಾರಿ ನನಗೆ..' ಎಂಬಂತೆ ಸಾಗುತ್ತಿದ್ದಾರೆ ನಿವೇದಿತಾ ಗೌಡ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.