ಸ್ನೇಹಿತೆ ಲವ್‌ ಪ್ರಪೋಸಲ್‌ ಮುಂದಿಡಲು ಹೋಗಿ ಸೋನಲ್‌ ಲವಲ್ಲಿ ಬಿದ್ದ ಕಥೆ ಲೀಕ್; ತರುಣ್‌ ಸುಧೀರ್ ಲಕ್ಕಿ ಎಂದ ನೆಟ್ಟಿಗರು

Published : Mar 04, 2025, 10:01 AM ISTUpdated : Mar 04, 2025, 10:06 AM IST
ಸ್ನೇಹಿತೆ ಲವ್‌ ಪ್ರಪೋಸಲ್‌ ಮುಂದಿಡಲು ಹೋಗಿ ಸೋನಲ್‌ ಲವಲ್ಲಿ ಬಿದ್ದ ಕಥೆ ಲೀಕ್; ತರುಣ್‌ ಸುಧೀರ್ ಲಕ್ಕಿ ಎಂದ ನೆಟ್ಟಿಗರು

ಸಾರಾಂಶ

ನಟಿ ಸೋನಲ್ ಮತ್ತು ನಿರ್ದೇಶಕ ತರುಣ್ ಸುಧೀರ್ ಮದುವೆ ಕುರಿತಾದ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಹಲವು ವಿಷಯಗಳು ಚರ್ಚೆಯಾದವು. ಸೋನಲ್ ಅವರ ಸ್ನೇಹಿತೆಯೊಬ್ಬರಿಗೆ ತರುಣ್ ಮೇಲೆ ಕ್ರಶ್ ಆಗಿತ್ತು. ರಾಬರ್ಟ್ ಸಿನಿಮಾ ಸಮಯದಲ್ಲಿ ಆಕೆ ಸೋನಲ್ ಬಳಿ ತರುಣ್ ಜೊತೆ ಮಾತನಾಡಲು ಹೇಳಿದ್ದಳು. ಆದರೆ, ತರುಣ್ ಅವರೇ ಸೋನಲ್ ಜೊತೆ ಸಂಬಂಧ ಬೆಳೆಸಲು ಮುಂದಾದರು ಎಂದು ಸೋನಲ್ ಹೇಳಿದರು.

ಕನ್ನಡ ಚಿತ್ರರಂಗದ ಅದ್ಬುತ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮದುವೆಯಾಗಿ ವರ್ಷ ಕಳೆದಿಲ್ಲ ಆದರೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಸ್ಟೋರಿಗಳು ಸಿಗುತ್ತಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಪ್ರಜ್ವಲ್ ದೇವರಾಜ್ ಫ್ಯಾಮಿಲಿ ಆಗಮಿಸಿದ್ದರು. ಇದೇ ಸಮಯದಲ್ಲಿ ನಟಿ ಸೋನಲ್‌ ತಮ್ಮ ಸಿನಿಮಾ ಪ್ರಚಾರ ಮಾಡಲು ಆಗಮಿಸಿದ್ದರು. ಪ್ರಜ್ವಲ್‌ ಮತ್ತು ಸೋನಲ್ ಒಂದೇ ಸಿನಿಮಾ ಮಾಡಿದ್ದರೂ ಕೂಡ ಒಟ್ಟಿಗೆ ಭೇಟಿ ಮಾಡಿರಲಿಲ್ಲ. ಹೀಗಾಗಿ ಮಜಾ ಮನೆಯಲ್ಲಿ ತರುಣ್ ಬಗ್ಗೆ ಸಾಕಷ್ಟು ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. 

ಸೋನಲ್ ಮತ್ತು ತರುಣ್ ಸ್ನೇಹಿತರಾಗಿದ್ದು ಮದುವೆಯಾಗಿರುವುದು. ಇದು ಇಂಡಸ್ಟ್ರಿಯ ಹಲವರು ಅರೇಂಜ್ ಮಾಡಿರುವ ಮದುವೆ ಎನ್ನಬಹುದು. ಏಕೆಂದರೆ ಸ್ನೇಹಿತರಾಗಿದ್ದ ಸಮಯದಲ್ಲಿ ಲವ್ ಮಾಡುತ್ತಿದ್ದಾರಾ ಎಂದು ಇಂಡಸ್ಟ್ರಿಯಲ್ಲಿ ಗಾಸಿಪ್ ಹಬ್ಬಿತ್ತು. ಮದುವೆ ಸೆಟ್ ಆದ್ಮೇಲೆ ಲವ್ ಆಗಿದೆ ಅಂತ ತಿಳಿದು ಬಂತು. ಈ ಗ್ಯಾಪ್‌ನಲ್ಲಿ ಸೋನಲ್‌ ಸ್ನೇಹಿತೆಗೆ ತುರಣ್ ಮೇಲ್ ಕ್ರಶ್ ಆಗಿತ್ತಂತೆ. ಈ ಸ್ಟೋರಿಯನ್ನು ಸೃಜನ್ ಲೋಕೇಶ್ ಪ್ರಶ್ನೆ ಮಾಡಿದ್ದಾರೆ. ಆಗ ಸೋನಲ್ ಇಡೀ ಸ್ಟೋರಿ ರಿವೀಲ್ ಮಾಡಿದ್ದಾರೆ. 

ಕೊಡಗಿನ ತೋಟದ ಮನೆಯಲ್ಲಿ ಭೂತಕೋಲ ಆರಾಧನೆ ಮಾಡಿಸಿದ ಜೈ ಜಗದೀಶ್ ಪುತ್ರಿಯರು; ಫೋಟೋ ವೈರಲ್

'ನನ್ನ ಸ್ನೇಹಿತೆರೆ ತರುಣ್ ಸುಧೀರ್ ಮೇಲೆ ಲವ್ ಆಗಿತ್ತು. ತರುಣ್ ಮನೆಯಲ್ಲಿ ಹುಡುಗಿ ಹುಡುಕುತ್ತಿದ್ದರು ಅಂತ ಆಕೆಗೆ ಗೊತ್ತಿತ್ತು...ಹೀಗಾಗಿ ರಾಬರ್ಟ್‌ ಸಿನಿಮಾ ಸಮಯದಿಂದ ನನ್ನ ಹಿಂದೆ ಬಿದ್ದಳು. ಸೋನಲ್ ನೋಡು ನನಗೆ ತರುಣ್‌ನ ಸೆಟ್ ಮಾಡಿಕೊಂಡು ಕ್ಯೂಟ್ ಆಗಿದ್ದಾರೆ ಎನ್ನುತ್ತಿದ್ದಳು. ಆಯ್ತು ಮಾತನಾಡುತ್ತೀನಿ ಎಂದು ಹೇಳಿ ಸುಮ್ಮನಾದೆ ಏಕೆಂದರೆ ಹೇಗ್ ಮಾತನಾಡುವುದು ಏನ್ ಅಂತ ಮಾತನಾಡುವುದು ಹೇಳಿ? ಅದೇ ಸಮಯಕ್ಕೆ ನಿಮ್ಮ ತರುಣ್ ನಡುವೆ ಏನಾದರೂ ನಡೆಯುತ್ತಿದ್ಯಾ ಎಂದು ಪ್ರಶ್ನೆ ಮಾಡುತ್ತಿದ್ದರು. ಎಲ್ಲರೂ ರೇಗಿಸುತ್ತಿರುವಾಗ ನಮ್ಮಿಬ್ಬರ ನಡುವೆ ಏನೂ ಇರಲಿಲ್ಲ. ನಿರ್ದೇಶಕರು ಅನ್ನೋ ಗೌರವಕ್ಕೆ ಒಂದು ಮೆಸೇಜ್ ಮಾಡಿದೆ..ಎಲ್ಲರೂ ಈ ರೀತಿ ಮಾತನಾಡಿಕೊಳ್ಳುತ್ತಿದ್ದಾರೆ ಆದರೆ ನಾನು ಏನೂ ಹೇಳಿಲ್ಲ ನೀವು ನನ್ನ ಬಗ್ಗೆ ತಪ್ಪು ತಿಳಿದುಕೊಳ್ಳಬೇಡಿ ಅಂತ ಹೇಳಿದೆ. ಆ ಸಮಯದಲ್ಲಿ ತರುಣ್ ತಲೆ ಉಪಯೋಗಿಸಿ 'ನೋಡಿ ಯೂನಿವರ್ಸ್‌ ನಮಗೆ ಏನೂ ಹೇಳುವುದಕ್ಕೆ ಪ್ರಯತ್ನ ಪಡುತ್ತಿದೆ' ಎಂದು ಸಂಬಂಧ ಮುಂದುವರೆಸಿದ್ದರು. ಇವತ್ತಿಗೂ ನನ್ನ ಸ್ನೇಹಿತೆ ಬೇಸರ ಮಾಡಿಕೊಂಡು ನಾನು ಜಾನು ಅಂತ ಕರೆಯಬೇಕಿತ್ತು ಆದರೆ ಜೀಜು ಅಂತ ಕರೆಯುವ ಪರಿಸ್ಥಿತಿ ಬಂದಿದೆ ಅಂತಿದ್ದಾಳೆ. 

ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ 'ಸರಿಗಮಪ' ಐಶ್ವರ್ಯ ರಂಗರಾಜನ್; ಫೋಟೋ ವೈರಲ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜೀವನದಲ್ಲಿ ಮರೆಯಲಾರದ ಫೆವರೆಟ್​ ದಿನದ ಗುಟ್ಟು ರಿವೀಲ್​ ಮಾಡಿದ Kichcha Sudeep​: ಯಾರೂ ಊಹಿಸದೇ ಇರುವ ದಿನವಿದು!
ಖ್ಯಾತ ನಟ, ಎಂಪಿ, ಕೋಟಿ ಕೋಟಿ ಇದ್ರೂ, ತಳ್ಳೋ ಗಾಡೀಲಿ ಊಟ ಸವಿದ ಜಗ್ಗೇಶ್!