
ಸದ್ಯ ಎಲ್ಲೆಲ್ಲಿ ನೋಡಿದರೂ ಡಿಕೆ ಶಿವಕುಮಾರ್ (DK Shivakumar) ಅವರು ಕನ್ನಡ ಚಲನಚಿತ್ರರಂಗದ ನಟನಟಿಯರ ಬಗ್ಗೆ 'ನಟ್ಟು-ಬೋಲ್ಟು ಟೈಟ್ ಮಾಡ್ತೀನಿ' ಅಂತ ಹೇಳಿದ್ದೇ ದೊಡ್ಡ ಸುದ್ದಿ. ಈ ಸುದ್ದಿ ಅದೆಷ್ಟು ವೈರಲ್ ಆಗ್ತಿದೆ ಅಂದ್ರೆ, ಕೊನೆಗೂ ಇಷ್ಟೆಲ್ಲಾ ಆಗಿದ್ದು ಸಾಧು ಕೋಕಿಲಾ (Sadhu Kokila) ಅವರಿಂದ ಎಂಬಲ್ಲಿಗೆ ಬಂದು ನಿಂತಿದೆ. ಕಾರಣ, ಅಂದು ಚಲಚಿತ್ರೋತ್ಸವದ ವೇದಿಕೆ ಮೇಲೆ ಡಿಸಿಎಂ ಶಿವಕುಮಾರ್ ಅವರು ನಟ ಸಾಧುಕೋಕಿಲ ಅವರ ತಲೆ ಸವರಿದ್ದಾರೆ.
ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡಿದ್ದೇ ತಡ, ಹಲವರು ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸಾಧುಕೋಕಿಲ ಅವರು ಕಾಂಗ್ರೆಸ್ ಪಕ್ಷಕ್ಕ ನಿಷ್ಠರಾಗಿರಬಹುದು. ಆದರೆ, ಅಷ್ಟು ದೊಡ್ಡ ಸಮಾರಂಭದ ವೇದಿಕೆಯಲ್ಲಿ ಸಾಧು ಕೋಕಿಲಾರ ತಲೆಯನ್ನು ಡಿಕೆ ಶಿವಕುಮಾರ್ ಅವರು ಸವರಿದ್ದು ನೋಡಿದರೆ ಅದು ಒಂಥರಾ ಸಾಧು ಕೋಕಿಲಾರಿಗೆ ಮುಜುಗರ ತರುವಂಥದ್ದು. ಆದರೆ, ಸಾಧು ಕೋಕಿಲ ಅವರು ಅಷ್ಟು ಸಲಿಗೆ ಕೊಟ್ಟಿದ್ದಕ್ಕೇ ಡಿಕೆ ಶಿವಕುಮಾರ್ ಅವರು ಸಿನಿಮಾರಂಗದವರ ನಟ್ಟು-ಬೋಲ್ಟು ಅಂತೆಲ್ಲಾ ಮಾತನ್ನಾಡಲು ಸಾಧ್ಯವಾಯ್ತು' ಎಂಬ ಮಾತು ಕೇಳಿ ಬರುತ್ತಿದೆ.
ಡಿಕೆಶಿ ಮಾತಿನಿಂದ ಸ್ಯಾಂಡಲ್ವುಡ್ನಲ್ಲಿ ಬಿರುಗಾಳಿ: ಇದಕ್ಕೆಲ್ಲ ಕಾರಣ ಸಾಧು ಕೋಕಿಲಾನಾ?
ಅದೆಲ್ಲಾ ಸೋಷಿಯಲ್ ಮೀಡಿಯಾ ಹೇಳಿಕೆಗಳು. ಅದನ್ನು ಕೆಲವರು ಸೀರಿಯಸ್ಸಾಗಿ ತೆಗೆದುಕೊಳ್ಳಬಹುದು ಅಥವಾ ಬಿಡಬಹುದು. ಆ ಬಗ್ಗೆ ಸ್ವತಃ ನಟ ಸಾಧು ಕೋಕಿಲ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಬಗ್ಗೆ ಸಾಧು ಕೋಕಿಲ 'ಡಿಸಿಎಂ ಅವ್ರು ನಟನಟಿಯರಿಗೆ ವಾರ್ನಿಂಗ್ ಏನು ಕೊಟ್ಟಿಲ್ಲ. ಅವ್ರು ಕೂಡ ವಿತರಕರಾಗಿದ್ದವರು. ಸಿನಿಮಾ ಮೇಲಿನ ಪ್ರೀತಿಗೆ ಹಾಗೆ ಹೇಳಿದ್ದಾರೆ. ಅದನ್ನೇ ಕಾಂಟ್ರವರ್ಸಿ ಮಾಡ್ಕೊಂಡ್ ಮಾತಾಡ್ತ ಕೂತ್ರೆ ನಾವೇನು ಮಾಡೋಕೆ ಆಗಲ್ಲ.
ಅಕಾಡಮಿ ಪ್ರೋಟೊಕಾಲ್ ಪ್ರಕಾರ ನಾನು ಯಾರಿಗೆ ಆಹ್ವಾನ ಪತ್ರಿಕೆ ಕೊಡಬೇಕೋ ಕೊಟ್ಟಿದ್ದೇನೆ. ಜೊತೆಗೆ ವೇದಿಕೆ ಮೇಲೆ ಯಾರಿರ್ತಾರೆ ಅವರನ್ನ ಕರ್ದಿರ್ತಿವಿ. ದೊಡ್ಡ ದೊಡ್ಡ ನಟರು ಬಂದಾಗ ವೇದಿಕೆ ಮೇಲೆ ನಾವು ಅವರಿಗೆ ಜಾಗ ಮಾಡಿಕೊಡಬೇಕು. ಕಳೆದ ವರ್ಷ ಯಾವ ರೀತಿ ಆಹ್ವಾನ ಪತ್ರಿಕೆ ತಲುಪಿತ್ತೋ ಅದೇ ರೀತಿ ಈ ವರ್ಷ ಕೂಡ ತಲುಪಿದೆ.
ದರ್ಶನ್ ಲೈಫ್‌ನಲ್ಲಿ ಈಗ ಪವಿತ್ರಾ ಗೌಡಗೆ ಸ್ಥಾನ ಇಲ್ಲ, ವಿಜಯಲಕ್ಷ್ಮಿ, ದಿನಕರ್ ಕೈಯಲ್ಲಿ ಕಂಪ್ಲೀಟ್ ಕೀ..
ಪಾಸ್ ಗಳು ಬೇಕಾದಾಗ ಎಲ್ಲಾ ಸಂಘಸಂಸ್ಥೆಗಳು ಬರ್ತಾವೆ. ಪಾಸ್ ಬೇಕಾದಾಗ ಎಲ್ಲಾ ಗೊತ್ತಿರುತ್ತೆ.. ಆದ್ರೆ ವೇದಿಕೆ ಕಾರ್ಯಕ್ರಮ ಯಾವಾಗ ಅಂತ ಗೊತ್ತಿರಲ್ವಾ? ಇಷ್ಟೆಲ್ಲಾ ಗೊತ್ತಿದ್ರೂ ಸಾಧುಕೊಕಿಲ ಅಹ್ವಾನ ಕೊಡಬೇಕು ಅನ್ನೊದು ಎಷ್ಟು ಸರಿ? ಡಿಸಿಎಂ ಅವ್ರು ಹೇಳಿದ್ರಲ್ಲಿ ತಪ್ಪೇನಿಲ್ಲ. ಎಲ್ಲಾ ಒಂದು ಕಡೆ ಸೇರಬೇಕು ಅನ್ನೋ ದೃಷ್ಟಿಯಿಂದ ಹೇಳಿದ್ದಾರೆ..' ಎಂದಿದ್ದಾರೆ ನಟ ಸಾಧು ಕೋಕಿಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.