New Story Out: 24 ಜೋಡಿಗೆ ಮಾಂಗಲ್ಯ ವಿತರಿಸಿದ ದರ್ಶನ್ ಪತ್ನಿ ವಿಜಯಲಕ್ಷ್ಮೀ, ಏನಿದು..!?

Published : Mar 03, 2025, 07:55 PM IST
New Story Out: 24 ಜೋಡಿಗೆ ಮಾಂಗಲ್ಯ ವಿತರಿಸಿದ ದರ್ಶನ್ ಪತ್ನಿ ವಿಜಯಲಕ್ಷ್ಮೀ, ಏನಿದು..!?

ಸಾರಾಂಶ

ವಿಜಯಲಕ್ಷ್ಮೀ ಅವರು ಸಾಕಷ್ಟು ಬುದ್ಧಿವಂತಿಕೆ ಹಾಗೂ ದಿಟ್ಟ ಹೆಜ್ಜೆ ಇಟ್ಟಿರುವಂತೆ ಕಾಣುತ್ತಿದೆ. ಕಾರಣ, ವಿನಯ್ ಸೇರಿದಂತೆ ದರ್ಶನ್ ಕೆಲವು ಆಪ್ತರನ್ನು ವಿಜಯಲಕ್ಷ್ಮೀ ದೂರ ಇಟ್ಟಿರೋದಕ್ಕೂ ಸಾಕಷ್ಟು ಕಾರಣಗಳು ಇರುತ್ತವೆ. ಎಲ್ಲವನ್ನೂ ಹೇಳುತ್ತಿರಲು..

ದರ್ಶನ್ (Darshan Thoogudeepa) ಪತ್ನಿ ವಿಜಯಲಕ್ಷ್ಮೀ (Vijayalakshmi) ಅವರು ಸದ್ಯ ಸಾಮಾಜಿಕ ಕಳಕಳಿ ಸುದ್ದಿಯ ಮೂಲಕ ಮತ್ತೆ ಫೇಮಸ್ ಆಗಿದ್ದಾರೆ. ಇತ್ತೀಚೆಗೆ ವಿಜಯಲಕ್ಷ್ಮೀ ಅವರು 24 ನವದಂಪತಿಗಳಿಗೆ ಮಾಂಗಲ್ಯ ವಿತರಿಸುವ ಮೂಲಕ ಸಮಾಜ ಸೇವೆಗೆ ಒತ್ತು ನೀಡಿದ್ದಾರೆ. ವಿಜಯಲಕ್ಷ್ಮೀ ಅವರು ಈ ಮೊದಲಿಗಿಂತ ಸಾಕಷ್ಟು ಬದಲಾಗಿದ್ದಾರೆ ಎನ್ನಬಹುದು. ಕಾರಣ, ನಟ ದರ್ಶನ್ ಹುಟ್ಟುಹಬ್ಬವನ್ನು ಈ ಬಾರಿ ತಮ್ಮ ಮನೆಯಲ್ಲೇ ಆಚರಿಸಿಕೊಳ್ಳುವ ಮೂಲಕ ವಿಜಯಲಕ್ಷ್ಮೀಯವರು ಒಂದು ಗಟ್ಟಿಯಾದ ನಿರ್ಧಾರ ಕೈಗೊಂಡಿದ್ದರು. 

ಜೊತೆಗೆ, ಇತ್ತೀಚೆಗಷ್ಟೇ ಕೆಲವು ಆಪ್ತರನ್ನು ನಟ ದರ್ಶನ್ ಅವರಿಂದ ದೂರ ಇಟ್ಟಿದ್ದಾರೆ. ಅದು ಲಾಯರ್ ಹೇಳಿದ್ದರಿಂದ ಎನ್ನಲಾಗಿದೆ. ಅದೇನೇ ಇದ್ದರೂ ಮತ್ತೆ ಮ್ಯಾನೇಜರ್ ಮತ್ತು ಡ್ರೈವರ್ ದರ್ಶನ್ ಜೊತೆಯಾಗುವವರೆಗೂ ಪತ್ನಿ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್ ಅವರೇ ದರ್ಶನ್ ಅವರ ಕೆಲಸಕಾರ್ಯಗಳನ್ನು ನೋಡಿಕೊಳ್ಳುತ್ತಾರಂತೆ. ಅಷ್ಟೇ ಅಲ್ಲ, ನಟ ದರ್ಶನ್ ಅವರನ್ನು ಯಾರಾದ್ರೂ ಭೇಟಿಯಾಗ್ಬೇಕು ಅಂದ್ರೆ, ಈಗ ವಿಜಯಲಕ್ಷ್ಮೀ ಅಥವಾ ದಿನಕರ್ ಅವರಿಂದಲೇ ಅಪಾಯಿಟ್ಮೆಂಟ್ ತೆಗೆದುಕೊಳ್ಳಬೇಕಂತೆ. 

ಅದೇನೇ ಇದ್ದರೂ ಈಗ ವಿಜಯಲಕ್ಷ್ಮೀ ಅವರು ಸಾಕಷ್ಟು ಬುದ್ಧಿವಂತಿಕೆ ಹಾಗೂ ದಿಟ್ಟ ಹೆಜ್ಜೆ ಇಟ್ಟಿರುವಂತೆ ಕಾಣುತ್ತಿದೆ. ಕಾರಣ, ವಿನಯ್ ಸೇರಿದಂತೆ ದರ್ಶನ್ ಕೆಲವು ಆಪ್ತರನ್ನು ವಿಜಯಲಕ್ಷ್ಮೀ ದೂರ ಇಟ್ಟಿರೋದಕ್ಕೂ ಸಾಕಷ್ಟು ಕಾರಣಗಳು ಇರುತ್ತವೆ. ಎಲ್ಲವನ್ನೂ ಹೇಳುತ್ತಿರಲು ಅಸಾಧ್ಯ ಅಲ್ಲವೇ? ಆದರೆ, ಒಂದಂತೂ ಸ್ಪಷ್ಟವಾಗಿದೆ. ಇನ್ಮುಂದೆ ನಟ ದರ್ಶನ್ ಮೊದಲಿನಂತೆ ಅಷ್ಟು ಫ್ರೀಯಾಗಿ ಓಡಾಡಿಕೊಂಡಿರಲು ಸಾಧ್ಯವೇ ಇಲ್ಲ. 

ಕಾರಣ, ನಟ ದರ್ಶನ್ ಅವರ ಕಷ್ಟಕಾಲದಲ್ಲಿ ಜವಾಬ್ದಾರಿ ತೆಗೆದುಕೊಂಡ ಕಾರಣಕ್ಕೆ ವಿಜಯಲಕ್ಷ್ಮೀ ಅವರಿಗೆ ಸಹಜವಾಗಿಯೇ ಈಗ ದರ್ಶನ್ ಮೇಲೆ ಈಗ ಹಕ್ಕು ಚಲಾಯಿಸಲು ಸಾಧ್ಯವಾಗಿದೆ. ಜೊತೆಗೆ, ಜವಾಬ್ದಾರಿ ತೆಗೆದುಕೊಂಡ ಕಾರಣಕ್ಕೆ ದರ್ಶನ್‌ ಕೂಡ ವಿಜಯಲಕ್ಷ್ಮೀ ಅವರಿಗೆ ಋಣಿಯಾಗಿಲೇಬೇಕಿದೆ. ಇವೆಲ್ಲವುಗಳ ಮಧ್ಯೆ ವಿಜಯಲಕ್ಷ್ಮೀ ಅವರು ಕರಿಮಣಿ (ಮಾಂಗಲ್ಯ) ವಿತರಸಿದ ಸುದ್ದಿ ವೈರಲ್ ಆಗ್ತಿದೆ. ಅದೂ ಕೂಡ ಬರೋಬ್ಬರಿ 24 ಜೋಡಿಗೆ ಮಾಂಗಲ್ಯ ವಿತರಿಸುವ ಮೂಲಕ ಅವರೆಲ್ಲರ ಅಭಿಮಾನ ಗಳಿಸಿದ್ದಾರೆ ವಿಜಯಲಕ್ಷ್ಮೀ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿದ್ದುಬಿದ್ದೂ ನಗುವಂತೆ 'ಆಭಾಸ' ಸೃಷ್ಟಿಸಿದ ತೆಲುಗು ಸಿನಿಮಾದಿಂದ ಕನ್ನಡಕ್ಕೆ 'ಡಬ್' ಆಗಿರೋ ಹಾಡು; ಏನ್ ಗುರೂ ಇದೂ..!?
ಕುಟುಂಬವೇ ಹೆಮ್ಮೆಪಡುವಂತೆ ಮಾಡಿದ Kiccha Sudeep ಮಗಳು ಸಾನ್ವಿ! ಇದಪ್ಪಾ..ಸಾಧನೆ ಅಂದ್ರೆ..!