ಸಿನಿ ಇಂಡಸ್ಟ್ರಿ ಶುದ್ಧತೆಗೆ ಸ್ಯಾಂಡಲ್​ವುಡ್​ನಲ್ಲೂ ಲೈಂಗಿಕ ದೌರ್ಜನ್ಯ ಸಮಿತಿ ಬೇಕು: ಶ್ರುತಿ ಹರಿಹರನ್​ ಹೇಳಿದ್ದೇನು?

By Suchethana D  |  First Published Sep 3, 2024, 5:08 PM IST

ಮಾಲಿವುಡ್​ನ ಹೇಮಾ ಸಮಿತಿಯ ರೀತಿಯಲ್ಲಿಯೇ ಸ್ಯಾಂಡಲ್​ವುಡ್​ನಲ್ಲೂ ಲೈಂಗಿಕ ಕಿರುಕುಳ ಸಮಿತಿ ಬರಲಿ ಎಂದಿರುವ ನಟಿ ಶ್ರುತಿ ಹರಿಹರನ್​ ಈ ಕುರಿತು ಮಾತನಾಡಿದ್ದಾರೆ. 
 


2018ರಲ್ಲಿ ನಟಿ ಶ್ರುತಿ ಹರಹರನ್​ ಅವರು, ನಟ ಅರ್ಜುನ್​ ಸರ್ಜಾ ಅವರ ವಿರುದ್ಧ ಮಾಡಿದ್ದ ಲೈಂಗಿಕ ದೌರ್ಜನ್ಯದ ಆರೋಪ ಮೀ-ಟು ಅಭಿಯಾನದ ಮೂಲಕ ಹೇಗೆಲ್ಲಾ ಬಿರುಗಾಳಿಯನ್ನೇ ಸೃಷ್ಟಿಸಿತ್ತು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಶ್ರುತಿ ಅವರು ಈ ವಿಷಯವನ್ನು ಹೇಳಿದ ಬಳಿಕ, ಸಿನಿ ಇಂಡಸ್ಟ್ರಿಯಲ್ಲಿ ಅದರಲ್ಲಿಯೂ ಬಾಲಿವುಡ್​ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದಲ್ಲಿ ನಟಿಯರು ತಮಗಾಗಿರುವ ದೌರ್ಜನ್ಯದ ಕುರಿತು ಹೇಳಿಕೊಂಡರು. ಸಿನಿಮಾ ಮಾತ್ರವಲ್ಲದೇ ವಿಭಿನ್ನ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಮಹಿಳೆಯರೂ ತಮ್ಮ ಕಾರ್ಯಕ್ಷೇತ್ರಗಳಲ್ಲಿ ತಮಗಾಗಿರುವ, ಆಗುತ್ತಿರುವ ಲೈಂಗಿಕ ದೌರ್ಜನ್ಯಗಳ ಕುರಿತು ಮಾತನಾಡಿದರು. ಮೀ ಟೂ ಅಭಿಯಾನ ಕೆಲ ವರ್ಷ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿತು. ಅದಾದ ಬಳಿಕ ಒಬ್ಬೊಬ್ಬರೇ ನಟಿಯರು ತಮಗಾಗಿದ್ದ ಲೈಂಗಿಕ ದೌರ್ಜನ್ಯದ ಕುರಿತು ಬಹಿರಂಗವಾಗಿ ಹೇಳಿಕೊಂಡಿದ್ದರು, ಈಗಲೂ ಹೇಳಿಕೊಳ್ಳುತ್ತಲೇ ಇದ್ದಾರೆ. ಕೆಲವರು ತಮಗೆ ಆಮಿಷ ಒಡ್ಡಿದ, ಲೈಂಗಿಕತೆಗೆ ಬರುವಂತೆ ಪ್ರಚೋದಿಸಿದವರ ಹೆಸರನ್ನು ನೇರಾನೇರ ಹೇಳಿದ್ದರೆ, ಹಲವು ನಟಿಯರು ಯಾರ ಹೆಸರನ್ನೂ ಹೇಳದೇ ಘಟನೆಯ ಕುರಿತು ವಿವರಿಸಿದ್ದಾರೆ. 

ಇದೀಗ ಮಾಲಿವುಡ್​ನ ಹೇಮಾ ಸಮಿತಿ ವರದಿಯಲ್ಲಿ ನಟಿಯರು ಬಿಚ್ಚಿಟ್ಟಿರುವ ಕಾಸ್ಟಿಂಗ್​ ಕೌಚ್​ ಕುರಿತು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಸಮಯದಲ್ಲಿ ನಟಿ ಶ್ರುತಿ ಹರಹರನ್​ ಸ್ಯಾಂಡಲ್​ವುಡ್​ನಲ್ಲಿಯೂ ಇಂಥದ್ದೊಂದು ಸಮಿತಿಯ ಅಗತ್ಯವಿದೆ ಎಂದು ಹೇಳಿದ್ದಾರೆ.  ಎಲ್ಲಾ ಕಡೆಗಳಲ್ಲಿಯೂ ಕಾಸ್ಟಿಂಗ್​ ಕೌಚ್​ ಇದೆ ಎನ್ನುವುದು ನಟಿಯ ಅಭಿಮತ. ನಾನು ಹಿಂದಿರುಗಿ ನೋಡಿದಾಗ ಅಂದು ಮಾಡಿರುವುದು ಕಂಡು ತುಂಬಾ ಖುಷಿಯಾಗುತ್ತಿದೆ. ಅವತ್ತು ನಾನು ಹೇಳಿದ ವಿಷಯದಿಂದಲೇ ಇಂದು ಕನ್ನಡ ಇಂಡಸ್ಟ್ರಿಯಲ್ಲಿ ಬದಲಾವಣೆ ಆಗುತ್ತಿದೆ. ಇದು ಕೇವಲ ಕನ್ನಡ ಚಿತ್ರೋದ್ಯಮ ಮಾತ್ರವಲ್ಲದೇ ಸಿನಿಮಾ ಇಂಡಸ್ಟ್ರಿಯ ಕಥೆಯೂ ಹೌದು. ಇದರ ಬಗ್ಗೆ ಮಾತನಾಡುತ್ತಾ ಹೋದರೆ ಬಹಳ ಗಂಟೆಗಳೇ ಬೇಕಾಗಬಹುದು. ನಾನು ಅಂದು ಲೈಂಗಿಕ ದೌರ್ಜನ್ಯದ ಕುರಿತು ಬಾಯಿ ಬಿಟ್ಟಿರುವ ಕಾರಣದಿಂದ ಇಂದು ಅಗಾಧ ಬದಲಾವಣೆ ಆಗಿದೆ ಎಂದು ನಟಿ ಶ್ರುತಿ ಕೆಲ ದಿನಗಳ ಹಿಂದೆ ಯೂಟ್ಯೂಬ್​ಗೆ ಕೊಟ್ಟಿರುವ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಆದರೆ ಇದೀಗ ಹೇಮಾ ವರದಿಯ ಬಗ್ಗೆ ಮಾತನಾಡುತ್ತಾ, ಇಲ್ಲಿಯೂ ಇಂಥ ಸಮಿತಿ ಅವಶ್ಯಕತೆ ಇದೆ ಎಂದಿದ್ದಾರೆ. 

Tap to resize

Latest Videos

ಮಿಡ್‌ನೈಟ್‌ ಗುಟ್ಟು ಹೇಳಿದ್ದ ಶ್ರುತಿ ಹಾಸನ್‌ ಜೀವನದಲ್ಲಿ 7ನೇ ಎಂಟ್ರಿ ಯಾರು? ನಟಿ ಕೊಟ್ಟ ಉತ್ತರ ಹೀಗಿದೆ...

ಇಂಥ ಘಟನೆಗಳನ್ನು ಮಾತನಾಡುವವರೇ ಕಮ್ಮಿ. ಮೀ ಟೂ ಅಭಿಮಾನದ ಬಳಿಕ ಅನೇಕ ಮಂದಿ ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಹೇಮಾ ವರದಿ ಬಂದ ಮೇಲೆ ಇಂಡಸ್ಟ್ರಿಯ ಕರಾಳ ಮುಖ ಬಯಲಾಗಿದೆ. ಮಾಲಿವುಡ್​ನಲ್ಲಿ ರಚಿಸಿರುವ  ಹೇಮಾ ಸಮಿತಿಯ ವರದಿ​ ಬಗ್ಗೆ  ಗೌರವ ಇದೆ ಎಂದಿರುವ ಶ್ರುತಿ, ಇಂಥವುಗಳನ್ನು ಇಷ್ಟು ದಿನ ನಿರ್ಲಕ್ಷ್ಯದಿಂದ ನೋಡಲಾಗುತ್ತಿತ್ತು. ಆದರೆ ಈ ವರದಿಯ ಬಳಿಕ  ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿರುವುದು ಅತ್ಯಂತ ಸಂತೋಷಕರವಾಗಿದೆ. ಕನ್ನಡದಲ್ಲಿಯೂ ಇಂಥದ್ದೊಂದು ಸಮಿತಿಯ ರಚನೆ ಇದೆ ಎಂದು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.  

ಇಂಥ ಘಟನೆಗಳು ವರದಿಯಾದಾಗ ಇಂಡಸ್ಟ್ರಿಯ ಮೇಲೆ ಗೌರವ ಕಡಿಮೆ ಆಗುತ್ತಿದೆ ಎಂದು ಹಲವರು ಹೇಳುತ್ತಾರೆ. ಇದೀಗ ಮಾಲಿವುಡ್​ ಬಗ್ಗೆಯೂ ಅದೇ ರೀತಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಇದು ಸರಿಯಲ್ಲ. ಸಿನಿಮಾ ರಂಗ ಎನ್ನುವುದು ಕಲೆಗೆ ಸಂಬಂಧಿಸಿರುವ ಕ್ಷೇತ್ರ. ಇಂಥ ಪವಿತ್ರ ಕ್ಷೇತ್ರದಲ್ಲಿ ಇರುವ ಹುಳುಕುಗಳನ್ನು ಹೊರಕ್ಕೆ ತೆಗೆದು ಸ್ವಚ್ಛ ಮಾಡುವ ಟೈಂ ಬಂದಿದೆ. ನಮ್ಮ ಮನೆಯನ್ನು ಸ್ವಚ್ಛ ಆಗಿ ಇಟ್ಟುಕೊಳ್ಳುವಂತೆ ಸಿನಿಮಾ ಕ್ಷೇತ್ರವನ್ನೂ ಶುದ್ಧ ಮಾಡಬೇಕಿದೆ. ಆದ್ದರಿಂದ ಇಂಥ ಸಮಿತಿಯ ಅಗತ್ಯವಿದೆ ಎಂದು ನಟಿ ಹೇಳಿದ್ದಾರೆ.  ನಾನು ಮೀ ಟೂ ಅಭಿಯಾನ ಆರಂಭಿಸಿದ ಬಳಿಕ ಜನರ ದೃಷ್ಟಿಕೋನ ಬದಲಾಗಿದೆ. ಚಿತ್ರೋದ್ಯಮ ಸೇಫ್​ ಅಲ್ಲ ಎನ್ನುವ ಹಣೆ ಪಟ್ಟಿಯಿಂದ ಈಗ ದೂರ ಸರಿಯುತ್ತಿದ್ದೇವೆ. ಯಾವುದಾದರೂ ಹೆಣ್ಣುಮಕ್ಕಳು ಇಂಡಸ್ಟ್ರಿಗೆ ಹೋಗಬೇಕು ಎಂದರೆ ಬೇಡಪ್ಪಾ ಇದು ಕೊಳಕು ಅನ್ನುತ್ತಿದ್ದರು. ಆದರೆ ಈಗ ಬದಲಾವಣೆ ಆಗುತ್ತಿದೆ. ಹೆಣ್ಣುಮಕ್ಕಳಿಗೆ ಇದು ನಾಟ್​ ಸೇಫ್​ ಎನ್ನುವ ಮನಸ್ಥಿತಿ ಹೋಗಿದೆ. ನನಗೆ ಹಿಂದಿರುಗಿ ನೋಡಿದಾಗ ಅಂದು ನಾನು ಮಾಡಿರುವ ಬಗ್ಗೆ ಹೆಮ್ಮೆ ಇದೆ ಎಂದು ಹಿಂದಿನ ಸಂದರ್ಶನದಲ್ಲಿ ನಟಿ ಹೇಳಿಕೊಂಡಿದ್ದರು. 

ನಟಿಯರು ಹೂಂ ಅಂದ್ರೆ ಮಂಚಕ್ಕೂ ಕರೀತಾರೆ ಮತ್ತು... ಸಿನಿ ಇಂಡಸ್ಟ್ರಿಯ ಅನುಭವ ಹೀಗೆ ಹೇಳೋದಾ ನಟಿ ಕಾಮ್ಯಾ?

click me!