ಅಪರೂಪದಲ್ಲಿ ಅಪರೂಪದ ವಿದ್ಯೆಯನ್ನು ಕಲಿತಿರುವ ಸುಂದರಿ ನೀತು. ಷಾಮನಿಸಂ ವಿದ್ಯೆಯಿಂದ ಅನೇಕರಿಗೆ ಸಹಾಯ ಮಾಡುತ್ತಿರುವ ಸುಂದರಿ.....
ಹಾ ಹಾ ಈ ಬೆದುರು ಬೊಂಬೆಯ ಹಾಡನ್ನು ಕೇಳಿದ ತಕ್ಷಣ ಪ್ರತಿಯೊಬ್ಬರಿಗೂ ನೆನಪು ಆಗುವುದು ನಟಿ ನೀತು ಶೆಟ್ಟಿ. ಗಾಳಿಪಟ, ಗಣೇಶ ಮತ್ತೆ ಬಂದ, ಮನಸಾರೆ, ಕೃಷ್ಣ ನೀ ಲೇಟಾಗಿ ಬಾರೋ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಸುಂದರಿ ಇದೀಗ ಟಾರೋಕಾರ್ಟ್ ರೀಡಿಂಗ್, ಹೀಲಿಂಗ್, ಷಾಮನಿಸಂ ಸೇರಿದಂತೆ ಹಲವು ದೊಡ್ಡ ವಿದ್ಯೆಗಳನ್ನು ಕಲಿಯುತ್ತಿದ್ದಾರೆ. ಈ ವಿದ್ಯೆಯಿಂದ ತಮ್ಮ ಜೀವನದಲ್ಲಿ ನಡೆಯುತ್ತಿರುವ ಘಟನೆ ಮಾತ್ರವಲ್ಲ ಇನ್ನಿತ್ತರರಿಗೂ ಸಹಾಯ ಮಾಡುತ್ತಿದ್ದಾರೆ.
'ತಂದೆ ತೀರಿಕೊಂಡು ಒಂದು ವರ್ಷ ಆಮೇಲೆ ನಿದ್ರೆಯಲ್ಲಿ ಏನೋ ಕಪ್ಪು ಕಾಣಿಸುತ್ತಿದೆ ನಾನು ಗಾಬರಿ ಆಗುತ್ತಿದ್ದೀನಿ ಉಸಿರು ಗಟ್ಟುತ್ತಿದೆ. ಮಲಗಿ 10 ನಿಮಿಷಕ್ಕೆ ಈ ರೀತಿ ಆಗುತ್ತಿತ್ತು, ಇದನ್ನು ಮತ್ತೊಬ್ಬರ ಜೊತೆ ಚರ್ಚೆ ಮಾಡಿದರೆ ಭ್ರಮೆ ಎನ್ನುತ್ತಿದ್ದರು. ಈ ಘಟನೆ ಬಗ್ಗೆ ಪ್ರಾಣಿಕ್ ಹೀಲರ್ ಜೊತೆ ಮಾತನಾಡಿದ ಮೇಲೆ ತಿಳಿಯಿತ್ತು ಆ ಕಪ್ಪು ನನ್ನ ತಂದೆ ಅವರು ಸತ್ತ ಮೇಲೆ ಮುಕ್ತಿ ಸಿಕ್ಕಿಲ್ಲ ಎಂದು ತಿಳಿಯಿತ್ತು. ಗುರುವಾಯುರ್ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎಂದರು...ಅಲ್ಲಿ ಪೂಜೆ ಮುಗಿಸಿದ ಮೇಲೆ ಮತ್ತೆ ಕಪ್ಪು ಕಾಣಿಸಿಕೊಳ್ಳಲಿಲ್ಲ. ಯಾವಾಗ ಕಪ್ಪು ಕಾಣಿಸಿಕೊಳ್ಳುವುದು ಸ್ಟಾಪ್ ಆಯ್ತು ಆಗ ನನಗೆ ತುಂಬಾ ಕನಸುಗಳು ಬರಲು ಶುರುವಾಗಿತ್ತು ಅದರಿಂದ ನಿದ್ರೆ ಮಾಡಲು ಶುರುವಾಗುತ್ತಿರಲಿಲ್ಲ' ಎಂದು ಆರ್‌ಜೆ ರಾಜೇಶ್ ಯೂಟ್ಯೂಬ್ ಚಾನೆಲ್‌ನಲ್ಲಿ ನೀತು ಶೆಟ್ಟಿ ಮಾತನಾಡಿದ್ದಾರೆ.
ಮದುವೆ ಆದ್ಮೇಲೆ ಬೋಲ್ಡ್ ಪಾತ್ರ ಮಾಡೋದು ಕಷ್ಟ; ಅವಕಾಶಗಳೇ ಸಿಗುತ್ತಿಲ್ಲ ಎಂದವರಿಗೆ ದೀಪಿಕಾ ದಾಸ್ ತಿರುಗೇಟು!
'ಕನಸುಗಳು ಎಷ್ಟು ಡ್ರಮಾಟಿಕ್ ಆಗಿತ್ತು ಅಂದ್ರೆ ಭಯದಿಂದ ತಾಯಿ ಜೊತೆ ಮಲಗುವುದಕ್ಕೆ ಶುರು ಮಾಡಿದೆ. ಈ ಕನಸುಗಳ ಅರ್ಥ ತಿಳಿದುಕೊಳ್ಳಲು ನಾನು ವಿದ್ಯೆಯನ್ನು ಕಲಿತೆ. ಮೂಡ ನಂಬಿಕೆ ಮತ್ತು ಭಯದ ಮಾತುಗಳಿಗೆ ನಾನು ಬೀಳುವುದಿಲ್ಲ. ಕನಸು ಮತ್ತು ರಿಯಾಲಿಟಿ ನಡುವೆ ನಡೆದ ಘಟನೆಯನ್ನು ನಾನು ಹೇಳುತ್ತಿರುವುದು. ಷಾಮನಿಸಂ ಅನ್ನೋದು ವಿದ್ಯೆ ಇದು ಬರುತ್ತಿರುವುದು ನೆಟಿವ್ ಅಮೆರಿಕನ್‌ಗಳಿಂದ. ಈ ವಿದ್ಯೆಯಲ್ಲಿ ಪ್ರತಿಯೊಂದಕ್ಕೂ ಜೀವನ ಇರುತ್ತೆ...ಒಂದು ಬಿಲ್ಡಿಂಗ್‌ಗೂ ಜೀವನ ಇರುತ್ತದೆ. ಈ ನಿಮಗೆ ಯಾವುದರಿಂದ ಮಾಹಿತಿ ಬೇಕು ನೀವೇ ನೇರವಾಗಿ ಬಂದು ಕೇಳಿದರೆ ನಾವು ಅವರೊಟ್ಟಿಗೆ ಮಾತನಾಡಿ ಮೆಸೇಜ್‌ನ ತಿಳಿಸುತ್ತೀನಿ. ನಮ್ಮನ್ನು ನಾವು ಎಂದೂ ಅನುಮಾನಿಸಬಾರದು ಎಂದು ಈ ವಿದ್ಯೆ ಹೇಳಿಕೊಟ್ಟಿದೆ' ಎಂದು ನೀತು ಶೆಟ್ಟಿ ಹೇಳಿದ್ದಾರೆ.