ಮದುವೆ ಆದ್ಮೇಲೆ ಬೋಲ್ಡ್ ಪಾತ್ರ ಮಾಡೋದು ಕಷ್ಟ; ಅವಕಾಶಗಳೇ ಸಿಗುತ್ತಿಲ್ಲ ಎಂದವರಿಗೆ ದೀಪಿಕಾ ದಾಸ್ ತಿರುಗೇಟು!

By Vaishnavi Chandrashekar  |  First Published Sep 3, 2024, 2:13 PM IST

 ಮದುವೆ ನಂತರ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾದ ಪ್ರಮೋಷನ್‌ನಲ್ಲಿ ದೀಪಿಕಾ ದಾಸ್ ಬ್ಯುಸಿ. ಮದುವೆ ಜೀವನ ಹೇಗಿದೆ?


ಕನ್ನಡ ಕಿರುತೆರೆಯ ನಾಗಿಣಿ ದೀಪಿಕಾ ದಾಸ್ ಮದುವೆ ನಂತರ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. #ಪಾರು ಪಾರ್ವತಿ ಸಿನಿಮಾದ ಟೈಟಲ್ ಲಾಂಚ್ ಅದ್ಧೂರಿಯಾಗಿ ನಡೆದಿದೆ. ಉದ್ಯಮಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ಎಲ್ಲಿಯೂ ಕಾಣಿಸುತ್ತಿರಲಿಲ್ಲ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದರು. ಅದಿಕ್ಕೆ ದೀಪಿಕಾ ದಾಸ್ ಕೊಟ್ಟ ರಿಯಾಕ್ಷನ್ ಹೀಗಿತ್ತು....

'ನನ್ನ ಮದುವೆ ಜೀವನ ತುಂಬಾನೇ ಚೆನ್ನಾಗಿದೆ ಯಾಕೆ ಎಲ್ಲರೂ ಪದೇ ಪದೇ ಪ್ರಶ್ನೆ ಮಾಡುತ್ತಿದ್ದಾರೆ ಗೊತ್ತಿಲ್ಲ. ನಾನು ಸ್ವಲ್ಪ ದಿನ ಕಾಣಿಸಿಕೊಂಡಿಲ್ಲ ಅಂತ ಎಲ್ಲರೂ ಪ್ರಶ್ನಿಸುತ್ತಿದ್ದಾರೆ. ಸೀರಿಯಲ್, ಕೆಲವೊಂದು ಶೊಗಳು ಮತ್ತು ಕಮಿಟ್ ಆಗಿದ್ದ ಸಿನಿಮಾಗಳಲ್ಲಿ ಬ್ಯುಸಿಯಾಗಿ ನಾನು ಫ್ಯಾಮಿಲಿಗೆ ತುಂಬಾನೇ ಕಡಿಮೆ ಸಮಯ ಕೊಡುತ್ತಿದ್ದೆ. ಈಗ ಪರ್ಸನಲ್ ಲೈಫ್‌ನಲ್ಲಿ ಖುಷಿಯಾಗಿದ್ದೀನಿ ಇಷ್ಟೋಂದು ಎಂಜಾಯ್ ಮಾಡುತ್ತೀನಿ ಅಂದುಕೊಂಡಿರಲಿಲ್ಲ' ಎಂದು ದೀಪಿಕಾ ದಾಸ್ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Tap to resize

Latest Videos

ನಟಿ ಶ್ವೇತಾ ಶ್ರೀವಾಸ್ತವ್ ರೊಮ್ಯಾಂಟಿಕ್ ಫೋಟೋ ವೈರಲ್; ಗಂಡನಾ ಬಾಯ್‌ಫ್ರೆಂಡಾ ಅನ್ನೋ ಗೊಂದಲದಲ್ಲಿ ನೆಟ್ಟಿಗರು!

'ಮದುವೆ ಆದ ಮೇಲೆ ಅವಕಾಶಗಳು ಕಡಿಮೆ ಆಗುತ್ತೆ ಅಂತ ನಾನು ಹೇಳುವುದಿಲ್ಲ ಏಕೆಂದರೆ ಇದನ್ನು ನೋಡುವ ರೀತಿ ಬೇರೆ. ಪರ್ಫಾರ್ಮೆನ್ಸ್‌ಗೆ ತೊಂದರೆ ಆಗುತ್ತದೆ ಅಥವಾ ನಾನು ಶೂಟಿಂಗ್ ಬರಲ್ಲ ಮಾಡಲ್ಲ ಅಂತ ಪರಿಸ್ಥಿತಿಯಲ್ಲಿ ಮಾತ್ರ ಸಿನಿಮಾಗಳಲ್ಲಿ ಕರೆಯುವುದಿಲ್ಲ. ನಾನು ಮದುವೆ ಮುನ್ನ ಮದುವೆ ನಂತರ ಅಷ್ಟೇ ಅಲ್ಲ ಮಗು ಆದ ಮೇಲೂ ಇದೇ ರೀತಿ ನಟಿಸುತ್ತೀನಿ. ಮದುವೆ ಆದ ಮೇಲೆ ಯಾರೂ ಕರೆಯುವುದಿಲ್ಲ ಅನ್ನೋದು ನಮ್ಮ ತಲೆಯಲ್ಲಿ ಬಂದು ಬಿಡುತ್ತದೆ ಅನಿಸುತ್ತದೆ. ಒಂದು ಲಿಮಿಟ್ ಅನ್ನೋದು ಇರುತ್ತದೆ...ಮದುವೆಗೂ ಮುನ್ನ ಮಾಡುತ್ತಿದ್ದ ಬೋಲ್ಡ್ ಕ್ಯಾರೆಕ್ಟ್‌ಗಳನ್ನು ನಾವು ಈಗ ಮಾಡಲು ಆಗುವುದಿಲ್ಲ ಆ ತರ ಸಣ್ಣ ಪುಟ್ಟ ಡಿಫರೆನ್ಸ್‌ ಇರುತ್ತದೆ ಬಿಟ್ಟರೆ ಏನೂ ಇರುವುದಿಲ್ಲ. ಮೊದಲು ಮದುವೆ ಆಗಿರುವ ನಟಿಯರನ್ನು ಸಂಪರ್ಕ ಮಾಡಿ ಆಮೇಲೆ ನಿರ್ಧಾರ ಮಾಡಿ' ಎಂದು ದೀಪಿಕಾ ದಾಸ್ ಹೇಳಿದ್ದಾರೆ.

ಹುಟ್ಟಿಸಿದ ಅಪ್ಪ ಕಣ್ಣೆದುರು ಇಲ್ಲ ಆದರೆ ದೇವರ ಕೊಟ್ಟ ಅಪ್ಪ....;ಕಿರುತೆರೆ ನಟಿ ಸಿತಾರಾ ಭಾವುಕ

'ಅಮ್ಮನ ಮದುವೆಯಲ್ಲಿ ಹಬ್ಬಗಳನ್ನು ಆಚರಿಸುತ್ತಿದ್ದೆ ಈಗ ಮದುವೆ ಆದ ಮೇಲೆ ಇಲ್ಲೂ ಮಾಡಬೇಕು ಅಲ್ವಾ ಹೀಗಾಗಿ....ಮೊದಲು ಅಮ್ಮನ ಮನೆ ಆಮೇಲೆ ಗಂಡನ ಮನೆ ಅಂತ ಪ್ಲ್ಯಾನ್ ಮಾಡಿಕೊಂಡು ಮಿಸ್ ಆಗದಂತೆ ನೋಡಿಕೊಳ್ಳುತ್ತೀನಿ' ಎಂದಿದ್ದಾರೆ ದೀಪಿಕಾ. 

click me!