38 ವರ್ಷಗಳ ಬಳಿಕ 'ಆನಂದ್'​ ಚಿತ್ರದ ಟುವ್ವಿ ಟುವ್ವಿ ಹಾಡಿಗೆ ಶಿವಣ್ಣ-ಸುಧಾರಾಣಿ ರೊಮ್ಯಾಂಟಿಕ್​ ಸ್ಟೆಪ್​!

By Suchethana D  |  First Published Sep 28, 2024, 12:15 PM IST

1986ರಲ್ಲಿ ತೆರೆಕಂಡ ಶಿವರಾಜ್​ ಕುಮಾರ್​ ಮತ್ತು ಸುಧಾರಾಣಿ ಅವರ ಮೊದಲ ಚಿತ್ರ ಆನಂದ್​ಗೆ ಈಗ 38 ವರ್ಷಗಳು. ಇದೀಗ ಈ ಚಿತ್ರದ ಹಾಡಿಗೆ ಜೋಡಿ ಮತ್ತೆ ಸ್ಟೆಪ್​ ಹಾಕಿದೆ.
 


1986ರಲ್ಲಿ ಬಿಡುಗಡೆಯಾಗಿದ್ದ ಶಿವರಾಜ್​ ಕುಮಾರ್​ ಮತ್ತು ಸುಧಾರಾಣಿ ಅವರ ಆನಂದ್​ ಚಿತ್ರ ಹಾಗೂ ಅದರಲ್ಲಿನ ಹಾಡುಗಳು ಇಂದಿಗೂ ಸಿನಿ ಪ್ರಿಯರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದೆ. ವಿಶೇಷವೆಂದರೆ ಇಬ್ಬರಿಗೂ ಇದು ಮೊದಲ ಸಿನಿಮಾ. ಅಲ್ಲಿಯವರೆಗೆ ಕೆಲವು ಚಿತ್ರಗಳಲ್ಲಿ ಬಾಲನಟಿಯಾಗಿದ್ದ ಸುಧಾರಾಣಿ ಆನಂದ್​ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟರು. ಆನಂದ್ ಬಳಿಕ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ ಸುಧಾರಾಣಿ ಹಾಗೂ ಶಿವರಾಜ್‌ಕುಮಾರ್ ಅಂದಿನ ಕಾಲದ ಟ್ರೆಡಿಂಗ್ ಅನ್‌ ಸ್ಕ್ರೀನ್ ಜೋಡಿಯಾಗಿ ಮಿಂಚಿದ್ದರು. ಆಗಿನ್ನೂ ಸುಧಾರಾಣಿ ಅವರಿಗೆ 13 ವರ್ಷ ವಯಸ್ಸಾಗಿದ್ದರೆ, ಶಿವರಾಜ್​ ಕುಮಾರ್​ ಅವರಿಗೆ 24 ವರ್ಷ ವಯಸ್ಸಾಗಿತ್ತು. ಸ್ಯಾಂಡಲ್​ವುಡ್​ಗೆ ಈ ಜೋಡಿ ಎಂಟ್ರಿ ಕೊಟ್ಟು ಇದೀಗ, 38 ವರ್ಷಗಳೇ ಕಳೆದಿವೆ. ಆದರೆ ಆನಂದ್​ ಚಿತ್ರ ಮಾತು ಇಂದಿಗೂ ಹಚ್ಚಹಸಿರು.

38 ವರ್ಷಗಳ ಬಳಿಕ ಶಿವರಾಜ್​  ಕುಮಾರ್​ ಸುಧಾರಾಣಿ ಅದೇ ಹಾಡನ್ನು ಜಿ ಕನ್ನಡ ವಾಹಿನಿಯ ಡಾನ್ಸ್​ ಕರ್ನಾಟಕ ಡಾನ್ಸ್​ ವೇದಿಕೆಯ ಮೇಲೆ ರೀಕ್ರಿಯೇಟ್​ ಮಾಡಿದ್ದಾರೆ. ಈ ಚಿತ್ರದ ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ... ಹಕ್ಕಿಯ ಹಾಡು ಇಂದಿಗೂ ಜನಜನಿತವಾಗಿದೆ. ಈ ಹಾಡಿಗೆ, ಡಾನ್ಸ್​ ಕರ್ನಾಟಕ ಡಾನ್ಸ್​ ಸ್ಪರ್ಧಿಗಳಾದ ಗಗನ ಮತ್ತು ಉಜ್ವಲ್​ ಡಾನ್ಸ್​ ಮಾಡಿದ್ದಾರೆ. ಇದಾದ ಬಳಿಕ ಸ್ಪರ್ಧೆಗೆ ಆಗಮಿಸಿದ್ದ ಸುಧಾರಾಣಿ ಜೊತೆ ಈ ಷೋನ ತೀರ್ಪುಗಾರರಲ್ಲಿ ಒಬ್ಬರಾಗಿರುವ ಶಿವರಾಜ್​ ಕುಮಾರ್​ ಸ್ಟೆಪ್​ ಹಾಕಿದ್ದಾರೆ. 38 ವರ್ಷಗಳ ಬಳಿಕವೂ ಅದೇ ಚಾರ್ಮಿಂಗ್​ನಲ್ಲಿ ಜೋಡಿ ನಟಿಸಿದೆ. ಇದರ ಪ್ರೊಮೋ ಅನ್ನು ವಾಹಿನಿ ಬಿಡುಗಡೆ ಮಾಡಿದೆ. ಕೆಲ ಸೆಕೆಂಡುಗಳ ಈ ವಿಡಿಯೋ ಬಿಡುಗಡೆಯಾಗಿದ್ದು, ಜೋಡಿಯ ಸಂಪೂರ್ಣ ನೃತ್ಯ ನಾಳೆ ರಾತ್ರಿ ಟಿ.ವಿಯಲ್ಲಿ ವೀಕ್ಷಿಸಬಹುದಾಗಿದೆ. 

Tap to resize

Latest Videos

undefined

ಸುಧಾರಾಣಿ ಅಣ್ಣ ನಾಗರಹಾವು ಸಾಕಿದ್ರಂತೆ! ತೆಂಗಿನಚಿಪ್ಪಲ್ಲಿ ಹಾಲು ಕುಡೀತಿದ್ದ ಅಚ್ಚರಿ ವಿಷ್ಯ ರಿವೀಲ್​

ಈ ಚಿತ್ರದ ಬಗ್ಗೆ ಕುತೂಹಲದ ವಿಷಯವೂ ಇದೆ. ಅದೇನೆಂದರೆ, ಸುಧಾರಾಣಿ ಅವರನ್ನು ಜಯಶ್ರೀಯಿಂದ ಸುಧಾರಾಣಿಯನ್ನಾಗಿ ಹೆಸರು ಬದಲಿಸಿದವರು ಪಾರ್ವತಮ್ಮನವರು. ಈ ಚಿತ್ರದಲ್ಲಿ ಮೊದಲ ಬಾರಿಗೆ ಸುಧಾರಾಣಿ ಎನ್ನುವ ಹೆಸರಿನಲ್ಲಿ ಜಯಶ್ರೀ ಕಾಣಿಸಿಕೊಂಡರು. ಈ ಕುರಿತು ಹಿಂದಿನ ಸಂದರ್ಶನವೊಂದರಲ್ಲಿ ನಟಿ ಹೇಳಿಕೊಂಡಿದ್ದರು. ನನಗೆ ಇಬ್ಬರು ಅಮ್ಮಂದಿರು. ಪಾರ್ವತಮ್ಮ ಕೂಡ ನನ್ನ ಅಮ್ಮನೇ. ಆದರೆ ಕೊನೆಯವರೆಗೂ ಅವರು ಒಂದು ಸೀಕ್ರೇಟ್​ ಉಳಿಸಿಕೊಂಡು ಬಿಟ್ಟರು. ಇವತ್ತಿಗೂ ಅದೇನು ಎನ್ನುವುದು ನನಗೆ ತಿಳಿಯದೇ ಹೋಯಿತು ಎಂದರು. ಅಷ್ಟಕ್ಕೂ ಆ ಸೀಕ್ರೇಟ್​ ಏನೆಂದರೆ, ಸುಧಾರಾಣಿ ಅವರನ್ನು ಆನಂದ್​ ಚಿತ್ರಕ್ಕೆ ಪರಿಚಯಿಸಿದವರು ಪಾರ್ವತಮ್ಮ. ಆದರೆ ಈ ಚಿತ್ರಕ್ಕೆ ನನ್ನನ್ನು ಯಾಕೆ ಆಯ್ಕೆ ಮಾಡಿದ್ರಿ ಎಂದು ಪದೇ ಪದೇ ಕೇಳುತ್ತಿದ್ದೆ. ಕೊನೆಯವರೆಗೂ ಅದಕ್ಕೆ ಉತ್ತರ ಅವರು ಹೇಳಲೇ ಇಲ್ಲ. ಯೋ ಹೋಗೆ ಸುಮ್ನೆ, ಇವಳೊಬ್ಬಳು. ಪ್ರತಿ ಸಲವೂ ಅದನ್ನೇ ಕೇಳ್ತಾಳೆ ಅಂತನೇ ಯಾವಾಗ್ಲೂ ಬಯ್ಯೋರು ಎಂದಿದ್ದಾರೆ. ಆದ್ದರಿಂದ ಈ ಗುಟ್ಟು ಗುಟ್ಟಾಗಿಯೇ ಉಳಿಯಿತು ಎಂದಿದ್ದರು ಸುಧಾರಾಣಿ. 
 
ಅಷ್ಟಕ್ಕೂ ಆನಂದ್​ ಚಿತ್ರಕ್ಕೆ ಮೊದಲು ಆಯ್ಕೆಯಾಗಿದ್ದು, ಎಲ್ಲರನ್ನೂ ಈಗ ಅಗಲಿರುವ ನಟಿ ಅಪರ್ಣಾ. ಆಗಷ್ಟೇ 'ಮಸಣದ ಹೂವು' ಚಿತ್ರದಲ್ಲಿ ನಟಿಸಿ ಜನಪ್ರಿಯರಾಗಿದ್ದ ಅಪರ್ಣಾ  ಅವರನ್ನು ಚಿ ಉದಯಶಂಕರ್ ಅವರು ಆನಂದ್ ಚಿತ್ರಕ್ಕೆ ಆಯ್ಕೆ ಮಾಡಿದ್ದರಂತೆ. ಅಂದಿನ ವರ್ತಮಾನ ಪತ್ರಿಕೆಗಳಲ್ಲಿ ಕೂಡ ಡಾ. ರಾಜ್‌ಕುಮಾರ್ ಮಗ ಶಿವರಾಜ್‌ಕುಮಾರ್ ಅವರಿಗೆ ಜೋಡಿಯಾಗಿ ನಟಿ ಅಪರ್ಣಾ ಆಯ್ಕೆ ಆಗಿದ್ದಾರೆ ಎಂದು ಸುದ್ದಿಯೂ ಆಗಿತ್ತು. ಆದರೆ, ಹೊಸ ನಟರಾಗಿ ಎಂಟ್ರಿ ಕೊಡಬೇಕಿದ್ದ ಶಿವರಾಜ್‌ಕುಮಾರ್ ಅವರಿಗೆ ನಾಯಕಿಯೂ ಹೊಸಬರೇ ಆಗಿರಲಿ ಎಂದು ಬಳಿಕ ಸುಧಾರಾಣಿ ಅವರನ್ನು ಆಯ್ಕೆ ಮಾಡಲಾಗಿತ್ತು. ಈ ಚಿತ್ರದ ಮೂಲಕ ಸುಧಾರಾಣಿ ಅವರಿಗೆ  ನಾಯಕಿ ಪಟ್ಟ ಸಿಕ್ಕಿತ್ತು.  
 

ಪಾರ್ವತಮ್ಮನವ್ರು ಹಾಗೆ ಯಾಕೆ ಮಾಡಿದ್ರಂತ ಕೊನೆಗೂ ಗೊತ್ತಾಗ್ಲೇ ಇಲ್ಲ! ಸುಧಾರಾಣಿ ಹೇಳಿದ್ದೇನು?

click me!