ಪಿಳಿ ಪಿಳಿ ಕಣ್ಣು ಬಿಡ್ತಾ ಮುದ್ದಾಗಿದೆ ಪರಿ, ಮಗು ಮುಖ ತೋರಿಸಿದ ಕೃಷ್ಣ – ಮಿಲನಾ ಜೋಡಿಗೆ ಬಹುಪರಾಕ್ ಎಂದ ನೆಟ್ಟಿಗರು

By Roopa Hegde  |  First Published Sep 27, 2024, 9:52 PM IST

ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಮಗು ನೋಡೋಕೆ ಎರಡು ಕಣ್ಣು ಸಾಲದು. ಕ್ಯೂಟ್ ಆಗಿರುವ ಮಗುವಿನ ಮುಖ ತೋರಿಸಿ, ಅಭಿಮಾನಿಗಳ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ ಈ ಜೋಡಿ. ಇನ್ಸ್ಟಾಗ್ರಾಮ್ ನಲ್ಲಿ ಪರಿ ವಿಡಿಯೋ ವೈರಲ್ ಆಗಿದೆ. ಅವಳ ಜೊತೆ ಮಿಲನಾ ನಾಗರಾಜ್‌ ಮುದ್ದು ರೋಮಿಯೋ ಬಾಂಡಿಂಗ್‌ ಮತ್ತಷ್ಟು ಅದ್ಭುತವಾಗಿದೆ. 
 


ಸ್ಯಾಂಡಲ್ವುಡ್ ಸೂಪರ್ ಜೋಡಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ (Sandalwood Super Couple Darling Krishna and Milana Nagaraj) ಮನೆಗೆ ಮುದ್ದಾದ ಹೆಣ್ಣು ಮಗುವಿನ ಆಗಮನವಾಗಿದೆ. ಸೆಪ್ಟೆಂಬರ್ 5ರಂದು ಮಗುವಿಗೆ ಜನ್ಮ ನೀಡಿರುವ ಮಿಲನಾ ನಾಗರಾಜ್ ತಾಯ್ತನವನ್ನು ಆನಂದಿಸುತ್ತಿದ್ದಾರೆ. ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ, ಹೆಣ್ಣು ಮಗು ಜನಿಸಿರುವ ಖುಷಿ ಸುದ್ದಿಯನ್ನು ಸೋಶಿಯಲ್ ಮೀಡಿಯಾ (Social Media) ದಲ್ಲಿ ಹಂಚಿಕೊಂಡಿದ್ದರು. ಈಗ ಇನ್ಸ್ಟಾಗ್ರಾಮ್ ನಲ್ಲಿ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳ ಸಂತೋಷಕ್ಕೆ ಪಾರವಿಲ್ಲದಂತಾಗಿದೆ. ಯಾಕೆಂದ್ರೆ ಈ ವಿಡಿಯೋದಲ್ಲಿ ಡಾರ್ಲಿಂಗ್ ಕೃಷ್ಣ ತಮ್ಮ ಮುದ್ದಾದ ಮಗಳ ಮುಖ ತೋರಿಸಿದ್ದಾರೆ.

ಸೆಲೆಬ್ರಿಟಿಗಳು ನವಜಾತ ಶಿಶುವಿನ ಮುಖವನ್ನು ಅಭಿಮಾನಿಗಳಿಗೆ ತೋರಿಸೋದು ಬಹಳ ಅಪರೂಪ. ಕ್ಯಾಮರಾ ಕಣ್ಣಿಗೆ ಮಕ್ಕಳು ಬೀಳದಂತೆ ನೋಡಿಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಆದ್ರೆ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಇದ್ರಲ್ಲೂ ಸರಳತೆ ಮರೆದಿದ್ದಾರೆ. ಸಾಮಾನ್ಯರಂತೆ ಮಗುವಿನ ಮುಖವನ್ನು ಅಭಿಮಾನಿಗಳಿಗೆ ತೋರಿಸಿ, ಅವರ ಖುಷಿಗೆ ಕಾರಣವಾಗಿದ್ದಾರೆ.

Tap to resize

Latest Videos

undefined

ಬಿಡುವಿಲ್ಲದ ಓಡಾಟ: ಐಫಾ ಸಮಾರಂಭಕ್ಕಾಗಿ ಮಗಳೊಂದಿಗೆ ಅಬುಧಾಬಿಗೆ ಹಾರಿದ ಐಶ್‌

ಇನ್ಸ್ಟಾದಲ್ಲಿ ವಿಡಿಯೋ ಹಾಕಿ, ನಮ್ಮ ಪುಟ್ಟ ಪ್ರಪಂಚಕ್ಕೆ ಸ್ವಾಗತ ಪರಿ (pari) ಎಂದು ಡಾರ್ಲಿಂಗ್ ಕೃಷ್ಣ ಶೀರ್ಷಿಕೆ ಹಾಕಿದ್ದಾರೆ. ಪರಿ ವೆಲ್ ಕಂ ಮಾಡುವ ಮುನ್ನ ಮನೆಯನ್ನು ಬಲೂನ್ ಹಾಗೂ ಹೂವಿನಿಂದ ಸಿಂಗರಿಸಿರೋದನ್ನು ವಿಡಿಯೋದಲ್ಲಿ ನೋಡ್ಬಹುದು. ಅವರ ಮುದ್ದಿನ ನಾಯಿ ರೋಮಿಯೋ, ಮೊದಲು ಮಗುವನ್ನು ಸ್ವಾಗತಿಸುತ್ತದೆ. ಮನೆ ಬಾಗಿಲನ್ನು ತೆಗೆಯುವ ರೋಮಿಯೋ, ಮಿಲನಾ ಅವರನ್ನು ಮಿಸ್ ಮಾಡಿಕೊಂಡಂತೆ ಕಾಣ್ತಿದೆ. ನಂತ್ರ ಮಗುವಿಗೆ ದೃಷ್ಟಿ ತೆಗೆದು ಒಳಗೆ ಬರ್ತಾರೆ ದಂಪತಿ. ಅಲ್ಲಿಯೇ ಮುದ್ದಾದ ಮಗುವಿನ ಮುಖ ನೋಡಲು ಫ್ಯಾನ್ಸ್ ಗೆ ಅವಕಾಶ ಸಿಕ್ಕಿದೆ. ಆದ್ರೆ ವಿಡಿಯೋ ಮುಂದಿನ ಭಾಗದಲ್ಲಿ ಮಿಲನಾ ನಾಗರಾಜ್ ಮುದ್ದಾದ ಪರಿಯ ಮುಖವನ್ನು ಫ್ಯಾನ್ಸ್ ಸ್ಪಷ್ಟವಾಗಿ ನೋಡಬಹುದು. ಮನೆಯವರಿಗೆಲ್ಲ ಮಗುವನ್ನು ತೋರಿಸಿ ಡಾರ್ಲಿಂಗ್ ಕೃಷ್ಣ ಸಂಭ್ರಮಿಸುತ್ತಾರೆ. ಮಗುವನ್ನು ಎತ್ತಿಕೊಂಡಿರುವ ಕೃಷ್ಣ ಮುಖದಲ್ಲಿ ಸಂತೋಷ ಸ್ಪಷ್ಟವಾಗಿ ಕಾಣ್ತಿದೆ. ಕಣ್ಣನ್ನು ಪಿಳಿ ಪಿಳಿ ಮಾಡ್ತಾ, ಆಕಳಿಕೆ ತೆಗೆಯುತ್ತಿರುವ ನವಜಾತ ಶಿಶು ನೋಡಿದ್ರೆ ಯಾರಿಗಾದ್ರೂ ಎತ್ತಿ ಮುದ್ದಾಡಬೇಕು ಎನ್ನಿಸದೆ ಇರದು. 

ಮಗುವಿನ ಜೊತೆ ಆಟವಾಡುವ ದಂಪತಿ, ತಮ್ಮ ನಾಯಿಯನ್ನು ಮರೆಯೋದಿಲ್ಲ. ಮಗುವಿನ ಜೊತೆ ಅದಕ್ಕೂ ಪ್ರೀತಿ ತೋರಿಸುತ್ತಾರೆ. ಪರಿಯನ್ನು ಪರಿಚಯ ಮಾಡ್ಕೊಳ್ಳುವ ರೋಮಿಯೋ ಪ್ರೀತಿಯನ್ನು ಪದಗಳಲ್ಲಿ ವರ್ಣಿಸೋದು ಕಷ್ಟ. ಮೂಕ ಪ್ರಾಣಿ ರೋಮಿಯೋ, ಮಗುವನ್ನು ವೆಲ್ ಕಂ ಮಾಡಲು ತುಂಬಾ ಉತ್ಸುಕನಾಗಿದ್ದು, ತುಂಬಾ ಸಂತೋಷವಾಗಿರೋದನ್ನು ಆತ ಅತ್ತಿಂದಿತ್ತ ಓಡಾಡೋದು ನೋಡಿದ್ರೆ ತಿಳಿಯುತ್ತದೆ. ಮಿಲನಾ ಹಾಗೂ ಡಾರ್ಲಿಂಗ್ ಕೃಷ್ಣ, ಕೇಕ್ ಕತ್ತರಿಸಿ ಪರಿಯನ್ನು ಸ್ವಾಗತಿಸಿದ ವಿಡಿಯೋ ಸಿಂಪಲ್ಲಾಗಿದ್ರೂ ಸೂಪರ್ ಆಗಿದೆ. ಸ್ಯಾಂಡಲ್ವುಡ್ ನ ಮುಂಬರುವ ಜೋಡಿಗೆ ಇವರು ಮಾದರಿಯಾಗಲಿದ್ದಾರೆ.

ಗಂಗೆಯಲ್ಲಿ ಮಿಂದು ವಾರಾಣಾಸಿಯಲ್ಲಿ ಹುಟ್ಟುಹಬ್ಬ ಆಚರಿಸಿದ ಹಾಲಿವುಡ್ ನಟ!

ಇನ್ಸ್ಟಾಗ್ರಾಮ್ ನಲ್ಲಿ ಡಾರ್ಲಿಂಗ್ ಕೃಷ್ಣ ಈ ವಿಡಿಯೋ ಪೋಸ್ಟ್ ಮಾಡ್ತಿದ್ದಂತೆ ಒಂದುವರೆ ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ. ಯಾವುದೇ ಡ್ರಾಮಾ ಇಲ್ಲದೆ ಮಗುವಿನ ಮುಖವನ್ನು ತೋರಿಸಿದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ , ಮಾದರಿ ಜೋಡಿ ಎಂದು ಅಭಿಮಾನಿಗಳು ಹೇಳಿದ್ದಾರೆ. ಅಪ್ಪನ ಮುಖದಲ್ಲಿ ಸಂತಸ ಮನೆ ಮಾಡಿದೆ. ಪರಿ ಕ್ಯೂಟ್ ಆಗಿದ್ದು,ರೋಮಿಯೋ ಪ್ರೀತಿ ಅಪಾರ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ಪದೇ ಪದೇ ನೋಡ್ಬೇಕೆನ್ನಿಸುವ ಈ ವಿಡಿಯೋದಲ್ಲಿ ಪರಿ ಜೊತೆ ರೋಮಿಯೋ ಕೂಡ ಫ್ಯಾನ್ಸ್ ಗಮನ ಸೆಳೆದಿದ್ದು ವಿಶೇಷ.  
 

click me!