
ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೀಗ ಚಿತ್ರತಂಡಕ್ಕೆ ತೆಲುಗಿನ ಖ್ಯಾತ ನಟ ತನಿಕೆಳ್ಳ ಭರಣಿ ಸೇರಿಕೊಂಡಿರುವ ಸುದ್ದಿ ಬಂದಿದೆ. ತಮಿಳು, ತೆಲುಗು ಚಿತ್ರರಂಗದಲ್ಲಿ ಬಹಳ ದೊಡ್ಡ ಹೆಸರಾಗಿರುವ ತನಿಕೆಳ್ಳ ಭರಣಿಯವರು ಟಾಕ್ಸಿಕ್ ಸೆಟ್‌ನಲ್ಲಿ ಯಶ್ ಜೊತೆಗೆ ಕಾಣಿಸಿಕೊಂಡಿದ್ದಾರೆ. ಭರಣಿ ಅವರು ಇತ್ತೀಚೆಗೆ ಯೋಗರಾಜ್ ಭಟ್ ನಿರ್ದೇಶನದ ‘ಕರಟಕ ದಮನಕ’ ಸಿನಿಮಾದಲ್ಲಿ ನಟಿಸಿದ್ದರು. ಗೀತು ಮೋಹನ್‌ದಾಸ್ ನಿರ್ದೇಶನದ, ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಸಿನಿಮಾದಲ್ಲಿ ಭಾರತ ಚಿತ್ರರಂಗದ ದೊಡ್ಡ ದೊಡ್ಡ ಕಲಾವಿದರು ನಟಿಸುತ್ತಿದ್ದಾರೆ.
ಟಾಕ್ಸಿಕ್ ಸ್ಕ್ರಿಪ್ಟೇ ಸ್ಫೂರ್ತಿ: ಅನಂತ್ ಅಂಬಾನಿ ವಿವಾಹದ ವೇಳೆ ಸಖತ್ ಟ್ರೆಂಡಿಂಗ್ ಆದ ಯಶ್ ಹೊಸ ಹೇರ್‌ಸ್ಟೈಲ್ ‘ಟಾಕ್ಸಿಕ್’ ಸಿನಿಮಾಗಾಗಿಯೇ ಮಾಡಿರುವ ಕೇಶವಿನ್ಯಾಸ ಎಂದು ಹೇರ್ ಸ್ಟೈಲಿಸ್ಟ್ ಅಲೆಕ್ಸ್ ವಿಜಯಕಾಂತ್ ಹೇಳಿದ್ದಾರೆ. ‘ಈ ಸ್ಟೈಲ್‌ಗೆ ಯಶ್ ಹೇಳಿರುವ ಟಾಕ್ಸಿಕ್ ಸಿನಿಮಾ ಸ್ಕ್ರಿಪ್ಟೇ ಸ್ಪೂರ್ತಿ’ ಎಂದೂ ತಿಳಿಸಿದ್ದಾರೆ. ‘ನನಗೆ ಟಾಕ್ಸಿಕ್ ಕಥೆ ವಿವರಿಸಿ ಅದಕ್ಕೆ ತಕ್ಕಂಥಾ ಸ್ಟೈಲ್ ಮಾಡಲು ಹೇಳಿದಾಗ ಇದಕ್ಕೆ ಅವರ ಈ ಹಿಂದಿನ ಲಾಂಗ್‌ಹೇರ್‌ಗಿಂತಲೂ ಶಾರ್ಟ್‌ಹೇರ್ ಕಟ್ ಚಂದ ಅಂತನಿಸಿತು. ಪೊಂಪಡೋರ್ ಹೇರ್‌ಸ್ಟೈಲ್ ಆ ಪಾತ್ರಕ್ಕೆ ಸೊಗಸಾಗಿ ಹೊಂದುತ್ತೆ ಅನಿಸಿ ಆ ಹೇರ್‌ಸ್ಟೈಲ್‌ನಲ್ಲೇ ಯಶ್ ಅವರನ್ನು ರೆಡಿ ಮಾಡಿದೆ. ಅವರು ಬಹಳ ಖುಷಿಯಲ್ಲಿ, ಅಲೆಕ್ಸ್ ಯೂ ಡಿಡ್ ಇಟ್ ಎಂದು ಹಗ್ ಮಾಡಿದರು’ ಎಂದು ಹೇಳಿದ್ದಾರೆ.
ತಾರೆಗಳು ನಾಪತ್ತೆ: ಹೊಸಬರೇ ಚಿತ್ರರಂಗದ ಪಾಲಿನ ಅನ್ನದಾತರು.. ಇಲ್ಲಿದೆ ಕತೆಯೇ ಹೀರೋ ಆಗಿದ್ದು!
ಚಿತ್ರದಲ್ಲಿ ಯಶ್ ಡಾನ್: ಬಹು ನಿರೀಕ್ಷೆಯ ‘ಟಾಕ್ಸಿಕ್’ ಚಿತ್ರದಲ್ಲಿ ನಟ ಯಶ್ ಸ್ಟೈಲಿಷ್ ಡಾನ್ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ. ಗೋವಾ ಹಿನ್ನೆಲೆಯಲ್ಲಿ ಡ್ರಗ್ ಮಾಫಿಯಾ ಸುತ್ತ ಸಾಗುವ ಕತೆಯುಳ್ಳ ಈ ಚಿತ್ರಕ್ಕೆ ಈಗಾಗಲೇ ಶೂಟಿಂಗ್ ಶುರುವಾಗಿದ್ದು, ಬೆಂಗಳೂರು, ಗೋವಾ ನಂತರ 150 ದಿನಗಳ ಕಾಲ ಲಂಡನ್‌ನಲ್ಲಿ ಚಿತ್ರೀಕರಣ ಮಾಡುವ ಪ್ಲಾನ್ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಯಶ್ ಅವರ ಡಾನ್ ಪಾತ್ರದ ಬಹುತೇಕ ದೃಶ್ಯಗಳ ಚಿತ್ರೀಕರಣ ಲಂಡನ್‌ನಲ್ಲಿ ನಡೆಯಲಿದೆಯಂತೆ. ಶ್ರೀಲಂಕಾದಲ್ಲೂ ಕೆಲವು ದಿನಗಳ ಶೂಟಿಂಗ್ ನಡೆಯಲಿದೆ ಎನ್ನುತ್ತವೆ ಮೂಲಗಳು. ಗೀತು ಮೋಹನ್ ದಾಸ್ ನಿರ್ದೇಶಿಸಿ, ಕೆವಿಎನ್ ಪ್ರೊಡಕ್ಷನ್ ನಿರ್ಮಿಸುತ್ತಿರುವ ಈ ಚಿತ್ರ 60, 70ರ ದಶಕದ ಗೋವಾದ ಡ್ರಗ್ಸ್ ಮಾಫಿಯಾ ಕತೆ ಹೊಂದಿದೆ ಎನ್ನಲಾಗಿದೆ.
ಕನ್ನಡ ಚಿತ್ರರಂಗ ಬೆಳೆಸಲು ನಾನು ಸಿದ್ಧ: ಕನ್ನಡ ಚಿತ್ರರಂಗದ ಬೆಳವಣಿಗೆಗೆ ನಾನು ಸಿದ್ಧನಿದ್ದೇನೆ. ಆದರೆ ಅದು ನನ್ನೊಬ್ಬನಿಂದ ಮಾತ್ರ ಆಗುವ ಕೆಲಸವಲ್ಲ. ನನ್ನ ಓಟಕ್ಕೆ ಸರಿಯಾಗಿ ಉಳಿದವರೂ ಬಂದರೆ ನಾವು ಜೊತೆಯಾಗಿ ಇಂಡಸ್ಟ್ರಿಯನ್ನು ಮುನ್ನಡೆಸಬಹುದು. ಬದಲಾಗಿ ಎಲ್ಲರನ್ನೂ ಹೆಗಲ ಮೇಲೆ ಹೊತ್ತುಕೊಂಡು ಹೋಗಬೇಕು ಅಂದರೆ ಕಷ್ಟ. ರಾಷ್ಟ್ರಮಟ್ಟದಲ್ಲಿ ಕನ್ನಡ ಚಿತ್ರರಂಗವನ್ನು ಹಿಂದೆ ಹೇಗೆ ನೋಡುತ್ತಿದ್ದರು, ಈಗ ಹೇಗೆ ನೋಡುತ್ತಿದ್ದಾರೆ ಅನ್ನುವುದನ್ನೂ ಗಮನಿಸಬೇಕಿದೆ’ ಎಂದೂ ನಟ ಯಶ್ ಹೇಳಿದ್ದಾರೆ.
ರಿಷಬ್ ಶೆಟ್ಟಿ ನನ್ನ ತಮ್ಮ ಎಂದ ಕಿಚ್ಚ ಸುದೀಪ್: ಇವರಿಬ್ಬರದ್ದು ಸ್ನೇಹ ಮಾತ್ರವಲ್ಲ ಅಣ್ತಮ್ಮಂದಿರ ಸಂಬಂಧ!
ಜಿಮ್ ತರಬೇತುದಾರ ಪಾನಿಪುರಿ ಕಿಟ್ಟಿ ಅವರ ‘ಕಿಟ್ಟೀಸ್ ಮಸಲ್ ಪ್ಲಾನೆಟ್’ ಜಿಮ್ ಅನ್ನು ಉದ್ಘಾಟಿಸಿ ಯಶ್ ಮಾತನಾಡಿದರು. ಇದೇ ವೇಳೆ ‘ನನಗೆ ಬೇರೆ ಬೇರೆ ಸಿನಿಮಾಗಳಿಂದ ಆಫರ್‌ಗಳು ಬರುತ್ತಿರುವುದು ನಿಜ. ಅದರರ್ಥ ಸಿನಿಮಾ ಒಪ್ಪಿಕೊಂಡಿದ್ದೇನೆ ಅಂತಲ್ಲ. ಒಂದು ವೇಳೆ ನಾನು ಯಾವುದಾದರೂ ಸಿನಿಮಾಕ್ಕೆ ಸೈನ್ ಮಾಡಿದರೆ ಖುದ್ದಾಗಿ ನಾನೇ ಹೇಳುತ್ತೇನೆ’ ಎಂದರು. ‘ಟಾಕ್ಸಿಕ್’ ಯಾವುದೇ ಕಾಂಪ್ರಮೈಸ್ ಇಲ್ಲದೇ ಮಾಡುತ್ತಿರುವ ಚಿತ್ರ. ಅದಕ್ಕಾಗಿ ದೊಡ್ಡಮಟ್ಟದ ಪ್ಲಾನ್ ನಡೆಯುತ್ತಿದೆ’ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.