
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಡಾ ಕೆ ಸುಧಾರ್, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್, ನಿರ್ದೇಶಕ ರಾಜಮೌಳಿ, ನಟರಾದ ಡಾ ಶಿವರಾಜ್‌ಕುಮಾರ್, ರಾಮ್ ಚರಣ್‌ತೇಜ, ಜ್ಯೂಎನ್‌ಟಿಆರ್, ನಿರ್ಮಾಪಕ ಡಿವಿವಿ ದಾನಯ್ಯ, ಎಂ ಎಂ ಕೀರವಾಣಿ, ಕೆವಿಎನ್ ಸಂಸ್ಥೆಯ ಹಾಗೂ ‘ಆರ್‌ಆರ್‌ಆರ್’ ಚಿತ್ರದ ವಿತಕರ ವೆಂಕಟ್ ನಾರಾಯಣ್ ಕೋನಂಕಿ ಹೀಗೆ ದೊಡ್ಡ ಗಣ್ಯರ ದಂಡೇ ನೆರೆದಿದ್ದ ವೇದಿಕೆಯಲ್ಲಿದ್ದರು.
ರಾಜಮೌಳಿ ರೌದ್ರಾವತಾರ ಕಾರ್ಯಕ್ರಮದ ವೇದಿಕೆ ಮೇಲೆಯೇ ನಿರ್ದೇಶಕ ರಾಜಮೌಳಿ ರೌದ್ರಾವತಾರ ತಾಳಿದ ಪ್ರಸಂಗವೂ ನಡೆಯಿತು. ವೇದಿಕೆ ಮೇಲೆ ಇದ್ದವರನ್ನು ಗೆಟೌಟ್ ಎಂದರು. ‘ಡ್ಯಾನ್ಸರ್‌ಗಳು, ಬೌನ್ಸರ್‌ಗಳು ವೇದಿಕೆಯಿಂದ ಕೆಳಗಿಳಿಯಿರಿ. ಸಿಎಂ ಮುಂದೆ ಕೂತಿದ್ದಾರೆ. ಪೊ್ರೀಟೋಕಾಲ್ ಇದೆ. ದಯವಿಟ್ಟು ಅವರಿಗೆ ಸೆಕ್ಯೂರಿಟಿ ಕೊಡಿ. ಪೊಲೀಸರನ್ನು ಬಿಟ್ಟು ಉಳಿದಂತೆ ಎಲ್ಲರು ವೇದಿಕೆಯಿಂದ ಗೆಟೌಟ್’ ಎಂದು ವೇದಿಕೆ ಮೇಲೆ ರಾಜಮೌಳಿ ಕೋಪಗೊಂಡಾಗ ಎಲ್ಲರು ಸೈಲೆಂಟ್ ಆಗಿ ನಿಂತಿದ್ದರು.
ಕನ್ನಡದಲ್ಲಿ ಹೆಚ್ಚು ಬರಲಿ: ಶಿವಣ್ಣ ‘ಆರ್‌ಆರ್‌ಆರ್’ ಎಲ್ಲ ಭಾಷೆಗಳಲ್ಲೂ ಬರುತ್ತಿದೆ. ಆದರೆ, ನನ್ನದೊಂದು ಮನವಿ. ನಮ್ಮ ರಾಜ್ಯದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವಾಗ ಕನ್ನಡದಲ್ಲೇ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ. ಎಲ್ಲ ಕನ್ನಡಿಗರಿಗೆ ನಮ್ಮದೇ ಭಾಷೆಯಲ್ಲಿ ‘ಆರ್‌ಆರ್‌ಆರ್’ ಸಿನಿಮಾ ನೋಡುವಂತಾಗಲಿ. ಇದೊಂದು ಅದ್ಭುತ ಚಿತ್ರವಾಗಲಿ. ನಾನೂ ಕೂಡ ಮೊದಲ ದಿನ ಮೊದಲ ಶೋ ಅನ್ನು ಚಿತ್ರಮಂದಿರದಲ್ಲೇ ನೋಡುತ್ತೇನೆ. ಇದು ನನ್ನ ತಾಯಿ ಆಸೆ ನನ್ನ ತಾಯಿ ಕರ್ನಾಟಕದ ಕುಂದಾಪುರುದವರು. ನಾನು ಕನ್ನಡದಲ್ಲಿ ಮಾತನಾಡಬೇಕು ಎಂಬುದು ನನ್ನ ತಾಯಿ ಅವರ ಆಸೆ. ಹೀಗಾಗಿ ತಪ್ಪಾದರೂ ತಿದ್ದಿಕೊಂಡು ಕನ್ನಡ ಕಲಿತು ಮಾತನಾಡುತ್ತಿದ್ದೇನೆ. ‘ಆರ್‌ಆರ್‌ಆರ್’ ಚಿತ್ರದ ಕನ್ನಡ ವರ್ಷನ್‌ಗೆ ನಾನೇ ಡಬ್ ಮಾಡಲು ಸುಲಭವಾಗಿದ್ದು, ಕನ್ನಡ ಭಾಷೆಯ ಕಲಿಕೆಯಿಂದಲೇ. ನನ್ನ ಅಣ್ಣ ಪುನೀತ್‌ರಾಜ್ ಕುಮಾರ್ ಅವರಿಗಾಗಿಯೇ ಈ ಹಿಂದೆಯೇ ಕನ್ನಡದಲ್ಲಿ ‘ಗೆಳೆಯ ಗೆಳೆಯ’ ಹಾಡನ್ನು ಹಾಡಿದ್ದೇನೆ.
450 ಚಿತ್ರಮಂದಿರಗಳಲ್ಲಿ ಮಾ. 25ರಂದು ಕರ್ನಾಟಕದಲ್ಲಿ ‘ಆರ್‌ಆರ್‌ಆರ್’ ಚಿತ್ರವನ್ನು 450ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಶಿವಣ್ಣ ಅವರು ಹೇಳಿದಂತೆ ಎಲ್ಲೆಲ್ಲಿ ಕನ್ನಡಕ್ಕೆ ಹೆಚ್ಚು ಬೇಡಿಕೆ ಇದಿಯೋ ಅಂತಹ ಕಡೆ ಕನ್ನಡ ವರ್ಷನ್‌ನಲ್ಲೇ ‘ಆರ್‌ಆರ್‌ಆರ್’ ಸಿನಿಮಾ ಬರಲಿದೆ. ಇಬ್ಬರ ಸ್ವಾತಂತ್ರ್ಯ ಯೋಧರ ಕತೆಯನ್ನು ಒಳಗೊಂಡ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವ ಅವಕಾಶ ನಮ್ಮ ಕೆವಿಎನ್ ಸಂಸ್ಥೆಗೆ ಸಿಕ್ಕಿರುವುದು ಹೆಮ್ಮೆಯ ಸಂಗತಿ. ಪುನೀತ್‌ರಾಜ್‌ಕುಮಾರ್ ಅವರ ‘ಜೇಮ್‌ಸ್’ ಚಿತ್ರಕ್ಕೆ ತೊಂದರೆ ಆಗದಂತೆ ‘ಆರ್‌ಆರ್ ಆರ್’ ಚಿತ್ರ ಬರಲಿದೆ.
ಸಿನಿ ಹಬ್ಬ ಕ್ಕೆ ಕೆವಿಎನ್ ಸಾರಥಿ ಎರಡು ಲಕ್ಷಕ್ಕೂ ಹೆಚ್ಚು ಜನ ಕಾರ್ಯಕ್ರಮಕ್ಕೆ ಬಂದಿದ್ದರು. ಪೊಲೀಸರಿಂದ ಅಭಿಮಾನಿಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಇಂಥದ್ದೂ ಅದ್ದೂರಿಯಾದ ಸಿನಿಮಾ ಹಬ್ಬವನ್ನು ಆಯೋಜಿಸುವ ಮೂಲಕ, ಅದರ ಸಾರಥಿಯಾಗಿದ್ದು ನಿರ್ಮಾಪಕರಾದ ವೆಂಕಟ್ ಹಾಗೂ ನಿಶಾ ವೆಂಕಟ್ ಕೋನಂಕಿ ದಂಪತಿಯ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ. ‘ನಿರ್ಮಾಪಕ ಹಾಗೂ ವಿತರಕರಾದ ವೆಂಕಟ್ ಅವರು ಇಷ್ಟು ದೊಡ್ಡ ಈವೆಂಟ್ ಆಯೋಜಿಸುತ್ತಾರೆ ಎಂದುಕೊಂಡಿರಲಿಲ್ಲ. ಒಂದು ಪ್ಯಾನ್ ಇಂಡಿಯಾ ಚಿತ್ರಕ್ಕೆ ಇದಕ್ಕಿಂತ ದೊಡ್ಡ ಕಾರ್ಯಕ್ರಮ ಬೇಕಿಲ್ಲ’ ಎಂದರು ರಾಜಮೌಳಿ.
ಶಿವಣ್ಣ ಕಾಲು ಮುಟ್ಟಿ ಚರಣ್ ನಟ ರಾಮ್‌ಚರಣ್ ತೇಜ ಅವರು ಪುನೀತ್ ಅವರನ್ನು ನೆನೆದು ಭಾವುಕರಾಗಿದ್ದರು. ತಮ್ಮ ಪಕ್ಕದಲ್ಲೇ ನಿಂತಿದ್ದ ಶಿವಣ್ಣ ಅವರ ಕಾಲುಮುಟ್ಟಿ ನಮಸ್ಕಾರ ಮಾಡುವ ಮೂಲಕ ಕನ್ನಡದ ಸೆಂಚುರಿ ಸ್ಟಾರ್‌ಗೆ ಗೌರವ ತೋರಿಸಿದರು. ‘ಈ ಚಿತ್ರದಲ್ಲಿ ನನ್ನ ಪಾತ್ರಕ್ಕೆ ನಾನು ಕೂಡ ಕನ್ನಡದಲ್ಲೇ ಮಾತನಾಡಿದ್ದೇನೆ. ಈ ಚಿತ್ರಕ್ಕಾಗಿ ಡಬ್ ಮಾಡಿದ ಭಾಷೆಗಳ ಪೈಕಿ ಕನ್ನಡ ನನ್ನ ಮೆಚ್ಚಿನ ಭಾಷೆ. ನನ್ನ ತಂದೆ ಚಿರಂಜೀವಿ ಅವರು ಕನ್ನಡದಲ್ಲಿ ನಟಿಸಿದ್ದಾರೆ. ನನಗೂ ಕನ್ನಡ ಚಿತ್ರದಲ್ಲಿ ನಟಿಸುವ ಆಸೆ ಇದೆ. ನನ್ನ ಅಣ್ಣ ಪುನೀತ್, ಶಿವಣ್ಣ ಯಾವತ್ತೂ ನಮ್ಮ ಕುಟುಂಬದ ಜತೆಗೇ ಇರುತ್ತಾರೆ’ ಎಂದು ರಾಮ್‌ಚರಣ್ ತೇಜ ಹೇಳಿದರು.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.