ಕೋಟಿ ಆಸ್ತಿ ಇದ್ರೂ ದರ್ಶನ್‌ ಜೈಲಲ್ಲಿ ಖರ್ಚು ಮಾಡ್ತಿರೋದು ಇಷ್ಟೇ ದುಡ್ಡು; ಪರಿಸ್ಥಿತಿ ನೆನೆದು ಅಭಿಮಾನಿಗಳು ಕಣ್ಣೀರು!

By Vaishnavi Chandrashekar  |  First Published Sep 7, 2024, 1:35 PM IST

 ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್. ಕಾಫಿ ಟೀ ಅಂತ ಎಷ್ಟು ಖರ್ಚು ಮಾಡ್ತಿದ್ದಾರೆ ಗೊತ್ತಾ?


ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ 17 ಮಂದಿ ಜೈಲಿನಲ್ಲಿ ಇದ್ದಾರೆ. ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದೀನಿ ಅನ್ನೋದನ್ನು ಮರೆದು ಜಾಲಿ ಮಾಡುತ್ತಿದ್ದ ಕಾರಣ ದರ್ಶನ್‌ರನ್ನು ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಜಾಲಿ ಅಂದ್ರೆ ಯಾವ ತರ? ಒಂದು ಕೈಯಲ್ಲಿ ಸಿಗರೇಟ್ ಮತ್ತೊಂದು ಕೈಯಲ್ಲಿ ಕಾಫಿ ಮಗ್ ಹಿಡಿದು ಸ್ನೇಹಿತರ ಜೊತೆ ಕಾಲ ಕಳೆಯುತ್ತಿರುವುದು. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್ ಆಗಿ ದೊಡ್ಡ ದುಡ್ಡಿ ಮಾಡಿತ್ತು.

ಸದ್ಯ ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್ ಕಾಫಿ ಟೀ ಅಂತ ಸಿಂಪಲ್ ಜೀವನ ನಡೆಸುತ್ತಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಭೇಟಿ ಮಾಡಿ ಒಂದು ಬ್ಯಾಗ್ ಪೂರ್ತಿ ತಿಂಡಿ ಕೊಟ್ಟಿದ್ದಾರೆ. ಪೊಲೀಸರ ಜೊತೆ ನಡೆದುಕೊಂಡು ಬಂದ ದರ್ಶನ್ ಪತ್ನಿಯಿಂದ ಬ್ಯಾಗ್ ತೆಗೆದುಕೊಂಡು ಮತ್ತೆ ಒಳಗೆ ಹೋಗುತ್ತಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ಇಷ್ಟಕ್ಕೆ ನಿಂತಿಲ್ಲ...ದರ್ಶನ್ ಈಗ ಜೈಲಿನಲ್ಲಿ ಎಷ್ಟು ಖರ್ಚು ಮಾಡುತ್ತಿದ್ದಾರೆ ಅನ್ನೋ ಚರ್ಚೆ ಶುರುವಾಗಿದೆ. ಬಳ್ಳಾರಿ ಜೈಲಿಗೆ ಕಾಲಿಟ್ಟ ಮೇಲೆ ದರ್ಶನ್ 735 ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ ಎನ್ನಲಾಗಿದೆ. 

Tap to resize

Latest Videos

ಕಿರುತೆರೆ ನಟಿ ಕವಿತಾ ಗೌಡ ಹೊಸ ಪೋಟೋಶೂಟ್; ಪುಟ್ಟ ಗಣೇಶ್ ಬರ್ತಿದ್ದಾನೆ ಅಂತ ಸೂಚನೆ ಕೊಟ್ರಾ?

ಹೌದು! ದರ್ಶನ್ ಕಾಫಿ, ಟೀಗಾಗಿ ಈ ಹಣವನ್ನು ಬಳಸುತ್ತಿದ್ದಾರಂತೆ. ಇಲ್ಲಿ ಮದ್ಯ ಸೇವನೆ ಮತ್ತು ಸಿಗರೇಟ್‌ ಸೇದಲು ಅವಕಾಶವಿಲ್ಲ. ದರ್ಶನ್ ಕೋಟಿ ಕೋಟಿ ಬೆಲೆ ಬಾಳುವ ವ್ಯಕ್ತಿ ಈಗ ಸಣ್ಣ ಪುಟ್ಟ ಖರ್ಚು ಮಾಡುತ್ತಿರುವುದನ್ನು ನೋಡಿ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ನಮ್ಮ ಬಾಸ್‌ರನ್ನು ಈ ಪರಿಸ್ಥಿತಿಯಲ್ಲಿ ನೋಡಲು ಆಗುತ್ತಿಲ್ಲ ಎಂದು ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ. ವಾರಕ್ಕೊಂದು ಪಾರ್ಟಿ ಆಯೋಜಿಸುತ್ತಿದ್ದ ದರ್ಶನ್ ಈಗ ಸಾವಿರ ರೂಪಾಯಿ ಖರ್ಚು ಮಾಡೋದು ಕಷ್ಟ ಆಗಿದೆ ಅನ್ನೋದು ರಿಯಾಲಿಟಿ. 

ಬೆಂಗಳೂರಿನ ದುಬಾರಿ ಪಬ್‌ನಲ್ಲಿ ಅಕ್ಕನ ಹುಟ್ಟುಹಬ್ಬ ಆಚರಿಸಿದ ಅಮೃತಾಧಾರೆ ವನಿತಾ ವಾಸು; ಫೋಟೋ ವೈರಲ್!

click me!