ಪರಸ್ತ್ರೀಗಾಗಿ ಜೈಲು ಸೇರಿದ್ರೂ ಪತಿಯ ಬೆಂಬಲಕ್ಕೆ ನಿಂತ ವಿಜಯಲಕ್ಷ್ಮಿ; ಮೈದುನ ದಿನಾಕರ್‌ ಬಿಗ್ ಸಪೋರ್ಟ್!

By Vaishnavi Chandrashekar  |  First Published Sep 7, 2024, 3:53 PM IST

ವಿಜಯಲಕ್ಷ್ಮಿಗೆ ಬೆಂಬಲವಾಗಿ ನಿಂತ ದಿನಾಕರ್. ಅತ್ತಿಗೆ-ಮೈದುನ ಸಂಬಂಧ ಮೆಚ್ಚಿದ ಕನ್ನಡಿಗರು....
 


ನಟ ದರ್ಶನ್‌ಗೆ ರಾವಣನಂಥಾ ಅಣ್ಣ..ದಿನಕರ್, ವಿಭೀಷಣನಂಥಾ ತಮ್ಮ. ಜೈಲುವಾಸದಲ್ಲಿರುವ ದಾಸನ ಕತ್ತಲೆಯ ಬದುಕಿಗೀಗ ದಿನಕರನೇ ಬೆಳಕು. ಅತ್ತಿಗೆಗೆ ಆನೆಬಲದಂತ ಬೆಂಬಲ ಕೊಟ್ಟಿರುವ ದಿನಕರ್ ತೂಗುದೀಪರಿಂದ ತನ್ನಣ್ಣನಿಗಾಗಿ ಹಗಲೂ ರಾತ್ರಿ ನಡೆಯುತ್ತಿದೆ ಹೋರಾಟ.  ಅಂದು ದೂರವಿಟ್ಟದ್ದ ತಮ್ಮನೇ ಈಗ ದರ್ಶನ್‌ಗೆ ಆಸರೆ, ಅನಿವಾರ್ಯ ಆಗಿರೋದು ಹೇಗೆ..? 

ವಿಜಯಲಕ್ಷ್ಮೀ ಪಾಪ ಈ ಹೆಣ್ಮಗಳದ್ದು ಅದೇನು ತಾಳ್ಮೆ..ಅದೇನು ಸಹನೆ.. ಪತಿಗಾಗಿ ಈಕೆ ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ಈಕೆಯ ಜೊತೆಗೆ ದೊಡ್ಡ ಶಕ್ತಿಯಾಗಿ ನಿಂತಿರೋದು ಮೈದುನ ದಿನಕರ್ ತೂಗುದೀಪ. ಅಣ್ಣನ ವಿಚಾರವಾಗಿ ಅತ್ತಿಗೆಗೆ ಬಲವಾಗಿ ದಿನಕರ್ ನಿಂತಿರೋದು ಪ್ರತಿಯೊಬ್ಬರಿಗೂ ಆಶ್ಚರ್ಯವಾಗಿ ಆದರೂ ಮೆಚ್ಚುತ್ತಿದ್ದಾರೆ. 

Tap to resize

Latest Videos

undefined

ಕೋಟಿ ಆಸ್ತಿ ಇದ್ರೂ ದರ್ಶನ್‌ ಜೈಲಲ್ಲಿ ಖರ್ಚು ಮಾಡ್ತಿರೋದು ಇಷ್ಟೇ ದುಡ್ಡು; ಪರಿಸ್ಥಿತಿ ನೆನೆದು ಅಭಿಮಾನಿಗಳು ಕಣ್ಣೀರು!

ದರ್ಶನ್ ಹೊಡೆದ…ಬಡಿದ… ಬಾಯಿಗೆ ಬಂದ್ಹಾಗೆ ಬೈದ. ಸಾಲದು ಅಂತ ಪರಸ್ತ್ರೀಯ ಸಂಘ ಮಾಡ್ದ.. ಇಷ್ಟಾದ್ರೂ  ಆಕೆ ತಾಳ್ಮೆಯಿಂದಲೇ ಇದ್ದಾರೆ ವಿಜಯಲಕ್ಷ್ಮಿ. ಕಷ್ಟ ಕಾಲದಲ್ಲಿರುವ ಗಂಡನನ್ನ ಕಾಪಾಡಿಕೊಳ್ಳಲು ಶಕ್ತಿಮೀರಿ ಪ್ರಯತ್ನ ಪಡುತ್ತಿದ್ದಾರೆ. ತಾಳ್ಮೆಗೆ.. ಸಹನೆಗೆ…ಪ್ರತಿರೂಪದಂತೆ ವಿಜಯಲಕ್ಷ್ಮೀ ನಮ್ಮ ಕಣ್ಮುಂದೆ ಇದ್ದಾರೆ.  ಕಂಬಿ ಹಿಂದಿರುವ ಕಾಟೇರನನ್ನ ಹೊರ ತರಲು ಧರ್ಮನ ಧರ್ಮಪತ್ನಿ ಪಣತೊಟ್ಟಿದ್ದಾರೆ.  ಈಕೆಗೆ ಆನೆಬಲವಾಗಿ ದಿನಕರ್ ತೂಗುದೀಪ ಇದ್ದಾರೆ. ದರ್ಶನ್ ಡೆವಿಲ್ ರೂಪವನ್ನ ತಾಳಿ ಯಾವಾಗ ಕೊಲೆ ಆರೋಪಿ ಆದ್ರೋ ಆಗಿನಿಂದಲೂ ಪತಿಗೋಸ್ಕರ ವಿಜಯಲಕ್ಷ್ಮೀ ಹಾಗೂ ದಿನಕರ್ ಜೊತೆಯಲ್ಲಿದ್ದಾರೆ. ಆತನಿಗಾಗಿ ಹೋರಾಡ್ತಾ ಇದ್ದಾರೆ. 

ಪ್ರಯತ್ನ..ಪ್ರಾರ್ಥನೆ.. ಹೋರಾಟ… ದರ್ಶನ್ ಜೈಲಿನಿಂದ ಬಿಡಿಸಿಕೊಂಡು ಬರಲು ವಿಜಯಲಕ್ಮೀ ಹಾಗೂ ದಿನಕರ್ ತೂಗದೀಪ ಫಾಲೋ ಮಾಡ್ತಿರೋ ಹಾದಿ ಒಂದೆರಡಲ್ಲ. ದಾಸ ಜೈಲು ಸೇರಿದ ಮೊದಲ ದಿನದಿಂದಲೂ ಇವರಿಬ್ಬರೂ ದರ್ಶನ್ ಜೊತೆಗೆ ನಿಂತಿದ್ದಾರೆ.  ಬಿಡುಗಡೆಯ ಭಾಗ್ಯಕ್ಕೆ ಶ್ರಮ ಪಡ್ತಿದ್ದಾರೆ. ಕಾನೂನು ಹೋರಾಟದ ಹಾದಿಗೆ ಇಳಿದಿದ್ದಾರೆ. 

ಶಮಿಕಾ ಟೆನ್ನಿಸ್ ಪ್ಲೇಯರ್ ಆಗಬೇಕು ಅನ್ನೋದು ಅವರ ಅಪ್ಪನ ಆಸೆ: ಮಗಳ ಬಗ್ಗೆ ರಾಧಿಕಾ ಕುಮಾರಸ್ವಾಮಿ ಮಾತು

ಕೆಳಗಿರುವ ವಿಡಿಯೋದಲ್ಲಿ ಆಧುನಿಕ ವಿಭೀಷಣನಂತಿರುವ ಹಾಗೇನೆ ಅಣ್ಣನಿಗಾಗಿ ಅತ್ತಿಗೆಗೆ ಆನೆಬಲದಂತೆ ನಿಂತಿರುವ ದಿನಕರ್ ತೂಗುದೀಪ ಅವರ ಕುರಿತಾದ ಸುವರ್ಣ ಸ್ಪೆಷಲ್ ವಿಡಿಯೋ....

click me!