ಉಕ್ಕಿನ ಮಹಿಳೆ ಇಂದಿರಾ ಗಾಂಧಿಯಿಂದಲೂ ಪ್ರಶಸ್ತಿ ಸ್ವೀಕರಿಸಿದ್ದರು ನಟಿ ಲೀಲಾವತಿ!

By Shriram Bhat  |  First Published Dec 9, 2023, 6:15 PM IST

ಬರೋಬ್ಬರಿ 5 ಭಾಷೆಗಳಲ್ಲಿ ನಟಿಸಿ ಕನ್ನಡದ ಮೊಟ್ಟಮೊದಲ ಬಹುಭಾಷಾ ತಾರೆ ಎನಿಸಿಕೊಂಡಿದ್ದ ನಟಿ ಲೀಲಾವತಿಯವರು 600 ಚಿತ್ರಗಳಲ್ಲಿ ನಟಿಸಿ ಹಲವಾರು ಪ್ರಶಸಸ್ತಿಗಳನ್ನು ಗಳಿಸಿಕೊಂಡಿದ್ದರು. 


ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಮೂಲದ ಕನ್ನಡದ ಬಹುಭಾಷಾ ನಟಿ ಲೀಲಾವತಿ ನಿನ್ನೆ, 8 ಡಿಸೆಂಬರ್ 2023 ರಂದು ಇಹಲೋಕ ತ್ಯಜಿಸಿದ್ದಾರೆ. ತಮ್ಮ 16ನೆಯ ವಯಸ್ಸಿಗೇ ಸಿನಿಮಾ ನಟಿಯಾಗಿ ಗುರುತಿಸಿಕೊಂಡಿದ್ದ ಲೀಲಾವತಿ ತುಳು ಸೇರಿದಂತೆ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದರು. 1958 ರಿಂದ ಪ್ರಾರಂಭವಾಗಿ 2009ರವರೆಗಿನ ತಮ್ಮ ಸಿನಿಮಾ ವೃತ್ತಿ ಜೀವನದಲ್ಲಿ ಲೀಲಾವತಿಯವರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಮಹಾನ್ ಕಲಾವಿದೆ. ಡಾ ರಾಜ್‌ಕುಮಾರ್ ಜತೆ ಲೀಲಾವತಿಯವರು 46 ಸಿನಿಮಾಗಳಲ್ಲಿ ನಟಿಸಿದ್ದರು. 

Tap to resize

Latest Videos

ನಟಿ ಲೀಲಾವತಿಯವರು ಸಿನಿಮಾದಲ್ಲಿ ನಟಿಸುವುದಕ್ಕೆ ಮೊದಲು ಮೈಸೂರಿನಲ್ಲಿ ಸುಬ್ಬಯ್ಯ ನಾಯ್ಡು ನಾಟಕ ಕಂಪನಿಯಲ್ಲಿ ಅಡುಗೆ ಮಾಡಲು ಸೇರಿಕೊಂಡಿದ್ದರಂತೆ. ಅಲ್ಲೇ ನಾಟಕಕ್ಕೆ ಬಣ್ಣ ಹಚ್ಚಿದ ನಟಿ ಲೀಲಾವತಿಯವರು ಕೊನೆಗೆ ಸಿನಿಮಾದಲ್ಲಿ ಕೂಡ ಅವಕಾಶ ಪಡೆದುಕೊಂಡು ಸ್ಟಾರ್ ನಟಿಯಾಗಿ ಬೆಳೆದ ಪರಿಯೇ ಮಹಾ ರೋಚಕ ಕಥೆ. ಐದು ಭಾಷೆಗಳಲ್ಲಿ ಆ ಕಾಲದ ದಿಗ್ಗಜ ನಟರೊಡನೆ ತೆರೆ ಹಂಚಿಕೊಂಡು ಖ್ಯಾತರಾಗಿದ್ದ ನಟಿ ಲೀಲಾವತಿಯವರು ತಾವು ಉತ್ತುಂಗದಲ್ಲಿದ್ದಾಗಲೇ ಜಮೀನು ಖರೀದಿಸಿ ಕೃಷಿ ಕೆಲಸದಲ್ಲೂ ತೊಡಗಿಸಿಕೊಂಡು ಹಲವರಿಗೆ ಮಾದರಿಯಾದವರು. 

ಕಣ್ಮರೆಯಾದ ಕನ್ನಡದ ಕಣ್ಮಣಿ ಲೀಲಾವತಿ ಕೃಷಿ ಕಾಯಕಕ್ಕೆ ಪ್ರಶಸ್ತಿಯೇ ಸಿಗಲಿಲ್ಲ!

ಬರೋಬ್ಬರಿ 5 ಭಾಷೆಗಳಲ್ಲಿ ನಟಿಸಿ ಕನ್ನಡದ ಮೊಟ್ಟಮೊದಲ ಬಹುಭಾಷಾ ತಾರೆ ಎನಿಸಿಕೊಂಡಿದ್ದ ನಟಿ ಲೀಲಾವತಿಯವರು 600 ಚಿತ್ರಗಳಲ್ಲಿ ನಟಿಸಿ ಹಲವಾರು ಪ್ರಶಸಸ್ತಿಗಳನ್ನು ಗಳಿಸಿಕೊಂಡಿದ್ದರು. ಎರಡು ನ್ಯಾಷನಲ್ ಅವಾರ್ಡ್‌, ಆರು ರಾಜ್ಯ ಪ್ರಶಸ್ತಿಗಳು, ಜತೆಗೆ ಹಲವಾರು ಖಾಸಗಿ ಸಂಘಸಂಸ್ಥೆಗಳಿಂದ ಲೆಕ್ಕವಿಲ್ಲದಷ್ಟು ಪ್ರಶಸ್ತಿ, ಬಿರುದುಗಳನ್ನು ಪಡೆದಿದ್ದರು. ಮದ್ರಾಸ್ ಯೂನಿವರ್ಸಿಟಿಯಿಂದ ಡಾಕ್ಟರೇಟ್ ಗೌರವ ಪದವಿ ಪಡೆದು ಡಾ ಲೀಲಾವತಿ ಎನಿಸಿಕೊಂಡಿದ್ದರು. ಅದಕ್ಕಿಂತ ಹೆಚ್ಚಾಗಿ ಅವರು ಜನಮಾನಸದಲ್ಲಿ ತುಂಬಾ ಖ್ಯಾತಿ ಪಡೆದುಕೊಂಡಿದ್ದರು. 

ಲೀಲಾವತಿ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟ; ಕಲಾ ಸಾಧನೆ ಅಜರಾಮರ

ಇಂಥ ಮೇರು ನಟಿ ಲೀಲಾವತಿಯವರು ಅಂದಿನ ಪ್ರಧಾನಿ, ಉಕ್ಕಿನ ಮಹಿಳೆ ಎಂದು ಖ್ಯಾತಿ ಪಡೆದಿದ್ದ ಇಂದಿರಾ ಗಾಂಧಿ ಅವರಿಂದ ಪ್ರಶಸ್ತಿ ಪಡೆದುಕೊಂಡಿದ್ದರು. ದೇವರಾಜ್ ಅರಸ್ ಸೇರಿದಂತೆ ಹಲವು ಮುಖ್ಯಮಂತ್ರಿಗಳಿಂದ ನಟಿ ಲೀಲಾವತಿಯವರು ಪ್ರಶಸ್ತಿ ಸ್ವೀಕರಿಸಿದ್ದರು. ಆದರೆ, ಯಾವುದೇ ಪ್ರಶಸ್ತಿ, ಗೌರವಗಳನ್ನು ಅವರು ತಮ್ಮ ತಲೆಯಲ್ಲಿ ತುಂಬಿಕೊಂಡು ಓಡಾಡುತ್ತಿರಲಿಲ್ಲ. ಜನರೊಂದಿಗೆ, ಸಹನಟನಟಿಯರಂದಿಗೆ ಮಾನವೀಯತೆ ಹಾಗೂ ಗೌರವದಿಂದಲೇ ನಡೆದುಕೊಳ್ಳುತ್ತಿದ್ದರು. ಹುಟ್ಟಿದ 6ನೇ ವರ್ಷಕ್ಕೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದ ಲೀಲಾವತಿಯರ ಮೊದಲ ಹೆಸರು ಲೀಲಾ ಕಿರಣ್ ಎಂದಾಗಿತ್ತು, ನಟಿಯಾದ ಬಳಿಕ ಅವರು ಲೀಲಾವತಿ ಎಂಬ ಹೆಸರಿನಿಂದ ಪ್ರಖ್ಯಾತಿ ಪಡೆದರು. 

click me!