ದಾವಣಗೆರೆ ನಗರಸಭೆ ಎದುರು ನಟಿ ಲೀಲಾವತಿ ಸಿನಿಮಾ ಚಿತ್ರೀಕರಣ ನಡೆದಿತ್ತು..!

By Kannadaprabha News  |  First Published Dec 9, 2023, 3:00 PM IST

ದಾವಣಗೆರೆಯ ನಗರಸಭೆ ಎದುರು, ರಾಜನಹಳ್ಳಿ ಹನುಮಂತಪ್ಪನವರ ಛತ್ರದ ಎದುರು, ಪಿ.ಜೆ.ಬಡಾವಣೆಯ ಖಮಿತ್ಕಲ್ ಈಶ್ವರಪ್ಪ ರಾಮ ದೇವಸ್ಥಾನದ ಎದುರು, ಹಳೆ ನಗರದ ಸರ್ಕಾರಿ ಆಸ್ಪತ್ರೆ ಎದುರು ಲೀಲಾವತಿಯವರು ನಡೆದು ಬರುವ ದೃಶ್ಯ ಹಾಗೂ ಅಲ್ಲೇ ಸಮೀಪದ ಚಾಮರಾಜ ವೃತದಲ್ಲಿ ಜಯಂತಿಯವರು ಚಲಾಯಿಸುತ್ತಿದ್ದ ಕಾರಿಗೆ ಲೀಲಾವತಿಯವರು ಎದುರಾಗಿ ಬೀಳುವ ದೃಶ್ಯ ಎಲ್ಲವು ಚಿತ್ರೀಕರಣವಾಗಿತ್ತು. 

ದಾವಣಗೆರೆ(ಡಿ.09):  ಶುಕ್ರವಾರ ನಿಧನರಾದ ಖ್ಯಾತ ನಟಿ ಲೀಲಾವತಿ ''''ತುಂಬಿದ ಕೊಡ'''' ಚಲನಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ದಾವಣಗೆರೆಗೆ ಆಗಮಿಸಿದ್ದರು.

ದಾವಣಗೆರೆಯ ನಗರಸಭೆ ಎದುರು, ರಾಜನಹಳ್ಳಿ ಹನುಮಂತಪ್ಪನವರ ಛತ್ರದ ಎದುರು, ಪಿ.ಜೆ.ಬಡಾವಣೆಯ ಖಮಿತ್ಕಲ್ ಈಶ್ವರಪ್ಪ ರಾಮ ದೇವಸ್ಥಾನದ ಎದುರು, ಹಳೆ ನಗರದ ಸರ್ಕಾರಿ ಆಸ್ಪತ್ರೆ ಎದುರು ಲೀಲಾವತಿಯವರು ನಡೆದು ಬರುವ ದೃಶ್ಯ ಹಾಗೂ ಅಲ್ಲೇ ಸಮೀಪದ ಚಾಮರಾಜ ವೃತದಲ್ಲಿ ಜಯಂತಿಯವರು ಚಲಾಯಿಸುತ್ತಿದ್ದ ಕಾರಿಗೆ ಲೀಲಾವತಿಯವರು ಎದುರಾಗಿ ಬೀಳುವ ದೃಶ್ಯ ಎಲ್ಲವು ಚಿತ್ರೀಕರಣವಾಗಿತ್ತು. 

Tap to resize

Latest Videos

ಕೂಡ್ಲಿಗಿ: 3 ಬಾರಿ ಚಿಕ್ಕಜೋಗಿಹಳ್ಳಿಗೆ ಭೇಟಿ ನೀಡಿದ್ದ ಲೀಲಾವತಿ

ಈ ಚಿತ್ರಕ್ಕಾಗಿ ಜನಪ್ರಿಯ ಹಾಡು ''''ಅಂತಿಂಥ ಹೆಣ್ಣು ನೀನಲ್ಲ, ನಿನ್ನಂತ ಹೆಣ್ಣು ಇನ್ನಿಲ್ಲ...." ಎನ್ನುವುದನ್ನು ಪಿ ಕಾಳಿಂಗರಾಯರು ಹಾಡಿರುವುದು. ಈ ಚಲನ ಚಿತ್ರದಲ್ಲಿ ಲೀಲಾವತಿಯವರ ಜೊತೆ ರಾಜಕುಮಾರ್ ಜಯಂತಿ ಹಾಗೂ ನಮ್ಮ ನಗರದ ಚಿಂದೋಡಿ ಲೀಲಾ ಮುಂತಾದವರು ಪ್ರಧಾನ ಭೂಮಿಕೆಯಲ್ಲಿ ನಟಿಸಿದ್ದರು ಎಂಬ ಮಾಹಿತಿಯನ್ನು ಹಿರಿಯ ಪತ್ರಕರ್ತ ಎಚ್.ಬಿ.ಮಂಜುನಾಥ ನೀಡಿದ್ದಾರೆ.

click me!