ತೂಕ ಇಳಿಸ್ತಿರೋ ಸುದೀಪ್ ಮಗಳು ಸಾನ್ವಿ; ಇಲ್ಲಿದೆ ಟ್ರಾನ್ಫರ್ಮೇಶನ್ ವಿಡಿಯೋ

Published : Apr 06, 2024, 12:04 PM ISTUpdated : Apr 07, 2024, 09:53 AM IST
ತೂಕ ಇಳಿಸ್ತಿರೋ ಸುದೀಪ್ ಮಗಳು ಸಾನ್ವಿ; ಇಲ್ಲಿದೆ ಟ್ರಾನ್ಫರ್ಮೇಶನ್ ವಿಡಿಯೋ

ಸಾರಾಂಶ

ತೂಕ ಇಳಿಸೋ ಪ್ರಯತ್ನದಲ್ಲಿರೋ ಸಾನ್ವಿ ಸುದೀಪ್. ಸುದೀಪ್ ಮಗಳ ಟ್ರಾನ್ಸ್ಫರ್ಮೇಶನ್ ವಿಡಿಯೋಗೆ ನೆಟ್ಟಿಗರ ಮೆಚ್ಚುಗೆ.

ನಟ ಸುದೀಪ್ ಏಕೈಕ ಪುತ್ರಿ ಸಾನ್ವಿ ಇನ್ಸ್ಟಾಗ್ರಾಂನಲ್ಲಿಬ ಬಹಳ ಆ್ಯಕ್ಟಿವ್. ತಂದೆಯಂತೇ ಬಹುಮುಖ ಪ್ರತಿಭೆ ಹೊಂದಿರುವ ಸಾನ್ವಿ ಆಗಾಗ ಸಖತ್ತಾಗಿ ಹಾಡು ಹೇಳಿ ರಂಜಿಸ್ತಾರೆ. ಈಗಾಗಲೇ ಜಿಮ್ಮಿ ಚಿತ್ರಕ್ಕೆ ಹಾಡಿ ಸೈ ಎನಿಸಿಕೊಂಡಿದ್ದಾರೆ.

ಕೆಲವೊಮ್ಮೆ ತಾವು ಬಿಡಿಸಿದ ಚಿತ್ರಗಳನ್ನು ಶೇರ್ ಮಾಡಿಕೊಂಡು ಅಚ್ಚರಿ ಹುಟ್ಟಿಸ್ತಾರೆ. ಡ್ಯಾನ್ಸ್‌ನಲ್ಲಿ ಕೂಡಾ ತಂದೆಗಿಂತ ಕಡಿಮೆಯೇನಿಲ್ಲ. ಇನ್ನು ಆಗಾಗ ತಮ್ಮ ಪುಸ್ತಕ ಪ್ರೀತಿಯನ್ನೂ ಹಂಚಿಕೊಳ್ತಿರ್ತಾರೆ ಸಾನ್ವಿ. ಇದರೊಂದಿಗೆ ನಟನೆಯ ರೀಲ್ಸ್ ಕೂಡಾ ಅವರ ಪೇಜ್‌ನಲ್ಲಿ ನೋಡ್ಬಹುದು.

ಒಳ್ಳೆಯ ಹೈಟ್ ಇರೋ ಸಾನ್ವಿ ಚಿತ್ರರಂಗಕ್ಕೆ ಬರ್ತಾರಾ ಎಂಬ ಪ್ರಶ್ನೆ ಆಗಾಗ ಬರ್ತಾನೆ ಇರುತ್ತೆ. ಈ ಬಗ್ಗೆ ಕಿಚ್ಚನ ಅಭಿಮಾನಿಗಳು ಸಾನ್ವಿಗೆ ವಿನಂತಿ ಮಾಡ್ತಾನೇ ಇರ್ತಾರೆ. ಈಗ 20 ವರ್ಷದ ಸಾನ್ವಿ ತಮ್ಮ ತೂಕ ಇಳಿಸೋ ಕಾರ್ಯಕ್ಕೆ ಇಳಿದಿದ್ದು, ಅವರು ಚಿತ್ರರಂಗಕ್ಕೆ ಬರೋದಕ್ಕೆ ತಯಾರಾಗ್ತಿದಾರಾ ಎಂದೂ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಸಾನ್ವಿ ಸುದೀಪ್ ತಮ್ಮ ಇನ್ಸ್ಟಾದಲ್ಲಿ ತೂಕ ಇಳಿಸೋ ಪ್ರಯತ್ನದಲ್ಲಿರೋದರ ಕುರಿತ ವಿಡಿಯೋ ಹಂಚಿಕೊಂಡಿದ್ದಾರೆ. 'ಸಣ್ಣ ಹೆಜ್ಜೆಗಳು. ಆದರೆ ಈ ಬಗ್ಗೆ ಕೆಲಸ ನಡೀತಿದೆ' ಎಂದು ಸಾನ್ವಿ ಬರೆದುಕೊಂಡಿದ್ದಾರೆ.


 

ವಿಡಿಯೋದಲ್ಲಿ ಸಾನ್ವಿ ಮೊದಲಿಗಿಂತ ಕೊಂಚ ಸಣ್ಣಗಾಗಿರುವುದನ್ನು ಹಾಗೂ ಇನ್ನಷ್ಟು ಸಣ್ಣಗಾಗಲು ಅವರು ಸಜ್ಜಾಗಿರುವುದನ್ನು ಕಾಣಬಹುದು. ಸಾನ್ವಿಯ ವಿಡಿಯೋಗೆ ಹಲವರು ಉತ್ತಮ ಪ್ರಯತ್ನ ಎಂದು ಹೇಳುತ್ತಿದ್ದಾರೆ.
'ನಿಮ್ಮ ಪ್ರಯತ್ನಗಳು ನಿಮ್ಮ ಬದಲಾವಣೆಯಲ್ಲಿ ಕಾಣಿಸುತ್ತಿವೆ. ಆಲ್ ದ ಬೆಸ್ಟ್' ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, 'ಸೇಮ್ ಕಿಚ್ಚ ಬಾಸ್ ತರಾನೇ ಇದೀರಾ. ಆ ಸ್ವಾಗ್, ತಾಯಿಯ ಚಾರ್ಮ್‌ ಪಡೆವತ್ತ ಪ್ರಯತ್ನಿಸಿ' ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ.

 

'ಬದಲಾವಣೆಗೆ ಏನು ಮಾಡುತ್ತಿದ್ದೀರಾ ತಿಳಿಸಿ' ಎಂದು ಮತ್ತೊಬ್ಬರು ಕೇಳಿದ್ದಾರೆ. ಸಾನ್ವಿಯ ವಿಡಿಯೋಗೆ ಈಗಾಗಲೇ 76 ಸಾವಿರ ಲೈಕ್‌ಗಳು ಬಂದಿದ್ದು, ಆಕೆಯ ಪ್ರಯತ್ನಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?
ವಿಲನ್ ಶೇಡ್​​ನಲ್ಲೂ ಪ್ಲೇ ಬಾಯ್ ಲುಕ್.. ಡೆವಿಲ್ ದರ್ಶನ್‌ರನ್ನ ಕಣ್ತುಂಬಿಕೊಂಡ 3 ಮಿಲಿಯನ್‌ ಮಂದಿ!