ಪ್ರಭಾಸ್ ಅವರು 'ವರ್ಷಂ' ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪ್ರವೇಶ ಪಡೆದವರು. ಬಳಿಕ ಅವರು ಹಲವಾರು ಸಿನಿಮಾಗಳಲ್ಲಿ ನಟಿಸಿ ಇಂದು ಸ್ಟಾರ್ ನಟರಾಗಿದ್ದಾರೆ. ಡಾರ್ಲಿಂಗ್ ಸಿನಿಮಾದಲ್ಲಿ ನಟಿಸಿದ ಬಳಿಕ 'ಡಾರ್ಲಿಂಗ್' ಪ್ರಭಾಸ್ ಎಂಬ ಹೆಸರಿನಿಂದಲೇ ಅವರನ್ನು ಗುರುತಿಸಲಾಗುತ್ತದೆ.
ನಟ ಡಾರ್ಲಿಂಗ್ ಪ್ರಭಾಸ್ (Darling Prabhas) ಅವರು ಸಂದರ್ಶನವೊಂದರಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ 'ಅವರ ಪ್ರೀತಿಗೆ, ಲವ್‌ಗೆ ನಾನು ಧನ್ಯವಾದಗಳನ್ನು ಹೇಳಲೇಬೇಕು. ಲವ್ ವ್ಯಕ್ತಪಡಿಸುತ್ತ ಅವರು ಕೆಲವೊಮ್ಮೆ ಬಾರ್ಡರ್ ಲೈನ್ ದಾಟಿಬಿಡುತ್ತಾರೆ. ಕೆಲವರು ನೀವು ಹೇಳಿದಂತೆ ನನ್ನ ಕೆನ್ನೆ ಗಿಂಡುತ್ತಾರೆ. ಆಗೆಲ್ಲಾ ನನಗೆ ಅವರ ಲವ್, ಕ್ರೇಜ್ ಎಲ್ಲವೂ ಓಕೆ, ಅವರು ನನ್ನನ್ನು ತುಂಬಾ ಇಷ್ಟಪಡುತ್ತಾರೆ, ಅವರನ್ನು ನಾನು ಒಮ್ಮೆಯಾದರೂ ಭೇಟಿಯಾಗಬೇಕು ಎಂದೆಲ್ಲಾ ಎನಿಸುತ್ತದೆ.
ಆದರೆ, ನಿಜವಾಗಿಯೂ ಭೇಟಿಯಾಗಬೇಕು ಎಂದೆನಿಸಿದಾಗ ನಾನು ಹಿಂದೇಟು ಹಾಕುವಂತೆ ಮನಸ್ಸು ಹೇಳುತ್ತದೆ. ಏಕೆಂದರೆ, ನಾನು ಭೇಟಿಯಾಗಲು ಹೋದಾಗ ಮತ್ತೆ ಅವರು ಮುಂದಿನ ಭಾಗದಂತೆ, ಇನ್ನೇನಾದ್ರೂ ಮಾಡುವ ಸಂಭವವೇ ಜಾಸ್ತಿ ಇರುತ್ತದೆ. ಹೀಗಾಗಿ ಮೀಟ್ ಮಾಡುವ ಬದಲು ಸುಮ್ಮನೇ ಇದ್ದುಬಿಡೋಣ ಎನಿಸುತ್ತದೆ. ಕೆನ್ನೆ ಗಿಂಡುವ, ತೋಳು ಚಿವುಟುವ ಫ್ಯಾನ್ಸ್, ಅದರಲ್ಲೂ ಮಹಿಳಾ ಫ್ಯಾನ್ಸ್ ಕಂಡಾಗ ಅವರ ಭಾವನೆಗೆ ನಾನು ಬೆಲೆ ಕೊಟ್ಟರೂ ಆದಷ್ಟು ಅವರನ್ಜು ಭೇಟಿಯಾಗಿ ಮಾತುಕತೆ ನಡೆಸುವುದನ್ನು ಅವಾಯ್ಡ್ ಮಾಡುವುದೇ ನನ್ನ ದೃಷ್ಟಿಯಿಂದ ಕ್ಷೇಮ ಎನಿಸಿಬಿಡುತ್ತದೆ' ಎಂದಿದ್ದಾರೆ' ನಟ ಪ್ರಭಾಸ್.
ಮಾಡೋದೆಲ್ಲಾ ಅನಾಚಾರ, ಮನೆ ಮುಂದೆ ಬೃಂದಾವನ; ಚೈತ್ರಾ ಆಚಾರ್ ಮಾತಿಗೆ ಕಂಗಾಲಾದ್ರು ಆ್ಯಂಕರ್!
ಪ್ರಭಾಸ್ ಅವರು 'ವರ್ಷಂ' (Varsham) ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪ್ರವೇಶ ಪಡೆದವರು. ಬಳಿಕ ಅವರು ಹಲವಾರು ಸಿನಿಮಾಗಳಲ್ಲಿ ನಟಿಸಿ ಇಂದು ಸ್ಟಾರ್ ನಟರಾಗಿದ್ದಾರೆ. ಡಾರ್ಲಿಂಗ್ ಸಿನಿಮಾದಲ್ಲಿ ನಟಿಸಿದ ಬಳಿಕ 'ಡಾರ್ಲಿಂಗ್' ಪ್ರಭಾಸ್ ಎಂಬ ಹೆಸರಿನಿಂದಲೇ ಅವರನ್ನು ಗುರುತಿಸಲಾಗುತ್ತದೆ. ಬಾಹುಬಲಿ ಸಿನಿಮಾಗಿಂತ ಮೊದಲು ನಟ ಪ್ರಭಾಸ್ ಕೆರಿಯರ್ ಒಂದು ಹಂತದಲ್ಲಿದ್ದರೆ, ಬಾಹುಬಲಿ ಬಳಿಕ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಖ್ಯಾತಿ ಪಡೆದರು.
ಶೂಟಿಂಗ್ ಸ್ಪಾಟ್‌ನಲ್ಲಿ ಸೂಪರ್ ನ್ಯಾಚುರಲ್ ಪವರ್ ಅನುಭವವಾಗಿತ್ತು; ಸಪ್ತಮಿ ಗೌಡ ಮಾತಿನ ಮರ್ಮವೇನು?
ಆನಂತರ ಅವರು ನಟಿಸಿದ 'ಸಾಹೋ, ರಾಧೆ ಶ್ಯಾಮ್ ಹಾಗೂ ಆದಿಪುರುಷ್ ಸಿನಿಮಾಗಳು ಪ್ಲಾಪ್ ಎನಿಸಿದವು. ಆದರೆ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ (Salaar) ಚಿತ್ರದ ಬಳಿಕ ನಟ ಪ್ರಭಾಸ್ ಮತ್ತೆ ತಮ್ಮ ಸ್ಟಾರ್ ಪಟ್ಟವನ್ನು ಮರಳಿ ಪಡೆದರು. ಸಲಾರ್ ಚಿತ್ರವು 500 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ನಟ ಪ್ರಭಾಸ್ ಅವರನ್ನು ಸೋಲಿನ ಸರಪಳಿಯಿಂದ ಹೊರತಂದಿದೆ. ಒಟ್ಟಿನಲ್ಲಿ, ನಟ ಪ್ರಭಾಸ್ ಅವರಿಗೆ ಮಹಿಳಾ ಫ್ಯಾನ್ಸ್‌ಗಳಿಂದ ಎಸ್ಕೇಪ್ ಆಗುವುದೇ ದೊಡ್ಡ ತಲೆನೋವಾಗಿದೆ.
ಬೇರೆಯವರ ಜೊತೆ ಹೋಲಿಕೆ ಯಾಕೆ, ನಿಮ್ಮ ಟ್ರೂ ಕೆಪಾಸಿಟಿ ಕಂಡುಕೊಳ್ಳಿ; ವೈರಲ್ ಆಯ್ತು ನಟ ಯಶ್ ಮಾತು!