ಹೇಮಂತ್ ಪೂರ್ತಿ ಪಫ್ಸ್‌ ತಿನ್ನಲು ಬಿಡಲಿಲ್ಲ, ರಕ್ಷಿತ್ ಎಂಟು ತಿಂದ್ರು; ದುಃಖ ತೋಡಿಕೊಂಡ ರುಕ್ಮಿಣಿ ವಸಂತ್!

Published : Apr 05, 2024, 07:41 PM ISTUpdated : Apr 05, 2024, 07:45 PM IST
ಹೇಮಂತ್ ಪೂರ್ತಿ ಪಫ್ಸ್‌ ತಿನ್ನಲು ಬಿಡಲಿಲ್ಲ, ರಕ್ಷಿತ್ ಎಂಟು ತಿಂದ್ರು; ದುಃಖ ತೋಡಿಕೊಂಡ ರುಕ್ಮಿಣಿ ವಸಂತ್!

ಸಾರಾಂಶ

'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ಶೂಟಿಂಗ್‌ ಸ್ಪಾಟ್‌ನಲ್ಲಿ ನಾನು ಪಪ್ಸ್‌ ಸೀನ್‌ಗೆ ವೇಟ್ ಮಾಡ್ತಾ ಇದ್ದೆ. ಯಾಕೆಂದ್ರೆ, ಶೂಟಿಂಗ್ ಟೈಮ್‌ನಲ್ಲಿ ತಿನ್ನೋಕೆ ಸಿಗುತ್ತಲ್ಲಾ ಅಂತ!. ಆದ್ರೆ ಏನಾಯ್ತು ಗೊತ್ತಾ? ನಾನು ಒಂದು ಚಿಕ್ಕ ಪೀಸ್ ತಿಂದಿದೀನಿ..

'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ಶೂಟಿಂಗ್‌ ಸ್ಪಾಟ್‌ನಲ್ಲಿ ನಾನು ಪಪ್ಸ್‌ ಸೀನ್‌ಗೆ ವೇಟ್ ಮಾಡ್ತಾ ಇದ್ದೆ. ಯಾಕೆಂದ್ರೆ, ಶೂಟಿಂಗ್ ಟೈಮ್‌ನಲ್ಲಿ ತಿನ್ನೋಕೆ ಸಿಗುತ್ತಲ್ಲಾ ಅಂತ!. ಆದ್ರೆ ಏನಾಯ್ತು ಗೊತ್ತಾ? ನಾನು ಒಂದು ಚಿಕ್ಕ ಪೀಸ್ ತಿಂದಿದೀನಿ, ಡೈರೆಕ್ಟರ್ ಹೇಮಂತ್ ಅವ್ರು 'ರುಕ್ಸ್‌, ಆ ಪಪ್ಸ್‌ನ ಹಾಗೇ ಮೆಂಟೇನ್ ಮಾಡ್ಬೇಕು; ಅಂದ್ರು.. ನಾನು ಒಂದೇ ಒಂದು ಪೀಸ್ ಪಪ್ಸ್‌ ಅಷ್ಟೇ ತಿಂದ್ರೆ ಈ ರಕ್ಷಿತ್ ಎಂಟು ಪಪ್ಸ್‌ ತಿಂದಿದಾರೆ' ಅಂದ್ರು ನಾಯಕಿ ನಟಿ ರುಕ್ಮಿಣಿ ವಸಂತ್. 

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಈ ಘಟನೆಯನ್ನು ನಟಿ ರುಕ್ಮಿಣಿ ವಸಂತ್ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಸಂದರ್ಶಕಿ ಜತೆ ನಟಿ ರುಕ್ಮಿಣಿ ವಸಂತ್ ಈ ಘಟನೆಯನ್ನು ಶೇರ್ ಮಾಡಿಕೊಂಡಿದ್ದಾರೆ. ಪಕ್ಕದಲ್ಲಿದ್ದ ನಟ ರಕ್ಷಿತ್ ರುಕ್ಮಿಣಿ ಮಾತಿಗೆ ನಗುತ್ತಿದ್ದರು. ಡೈರೆಕ್ಟರ್ ಹೇಮಂತ್ ಆಗ ಪಪ್ಸ್‌ ಪೂರ್ತಿಯಾಗಿ ತಿನ್ನಲು ಕೊಡದಿದ್ದುದಕ್ಕೆ ಕಾರಣವನ್ನು ಕೂಡ ಹೇಳಿದ ರಕ್ಷಿತ್ 'ಕಂಟಿನ್ಯುಟಿ ಎಂದರು. ಆದರೆ ಎಷ್ಟೋ ಕಾಲದ ಹಿಂದೆ ಅಂದು ತಿನ್ನಲು ಸಿಗದ ಪಪ್ಸ್‌ ಬಗ್ಗೆ ಇಂದೂ ಕೂಡ ರುಕ್ಮಿಣಿಗೆ ಬೇಸರ ಇದೆ ಎನ್ನುವಂತಿತ್ತು ಅವರ ಮಾತು. 

ಸಿಕ್ಕಸಿಕ್ಕಲ್ಲಿ ಪ್ರಭಾಸ್ ಕೆನ್ನೆ ಗಿಂಡುವ ಲೇಡಿ ಫ್ಯಾನ್ಸ್‌; ಅಂಥ ಹುಡುಗಿಯರ ಲವ್-ಕ್ರಶ್‌ ಬಗ್ಗೆ ಪ್ರಭಾಸ್ ಹೇಳಿದ್ದೇನು?

ಒಟ್ಟಿನಲ್ಲಿ, ತಮ್ಮ ಮೊದಲ ಚಿತ್ರದ ಎರಡನೇ ಭಾಗದ ಶೂಟಿಂಗ್ ಘಟನೆಯೊಂದನ್ನು ನಟಿ ರುಕ್ಮಿಣಿ ವಸಂತ್ ಹಂಚಿಕೊಂಡಿದ್ದು ಸಖತ್ ವೈರಲ್ ಆಗಿದೆ. ಹೇಮಂತ್ ನಿರ್ದೇಶನದ ಸಪ್ತ ಸಾಗರದಾಚೆ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿರುವ ನಟಿ ರುಕ್ಮಿಣಿ ವಸಂತ್, ತಮ್ಮ ಸಹಜ ನಟನೆಯ ಮೂಲಕ ಗಮನಸೆಳೆದಿದ್ದಾರೆ. ಸಿಂಪಲ್ ಸ್ಟಾರ್ ನಟ ರಕ್ಷಿತ್ ಜತೆ ತೆರೆ ಹಂಚಿಕೊಂಡಿರುವ ರುಕ್ಮಿಣಿ ವಸಂತ್ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಭರವಸೆ ಮೂಡಿಸಿದ್ದಾರೆ.

ಮಾಡೋದೆಲ್ಲಾ ಅನಾಚಾರ, ಮನೆ ಮುಂದೆ ಬೃಂದಾವನ; ಚೈತ್ರಾ ಆಚಾರ್ ಮಾತಿಗೆ ಕಂಗಾಲಾದ್ರು ಆ್ಯಂಕರ್! 

ಸೋಷಿಯಲ್ ಮೀಡಿಯಾಗಳಲ್ಲಿ ನಟಿ ರುಕ್ಮಿಣಿ ವಸಂತ್ ಅವರಿಗೆ ಬಹಳಷ್ಟು ಫ್ಯಾನ್ಸ್ ಫಾಲೋವರ್ಸ್‌ ಆಗಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾಗೆ ಆಯ್ಕೆಯಾಗುವ ಮೊದಲೇ ರುಕ್ಮಿಣಿ ವಸಂತ್‌ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿಗಳು ಆಗಿದ್ದರು. ಸಪ್ತ ಸಾಗರದಾಚೆ ಸಿನಿಮಾ ಬಳಿಕ ಫ್ಯಾನ್ಸ್ ಸಂಖ್ಯೆ ದುಪ್ಪಟ್ಟು ಆಗಿದ್ದು, ಅವರ ಮುಂದಿನ ಚಿತ್ರಕ್ಕಾಗಿ ಕಾಯುತ್ತಿದ್ದಾರಂತೆ. ಆದರೆ, ಅಳೆದೂ ತೂಗಿ ಪಾತ್ರ ಮತ್ತು ಟೀಮ್‌ಅನ್ನು ತಾವು ಆಯ್ಕೆ ಮಾಡಿಕೊಳ್ಳುವುದಾಗಿ ನಟಿ ರುಕ್ಮಿಣಿ ವಸಂತ್ ಹೇಳಿದ್ದಾರೆ. 

ಬೇರೆಯವರ ಜೊತೆ ಹೋಲಿಕೆ ಯಾಕೆ, ನಿಮ್ಮ ಟ್ರೂ ಕೆಪಾಸಿಟಿ ಕಂಡುಕೊಳ್ಳಿ; ವೈರಲ್ ಆಯ್ತು ನಟ ಯಶ್ ಮಾತು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Kichcha Sudeep: ರಣಹದ್ದಿನ ಬಗ್ಗೆ ಕಿಚ್ಚ ಸುದೀಪ್‌ ಹೇಳಿದ್ದೇನು? ನಿಜ ಏನು?
BBK 12 ಫಿನಾಲೆ ಬೆನ್ನಲ್ಲೇ ಹೊಸ ವಿವಾದ, ಗಿಲ್ಲಿ ನಟ ಅಶ್ವಿನಿ ಗೌಡ ಫ್ಯಾನ್ಸ್ ನಡುವೆ ಭಾಷೆ ಜೊತೆ ಜಾತಿ ಜಗಳ..!