ಐಶ್ವರ್ಯಾ ರೈ ಮಗಳು ಆರಾಧ್ಯಾ ಪಾದಕ್ಕೆರಗಿದ್ದಕ್ಕೆ ಸ್ವತಃ ಶಿವಣ್ಣ ಹೇಳಿದ್ದೇನು? ಹೀಗೂ ಉಂಟೇ?!

By Shriram Bhat  |  First Published Nov 10, 2024, 12:29 PM IST

ಐಶ್ವರ್ಯಾ ರೈ ಮಗಳು ಆರಾಧ್ಯಾ ಅವರು ನಟ ಶಿವರಾಜ್‌ಕುಮಾರ್ ಕಾಲಿಗೆರಗಿ ನಮಸ್ಕರಿಸಿದ್ದು ಸಖತ್ ಸುದ್ದಿಯಾಗಿತ್ತು.. ಕರ್ನಾಟಕ ಮೂಲದ ವಿಶ್ವಸುಂದರಿ, ನಟಿ ಐಶ್ವರ್ಯಾ ರೈ ಬಗ್ಗೆ ನಟ ಶಿವರಾಜ್‌ಕುಮಾರ್ ಅವರು 'ನೋಡಿ, ನಾನು ಅದನ್ನೇ ಹೇಳಿದ್ದು.. 


ಸ್ವಲ್ಪ ಕಾಲದ ಹಿಂದೆ ನಟಿ (Aishwarya Rai) ಐಶ್ವರ್ಯಾ ರೈ, ಅವರ ಮಗಳು ಆರಾಧ್ಯಾ ಬಚ್ಚನ್ (Aaradhya Bachchan) ಹಾಗೂ ಕನ್ನಡದ ನಟ ಶಿವರಾಜ್‌ಕುಮಾರ್ (Shiva Rajkumar) ಈ ಮೂವರ ಫೋಟೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ಆಗಿದ್ದು ಗೊತ್ತೇ ಇದೆ. ಈ ಸಂಗತಿ ದೇಶದಲ್ಲೆಡೆ, ಅದರಲ್ಲು ಕರ್ನಾಟಕದ ತುಂಬೆಲ್ಲಾ ಸುದ್ದಿಯಾಗಿತ್ತು. ಕಾರಣ, ಐಶ್ವರ್ಯಾ ರೈ ಮಗಳು ಆರಾಧ್ಯಾ ಅವರು ನಟ ಶಿವರಾಜ್‌ಕುಮಾರ್ ಕಾಲಿಗೆರಗಿ ನಮಸ್ಕರಿಸಿದ್ದು. ಅದಕ್ಕೆ ಶಿವಣ್ಣ ಅವರ ಹೃದಯಸ್ಪರ್ಶಿ ನೋಟ ಮತ್ತು ಮನಸಾರೆ ಆಶೀರ್ವಾದ ನೀಡಿದ್ದು!

ಈ ಬಗ್ಗೆ ಸಂದರ್ಶನವೊಂದರಲ್ಲಿ ಕೇಳಲಾದ ಪ್ರಶ್ನೆಗೆ ಸ್ವತಃ ನಟ ಶಿವರಾಜ್‌ಕುಮಾರ್ ಸುದೀರ್ಘವಾಗಿ ಉತ್ತರ ಕೊಟ್ಟಿದ್ದಾರೆ. ಶಿವಣ್ಣರ ಉತ್ತರ ಬಹಳಷ್ಟು ಪರಿಣಾಮಕಾರಿಯಾಗಿದ್ದು, ಅದು ಆರಾಧ್ಯ ಬಚ್ಚನ್ ಮಾತ್ರವಲ್ಲ, ಐಶ್ವರ್ಯಾ ರೈ ಹಾಗೂ ಸ್ವತಃ ಶಿವಣ್ಣರ ವ್ಯಕ್ತಿತ್ವಕ್ಕೂ ಹಿಡಿದ ಕನ್ನಡಿಯೆಂದೇ ಹೇಳಬೇಕು. ಐಶೂ ಬಗ್ಗೆ ಶಿವಣ್ಣ ಆಡಿದ ಪ್ರತಿಯೊಂದು ಮಾತು ಕೂಡ ಮುತ್ತು ಮಾತ್ರವಲ್ಲ ಜೊತೆಗೆ ಭಾರೀ ತೂಕವುಳ್ಳದ್ದು. 

Tap to resize

Latest Videos

undefined

ಯಾರಿಗೂ ಹೇಳದ 'ಬಂಗಾರದ ಮನುಷ್ಯ' ಭಾರೀ ಸಕ್ಸಸ್‌ ಗುಟ್ಟು ಉಪೇಂದ್ರಗೆ ಹೇಳಿದ್ರಂತೆ ಅಣ್ಣಾವ್ರು!

ಜೊತೆಗೆ, ಈ ನೆಲದ ಸಂಸ್ಕೃತಿ, ಅವರೆಲ್ಲರ ಕನ್ನಡ ಪ್ರೇಮ ಹಾಗೂ ರಕ್ತದಲ್ಲಿಯೇ ಇರುವ ಸಂಸ್ಕಾರ ಇವೆಲ್ಲವೂ ಜಗತ್ತಿನ ಕಣ್ಣಿಗೆ ಬಿದ್ದಿದ್ದು ಆ ಒಂದು ಘಟನೆಯಿಂದ ಎನ್ನಬಹುದು. ನಟ ಶಿವರಾಜ್‌ಕುಮಾರ್ ಅವರು ಈ ಬಗ್ಗೆ ಅದೇನು ಹೇಳಿದ್ದಾರೆ? ಆಗ ಅವರ ಜೊತೆಯಲ್ಲೇ ಇದ್ದ ಶಿವಣ್ಣ ಪತ್ನಿ ಗೀತಾ ಶಿವರಾಜ್‌ಕುಮಾರ್ ಅವರ ರಿಯಾಕ್ಷನ್ ಹೇಗಿತ್ತು? ಇವೆಲ್ಲದರ ಮಾಹಿತಿ ಇಲ್ಲಿದೆ ನೋಡಿ.. 

ಕರ್ನಾಟಕ ಮೂಲದ ವಿಶ್ವಸುಂದರಿ, ನಟಿ ಐಶ್ವರ್ಯಾ ರೈ ಬಗ್ಗೆ ನಟ ಶಿವರಾಜ್‌ಕುಮಾರ್ ಅವರು 'ನೋಡಿ, ನಾನು ಅದನ್ನೇ ಹೇಳಿದ್ದು.. ಅವ್ರ ಸೌಂದರ್ಯ ಬರೀ ಮುಖದಲ್ಲಿ ಮಾತ್ರ ಇಲ್ಲ.. ಅದನ್ನು ಅವ್ರು ಬೆಳೆಸಿಕೊಂಡು, ಅವ್ರ ಮಗಳನ್ನೂ ಬೆಳೆಸಿರೋ ರೀತಿನಲ್ಲಿ ಇದೆ.. ನಮಗೆಲ್ಲಾ ಅದು ಪ್ರೌಡ್ ಮೂವ್‌ಮೆಂಟ್‌, ಅವ್ರು ವಿಶ್ವಸುಂದರಿ ಆಗಿದ್ದು ಭಾರತಕ್ಕೇ ಒಂದು ಹಿರಿಮೆ, ವಿಶ್ವದಲ್ಲೇ ಭಾರತದ ಕೀರ್ತಿ ಮೆರೆಸಿದ್ದು ನಿಜವಾಗಿಯೂ ನಮಗೆಲ್ಲರಿಗೂ ಹೆಮ್ಮೆ.. 

ವಿಜಯ ರಾಘವೇಂದ್ರಗೆ ಜೋಡಿಯಾದ ಡಾಕ್ಟರ್ ಅಶ್ವಿನಿ; ಚಿನ್ನಾರಿ ಮುತ್ತನಿಗೆ ಹೊಸ ಗೃಹಮಂತ್ರಿ!

ಅಂಥವ್ರು ಮಗಳಿಗೆ ಆ ರೀತಿಯಾದ ಒಂದು ಸಂಸ್ಕೃತಿ ಕಲಿಸಿದಾರೆ ಅಂತ ನಾವ್ಯಾರೂ ಊಹೆ ಕೂಡ ಮಾಡಿರ್ಲಿಲ್ಲ.. ಆವತ್ತು ನಾನಂತೂ ನಿರೀಕ್ಷೆ ಕೂಡ ಮಾಡಿರ್ಲಿಲ್ಲ.. ಯಾವತ್ತೇ ಸಿಕ್ಕಿದ್ರೂ ಅಷ್ಟೇ ಗೌರವ-ಆದರದಿಂದ ಮಾತಾಡ್ತಾರೆ.. ಈ ತುಂಬಿದ ಕೊಡ ತುಳುಕೋದಿಲ್ಲ ಅಂತಾರಲ್ಲ, ಅದಕ್ಕೆ ಪರ್ಫೆಕ್ಟ್‌ ಉದಾಹರಣೆ ಐಶ್ವರ್ಯಾ ರೈ ಅಂತ ಹೇಳೋಕೆ ಇಷ್ಟಪಡ್ತೀನಿ.. 

ಅದಕ್ಕೇ ನೋಡಿ, ಅವ್ರು ಯಾರ್ ಸೊಸೆ ಅಂತ ಗೊತ್ತಲ್ಲ.. ಅವ್ರು ಯಾವ್ ಊರಿಂದ ಹೋಗಿರೋದು, ಅವೆಲ್ಲಾ ಕೌಂಟ್ ಆಗುತ್ತೆ. ಅದ್ರಿಂದ್ಲೇ ಆ ಕಲ್ಚರ್ ಬಂದಿರೋದು.. ಅವ್ರನ್ನ ನೋಡಿದ್ರೆ ಒಂಥರಾ ಡಿವೈನ್ ಫೀಲ್ ಆಗುತ್ತೆ.. ನಂಗಂತೂ ಆ ಘಟನೆ ತುಂಬಾನೇ ಟಚ್ ಆಯ್ತು..' ಎಂದಿದ್ದಾರೆ ನಟ ಶಿವರಾಜ್‌ಕುಮಾರ್. ಅವರ ಪಕ್ಕದಲ್ಲೆ ಇದ್ದ ಪತ್ನಿ ಗೀತಾ ಶಿವರಾಜ್‌ಕುಮಾರ್ ಸಹ 'ಹೌದು ಹೌದು' ಎಂಬಂತೆ ತಲೆ ಅಲ್ಲಾಡಿಸುತ್ತಿದ್ದರು. 

ಶತ್ರುವಿನ ಗುಟ್ಟು ಬಾಯ್ಬಿಟ್ಟ ಕಿಚ್ಚ ಸುದೀಪ್, ಈಗ ಅದು ಜಗತ್ತಿನೆಲ್ಲೆಡೆ ಟಾಂ ಟಾಂ ಆಗ್ತಿದೆ!

click me!