ಯಾರಿಗೂ ಹೇಳದ 'ಬಂಗಾರದ ಮನುಷ್ಯ' ಭಾರೀ ಸಕ್ಸಸ್‌ ಗುಟ್ಟು ಉಪೇಂದ್ರಗೆ ಹೇಳಿದ್ರಂತೆ ಅಣ್ಣಾವ್ರು!

By Shriram Bhat  |  First Published Nov 10, 2024, 11:16 AM IST

'ನಾನು ಅಣ್ಣಾವ್ರ ಜೊತೆ ಕೂತ್ಕೊಂಡು ತುಂಬಾ ಮಾತಾಡಿದೀನಿ.. ಅವ್ರ ಜೊತೆ ಮಾತಾಡ್ವಾಗ ಒಂದೇ ಒಂದು ಪ್ರಶ್ನೆ ಕೇಳಿದೆ ಅಣ್ಣಾವ್ರನ್ನ.. ಅಣ್ಣಾ, ಬಂಗಾರದ ಮನುಷ್ಯ ಆ ತರ ಎರಡು ವರ್ಷ ಓಡ್ತಲ್ಲಾ, ಏನ್ ಕಾರಣಕ್ಕೋಸ್ಕರ ಅದು ಅಷ್ಟು ದೊಡ್ಡ ಹಿಟ್..


ಕನ್ನಡದ ನಟ-ನಿರ್ದೇಶಕರಾದ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರು ಹೇಳಿರುವ ಮಾತೊಂದು ಇದೀಗ ಸೋಷಿಯಲ್ ಮೀಡಯಾದಲ್ಲಿ ಸುತ್ತುತ್ತ ಸಖತ್ ಸೌಂಡ್ ಮಾಡುತ್ತಿದೆ. ಉಪೇಂದ್ರ ಮಾತನಾಡಿರೋದು ಅಣ್ಣಾವ್ರ ಬಗ್ಗೆ.. ಡಾ ರಾಜ್‌ಕುಮಾರ್ (Dr Rajkumar) ನಟನೆಯ ಬಂಗಾರದ ಮನುಷ್ಯ (Bangarada Manushya) ಸಿನಿಮಾದ ಸಕ್ಸಸ್ ಬಗ್ಗೆ.. ಅದೂ ಕೂಡ, ಡಾ ರಾಜ್‌ಕುಮಾರ್ ಹಿರಿಯ ಮಗ ಡಾ. ಶಿವರಾಜ್‌ಕುಮಾರ್ ಎದುರಿಗೇ ಉಪ್ಪಿ ಈ ಮಾತು ಹೇಳಿದ್ದಾರೆ. ಉಪೇಂದ್ರ ಹೇಳಿರೋದು ಸ್ವತಃ ಅಣ್ಣಾವ್ರು ಅವರ ಜೊತೆ ಮಾತನಾಡಿದಾಗ ಹೇಳಿರೋ ಸಂಗತಿ!

ಹಾಗಿದ್ದರೆ, ರಿಯಲ್ ಸ್ಟಾರ್ ಉಪ್ಪಿ ಹೇಳಿರೋದೇನು? ಇಲ್ಲಿದೆ ನೋಡಿ.. 'ನಾನು ಅಣ್ಣಾವ್ರ ಜೊತೆ ಕೂತ್ಕೊಂಡು ತುಂಬಾ ಮಾತಾಡಿದೀನಿ.. ಅವ್ರ ಜೊತೆ ಮಾತಾಡ್ವಾಗ ಒಂದೇ ಒಂದು ಪ್ರಶ್ನೆ ಕೇಳಿದೆ ಅಣ್ಣಾವ್ರನ್ನ.. ಅಣ್ಣಾ, ಬಂಗಾರದ ಮನುಷ್ಯ ಆ ತರ ಎರಡು ವರ್ಷ ಓಡ್ತಲ್ಲಾ, ಏನ್ ಕಾರಣಕ್ಕೋಸ್ಕರ ಅದು ಅಷ್ಟು ದೊಡ್ಡ ಹಿಟ್ ಆಗಿರ್ಬಹುದು? ಹೇಗೆ ಇದೆಲ್ಲಾ ಆಯ್ತು..?' ಅಂತ ಕೇಳಿದೆ. ಅದಕ್ಕೆ ಅವ್ರು ಏನಂದ್ರು ಗೊತ್ತಾ? 

Tap to resize

Latest Videos

undefined

ವಿಜಯ ರಾಘವೇಂದ್ರಗೆ ಜೋಡಿಯಾದ ಡಾಕ್ಟರ್ ಅಶ್ವಿನಿ; ಚಿನ್ನಾರಿ ಮುತ್ತನಿಗೆ ಹೊಸ ಗೃಹಮಂತ್ರಿ!

ನೋಡಿ ಈ ಹಳ್ಳಿ ಕಡೆ ಶೂಟಿಂಗ್ ಮಾಡ್ತಾರಲ್ಲ, ಆಗ ತುಂಬಾ ಜನರು ಜೂನಿಯರ್ ಆರ್ಟಿಸ್ಟ್‌ಗಳೆಲ್ಲಾ ಇರ್ತಾರೆ.. ಈ ಅಸಿಷ್ಟಂಟ್ ಡೈರೆಕ್ಟರ್‌ಗಳಿಗೆ ಗೊತ್ತಿಲ್ದೇ ಯಾರೋ ಒಬ್ಬ ಹಳ್ಳಿಯವ್ನು ಪಾಸ್ ಆಗ್ಬಿಟ್ಟಿದಾನೆ.. ಅವ್ನ ಲಕ್ ಹೊಡೆದ್ಬಿಡ್ತು ಆ ಪಿಕ್ಚರ್‌ಗೆ.. ಗೊತ್ತಾಯ್ತಲ್ಲ ನಿಮ್ಗೆ..? ಡೈರೆಕ್ಟರ್‌, ರೈಟರ್‌, ಹೀರೋ, ಹೀರೋಯಿನ್ ಅಥವಾ ಸಾಂಗ್ಸ್‌, ಅದು ಯಾವ್ದೂ ಅಲ್ಲ, ಯಾರೋ ಒಬ್ಬ ಹಿಂದೆ ಹೋದ ನೋಡಿ.. ಅವ್ನ ಲಕ್ ಹೊಡೆದ್ಬಿಟ್ಟದೆ. ಹಾಗೆ ಆಯ್ತು ಅಂದ್ರೆ ನೋಡಿ.. ' ಅಂತ ಹೇಳಿದ್ರು ಡಾ ರಾಜ್‌ಕುಮಾರ್ ಅವ್ರು.. 

ಅವ್ರ ಮಾತನ್ನು ಅರ್ಥ ಮಾಡ್ಕೊಳ್ಳೋಕೆ ನಂಗೆ ಇಪ್ಪತ್ತು ವರ್ಷ ಬೇಕಾಯ್ತು.. ಇದೆಲ್ಲಾ ನಾವ್ ಅಂದ್ಕೋತೀವಿ ನಮ್ದು ನಮ್ದು ಅಂತ, ಆದ್ರೆ ಅಲ್ಲ ಅದು.. ಅದು ಮ್ಯಾಜಿಕ್ ಅದು.. ಅದು ಮೇಲಿಂದ ಬರುವಂಥದ್ದು.. ಒಳ್ಳೇ ಮನಸ್ಸುಗಳು, ಸ್ವಚ್ಛ ಮನಸ್ಸು ಎಲ್ಲಿರುತ್ತೋ ಅಲ್ಲಿ ಹ್ಯಾಟ್ರಿಕ್‌, ಸಕ್ಸಸ್‌ ಕುಣಿತಾ ಇರುತ್ತೆ.. ಲೈಫಲ್ಲಿ ಅಷ್ಟೇ..' ಎಂದಿದ್ದಾರೆ ಕನ್ನಡದ ರಿಯಲ್ ಸ್ಟಾರ್ ಖ್ಯಾತಿಯ ನಟ-ನಿರ್ದೇಶಕ ಉಪೇಂದ್ರ. 

ಶತ್ರುವಿನ ಗುಟ್ಟು ಬಾಯ್ಬಿಟ್ಟ ಕಿಚ್ಚ ಸುದೀಪ್, ಈಗ ಅದು ಜಗತ್ತಿನೆಲ್ಲೆಡೆ ಟಾಂ ಟಾಂ ಆಗ್ತಿದೆ!

ಡಾ ರಾಜ್‌ಕುಮಾರ್ ಅಂದರೆ ಹಾಗೇನೇ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರ ಮಾತು. ಅಣ್ಣಾವ್ರು ಎಂದರೆ ಅವರೊಬ್ಬ ಮುಗ್ಧತೆ ಹಾಗೂ ಮಾನವೀಯತೆ ಬೆರೆತ ಸಾಕಾರ ಮೂರ್ತಿ. ಅವರು ಯಾವುದನ್ನೂ ತಾವು ಮಾಡಿದ್ದು ಎನ್ನುತ್ತಲೇ ಇರಲಿಲ್ಲ.. ಏನೇ ಸಾಧನೆ ಮಾಡಿದ್ದರೂ, ಸಕ್ಸಸ್ ಆಗಿದ್ದರೂ ಅದರ ಕ್ರೆಡಿಟ್ಟನ್ನು ಬೇರೆಯವರಿಗೇ ಕೊಟ್ಟುಬಿಡುತ್ತಿದ್ದರು. ಎಲ್ಲಾ ಯಶಸ್ಸಿಗೆ ಕಾರಣವನ್ನು ದೇವರಿಗೆ ಅಥವಾ ಇತರರಿಗೆ ಹಂಚಿಬಿಡುತ್ತಿದ್ದರು ಎನ್ನುತ್ತಾರೆ. 

ಅದೇ ರೀತಿ, ಬಂಗಾರದ ಮನುಷ್ಯ ಸಿನಿಮಾದ ಆ ಅಭೂತಪೂರ್ವ ಯಶಸ್ಸನ್ನು ಕೂಡ ಅವರು ಹಳ್ಳಿಯ ಯಾರೋ ಒಬ್ಬ ಮಗ್ಧ ಜೀವಿಗೆ ಧಾರೆ ಎರೆದಿದ್ದಾರೆ ನೋಡಿ.. ಅದನ್ನು ಸಿನಿಮಾ ಹೊರತಾಗಿ ಒಬ್ಬರಿಗೆ ನೀಡಿ, ಇಡೀ ಟೀಮ್‌ನಲ್ಲಿ ಯಾರೊಬ್ಬರಿಗೂ ಶತ್ರು ಆಗದೇ, ಆ ಹಳ್ಳಿಯವನೊಬ್ಬನಿಗೆ ನೀಡಿ, ತಾವು ಇನ್ನೂ ದೊಡ್ಡವರಾಗಿದ್ದಾರೆ. ಅಲ್ಲಿ ಕಾಮನ್‌ ಸೆನ್ಸ್ ಉಪಯೋಗಿಸಿದರೂ ಕೂಡ, ಡಾ ರಾಜ್ ಅವರು ಯಶಸ್ಸಿನ ಕ್ರೆಡಿಟ್ ಯಾರೊಬ್ಬರಿಗೇ ನೀಡಿದ್ದರೂ ಅಲ್ಲೊಂದು ಕಾಂಟ್ರೋವರ್ಸಿ ಸೃಷ್ಟಿಯಾಗುತ್ತಿತ್ತೇನೋ! 

ನನ್ನ ಅವನ ನಡುವೆ ಕುಚ್‌ಕುಚ್‌ ಏನಿಲ್ಲ, ಸ್ನೇಹಿತರಷ್ಟೇ; ಅನುಷಾ ರೈ ಮಾತಿಗೆ ಏನಂತಿದೆ ದೊಡ್ಮನೆ?

ಯಾವುದೇ ರೀತಿಯಲ್ಲೂ ಕೂಡ ಡಾ ರಾಜ್‌ಕುಮಾರ್ ಸಾಮಾನ್ಯವಾಗಿ ವಿವಾದಗಳನ್ನು ಹುಟ್ಟುಹಾಕುತ್ತಿರಲಿಲ್ಲ. ಜೊತೆಗೆ, ಸಹಜವಾಗಿಯೇ ಅವರು ಸಕ್ಸಸ್‌ ಕ್ರೆಡಿಟ್‌ ಅನ್ನು ಬೇರೆಯವರಿಗೇ ನೀಡುತ್ತಿದ್ದರು. ಜೊತೆಗೆ, ಅದನ್ನು ಚಿತ್ರತಂಡದ ಯಾರೊಬ್ಬರ ತಲೆಗೆ ಕಟ್ಟಿ ಬೇರೆಯವರ ಕೆಂಗಣ್ಣಿಗೆ ಗುರಿಯಾಗುತ್ತಿರಲಿಲ್ಲ. ಅದು ಅವರ ಮುಗ್ಧತೆ ಎನ್ನುವುದಕ್ಕಿಂತಲೂ ಹೆಚ್ಚಾಗಿ ಬುದ್ಧಿವಂತಿಕೆ ಹಾಗೂ ಮಾನವೀಯತೆ ಎನ್ನುವುದು ಸರಿಯೇನೋ! ನೀವೇನಂತೀರಾ..?

click me!