ಶತ್ರುವಿನ ಗುಟ್ಟು ಬಾಯ್ಬಿಟ್ಟ ಕಿಚ್ಚ ಸುದೀಪ್, ಈಗ ಅದು ಜಗತ್ತಿನೆಲ್ಲೆಡೆ ಟಾಂ ಟಾಂ ಆಗ್ತಿದೆ!

Published : Nov 09, 2024, 11:06 PM IST
ಶತ್ರುವಿನ ಗುಟ್ಟು ಬಾಯ್ಬಿಟ್ಟ ಕಿಚ್ಚ ಸುದೀಪ್, ಈಗ ಅದು ಜಗತ್ತಿನೆಲ್ಲೆಡೆ ಟಾಂ ಟಾಂ ಆಗ್ತಿದೆ!

ಸಾರಾಂಶ

'ಎರಡೇ ಎರಡು ವಾಕ್ಯಗಳು' ಭಾರೀ ವೈರಲ್ಆಗುತ್ತಿವೆ.. ಅದೇನು ಅನ್ನೋ ಕ್ಯೂರಿಯಾಸಿಟಿ ನಿಮಗಿದ್ದರೆ ಏನಂತ ನೋಡಿ.. ಹಾಗಿದ್ದರೆ ಕಿಚ್ಚ ಸುದೀಪ್ ಮಾತಿನ ಅರ್ಥ ಒಳ್ಳೆಯವರಿಗಿಂತ ಕೆಟ್ಟವರೇ ಪವರ್‌ಫುಲ್ ಅಂತಾನಾ? ಹಾಗಂತ ಕೇಳ್ಬೇಡಿ..! ಯಾಕಂದ್ರೆ, ಅವರು ಹೇಳಿದ್ದು...

ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಮಾತುಗಳು ಮೀಮ್ಸ್‌, ಶಾರ್ಟ್ಸ್‌, ಅದೂ ಇದೂ ಅಂತ ಸೋಷಿಯಲ್ ಮೀಡಿಯಾಗಳಲ್ಲಿ ಓಡಾಡುತ್ತಲೇ ಇರುತ್ತವೆ. ಹೀಗೇ ಈಗೊಂದು ಸುದ್ದಿ ಓಡಾಡುತ್ತಿರೋದು ಏನಂದ್ರೆ, 'ಕಿಚ್ಚನ ಮಾತು' ಅನ್ನೋ ಎರಡೇ ಎರಡು ಶಬ್ಧಗಳಲ್ಲಿ 'ಎರಡೇ ಎರಡು ವಾಕ್ಯಗಳು' ಭಾರೀ ವೈರಲ್ಆಗುತ್ತಿವೆ.. ಅದೇನು ಅನ್ನೋ ಕ್ಯೂರಿಯಾಸಿಟಿ ನಿಮಗಿದ್ದರೆ ಏನಂತ ನೋಡಿ..

ಕಿಚ್ಚ ಸುದೀಪ್ ಎಲ್ಲೋ ಸಂದರ್ಶನದಲ್ಲಿ ಹೀಗೆ ಹೇಳಿದ್ದಾರಂತೆ. 'ಜೀವನದಲ್ಲಿ ಒಳ್ಳೇ ಹೆಸರು ಮಾಡಬೇಕಂದ್ರೆ ಒಳ್ಳೇ ಸ್ನೇಹಿತರನ್ನು ಹುಡುಕಬೇಕು.. ಇತಿಹಾಸದಲ್ಲಿ ಒಳ್ಳೇ ಹೆಸರು ಮಾಡಬೇಕಂದ್ರೆ ಒಳ್ಳೇ ಶತ್ರುನ ಹುಡುಕಬೇಕು.. ಇದು ಕಿಚ್ಚ ಸುದೀಪ್ ಮಾತು ಅಂತ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿವೆ.. ಅದು ಸುಳ್ಳು ಅಂತ ಹೇಳಲೂ ಸಾಧ್ಯವಿಲ್ಲ. ಏಕೆಂದರೆ, ನಟ ಕಿಚ್ಚ ಸುದೀಪ್ ಅಂತಹ ಮಾತುಗಳನ್ನು ಸಾಕಷ್ಟು ಬಾರಿ ಆಡುತ್ತಾರೆ.

ನನ್ನ ಅವನ ನಡುವೆ ಕುಚ್‌ಕುಚ್‌ ಏನಿಲ್ಲ, ಸ್ನೇಹಿತರಷ್ಟೇ; ಅನುಷಾ ರೈ ಮಾತಿಗೆ ಏನಂತಿದೆ ದೊಡ್ಮನೆ?

ಹಾಗಿದ್ದರೆ ಕಿಚ್ಚ ಸುದೀಪ್ ಮಾತಿನ ಅರ್ಥ ಒಳ್ಳೆಯವರಿಗಿಂತ ಕೆಟ್ಟವರೇ ಪವರ್‌ಫುಲ್ ಅಂತಾನಾ? ಹಾಗಂತ ಕೇಳ್ಬೇಡಿ..! ಯಾಕಂದ್ರೆ, ಅವರು ಹೇಳಿದ್ದು, ಒಬ್ಬ ವ್ಯಕ್ತಿಗೆ ಅವನ ಮೈನಸ್ ಪಾಯಿಂಟ್‌ಗಳನ್ನು ಆತನ ಸ್ನೇಹಿತರು ಹೇಳುವುದಕ್ಕಿಂತ ಹೆಚ್ಚಾಗಿ ಅವನ ಶತ್ರುಗಳೇ ಹೇಳುತ್ತಾರೆ ಅಂತಿರಬಹುದು. 

ಏಕೆಂದರೆ, ಮಿತ್ರು ಯಾವತ್ತಿಗೂ ಮಿತ್ರತ್ವನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಆ ಕಾರಣಕ್ಕಾಗಿ ಅವರು ತಮ್ಮ ಸ್ನೇಹಿತನ ತಪ್ಪನ್ನು ಹೇಳಲು ಬಯಸುವುದಿಲ್ಲ. ಆದರೆ ಶತ್ರಯ ಹಾಗಲ್ಲ, ಅವನು ಅತನ ಶತ್ರುಗಳ ತಪ್ಪನ್ನು ಹುಡುಕಿ ಹುಡುಕಿ ಹೇಳುತ್ತಲೇ ಇರುತ್ತಾನೆ. ತಪ್ಪನ್ನು ತಿದ್ದಿಕೊಳ್ಳುವ ಮನಸ್ಸಿದ್ದರೆ ಅದು ಸಿಕ್ಕಾಪಟ್ಟೆ ಸಹಾಯಕವಾಗುತ್ತದೆ. 

ಯಶ್ ಬಗ್ಗೆ ಶಾರುಖ್‌ ಖಾನ್ ಕಾಮೆಂಟ್, ಬಾಲಿವುಡ್ ಸ್ಟಾರ್ ಮಾತಿಗೆ ಜಗತ್ತೇ ಶಾಕ್!

ನಟ ಕಿಚ್ಚ ಸುದೀಪ್ ಮಾತುಗಳೆಂದರೆ ಸಾಮಾನ್ಯವೇ? ಅವುಗಳನ್ನು ಅಷ್ಟು ಸುಲಭವಾಗಿ ತಳ್ಳಿ ಹಾಕಲು ಸಾಧ್ಯವೇ ಇಲ್ಲ. ಅದರಲ್ಲೂ ಅವರ ಅಭಿಮಾನಿಗಳಿಗಂತೂ ಅದು ವೇದವಾಕ್ಯ. ಹೀಗಿರುವಾಗ, ನಟ ಕಿಚ್ಚ ಸುದೀಪ್ ಈ ಮಾತನ್ನು ಬುದ್ಧಿವಂತರು ಸರಿಯಾಗಿಯೇ ಅರ್ಥೈಸಿಕೊಳ್ಳುತ್ತಾರೆ. ಆದರೆ ಜನಸಾಮಾನ್ಯರು ಅವರಿಗೆ ಬೇಕಾದಂತೆ ಅರ್ಥ ಮಾಡಿಕೊಳ್ಳಬಹದು, ಅವರಿಷ್ಟ ಎನ್ನಬಹುದೇನೋ! ಆದರೆ, ನಟ ಕಿಚ್ಚ ಸುದೀಪ್ ಬಗ್ಗೆ ಒಂದು ಮಾತಂತೂ ಹೇಳಲೇಬೇಕು! ಅದು, ಅವರ ಜನರೇಶನ್ ನಟರಲ್ಲಿ ಕನ್ನಡದಿಂದ ಮೊಟ್ಟಮೊದಲು ಬೇರೆ ಭಾಷೆಯ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡವರು ಕಿಚ್ಚ ಸುದೀಪ್ ಮಾತ್ರ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Actress Amulya: ಮುದ್ದು ಮಕ್ಕಳು, ಗಂಡನ ಜೊತೆ ಪೋಸ್ ಕೊಟ್ಟ ಗೋಲ್ಡನ್ ಗರ್ಲ್
Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?