Sandalwood Actor Shivaram Passes Away : ಹಿರಿಯ ಕನ್ನಡ ನಟ ಶಿವರಾಂ ಇನ್ನಿಲ್ಲ

By Suvarna NewsFirst Published Dec 4, 2021, 2:25 PM IST
Highlights
  • ಹಿರಿಯ ನಟ ಶಿವರಾಂ (84) ತೀವ್ರ ಆರೋಗ್ಯ ಸಮಸ್ಯೆಯಿಂದ ಇಂದು ಇಹಲೋಕ ತ್ಯಜಿಸಿದ್ದಾರೆ.
  • ಕಳೆದ ಎರಡು ದಿನಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ತಲೆಗೆ ತೀವ್ರ ಏಟಾಗಿದ್ದು, ಮೆದುಳು ನಿಷ್ಕ್ರೀಯವಾಗಿತ್ತು.  ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.
     

ಬೆಂಗಳೂರು (ಡಿ.04) ಹಿರಿಯ ನಟ ಶಿವರಾಂ (84) (Shivaram) ತೀವ್ರ ಆರೋಗ್ಯ ಸಮಸ್ಯೆಯಿಂದ ಇಂದು ಇಹಲೋಕ ತ್ಯಜಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ತಲೆಗೆ ತೀವ್ರ ಏಟಾಗಿದ್ದು, ಮೆದುಳು ನಿಷ್ಕ್ರೀಯವಾಗಿತ್ತು.  ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ (Death). ಅಪಘಾತದ ಬಳಿಕ ಹೊಸಕೇರೆ ಹಳ್ಳಿ ಪ್ರಶಾಂತ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಬ್ರೇನ್ ಹ್ಯಾಮರೇಜ್‌ನಿಂದ ಕೋಮಾದಲ್ಲಿದ್ದ ಹಿರಿಯ ನಟ ಯಾವುದೇ ರೀತಿಯ ಚಿಕಿತ್ಸೆಗೆ ಸ್ಪಂದಿಸದೇ ಡಿ.4, 2021ರಂದು ಕೊನೆಯುಸಿರೆಳೆದರು. ನಟ ಶಿವರಾಮ್‌ ಮೂರು ಗಂಡು, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಕೆಲವು ವರ್ಷಗಳ ಹಿಂದೆಯಷ್ಟೆ ಶಿವರಾಮ್ ಅವರ ಪತ್ನಿ (Wife) ತೀರಿಕೊಂಡಿದ್ದರು. ತ್ಯಾಗರಾಜನಗರದಲ್ಲಿ ವಾಸವಾಗಿದ್ದ ಶಿವರಾಮ್, ರಾಜ್ ಕುಮಾರ್ (Rajkumar) ಕುಟುಂಬಕ್ಕೆ ತುಂಬಾ ಆಪ್ತವಾಗಿತ್ತು. ಅಣ್ಣಾವ್ರ ಜೊತೆಗೆ ಹಲವು ಬಾರಿ‌ ಶಬರಿಮಲೆ ಯಾತ್ರೆ ಮಾಡಿದ್ದರು. 

84 ವರ್ಷ ವಯಸ್ಸಾದ ಈ  ಹಿರಿಯ ನಟನಿಗೆ ಅಗತ್ಯ ಶಸ್ತ್ರ ಚಿಕಿತ್ಸೆಯೂ ಅಸಾಧ್ಯವಾಗಿತ್ತು. ಕನ್ನಡ ಚಿತ್ರರಂಗದ (Sandalwood) ಹಿರಿಯರೆನಿಸಿಕೊಂಡಿದ್ದ ಅವರು ಅಪಾರ ಅಭಿಮಾನಿ ಬಳಗವನ್ನು ಚಿತ್ರರಂಗವನ್ನು ಅಗಲಿದ್ದಾರೆ. ಕಳೆದ ಒಂದು ತಿಂಗಳ ಹಿಂದಷ್ಟೇ ನಟ  ಪುನೀತ್ ರಾಜ್‌ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡ ಕರುನಾಡು ಸಿನಿರಂಗ ಇದೀಗ ಇನ್ನೋರ್ವ  ಹಿರಿಯ ಕಲಾವಿದನನ್ನು ಕಳೆದುಕೊಂಡಿದೆ. 

ವೈಯಕ್ತಿಕ ಬದುಕು :  ಶಿವರಾಮ್ ಮದ್ರಾಸ್ (Madras) ಪ್ರಾಂತದಲ್ಲಿ ಕರ್ನಾಟಕ ಮತ್ತು ತಮಿಳುನಾಡು (Tamilnadu) ರಾಜ್ಯಗಳ ಗಡಿಯಲ್ಲಿನ ಚೂಡಸಂದ್ರ ಹಳ್ಳಿಯಲ್ಲಿ 1938ರಲ್ಲಿ   ಹಿಂದೂ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.  ಪ್ರಾಥಮಿಕ ಶಿಕ್ಷಣ (Eduvation) ಮುಗಿಸಿದ ನಂತರ ಬೆಂಗಳೂರಿಗೆ (Bengaluru) ತೆರಳಿದರು. ಗುಬ್ಬಿ ವೀರಣ್ಣ ಅವರ ನಾಟಕ ಪ್ರದರ್ಶನಗಳ ಪ್ರಭಾವಕ್ಕೆ ಒಳಗಾಗಿ ಚಿತ್ರ ತಯಾರಿಕೆ ಮತ್ತು ನಟನೆಯತ್ತ ಆಸಕ್ತಿ ತಳೆದು ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದರು.   1958ರಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿ ಕು. ರಾ. ಸೀತಾರಾಮಶಾಸ್ತ್ರಿ ಯವರಂತಹ ವಿವಿಧ ನಿರ್ದೇಶಕರಿಗೆ ಸಹಾಯಕರಾಗಿ ಕೆಲಸ ಮಾಡಲು ಆರಂಭಿಸಿದರು .  ಅನುಭವಿ ಛಾಯಾಗ್ರಾಹಕ ಬೊಮನ್ ಡಿ ಇರಾನಿ ಅವರಿಗೆ ಕ್ಯಾಮರಾ ಸಹಾಯಕರಾಗಿಯೂ ಕೆಲಸ ಮಾಡಿದ ಹೆಗ್ಗಳಿಕೆ ಶಿವರಾಮ್ ಅವರದ್ದು. 

"

ಅಯ್ಯಪ್ಪ ಪೂಜೆ ಮಾಡುವಾಗ ಬಿದ್ದು ನಟನಿಗೆ ತಲೆಗೆ ಗಾಯ

ವೃತ್ತಿ ಆರಂಭ:  1958 ರಿಂದ 1965 ರ ವರೆಗೆ ಸಹಾಯಕ ನಿರ್ದೇಶಕರಾಗಿ (Director) ದುಡಿದ ನಂತರ, ಅವರಿಗೆ ಕಲ್ಯಾಣ್ ಕುಮಾರ್ ನಟಿಸಿದ ಕು. ರಾ. ಸೀತಾರಾಮ ಶಾಸ್ತ್ರಿ ಅವರ ಬೆರೆತ ಜೀವ ಚಿತ್ರದಲ್ಲಿ ಪೋಷಕ ಪಾತ್ರದ ಮೂಲಕ ನಟನೆಗೆ (Acting) ಬ್ರೆ ಕ್ ಸಿಕ್ಕಿತು. ಆಗಿನಿಂದ ಅವರು 2000 ದ ದಶಕದವರೆಗೆ ಅನೇಕ ನಿರ್ದೇಶಕರ ನಿರ್ದೇಶನದಲ್ಲಿ ನಟಿಸಿದರು. ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಶರಪಂಜರ , ನಾಗರಹಾವು , ಶುಭಮಂಗಳ ಚಿತ್ರದಗಳಲ್ಲಿಯು ನಟಿಸಿದ್ದಾರೆ. 

ಚಲಿಸುವ ಮೋಡಗಳು, ಶ್ರಾವಣ ಬಂತು , ಹಾಲು ಜೇನು , ಹೊಂಬಿಸಿಲು, ಹೊಸ ಬೆಳಕು, ಗುರು ಶಿಷ್ಯರು , ಸಿಂಹದಮರಿ ಸೈನ್ಯ , ಮಕ್ಕಳ ಸೈನ್ಯ ಇಂಥ ಅನೇಕ ಚಲನಚಿತ್ರಗಳಲ್ಲಿ ಅವರ ಹಾಸ್ಯ ಪಾತ್ರಗಳು ಜನರ ಮೆಚ್ಚುಗೆ ಪಡೆದವು. . ಅವರು ಡ್ರೈವರ್ ಹನುಮಂತು (1980) ದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. 2000 ರ ನಂತರ ವರ್ಷಗಳಲ್ಲಿ  ಬರ ಮತ್ತು ತಾಯಿ ಸಾಹೇಬ ದಂತಹ ಸಮಾನಾಂತರ ಚಿತ್ರಗಳಲ್ಲೂ, ಆಪ್ತಮಿತ್ರ ,ಹುಚ್ಚ  ಸೆರಿದಂತೆ ಅನೇಕ ಯಶಸ್ವಿ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದರು .  ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಗೃಹಭಂಗ ಟೆಲಿವಿಷನ್ ಧಾರಾವಾಹಿ ಹಾಗೂ ರವಿಕಿರಣ್ ನಿರ್ದೇಶಿಸಿದ ಬದುಕು ಧಾರಾವಾಹಿಯಲ್ಲೂ ಅಭಿನಯಿಸಿದ್ದಾರೆ,

ತನ್ನ ಸಹೋದರ ಎಸ್ ರಾಮನಾಥನ್ ಜತೆಗೂಡಿ "ರಾಶಿ ಬ್ರದರ್ಸ್" ಎಂಬ ಚಿತ್ರನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಮತ್ತು ಗೆಜ್ಜೆಪೂಜೆ (1970), ಉಪಾಸನೆ(1974), ನಾನೊಬ್ಬ ಕಳ್ಳ (1979), ಡ್ರೈವರ್ ಹನುಮಂತು(1980) ಮತ್ತು ಬಹಳ ಚೆನ್ನಾಗಿದೆ (2001) ಗಳಂತಹ ಯಶಸ್ವೀ ಮತ್ತು ವಿಮ್ರ್ಶಕರ ಮೆಚ್ಚುಗೆ ಪಡೆದ ಚಿತ್ರಗಳನ್ನು ನಿರ್ಮಿಸಿದ್ದಾರೆ.

 ನಟ ಶಿವರಾಮ್ ನೂರಾರು ಕನ್ನಡ ಚಿತ್ರಗಳಲ್ಲಿ ಸುಮಾರು ಆರು ದಶಕಗಳಿಂದ ಪೋಷಕ ನಟನಾಗಿ, ಹಾಸ್ಯ ನಟನಾಗಿ ನಟಿಸಿ ಉತ್ತಮ ನಟನೆಂದು ಪ್ರಸಿದ್ಧರಾಗಿದ್ದಾರೆ.  ಕೇವಲ ನಟನೇ ಅಲ್ಲದೆ ನಿರ್ದೇಶಕನಾಗಿ, ನಿರ್ಮಾಪಕರಾಗಿ ಕೂಡಾ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ. ತನ್ನ ಸಹೋದರ ಎಸ್.ರಾಮನಾಥನ್‍ ರೊಂದಿಗೆ ಸೇರಿ ರಾಶಿ ಬ್ರದರ್ಸ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಹಲವಾರು ಚಿತ್ರಗಳನ್ನು ನಿರ್ಮಿಸಿದರು. ಇದರಲ್ಲಿ ಬಾಲಿವುಡ್ ಚಿತ್ರ ಕೂಡಾ ಸೇರಿದೆ.  ಇವರು ನಟನಾಗಿ ಹಲವಾರು ದಿಗ್ಗಜರೊಂದಿಗೆ ಅದರಲ್ಲೂ ಮುಖ್ಯವಾಗಿ ಪುಟ್ಟಣ್ಣ ಕಣಗಾಕ್ ಜೊತೆಗೂ ಕೆಲಸ ಮಾಡಿದ್ದಾರೆ.

"

click me!