Breaking News: ನಿರ್ಮಾಪಕ ಆನೇಕಲ್ ಬಾಲರಾಜ್‌ ಇನ್ನಿಲ್ಲ

Published : May 15, 2022, 12:29 PM IST
Breaking News: ನಿರ್ಮಾಪಕ ಆನೇಕಲ್ ಬಾಲರಾಜ್‌ ಇನ್ನಿಲ್ಲ

ಸಾರಾಂಶ

ವಾಕಿಂಗ್ ಮಾಡುವಾಗ ಸಂಭವಿಸಿದ ಅಪಘಾತದಲ್ಲಿ ಸಿನಿಮಾ ನಿರ್ಮಾಪಕ ಅನೇಕಲ್ ಬಾಲರಾಜ್‌ ಕೊನೆಯುಸಿರೆಳೆದಿದ್ದಾರೆ. 

ಕನ್ನಡ ಚಿತ್ರರಂಗದ (Sandalwood) ಖ್ಯಾತ ನಿರ್ಮಾಪಕ ಆನೇಕಲ್ ಬಾಲರಾಜ್‌ (Anekal Balaraj) ಅವರು ಇಂದು ಬೆಳಗ್ಗೆ ವಾಕಿಂಗ್‌ಗೆ ತೆರಳುವಾಗಿ ವಾಹನವೊಂದು ಹಿಂದಿನಿಂದ ತಾಕಿ ಪುಟ್‌ ಪಾತ್‌ಗೆ ತಲೆ ತಾಕಿದೆ. ತಕ್ಷಣವೇ ಹತ್ತಿರವಿದ್ದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸ ಫಲಕಾರಿ ಆಗದೆ ಕೊನೆಯುಸಿರೆಳೆದಿದ್ದಾರೆ.

58 ವರ್ಷ ಆನೇಕಲ್ ಬಾಲರಾಜ್ ಅವರು ಜೆಪಿ ನಗರದಲ್ಲಿ (Jp Nagar) ವಾಸವಿದ್ದರು. ದಿನ ಬೆಳಗ್ಗೆ ವಾಕಿಂಗ್ (Walking) ಮಾಡುವ ಅಭ್ಯಾಸ ಇರುವುದರಿಂದ ಇಂದು ಕೂಡ ವಾಕಿಂಗ್‌ಗೆ ಹೋಗಿದರು. ಆದರೆ ಹಿಂದಿನಿಂದ ವಾಹನವೊಂದು ಡಿಕ್ಕೆ ಹೊಡೆದಿದೆ. ಬಾಲರಾಜ್‌ ಅವರು ಪುಟ್‌ ಪಾತ್‌ ಮೇಲೆ ಬಿದ್ದಿದ್ದಾರೆ, ತಲೆಗೆ ಪೆಟ್ಟು ಬಿದ್ದಿರುವ ಕಾರಣ ನಿಧನರಾಗಿದ್ದಾರೆ. 

RIP T Rama Rao: ರಜನಿಕಾಂತ್ ಅವರನ್ನು ಬಾಲಿವುಡ್‌ಗೆ ಪರಿಚಯಿಸಿದ್ದು ಇವರೇ!

 

ಕರಿಯ (Kariya), ಕರಿಯಾ-2 (Kariya 2) , ಗಣಪ (Ganapa), ಬರ್ಕ್ಲಿ ಸೇರಿದಂತೆ ಹಲವು ಸಿನಿಮಾಗಳನ್ನ ನಿರ್ಮಾಣ ಮಾಡಿದ್ದ ನಿರ್ಮಾಪಕ ಆನೇಕಲ್ ಬಾಲರಾಜ್. ಅವರ ಪುತ್ರ ಸಂತು ಬಾಲರಾಜ್‌ರನ್ನು (Santu Balaraj) ಕೂಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿಸಿದ್ದರು.  ಇಡೀ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸಂಚಲನ ಸೃಷ್ಟಿ ಮಾಡಿದ ಕರಿಯಾ ಸಿನಿಮಾ ಕೂಡ ಬಾಲರಾಜ್‌ ಅವರೇ ಬಂಡವಾಳ ಹಾಕಿದ್ದರು.

ಕುಟುಂಬಸ್ಥರು ಮತ್ತು ಚಿತ್ರರಂಗದ ಆಪ್ತರನ್ನು ಅಗಲಿರುವ ಆನೇಕಲ್ ಬಾಲರಾಜ್‌ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ. 

ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಸಹೋದರಿ ನಾಗಮ್ಮ ನಿಧನ

ಕನ್ನಡದ ಖ್ಯಾತ ನಿರ್ಮಾಪಕಿ, ಡಾ.ರಾಜ್ ಕುಮಾರ್ ಪತ್ನಿ ಪಾರ್ವತಮ್ಮನವರ ಸಹೋದರಿ ಎಸ್.ವಿ. ನಾಗಮ್ಮ ಇಂದು (ಮೇ 14) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. 81ರ ವಯಸ್ಸಿನ ನಾಗಮ್ಮನವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

GIF ಸೃಷ್ಟಿಕರ್ತ ಸ್ಟೀಫನ್‌ ವಿಲ್‌ಹೈಟ್‌ ಕೋವಿಡ್‌ನಿಂದ ನಿಧನ

ಹುಟ್ಟುಹಬ್ಬದ ದಿನವೇ ಶವವಾಗಿ ಪತ್ತೆಯಾದ ನಟಿ, ಮಾಡೆಲ್ ಶಹಾನಾ

ಖ್ಯಾತ ರೂಪದರ್ಶಿ ಮತ್ತು ನಟಿ ಶಹಾನಾ(Shahana) ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಕೇರಳ ಮೂಲದ 20 ವರ್ಷದ ನಟಿ ಶಹಾನಾ ಕೋಝಿಕೋಡ್ ನಲ್ಲಿರುವ ತನ್ನ ಫ್ಲಾಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ(Found Dead in her Kozhikode flat). ಶಹಾನಾ ಕಾಸರಗೋಡಿನ ಚೆರುವತ್ತೂರು ನಿವಾಸಿ ಅಲ್ತಾಫ್ ಎಂಬುವವರ ಪುತ್ರಿ. ರಾತ್ರಿ 11 ಗಂಟೆಗೆ ಪರಂಬಿಲ್ ಬಜಾರ್ ನಲ್ಲಿರುವ ಬಾಡಿಗೆ ಫ್ಲಾಟ್ ನಲ್ಲಿ ಶಹಾನಾ ಶವ ಕಿಟಕಿಯ ಗ್ರಿಲ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನೆರೆಹೊರೆಯವರಿಂದ ಶಹಾನಾ ಸಾವಿನ ಸುದ್ದಿ ತಿಳಿದುಬಂದಿದೆ. ಈ ಹಿನ್ನೆಲೆ ನೆರೆಮನೆಯವರೆ ಕಾಸರಗೋಡಿನ ಆಕೆಯ ಸಂಬಂಧಿಕರಿಗೂ ಮಾಹಿತಿ ತಿಳಿಸಿದ್ದರು. ಶಹಾನಾ ಮೃತದೇಹವನ್ನು ನೋಡಿದ ಸಂಬಂಧಿಕರು ಇದು ಕೊಲೆ ಎಂದು ಶಂಕಿಸಿದ್ದಾರೆ.

ಸ್ಯಾಂಡಲ್‌ವುಡ್‌ನ ಹಿರಿಯ ನಟ ಎಂ.ಪಿ ಶಂಕರ್ ಪತ್ನಿ ಮಂಜುಳಾ ನಿಧನ

ಸ್ಯಾಂಡಲ್‌ವುಡ್‌ನ ಹಿರಿಯ ನಟ, ನಿರ್ಮಾಪಕ ಎಂ.ಪಿ. ಶಂಕರ್(MP Shankar) ಪತ್ನಿ ಮಂಜುಳಾ ಶಂಕರ್(Manjula Shankar) ನಿಧನರಾಗಿದ್ದಾರೆ. ಮೈಸೂರಿನ ವಿಜಯನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಂಜುಳಾ ಶಂಕರ್ ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಕೆಲ ದಿನಗಳ ಹಿಂದಷ್ಟೇ ಮಂಜುಳಾ ಅವರಿಗೆ ಹೃದಯಾಘಾತ ಸಂಭವಿಸಿತ್ತು. ಆಗ ಅವರಿಗೆ ಅಂಜಿಯೋಗ್ರಾಮ್ ಮಾಡಿಸಲಾಗಿತ್ತು. ನಂತರ ಬೈಪಾಸ್ ಸರ್ಜರಿಯನ್ನೂ ಮಾಡಲಾಗಿತ್ತು ಎಂದು ಕುಟುಂಬ ಮೂಲಗಳು ಮಾಹಿತಿ ತಿಳಿಸಿವೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಜುಳ ಮಂಗಳವಾರ (ಮೇ 10) ಕೊನೆಯುಸಿರೆಳೆದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ