
ಈ ಹಿಂದೆಯೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ವೀಲ್ ಚೇರ್ ರೋಮಿಯೋ (Wheel Chair Romeo) ಇದೀಗ ಲಿರಿಕಲ್ ವಿಡಿಯೋ ಸಾಂಗ್ ಬಿಟ್ಟು ಮತ್ತಷ್ಟು ಕ್ರೇಜ್ ಹೆಚ್ಚಿಸಿದೆ. ಇದೇ ತಿಂಗಳ 27ರಂದು ಸಿನಿಮಾ ತೆರೆಗೆ ಬರಲಿದ್ದು, ಒಂದಷ್ಟು ಭರವಸೆಯನ್ನು ಹುಟ್ಟುಹಾಕಿದೆ. ರಂಗು ರಾಟೆ ರಂಗು ರಾಟೆ (Rangu Raate) ನೆನಪಿಸುವ ಹುಡುಗಿ ಎಂಬ ಸಾಲಿನ ಮೂಲಕ ಶುರುವಾಗು ಈ ಹಾಡು, ಸಿನಿಮಾದಲ್ಲಿ ನಾಯಕ ನಾಯಕಿಯ ಪ್ರೇಮಕಥೆಯನ್ನು ವಿವರಿಸುತ್ತಿದೆ. ಹಾಡಿನ ಒಂದಷ್ಟು ಪಿಕ್ಚರ್ ಜೊತೆಗೆ ಮೇಕಿಂಗ್ ವಿಡಿಯೋ ಬಳಸಿ ಅದ್ಭುತ ಹಾಡು ರೆಡಿ ಮಾಡಿದ್ದಾರೆ.
ಕೋರ್ಟ್ ಆವರಣದಲ್ಲಿಯೇ ನಾಯ ನಾಯಕ ಇಬ್ಬರದ್ದು ಭೇಟಿ. ಬೇರೆ ಬೇರೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿ, ಕೋರ್ಟ್ ಕಟಕಟೆಯಲ್ಲಿ ನಾಯಕಿಯನ್ನು ಕಂಡು ನಾಯಕನ ಮನಸ್ಸು ಮುದಗೊಳ್ಳುತ್ತೆ. ಒಂದೊಂದು ಸಾಲು ಆ ಪ್ರೇಮವನ್ನು ಸಾರಿ ಸಾರಿ ಹೇಳುತ್ತಿದೆ. ರಂಗು ರಾಟೆ ರಂಗು ರಾಟೆ ನೆನಪಿಸೋ ಹುಡುಗಿ ನಿನ್ನ ನೋಡಿ ನಿನ ನೋಡಿ ಕುಣಿದೆನು ಬೆರಗಾಗಿ ಹಾಡಿಗೆ ವಿ. ನಾಗೇಂದ್ರ ಪ್ರಸಾದ್ (V Nagendra Prasad) ಸಾಹಿತ್ಯ ಬರೆದಿದ್ದಾರೆ.
ವಿಜಯ ಪ್ರಕಾಶ್ (Vijay Prakash) ಅವರು ಧ್ವನಿಯಾಗಿದ್ದು, ಮತ್ತಷ್ಟು ಮೆರಗು ತಂದಿದೆ. ಭರತ್ ಬಿ ಜೆ ( Bharath B J) ಸಂಗೀತ ಸ್ಪರ್ಶದೊಂದಿಗೆ ಮೂಡಿ ಬಂದಿರುವ ಈ ಹಾಡು ವೀಲ್ ಚೇರ್ ರೋಮಿಯೋ ಚಿತ್ರಮಂದಿರಕ್ಕೆ ಆಗಮಿಸೋ ಕ್ಷಣಕ್ಕಾಗಿ ತುದಿಗಾಲಿನಲ್ಲಿ ಕಾದು ಕೂರುವಂತೆ ಮಾಡಿದೆ. ಈ ಮೂಲಕವೇ ಕುತೂಹಲದ ಅಲೆ ಜೋರಾಗುವಂತೆ ಮಾಡಿವಲ್ಲಿ ನಿರ್ದೇಶಕ ನಟರಾಜ್ ಯಶ ಕಂಡಿದ್ದಾರೆ. ಝೇಂಕಾರ್ ಮ್ಯೂಸಿಕ್ ಮೂಲಕ ಲಾಂಚ್ ಆಗಿದೆ.
ರಾಮ್ ಚೇತನ್ ಗೆ ಮಯೂರಿ ನಾಯಕಿಯಾಗಿದ್ದಾರೆ. ರಂಗಾಯಣ ರಘು, ಸುಚೇಂದ್ರ ಪ್ರಸಾದ್,ತಬಲಾ ನಾಣಿ, ಗಿರೀಶ್ ಮುಂತಾದವರು ವೀಲ್ಚೇರ್ ರೋಮಿಯೋ ತಾರಾಗಣದಲ್ಲಿದ್ದಾರೆ. ಇನ್ನುಳಿದಂತೆ ಭರತ್ ಬಿ.ಜೆ ಸಂಗೀತ ನಿರ್ದೇಶನ, ಸಂತೋಷ್ ಪಾಂಡಿ ಛಾಯಾಗ್ರಹಣ, ಗುರು ಕಶ್ಯಪ್ ಸಂಭಾಷಣೆ, ಕಿರಣ್ ಸಂಕಲನ ಮತ್ತು ಜಯಂತ ಕಾಯ್ಕಿಣಿ, ನಾಗೇಂದ್ರ ಪ್ರಸಾದ್ ಸಾಹಿತ್ಯ ಸ್ಪರ್ಶ ಈ ಸಿನಿಮಾಕ್ಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.